ಬೆಂಗಳೂರು: ಕನ್ನಡದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ (81) ಮಂಗಳವಾರ ಮುಂಜಾನೆ ಎಲೆಕ್ಟ್ರಾನಿಕ್ ಸಿಟಿಯ ತಮ್ಮ ನಿವಾಸದಲ್ಲಿ ನಿಧನರಾದರು.

ದೀರ್ಘಕಾಲದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್‌ವುಡ್ ನಟ, ನಿರ್ದೇಶಕ , ನಿರ್ಮಾಪಕ ದ್ವಾರಕೀಶ್ ಇನ್ನಿಲ್ಲ 81 ವರ್ಷದ ದ್ವಾರಕೀಶ್ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ನಟ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ದ್ವಾರಕೀಶ್ ನಿಧನಕ್ಕೆ ಸ್ಯಾಂಡಲ್‌ವುಡ್ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ.
ಸ್ಯಾಂಡಲ್‌ವುಡ್ (Sandalwood) ಪ್ರಚಂಡ ಕುಳ್ಳ ದ್ವಾರಕೀಶ್ (Dwarakish) ಕೊನೆಯುಸಿರೆಳೆದಿದ್ದಾರೆ. ಕನ್ನಡ ಚಿತ್ರರಂಗದ (Kannada Actor) ಲೆಜೆಂಡ್ ನಟ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ನಾಳೆ ಬೆಳಗ್ಗೆ 11 ಗಂಟೆವರೆಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ ದ್ವಾರಕೀಶ್ ಅವರ ಕೊನೆ ಕ್ಷಣ ಹೇಗಿತ್ತು ಅಂದ್ರೆ ಬೆಳಗ್ಗೆ ಮನೆಯಲ್ಲಿ ಎದಿದ್ದರಂತೆ. ಕಾಫಿ ಕುಡಿದು ಮಲಗಿದವರು ಮೇಲೆ ಏಳಲೇ ಇಲ್ಲ ಅಂತ ಅವರ ಮಗ ಹೇಳಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಆಗಸ್ಟ್ 19, 1942 ರಂದು ಜನಿಸಿದ ದ್ವಾರಕೀಶ್ ಅವರು ತಮ್ಮ ಹಾಸ್ಯ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು, ದ್ವಾರಕೀಶ್ 1964 ರಲ್ಲಿ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಪಾದಾರ್ಪಣೆ ಮಾಡಿದರು. ನಟನಾಗಿ ಯಶಸ್ವಿ ಓಟದ ನಂತರ, ಅವರು ಚಲನಚಿತ್ರಗಳ ನಿರ್ಮಾಣ ಮತ್ತು ನಿರ್ದೇಶನಕ್ಕೆ ಸಾಹಸ ಮಾಡಿದರು. ಅವರು 1969 ರಲ್ಲಿ ಡಾ ರಾಜ್‌ಕುಮಾರ್ ಅವರ ಪ್ರಸಿದ್ಧ ಚಲನಚಿತ್ರ ಮೇಯರ್ ಮುತ್ತಣ್ಣ ಅವರೊಂದಿಗೆ ನಿರ್ಮಾಪಕರಾಗಿ ಪಾದಾರ್ಪಣೆ ಮಾಡಿದರು. ಅವರು ಸುಮಾರು 48 ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ ಮತ್ತು ಸುಮಾರು 19 ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಮೇಯರ್ ಮುತ್ತಣ್ಣ , ಭಾಗ್ಯವಂತರು , ಸಿಂಗಾಪುರದಲ್ಲಿ ರಾಜ ಕುಳ್ಳ , ಗುರು ಶಿಷ್ಯರು , ಹೊಸಬರೆದ ಕಾದಂಬರಿ , ಆಫ್ರಿಕಾದಲ್ಲೋ ಶೀಲ , ಡ್ಯಾನ್ಸ್ ರಾಜಾ ಡ್ಯಾನ್ಸ್ , ಶ್ರುತಿ , ಮತ್ತು ಆಪ್ತಮಿತ್ರ ಅವರು ನಿರ್ಮಿಸಿದ ಅಥವಾ ನಿರ್ದೇಶಿಸಿದ ಅವರ ಕೆಲವು ಸಾಂಪ್ರದಾಯಿಕ ಚಲನಚಿತ್ರಗಳು
ಈ ಮಾಹಿತಿಗಳನ್ನು ಓದಿ
- HSRP ನಂಬರ್ ಪ್ಲೇಟ್ ಹಾಕದವರಿಗೆ ಸರ್ಕಾರದ ಕೊನೆಯ ಎಚ್ಚರಿಕೆ..! ಬೀಳುತ್ತೆ ಭಾರಿ ದಂಡ. ಇಲ್ಲಿದೆ ವಿವರ
- SSLC ಪರೀಕ್ಷೆಯ ಫಲಿತಾಂಶ ದಿನಾಂಕ ಪ್ರಕಟ | SSLC Result 2024 @karresults.nic.in
- ಬೌರ್ನ್ವಿಟಾ ಆರೋಗ್ಯಕರ ಅಲ್ಲಾ..! ಹೆಲ್ತ್ ಡ್ರಿಂಕ್ಸ್ ಪಟ್ಟಿಯಿಂದ ತೆಗೆದುಹಾಕುವಂತೆ ಕೇಂದ್ರ ಆದೇಶ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group





