Bigg Boss Kannada- ದೊಡ್ಮನೆಯಲ್ಲಿ ಎಷ್ಟೇ ಟ್ರೊಲ್ ಮಾಡಿದ್ರು ಬಗ್ಗದ ರೈತನ ಮಗ – ಪ್ರತಾಪ್ ಮುಗ್ಧತೆಗೆ ಕನ್ನಡಿಗರ ಬೆಂಬಲ

social media support to drone pratham

ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್10(BigBoss season 10) ಶುರುವಾಗಿ ಒಂದು ವಾರ ಕಳೆಯುತ್ತಾ ಬಂತು. ಈ ಸಲದ ಬಿಗ್ ಬಾಸ್ ಸೀಸನ್ 10 ವಿಶಿಷ್ಟತೆಯನ್ನು ಹೊಂದಿದ್ದು ದೊಡ್ಮನೆಯಲ್ಲಿ ಸ್ಪರ್ಧಿಗಳು ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲು ಸೆಣೆಸಾಡುತ್ತಿದ್ದಾರೆ. ಬಿಗ್ ಬಾಸ್‌ನಲ್ಲಿ ಈ ಒಂದು ವಾರದಲ್ಲಿ ಹೆಚ್ಚು ಟಾರ್ಗೆಟ್ ಆಗಿರುವ ವ್ಯಕ್ತಿ ಎಂದರೆ ಅದು ಡ್ರೋನ್ ಪ್ರತಾಪ್. ಹಾಗಿದ್ದಲ್ಲಿ ಯಾವೆಲ್ಲಾ ರೀತಿಯಲ್ಲಿ ಡ್ರೋನ್ ಪ್ರತಾಪ್ ಟಾರ್ಗೆಟ್ ಆಗಿದ್ದಾರೆ ತಿಳಿದುಕೊಳ್ಳ ಬೇಕೇ ಹಾಗಿದ್ದಲ್ಲಿ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಡ್ರೋನ್ ಪ್ರತಾಪ್ ಗೆ ಬಿಗ್ ಬಾಸ್ ಮನೆಯವರಿಂದ ಟೀಸ್ :

ಹೌದು ಪ್ರತಾಪ್ ಅವರನ್ನು ತಮಾಷೆಗಾಗಿ ಅಥವಾ ಸಿರೀಯಸ್ ಆಗಿ ಇತರ ಬಿಗ್ ಬಾಸ್ ಸ್ಪರ್ಧಿಗಳು ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದು ಒಂದು ವಾರದಿಂದ ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿದೆ ಮತ್ತು ಈ ಒಂದು ವಿಚಾರ ಜನರು ಗಮನಿಸಿದ್ದಾರೆ. ಇತರ ಸ್ಪರ್ಧಿಗಳು ಡ್ರೋನ್ ಪ್ರತಾಪ್ ಪರ ನಿಲ್ಲದೆ ಇರುವುದು ಜನರಿಗೆ ಹೆಚ್ಚು ಬೇಸರ ತರಿಸಿದೆ.

whatss

ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿದ ಪ್ರತಾಪ್ ಪರ ಬೆಂಬಲ :

ಈ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಡ್ರೋನ್‌ ವಿಚಾರದಲ್ಲಿ ಈ ಡ್ರೋನ್ ಪ್ರತಾಪ್ ಅವರು ಟ್ರೋಲ್ (Troll) ಗೆ ಒಳಗಾಗಿದ್ದರು. ಆದರೆ ಇದೀಗ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಕೂಡ ಡ್ರೋನ್ ವಿಚಾರವನ್ನು ತೆಗೆದುಕೊಂಡು ಬಾಯಿಗೆ ಬಂದಂತೆ ಹಿಯಾಳಿಸಿ ಮಾತನಾಡಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್‌ಗೆ (Drone Prathap) ಡೋಂಗಿ ಎಂದು ಸ್ಪರ್ಧಿಗಳು ಕಾಲೆಳೆದು ಅವರನ್ನು ಕೆಣಕುವ ಪ್ರಯತ್ನ ಮಾಡಿದ್ದರು.

ಆದರೆ ಇದೀಗ ಟ್ರೋಲ್‌ ಮಾಡಿದ ಸಾಮಾಜಿಕ ಮಾಧ್ಯಮಗಳ ಟ್ರೋಲ್‌ ಪೇಜ್‌ಗಳು ಇದೀಗ ಪ್ರತಾಪ್‌ ಪರ ನಿಂತಿದೆ. ಡ್ರೋನ್ ಪ್ರತಾಪ್ ಅವರು ಟವೆಲ್ ನಿಂದ ಮುಖ ಒರೆಸಿಕೊಳ್ಳುತ್ತಿದ್ದು, ನಟಿ ನಮ್ರತಾ ರವರು ಸಮಾಧಾನ ಮಾಡುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಡ್ರೋನ್ ವಿಷಯಕ್ಕೆ ಟ್ರೋಲ್ ಮಾಡಿದ ಎಷ್ಟೋ ಸಾಮಾಜಿಕ ಮಾಧ್ಯಮಗಳ ಟ್ರೋಲ್ ಪೇಜ್ ಗಳು ಪ್ರತಾಪ್ ಪರ ಬೆಂಬಲಕ್ಕೆ ನಿಂತಿವೆ. ತಮ್ಮ ತಮ್ಮ ಟ್ರೋಲ್ ಪೇಜ್ ಗಳಲ್ಲಿ ಪ್ರತಾಪ್ ರ ಬಗ್ಗೆ ಉತ್ತಮ ಪೋಸ್ಟ್ ಮತ್ತು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಅಷ್ಟೇ ಅಲ್ಲದೆ ಪ್ರಾತಾಪ್ ರವರು ವೀಕ್ಷಕರ ನೆಚ್ಚಿನ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಇದನ್ನೂ ಓದಿ: BSNL Offers : ಕೇವಲ 99 ರೂ.ಗೆ ಹೊಸ ಭರ್ಜರಿ ಆಫರ್ ಘೋಷಣೆ ಮಾಡಿದ BSNL

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Picsart 23 07 16 14 24 41 584 transformed 1

 

Admin
Author

Admin

Lingaraj Ramapur BCA, MCA, MA ( Journalism )

Leave a Reply

Your email address will not be published. Required fields are marked *