SSLC ನಂತರ ಬೇಗಾ ಉದ್ಯೋಗ ಸಿಗುವ ಡಿಪ್ಲೋಮಾ ಕೋರ್ಸ್ ಗಳ ಪಟ್ಟಿ ಇಲ್ಲಿದೆ

best diploma courses after 10th

ಎಸ್ ಎಸ್ ಎಲ್ ಸಿ (SSLC) ಮುಗಿಸಿ ಡಿಪ್ಲೊಮಾ ಕೋರ್ಸ್ (diploma course) ಕಲಿಯಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC – Government Tool Room Training Center) 2024-25ನೇ ಸಾಲಿನ ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಾತಿ  ಆರಂಭವಾಗಿದೆ (Admission open).

ಕರ್ನಾಟಕದ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2024 (Karnataka SSLC exam 2024) ಫಲಿತಾಂಶ ಗುರುವಾರದಂದು (Thursday) ಪ್ರಕಟವಾಗಿದೆ. ಹಾಗೆಯೇ ಎಸ್ ಎಸ್ ಎಲ್ ಸಿ ಮುಗಿಸಿದ ವಿದ್ಯಾರ್ಥಿಗಳು ತಮ್ಮ ಮುಂದಿನ ಕಲಿಕೆಗಾಗಿ ಯಾವ ಕೋರ್ಸ್ ಓದಬೇಕು ? ಮುಂದೇನು ಮಾಡಬೇಕು ಎಂಬ ಹಲವಾರು ಯೋಚನೆಗಳನ್ನು ಇಟ್ಟುಕೊಂಡಿರುತ್ತಾರೆ. ಇಂದು ಕಲಿಯಲು ಹಲವಾರು ಕೋರ್ಸ್ ಗಳು ಲಭ್ಯವಿವೆ. ಹಾಗೆಯೇ ಇವೆಲ್ಲವೂ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟು ಮಾಡುತ್ತವೆ. ಹಲವಾರು ಪ್ರಶ್ನೆಗಳು ಅವರ ಮುಂದೆ ಬರುತ್ತವೆ. ಹಾಗೇನಾದರೂ 10th ಮುಗಿಸಿದ ವಿದ್ಯಾರ್ಥಿಗಳು ಡಿಪ್ಲೊಮಾ ಕೋರ್ಸ್ ಮಾಡಲು ಬಯಸಿದರೆ ಅವರಿಗೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC) 2024-25ನೇ ಸಾಲಿನ ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಾತಿಗೆ ಅರ್ಜಿಯನ್ನು ಆಹ್ವಾನಿಸಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಉಪಕರಣಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) :

ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರವು 1972 ರಲ್ಲಿ ಡೆನ್ಮಾರ್ಕ್‌ ಸರ್ಕಾರದ (Denmark government) ಸಹಯೋಗದೊಂದಿಗೆ ಮತ್ತು ಕರ್ನಾಟಕ ಸರ್ಕಾರದ (Karnataka state government) ಸಹಭಾಗಿತ್ವದಲ್ಲಿ ದ್ವಿಪಕ್ಷೀಯ ಅಭಿವೃದ್ಧಿ ಸಹಕಾರ ಒಪ್ಪಂದದ ಅಡಿಯಲ್ಲಿ ಬೆಂಗಳೂರಿನ ರಾಜಾಜಿನಗರದ (Rajajinagara) ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಗೊಂಡಿದೆ. ಪ್ರಸ್ತುತ ರಾಜ್ಯಾದಾದ್ಯಂತ 30 ಡಿಪ್ಲೊಮ ಕಾಲೇಜುಗಳನ್ನು ಹೊಂದಿದ್ದು, ಡಿಪ್ಲೊಮ (diploma), ಪೋಸ್ಟ್‌ ಡಿಪ್ಲೊಮಾ (Post diploma) ಹಾಗೂ ಎಮ್‌.ಟೆಕ್ ಕೋರ್ಸ್‌ಗಳನ್ನು (Mtech course) ನಡೆಸುವ ‘AICTE’ ಯಿಂದ ಅನುಮೋದನೆಗೊಂಡ ಅತ್ಯುನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿದೆ. ಹಾಗೆಯೇ ಈ ಒಂದು ಶಿಕ್ಷಣ ಸಂಸ್ಥೆಗಳಿಂದ ಇಂದು ಹಲವಾರು ವಿದ್ಯಾರ್ಥಿಗಳು ಉತ್ತಮ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ.

ಜಿಟಿಟಿಸಿ ಕೇಂದ್ರಗಳಲ್ಲಿ 2024 – 25 ನೇ ಸಾಲಿನ ಪ್ರವೇಶಾತಿ ಆರಂಭ (GTTC 2024 -25th admission open):

ನಮ್ಮ ರಾಜ್ಯದಲ್ಲಿ ಒಟ್ಟು 30 ಜಿಟಿಟಿಸಿ ಕೇಂದ್ರಗಳಿದ್ದು (30 center’s) ಇದೀಗ ಈ ಎಲ್ಲ ಕೇಂದ್ರಗಳಲ್ಲಿ 2024-25ನೇ ಸಾಲಿನ ಡಿಪ್ಲೊಮ ಕೋರ್ಸ್‌ಗಳಿಗೆ ಪ್ರವೇಶಾತಿ ಪ್ರಕ್ರಿಯೆಯನ್ನು ಆರಂಭ ಮಾಡಲಾಗಿದೆ. SSLC ಪಾಸಾದ ವಿದ್ಯಾರ್ಥಿಗಳು ಮತ್ತು ಆಸಕ್ತ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ (website) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹಾಗಾದರೆ, ಈ ಕೋರ್ಸ್‌ಗಳ ವಿವರ, ಅರ್ಹತೆ, ಆಯ್ಕೆ ವಿಧಾನಗಳ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ.

ಕರ್ನಾಟಕ ಜಿಟಿಟಿಸಿ ಕೇಂದ್ರಗಳಲ್ಲಿ ಲಭ್ಯವಿರುವ ಡಿಪ್ಲೊಮ ಕೋರ್ಸ್‌ಗಳು (available diploma course) :

ಡಿಪ್ಲೊಮ ಇನ್ ಟೂಲ್‌ ಅಂಡ್ ಡೈಮೇಕಿಂಗ್
ಡಿಪ್ಲೊಮ ಇನ್ ಪ್ರಿಶಿಸನ್ ಮ್ಯಾನುಫ್ಯಾಕ್ಚರಿಂಗ್
ಡಿಪ್ಲೊಮ ಇನ್ ಮೆಕ್ಯಾಟ್ರಾನಿಕ್ಸ್
ಡಿಪ್ಲೊಮ ಇನ್ ಇಲೆಕ್ಟ್ರಿಕಲ್ ಅಂಡ್ ಇಲೆಕ್ಟ್ರಾನಿಕ್ಸ್‌
ಡಿಪ್ಲೊಮ ಇನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ ಅಂಡ್ ಮಷಿನ್ ಲರ್ನಿಂಗ್
ಡಿಪ್ಲೊಮ ಇನ್ ಅಟೋಮೇಷನ್ ಅಂಡ್ ರೋಬೋಟಿಕ್ಸ್‌
ಡಿಪ್ಲೊಮ ಇನ್ ಇಲೆಕ್ಟ್ರಾನಿಕ್ಸ್‌ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್

ಜಿಟಿಟಿಸಿ ಡಿಪ್ಲೊಮ ಕೋರ್ಸ್ ನ ಅವಧಿ (Duration of GTTC Diploma Course) :

ವಿದ್ಯಾರ್ಥಿಗಳು ಮುಖ್ಯವಾಗಿ ಇದನ್ನು ಗಮನಿಸಿ, ಜಿಟಿಟಿಸಿ ಡಿಪ್ಲೊಮ ಕೋರ್ಸ್ ಅವಧಿಯು 3 ವರ್ಷದ ಅವಧಿ (3 years course) ಆಗಿದ್ದು, ಇದರ ಜೊತೆಗೆ 1 ವರ್ಷ ಕಡ್ಡಾಯ ಇಂಟರ್ನ್‌ಶಿಪ್‌ (internship) ತರಬೇತಿ ಇರುತ್ತದೆ.

ಜಿಟಿಟಿಸಿ ಡಿಪ್ಲೊಮ ಕೋರ್ಸ್‌ಗಳ ಪ್ರವೇಶಕ್ಕೆ ಇರಬೇಕಾದ ಅರ್ಹತೆಗಳು (qualifications) :

ವಿದ್ಯಾರ್ಥಿಯು ಎಸ್‌ಎಸ್‌ಎಲ್‌ಸಿ ಪಾಸ್‌ ಮಾಡಿರಬೇಕು. 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಬಂದ ನಂತರ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಈ ಡಿಪ್ಲೊಮಾ ಕೋರ್ಸ್ ನ ಪ್ರವೇಶಾತಿಯನ್ನು ಮೆರಿಟ್ (Merit) ಮತ್ತು ರೋಸ್ಟರ್ (Roster) ಆಧಾರದ ಮೇಲೆ ಮಾಡಲಾಗುತ್ತದೆ.

ಜಿಟಿಟಿಸಿ ಡಿಪ್ಲೊಮ ಕಾಲೇಜುಗಳಲ್ಲಿರುವ ಸೌಲಭ್ಯಗಳು (facilities) :

ಶೇಕಡ.30 ಕ್ಲಾಸ್‌ರೂಮ್ ತರಬೇತಿ.
ಶೇಕಡ.70 ಪ್ರಾಯೋಗಿಕ ತರಬೇತಿ.
ಉದ್ಯಮಗಳ ಬೇಡಿಕೆಗೆ ಅನುಸಾರ ಪಠ್ಯಕ್ರಮ ರಚನೆ.
ಸ್ಟೈಫಂಡ್ ಸಹಿತ ಒಂದು ವರ್ಷ ಅವಧಿಯ ಇಂಟರ್ನ್‌ಶಿಪ್.
ಶೇಕಡ.100 ರಷ್ಟು ಉದ್ಯೋಗಾವಕಾಶ.

ಜಿಟಿಟಿಸಿಯ ಡಿಪ್ಲೊಮಾ ಕೋರ್ಸ್ ಗೆ ಅರ್ಜಿ ಸಲ್ಲಿಸುವ ವಿವರ (Application Details for Diploma Course of GTTC) :

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ (Website) https://cetonline.karnataka.gov.in/kea/ ಗೆ ಭೇಟಿ ನೀಡಿ, ಆನ್‌ಲೈನ್‌ (online) ಮೂಲಕ ಅರ್ಜಿ ಸಲ್ಲಿಸಬಹುದು. ಹಾಗೆಯೇ  ಅರ್ಜಿ ಸಲ್ಲಿಸಲು ವೇಳಾಪಟ್ಟಿಯನ್ನು ಕೂಡ ಆದಷ್ಟು ಬೇಗ ಜಿಟಿಟಿಸಿಯು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಜಿಟಿಟಿಸಿ ಡಿಪ್ಲೊಮ ಕೇಂದ್ರಗಳಿರುವ ನಗರಗಳು (Cities with GTTC Diploma Centers) :

ಬೆಂಗಳೂರು, ಮೈಸೂರು, ಧಾರವಾಡ, ಮದ್ದೂರು, ಹಾಸನ, ಮಂಗಳೂರು, ಕಲಬುರಗಿ, ಬೆಳಗಾವಿ, ದಾಂಡೇಲಿ, ಹೊಸಪೇಟೆ, ಹರಿಹರ, ಕೂಡಲಸಂಗಮ, ಕನಕಪುರ, ಲಿಂಗಸುಗೂರು, ಗುಂಡ್ಲುಪೇಟೆ, ಕಡೂರು, ಹುಮನಾಬಾದ್, ಕೋಲಾರ, ತುಮಕೂರು, ಶಿವಮೊಗ್ಗ, ಗೌರಿಬಿದನೂರು, ಚಿಕ್ಕೋಡಿ, ಗೋಕಾಕ, ಉಡುಪಿ, ಯಾದಗಿರಿ, ಚಿತ್ರದುರ್ಗ, ಚಳ್ಳಕೆರೆ, ಕೊಪ್ಪಳ, ದೇವನಹಳ್ಳಿ, ಮಾಗಡಿ.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿ

ಈ ಮಾಹಿತಿಗಳನ್ನು ಓದಿ


WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!