Honda- Bajaj- Tvs : ಕಮ್ಮಿ ಬೆಲೆಯಲ್ಲಿ ಬರೋಬ್ಬರಿ 70 ಕಿ. ಮೀ ಮೈಲೇಜ್ ಕೊಡುವ ಜನಪ್ರಿಯ ಬೈಕ್ ಗಳ ಪಟ್ಟಿ ಇಲ್ಲಿದೆ

WhatsApp Image 2023 09 22 at 15.41.56

ಇತ್ತೀಚೆಗೆ ಕೈಗೆಟುಕುವ ಬೆಲೆಗೆ ಪ್ರಯಾಣಿಕರ  ದ್ವಿಚಕ್ರ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಮತ್ತು ದ್ವಿಚಕ್ರ ವಾಹನಗಳ ಜನಪ್ರಿಯ ಕಂಪನಿಗಳಾದ ಟಿವಿಎಸ್(TVS), ಹೀರೋ(Hero) ಹಾಗೂ ಬಜಾಜ್ (Bajaj) ಕಂಪನಿಗಳು ಇದೀಗ ಪ್ರಯಾಣಿಕರಿಗೆ ಹೊಸ ಸುದ್ದಿಯನ್ನು ನೀಡಿದ್ದಾರೆ. 65 ಕಿಮೀ ಮೈಲೇಜ್‌ನೊಂದಿಗೆ ಖರೀದಿಗೆ ಸಿಗುವ ವಾನಗಳನ್ನು ಮಾರುಕಟ್ಟೆಯಲ್ಲಿ ಬಿಡಲಾಗಿದೆ. ಅದರಲ್ಲಿ ಪ್ರಮುಖ ಬೈಕ್‌ಗಳ ವಿವರ ತಿಳಿದುಕೊಳ್ಳಬೇಕೇ ಹಾಗಿದಲ್ಲಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ

ಈ ಬೈಕ್ ಗಳು ದಿನನಿತ್ಯದ ಬಳಕೆಗೆ ಸಾಕಷ್ಟು ಹೊಂದಾಣಿಕೆಯಾಗುತ್ತವೆ:

ಹೀರೋ ಹೆಚ್ಎಫ್ 100(Hero HF 100):

ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ದೊರೆಯುವ ಬೈಕ್ ಇದಾಗಿದ್ದು, ರೂ.59,108 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇದು 97.2 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದೆ. 8 hp ಗರಿಷ್ಠ ಪವರ್ ಹಾಗೂ 8.05 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 70 kmpl ಮೈಲೇಜ್ ನೀಡುತ್ತದೆ.

whatss

ಹೀರೋ ಹೆಚ್ಎಫ್ ಡಿಲಕ್ಸ್ (Hero HF Deluxe) :

ಈ bike ಸಹ ಕಡಿಮೆ ದರದಲ್ಲಿ ಸಿಗುವ ಮೋಟಾರ್ ಸೈಕಲ್ ಇದಾಗಿದ್ದು, ಬೆಂಗಳೂರಿನಲ್ಲಿ ರೂ.64,410 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದರಲ್ಲಿ 97.2 ಸಿಸಿ ಎಂಜಿನ್ 7.91 bhp ಪವರ್ ಮತ್ತು 8.05 Nm ಪೀಕ್ ಟಾರ್ಕ್ ಹೊರಹಾಕುತ್ತದೆ. 4 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಲಭ್ಯವಿದೆ. 65 kmpl ಮೈಲೇಜ್ ನೀಡುತ್ತದೆ.

ಹೀರೋ ಹೆಚ್ಎಫ್ ಡಿಲಕ್ಸ್ ಬೈಕ್:

ಫ್ರಂಟ್ ಹಾಗೂ ರೇರ್ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದ್ದು, 112 ಕೆಜಿ ತೂಕವಿದೆ. ಜೊತೆಗೆ 9.6 ಲೀಟರ್ ಸಾಮರ್ಥ್ಯ ಫ್ಯುಯೆಲ್ ಟ್ಯಾಂಕ್ ಪಡೆದಿದೆ. ‘i3S’ ಸಿಸ್ಟಮ್ (ಎಂಜಿನ್ ಸ್ಟಾರ್ಟ್/ ಸ್ಟಾಪ್ ಬಟನ್) ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಬೈಕ್‌ಗೆ ಬಜಾಜ್ ಸಿಟಿ100, ಟಿವಿಎಸ್ ಸ್ಪೋರ್ಟ್ಸ್, ಹೋಂಡಾ ಸಿಡಿ 110 ಡ್ರಿಮ್ ಪ್ರಬಲ ಬೈಕ್ ಗೆ ಪ್ರತಿಸ್ಪರ್ಧಿಯಾಗಿವೆ.

ಟಿವಿಎಸ್(TVS) :

TVS ಕಂಪನಿಯ ಜನಪ್ರಿಯ ಸ್ಪೋರ್ಟ್ಸ್ (Sport) ಬೈಕ್ ಬಗ್ಗೆ ಮಾತನಾಡುವುದಾದರೆ, ಇದು ಬೆಂಗಳೂರಿನಲ್ಲಿ ರೂ.81,512 ಆನ್-ರೋಡ್ ದರದಲ್ಲಿ ಗ್ರಾಹಕರಿಗೆ ಸಿಗುತ್ತದೆ. 109.7 ಸಿಸಿ ಬಿಎಸ್6 ಎಂಜಿನ್ ಹೊಂದಿದ್ದು, 8.18 bhp ಗರಿಷ್ಠ ಪವರ್ ಹಾಗೂ 8.7 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 4 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಬೈಕ್, 67.5 kmpl ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ್ದು, 110 ಕೆಜಿ ತೂಕವಿದ್ದು, 10 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಒಳಗೊಂಡಿದ್ದು, ಎರಡು ತುದಿಯಲ್ಲಿ ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಎಲ್ಇಡಿ DRLs ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದ್ದು, ವಿವಿಧ ಬಣ್ಣಗಳ ಆಯ್ಕೆಯಲ್ಲೂ ಖರೀದಿದಾರರಿಗೆ ಸಿಗುತ್ತದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಹೋಂಡಾ ಶೈನ್ 100(Honda Shine 100) :

ಬೆಂಗಳೂರಿನಲ್ಲಿ 85,447 ಆನ್-ರೋಡ್ ದರದಲ್ಲಿ ಖರೀದಿಗೆ ಲಭ್ಯವಿದೆ. ಇದು, 99.7 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದು, 7.61 hp ಗರಿಷ್ಠ ಪವರ್ ಮತ್ತು 8.05 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 65 kmpl ಮೈಲೇಜ್ ನೀಡುತ್ತದೆ. 9 ಲೀ.ನಷ್ಟು ಫ್ಯುಯೆಲ್ ಟ್ಯಾಂಕ್ ಒಳಗೊಂಡಿದೆ.

ಇದೆಲ್ಲ ಹೊಸದಾಗಿ ಮಾರುಕಟ್ಟೆಗೆ ಬಿಡಲಿರುವ ಬೈಕ್ ಗಳ ವಿವರ. ಕಡಿಮೆ ಖರ್ಚಿನ ಹೆಚ್ಚು ಲಾಭದಾಯಕ ಬೈಕ್ ಗಳು ಇಂದು ಎಲ್ಲ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಒಂದು ಸುದ್ದಿ ಸಾರ್ವಜನಿಕರಿಗೆ ಸಂತೋಷ ತಂದಿದೆ.

Picsart 23 07 16 14 24 41 584 transformed 1

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!