ರೈತರಿಗೆ ಗುಡ್ ನ್ಯೂಸ್ ಹಸು ಖರೀದಿಗೆ ₹ 40 ಸಾವಿರ ಉಚಿತ – ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

WhatsApp Image 2023 08 17 at 3.01.09 PM

ಎಲ್ಲರಿಗೂ ನಮಸ್ಕಾರ, ಇವತ್ತಿನ ವರದಿಯಲ್ಲಿ, ರೈತರಿಗೆ ಹಸುಗಳನ್ನು ಖರೀದಿ ಮಾಡಲು 40,000 ರೂಗಳ ಸಬ್ಸಿಡಿ(subsidy)ಯನ್ನು ನೀಡಲಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.  ದಾವಣಗೆರೆ ಬಾಪೂಜಿ ಬ್ಯಾಂಕ್ ನಲ್ಲಿ ಭಾನುವಾರದಂದು ಏರ್ಪಡಿಸಲಾದ ಅಭಿನಂದನಾ ಸಮಾರಂಭದಲ್ಲಿ ರೈತರಿಗೆ ಸೇರಿದಂತೆ ಅತ್ಯಂತ ಮಹತ್ವದ ನಿರ್ಣಯ ಕೈಗೊಂಡಿದೆ. ಈ ನಿರ್ಧಾರ ಏನೆಂದರೆ ರೈತರಿಗೆ ಹಸು ಖರೀದಿಸಲು ₹40,000 ಸಬ್ಸಿಡಿಯನ್ನು ನೀಡಲಾಗುವುದು. ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ

ಇನ್ನು ಮುಂದೆ ಹಸುಗಳ ಖರೀದಿಗೆ 40,000 ಸಬ್ಸಿಡಿ :

WhatsApp Image 2023 08 17 at 3.05.05 PM 2

ದಾವಣಗೆರಿಯ ಬಾಪೂಜಿ ಬ್ಯಾಂಕ್ ನ ಸಮುದಾಯ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ರವರ ಉಪಸ್ಥಿತಿಯಲ್ಲಿ’ ಅಭಿನಂದನಾ’ ಸಮಾರಂಭ ನಡೆದಿದ್ದು, ಶಾಮನೂರು ಶಿವಶಂಕರಪ್ಪಾ ರವರು ಈ ಸಮಾರಂಭವನ್ನು ಉದ್ಘಾಟಿಸಿದರು.

ಈ ಸಮಾರಂಭದಲ್ಲಿ ರೈತರಿಗೆ ಹಸು ಖರೀದಿಸಲು ₹40,000 ಸಬ್ಸಿಡಿಯನ್ನು ನೀಡಲಾಗುವುದು ಎಂದು ಭರವಸೆ ನೀಡಿಲಾಗಿದೆ. ‘ ಶಿವಮೊಗ್ಗ ಹಾಲಿನ ಒಕ್ಕೂಟದಿಂದ ಬೇರ್ಪಡಿಸಿ ದಾವಣಗೆರೆ – ಚಿತ್ರದುರ್ಗ ಹಾಲಿನ ಒಕ್ಕೂಟ ರಚನೆ ಮಾಡಿ, ರೈತರಿಗೆ ಹಸು ಖರೀದಿಸಲು 40 ಸಾವಿರದ ಸಬ್ಸಿಡಿಯನ್ನು ನೀಡಲಾಗುವುದು’ ಎಂದು ಎಸ್. ಎಸ್. ಮಲ್ಲಿಕಾರ್ಜುನ ಅವರು ರೈತರಲ್ಲಿ ಭರವಸೆಯನ್ನು ನೀಡಿದ್ದಾರೆ.

whatss

ಸಬ್ಸಿಡಿಯನ್ನು ಏಕೆ ನೀಡಲಾಗುತ್ತಿದೆ :

ಸಬ್ಸಿಡಿ ನೀಡುವುದರಿಂದ ಹಾಲಿನ ಉತ್ಪಾದವು ಜಾಸ್ತಿಯಾಗುತ್ತದೆ, ಹಾಗೂ ಇದರಿಂದ ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ. ಹಾಲು ಒಕ್ಕೂಟದ ಸದಸ್ಯರು ಹಾಗೂ ಡಿಸಿಸಿ ಬ್ಯಾಂಕ್, ಗ್ರಾಮೀಣ ಜನರಿಗೆ ಒಳ್ಳೆಯ ಸೇವೆಯನ್ನು ನೀಡಿದ್ದೆ ಆದಲ್ಲಿ ಜನರು ತಮ್ಮ ಆರ್ಥಿಕ ಆದಾಯವನ್ನು ಹೆಚ್ಚಿಸಬಹುದು ಮತ್ತು ಒಳ್ಳೆಯ ಹಣವನ್ನು ಸಂಪಾದಿಸಬಹುದು ಹಾಗೂ ಇದರಿಂದ ಸರ್ಕಾರಕ್ಕೂ ಕೂಡ ಹೆಚ್ಚಿನ ಟ್ಯಾಕ್ಸ್(tax) ಬರುತ್ತದೆ, ಎಂದು ಹೇಳಿಕೆಯಲ್ಲಿ ಜೋಡಿಸಿದ್ದಾರೆ.

ಡಿಸಿಸಿ ಬ್ಯಾಂಕ್ ಗಳು ರೈತರಿಗೆ ಪ್ರಾಮಾಣಿಕವಾಗಿ ಮತ್ತು ಅಚ್ಚುಕಟ್ಟಾಗಿ ಸಾಲದ ಸೌಲಭ್ಯವನ್ನು ನೀಡಬೇಕು. ಹಾಗೂ ಅರ್ಜಿ ಹಾಕಿದ ತಕ್ಷಣವೇ ಸೌಲಭ್ಯ ಅವರಲ್ಲಿ ತಲುಪಬೇಕು ಎಂದು ಹೇಳಿದ್ದಾರೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಉತ್ತರ ಕರ್ನಾಟಕದ ಜಿಲ್ಲಾ ಸಹಕಾರ ಬ್ಯಾಂಕ್ ಗಳು ಈ ರೀತಿಯ ಸೌಲಭ್ಯವನ್ನು ಒದಗಿಸಿ ಸುಮಾರು ₹500 ಕೋಟಿ ವರೆಗೂ  ಲಾಭಗಳಿಸಿವೆ. ಇದನ್ನೇ ಮಾದರಿಯಲ್ಲಿಟ್ಟುಕೊಂಡು ದಾವಣಗೆರೆ ಬ್ಯಾಂಕ್ ಕೂಡ ಹೆಚ್ಚು ಲಾಭವನ್ನು ಗಳಿಸಲು ಪ್ರಯತ್ನಿಸಬೇಕು. ಇದಕ್ಕೆ ಬೇಕಾಗುವ ಎಲ್ಲಾ ಅಗತ್ಯ ಸಹಕಾರವನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಪೆಕ್ಸ್ ಬ್ಯಾಂಕ್ ಮತ್ತು ನಬಾರ್ಡ್ ನವರು ಸಾಲ(loan)ವನ್ನು ನೀಡಲು ಮುಂದಾಗಿದ್ದಾರೆ. ಡಿಸಿಸಿ ಬ್ಯಾಂಕ್(DCC Bank) ನಿರ್ದೇಶಕರು ಈ ಕುರಿತಾಗಿ ಸಭೆಯನ್ನು ಏರ್ಪಡಿಸಿ, ರೈತರೊಂದಿಗೆ ಚರ್ಚಿಸಿ ಅವರಿಗೆ ಈ ಸೌಲಭ್ಯವನ್ನು ತಲುಪಿಸಬೇಕು ಎಂದು ಹೇಳಿದ್ದಾರೆ.

‘ಸಹಕಾರಿ ಕ್ಷೇತ್ರದ ಮೇಲೆ ಹೆಚ್ಚು ನಂಬಿಕೆಯನ್ನು ಇಟ್ಟಿದ್ದಾರೆ, ಗುಜರಾತ್,ಮಹಾರಾಷ್ಟ್ರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯದ ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಹಿಂದೆ ಇದೆ. ಜನರು ಸಹಕಾರಿ ಕ್ಷೇತ್ರದಿಂದ ಹೆಚ್ಚು ಅನುಕೂಲತೆಯನ್ನು ಪಡೆಯಬೇಕಾಗಿದೆ. ಬಾಪೂಜಿ ಬ್ಯಾಂಕ್ ಒಂದರಲ್ಲಿಯೇ ಜನರು ಸುಮಾರು ₹800 ಕೋಟಿಯವರೆಗೂ ಠೇವಣಿಯನ್ನು ಇಟ್ಟಿದ್ದಾರೆ. ಸಹಕಾರಿ ಬ್ಯಾಂಕುಗಳು ಜನಸಾಮಾನ್ಯರ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ‘ ಎಂದು ಶಾಮನೂರು ಶಿವಶಂಕರಪ್ಪಾ ಅವರು ಸಮಾರಂಭದಲ್ಲಿ ಹೇಳಿದ್ದಾರೆ.

tel share transformed

ಶಾಸಕರಾದ ಬಿ. ದೇವೇಂದ್ರಪ್ಪ, ಬಿ. ಪಿ. ಹರೀಶ್,ಡಿ. ಜಿ. ಶಾಂತನಗೌಡ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಹರಿಹರ ಮಾಜಿ ಶಾಸಕ ಎಸ್. ರಾಮಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ  ಬಿ. ಹಾಲೇಶಪ್ಪ, ಹಿರಿಯ ಸಹಕಾರಿ ಧುರೀಣ ಎನ್. ಜಿ. ಪುಟ್ಟಸ್ವಾಮಿ ಅವರು ಕೂಡ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಹಸುಗಳ ಖರೀದಿಗೆ ಪ್ರೋತ್ಸಾಹವನ್ನು ನೀಡುವಂತಹ ಈ ಸಬ್ಸಿಡಿಯ ವಿಷಯವನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ, ಬಂಧುಗಳಿಗೆ ಮುಖ್ಯವಾಗಿ ರೈತರಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!