ಬಡ ಕುಟುಂಬಗಳಿಗೆ ಆರ್ಥಿಕ ನೆರವು: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುವ ವಿಧಾನ ತಿಳಿದುಕೊಳ್ಳಿ
ಭಾರತದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (central and state government) ತಮ್ಮ ನಾಗರಿಕರ ಕಲ್ಯಾಣಕ್ಕಾಗಿ ಹಲವಾರು ಸಾಮಾಜಿಕ ಭದ್ರತಾ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿವೆ. ಅದರಲ್ಲೂ, ಬಡ ಮತ್ತು ಅಗತ್ಯವಿರುವ ಜನರಿಗೆ ತುರ್ತು ಸಹಾಯ ಒದಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ (Karnataka government) “ಮುಖ್ಯಮಂತ್ರಿ ಪರಿಹಾರ ನಿಧಿ” ಯನ್ನು ರಚಿಸಿದೆ. ಈ ನಿಧಿ ರಾಜ್ಯದ ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ವಿನಿಯೋಗಿಸಲಾಗುತ್ತದೆ. ಇದು ಮುಖ್ಯವಾಗಿ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ, ತುರ್ತು ಅನಾಹುತಗಳ ವಿರುದ್ಧ ನೆರವು ನೀಡಲು, ದೈಹಿಕ ಅಶಕ್ತರು (ದಿವ್ಯಾಂಗರಿಗೆ) ಸಹಾಯ ಮಾಡಲು ಮತ್ತು ಅಪಘಾತದಲ್ಲಿ ಅಕಾಲಿಕವಾಗಿ ಸಾವಿಗೀಡಾದರೆ ಅವರ ಕುಟುಂಬದ ಆರ್ಥಿಕ ಭದ್ರತೆಗೆ ನೇರವಾಗುವ ಉದ್ದೇಶವನ್ನು ಹೊಂದಿದೆ. “ಮುಖ್ಯಮಂತ್ರಿ ಪರಿಹಾರ ನಿಧಿ” (Chief Minister’s Relief Fund) ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹಿಂದಿನಂತೆ ಜನರು ಅರ್ಜಿಯನ್ನು (Application) ಸಲ್ಲಿಸಲು ಕಚೇರಿಗಳ ಮುಂದೆ ಕಾದು ನಿಲ್ಲಬೇಕಾಗಿಲ್ಲ. ಹೌದು, ಸರ್ಕಾರದ ಹೊಸ ನಿರ್ಧಾರದಿಂದಾಗಿ (government new rules) ಈಗ ಆನ್‌ಲೈನ್ (Online) ಮೂಲಕವೇ ಮುಖ್ಯಮಂತ್ರಿ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುವ ವ್ಯವಸ್ಥೆ ಪರಿಚಯಿಸಲಾಗಿದೆ. ಇದರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ವೇಗವಾಗಿ ಮುಗಿಸಲು ಸಹಾಯವಾಗಲಿದೆ ಮತ್ತು ಅಗತ್ಯವಿರುವ ಫಲಾನುಭವಿಗಳಿಗೆ ನೆರವು ಶೀಘ್ರಗತಿಯಲ್ಲಿ ತಲುಪಲಿದೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿ ಯೋಜನೆಯ ವಿವರ :
ಮುಖ್ಯಮಂತ್ರಿ ಪರಿಹಾರ ನಿಧಿ (CMRF) ಕರ್ನಾಟಕ ಸರ್ಕಾರದ ಪ್ರತ್ಯೇಕ ನಿಧಿಯಾಗಿದ್ದು, ಇದು 1958ರ ಡಿಸೆಂಬರ್ 3 ರಂದು ಎಫ್.ಡಿ. 103 ಎ.ಸಿ.ಪಿ 58 ಆದೇಶದಡಿ ಸ್ಥಾಪಿತಗೊಂಡಿದೆ. 1978ರ ಸೆಪ್ಟಂಬರ್ 12ರಂದು ಈ ನಿಧಿಯ ಕಾರ್ಯನಿಯಮಗಳನ್ನು ಮತ್ತಷ್ಟು ಬಲಪಡಿಸಿ ಸರ್ಕಾರವು ಹೊಸ ನಿರ್ಧಾರ (new decision) ತೆಗೆದುಕೊಂಡಿತ್ತು. ಈ ನಿಧಿಯಲ್ಲಿರುವ ಹಣವನ್ನು ಸಾರ್ವಜನಿಕರು, ಖಾಸಗಿ ಸಂಸ್ಥೆಗಳು, ಕಾರ್ಪೊರೇಟ್ ಕಂಪನಿಗಳು, ಸಂಘ-ಸಂಸ್ಥೆಗಳು, ನಿಗಮ-ಮಂಡಳಿಗಳು ಸ್ವಇಚ್ಛೆಯಿಂದ ನೀಡುವ ದೇಣಿಗೆಯಿಂದಲೇ ಸಂಗ್ರಹಿಸಲಾಗುತ್ತದೆ. ಮುಖ್ಯ ಅಂಶವೆಂದರೆ, ಸರ್ಕಾರದ ವಾರ್ಷಿಕ ಬಜೆಟ್‌ನಲ್ಲಿ (year budget) ಈ ನಿಧಿಗೆ ಯಾವುದೇ ನೇರ ಅನುದಾನವಿಲ್ಲ.
ಜನಸಾಮಾನ್ಯರು ಈ ನಿಧಿಗೆ ನೀಡುವ ದೇಣಿಗೆಗೆ ಆದಾಯ ತೆರಿಗೆ ಇಲಾಖೆಯಿಂದ 100% ತೆರಿಗೆ ವಿನಾಯಿತಿ ಸಿಗುತ್ತದೆ. ಸರ್ಕಾರವು ಈ ನಿಧಿಯನ್ನು ಸಂಪೂರ್ಣ ಪಾರದರ್ಶಕ ಮತ್ತು ನೈತಿಕ ನಿಲುವಿನೊಂದಿಗೆ ನಿರ್ವಹಿಸುತ್ತಿದ್ದು, ತುರ್ತು ಪರಿಸ್ಥಿತಿಗಳಲ್ಲಿ (Emergency Situation) ಸಮರ್ಥ ರೀತಿಯಲ್ಲಿ ಬಳಸಲು ಕ್ರಮ ಕೈಗೊಳ್ಳುತ್ತಿದೆ.
ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಯಾವ ಯಾವ ಸಂದರ್ಭಗಳಲ್ಲಿ ನೆರವು ಸಿಗುತ್ತದೆ?:
ನಿಧಿಯಿಂದ ಕೆಳಕಂಡ ಸಂದರ್ಭಗಳಲ್ಲಿ ಪರಿಹಾರ (Solutions) ನೀಡಲಾಗುತ್ತದೆ:
1. ಅತಿ ಬಡತನದಲ್ಲಿರುವ ಕುಟುಂಬಗಳು (ದೈನಂದಿನ ಜೀವನ ಸಾಗಿಸಲು ಸಹ ಕಷ್ಟವಿರುವವರು).
2. ಆಪತ್ತು ಹಾಗೂ ತುರ್ತು ಚಿಕಿತ್ಸೆಗೆ ಹಣಕಾಸಿನ ನೆರವು( ಕ್ಯಾನ್ಸರ್, ಕಿಡ್ನಿ ವೈಫಲ್ಯ, ಹೃದಯ ಸಂಬಂಧಿತ ಸಮಸ್ಯೆಗಳು, ಅಪಘಾತ ಮತ್ತು ಇತರ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ).
3. ನಿರುದ್ಯೋಗಿಗಳಿಗೆ ಸಹಾಯ ಕೂಡ ಈ ಯೋಜನೆಯಿಂದ ಸಹಾಯ ದೊರೆಯಲಿದೆ.
4. ಕುಟುಂಬವನ್ನು ನಿರ್ವಹಿಸುತ್ತಿದ್ದ ವ್ಯಕ್ತಿ ದುರ್ಘಟನೆಗೆ ಒಳಗಾಗಿ ನಿಧನರಾದರೆ, ಕುಟುಂಬಕ್ಕೆ ಪರಿಹಾರ ನೀಡಲಾಗುವುದು.
5. ನೈಸರ್ಗಿಕ ವಿಕೋಪಗಳ (ಹೆಚ್ಚಳ ಮಳೆ, ಭೂಕಂಪ, ಅಗ್ನಿ ಅನಾಹುತ) ತೊಂದರೆಗೀಡಾದವರಿಗೆ ಸಹಾಯ.
ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಕೆ ಹೇಗೆ? :
ಈಗ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು, ಇದರಿಂದ ಫಲಾನುಭವಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಾಗಿದ್ದು. ಬಹಳ ಸರಳ ರೀತಿಯಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಮೊದಲಿಗೆ https://cmrf.karnataka.gov.in/intranet/Home_Kann.as ಈ ಮುಖಪುಟದಲ್ಲಿನ ಮಾಹಿತಿಯನ್ನು ಓದಿಕೊಳ್ಳಬೇಕು.
ನಂತರhttps://sevasindhuservices.karnataka.gov.in/ ಗೆ ಭೇಟಿ ನೀಡಬೇಕು.
ಸೇವಾಸಿಂಧು ಪೋರ್ಟಲ್ (Sevasindhu Portal) ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನೀಡಿ ನೋಂದಾಯಿಸಿಕೊಳ್ಳಬೇಕು.
ಬಳಿಕ ಮುಖ್ಯಮಂತ್ರಿ ಪರಿಹಾರ ನಿಧಿಯ ಅರ್ಜಿಯನ್ನು ಆಯ್ಕೆ ಮಾಡಿಕೊಂಡು ಚಿಕಿತ್ಸೆ ಆರ್ಥಿಕ ನೆರವಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಸ್ಥಿತಿಯನ್ನು ತಿಳಿಯಲು
https://cmrf.karnataka.gov.in/intranet/Tracker_Kann.a ಗೆ ಭೇಟಿ ನೀಡಿ. ಅರ್ಜಿಯ ಸಂಖ್ಯೆ ಹಾಗೂ ಅರ್ಜಿದಾರರ ಹೆಸರನ್ನು ನಮೂದಿಸಿದರೇ, ಅರ್ಜಿಯ ಸ್ಥಿತಿಯನ್ನು ತೋರಿಸಲಿದೆ.
ಮುಖ್ಯಮಂತ್ರಿ ಪರಿಹಾರ ನಿಧಿಗೆ ಆನ್ ಲೈನ್ ಮೂಲಕವೂ ಅರ್ಜಿಯನ್ನು ಸಲ್ಲಿಸಿ ಫಲಾನುಭವಿಗಳು ಆರ್ಥಿಕ ನೆರವು ಪಡೆದುಕೊಳ್ಳಬಹುದು. ಪರಿಹಾರ ಕೋರಿ ಅರ್ಜಿಯನ್ನು ಚಿಕಿತ್ಸೆಗೆ ಮುನ್ನ ಹಾಗೂ ಚಿಕಿತ್ಸೆಯ ನಂತರವೂ ಸಲ್ಲಿಸಬಹುದಾಗಿದೆ. ಆದರೇ ಅರ್ಜಿ ಸಲ್ಲಿಸಲು ಕೆಲ ಕಡ್ಡಾಯ ದಾಖಲೆಗಳನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಅಗತ್ಯವಿರುವ ಪ್ರಮುಖ ದಾಖಲೆಗಳು (Documents) ಹೀಗಿವೆ :
1. ತುರ್ತು ಚಿಕಿತ್ಸೆಗೆ (Emergency treatment) ಮುನ್ನ ಸಲ್ಲಿಸುವ ಅರ್ಜಿಗೆ ಬೇಕಾಗುವ ದಾಖಲೆಗಳು :
BPL ಪಡಿತರ ಚೀಟಿ (ಅರ್ಜಿದಾರರು ಬಡತನ ರೇಖೆಗಿಂತ ಕೆಳಗಿರುವುದನ್ನು ದೃಢೀಕರಿಸಲು).
ಆಧಾರ್ ಕಾರ್ಡ್ (ನಿಜವಾದ ಗುರುತಿಗಾಗಿ).
ಬ್ಯಾಂಕ್ ಖಾತೆ ವಿವರಗಳು (DBT ಪಾಯಿಂಟ್‌ಗಾಗಿ).
ಆಸ್ಪತ್ರೆಯ ಚಿಕಿತ್ಸೆ ವೆಚ್ಚದ ಅಂದಾಜು ಪಟ್ಟಿ.
ಚಿಕಿತ್ಸೆಗೆ ಸಂಬಂಧಿಸಿದ ಶಿಫಾರಸ್ಸು ಪತ್ರ.
2. ಚಿಕಿತ್ಸೆಯ ನಂತರ ಸಲ್ಲಿಸುವ ಅರ್ಜಿಗೆ ಬೇಕಾಗುವ ದಾಖಲೆಗಳು (Documents) :
ಆಸ್ಪತ್ರೆಯ ಅಂತಿಮ ಮೂಲ ಬಿಲ್ಲುಗಳು (ಚಿಕಿತ್ಸೆ ಮುಗಿದ ನಂತರ).
ಚಿಕಿತ್ಸೆ ಪಡೆದ ವೈದ್ಯರಿಂದ ದೃಢೀಕರಿಸಿದ ವೈದ್ಯಕೀಯ ವರದಿ.
ಬಿಡುಗಡೆ ಸಾರಾಂಶ ಪತ್ರ (ಆಸ್ಪತ್ರೆಯಿಂದ ನೀಡಲ್ಪಡುವ).
BPL ಪಡಿತರ ಚೀಟಿ ಮತ್ತು ಗುರುತಿನ ದಾಖಲೆಗಳು.
ಪರಿಹಾರ ಪಡೆಯಲು ಫಲಾನುಭವಿಗಳು ಈ ಮುಖ್ಯ ಷರತ್ತುಗಳು ಪಾಲಿಸಬೇಕು :
ಅರ್ಜಿದಾರರು ಬಡತನ ರೇಖೆಗಿಂತ ಕೆಳಗಿರಬೇಕು (BPL ಹೊಂದಿರಬೇಕು).
ಅರ್ಜಿದಾರರು ಚಿಕಿತ್ಸೆ ಮುಗಿಯುವವರೆಗೂ ಬದುಕಿರಬೇಕು.
ಒಮ್ಮೆ ಮಾತ್ರ ಪರಿಹಾರ ಪಡೆಯುವ ಅವಕಾಶ ಇದೆ, ಮರು ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ವಿಮಾನ, ರೈಲು, ರಸ್ತೆ ಅಪಘಾತ ಅಥವಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವ (Medico-Legal Case – MLC) ಪ್ರಕರಣಗಳಿಗೆ ಅನುದಾನ ಸಿಗದು.
ಸರ್ಕಾರಿ ಅಥವಾ ಖಾಸಗಿ ವಿಮಾ ಯೋಜನೆಗಳಿಂದ ಪರಿಹಾರ ಪಡೆದಿದ್ದರೆ, ಮತ್ತೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಜಿ ಹಾಕಲು ಅವಕಾಶವಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ (For more information) :
ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ, ಮುಖ್ಯಮಂತ್ರಿಗಳ ಪರಿಹಾರ ನಿಧಿ ವಿಭಾಗ
ವಿಧಾನಸೌಧ, ಬೆಂಗಳೂರು – 560001
ದೂರವಾಣಿ: 080-2203 3950 / 080-2225 1792
ಅಧಿಕೃತ ತಾಣ: cmrf.karnataka.gov.in
ಕರ್ನಾಟಕ ಸರ್ಕಾರದ (Karnataka government) ಈ ಹೊಸ ಆನ್‌ಲೈನ್ ಅರ್ಜಿ ವ್ಯವಸ್ಥೆ ಜನರಿಗೆ ಕಚೇರಿಗಳ ಮುಂದೆ ನಿಂತು ಗಂಟೆಗಳ ಕಾಲ ಸಮಯ ವ್ಯಯಿಸುವ ಅವಶ್ಯಕತೆಯನ್ನು ಕಡಿಮೆ ಮಾಡಲಿದೆ. ಈ ಮೂಲಕ ಹಗುರ ಮತ್ತು ವೇಗಗತಿಯಲ್ಲಿ ಪರಿಹಾರ ಒದಗಿಸಬಹುದಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಇರುವ ಜನರು ತಮ್ಮ ಆರೋಗ್ಯ ಮತ್ತು ಕುಟುಂಬದ ಭದ್ರತೆಯನ್ನು ಸುಲಭವಾಗಿ ಕಾಪಾಡಿಕೊಳ್ಳಲು ಇದು ಪೂರಕವಾಗಲಿದೆ.
ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.