CHIITRADURGA RECRUITMENT scaled

ಗ್ರಾಮ ಪಂಚಾಯಿತಿಗಳಲ್ಲಿ ‘ಬಿಲ್ ಕಲೆಕ್ಟರ್’ ಹುದ್ದೆಗೆ ಅರ್ಜಿ ಆಹ್ವಾನ; ಪಿಯುಸಿ ಪಾಸಾದವರು ಅರ್ಜಿ ಹಾಕಿ.

Categories:
WhatsApp Group Telegram Group

ಉದ್ಯೋಗದ ಹೈಲೈಟ್ಸ್

  • ಹುದ್ದೆ: ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ (ಕರವಸೂಲಿಗಾರ).
  • ಅರ್ಹತೆ: ದ್ವಿತೀಯ ಪಿಯುಸಿ (2nd PUC) + ಕಂಪ್ಯೂಟರ್ ಜ್ಞಾನ.
  • ವಿಶೇಷತೆ: ಯಾವುದೇ ಅರ್ಜಿ ಶುಲ್ಕ ಇಲ್ಲ (No Fee).
  • ಸ್ಥಳ: ಚಿತ್ರದುರ್ಗ ಜಿಲ್ಲೆ.

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ! ಜಿಲ್ಲಾ ಪಂಚಾಯತ್ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ “ಕರವಸೂಲಿಗಾರ” (Bill Collector) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. 12ನೇ ತರಗತಿ ಪಾಸಾದವರು ಯಾವುದೇ ಪರೀಕ್ಷಾ ಶುಲ್ಕವಿಲ್ಲದೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಎಲ್ಲೆಲ್ಲಿ ಹುದ್ದೆಗಳು ಖಾಲಿ ಇವೆ? 

ಈ ಕೆಳಗಿನ ಗ್ರಾಮ ಪಂಚಾಯಿತಿಗಳಲ್ಲಿ ನೇರ ನೇಮಕಾತಿ ನಡೆಯಲಿದೆ:

  • ಮೈಲನಹಳ್ಳಿ
  • ಹಿರೇಹಳ್ಳಿ
  • ಸಿರಿಗೆರೆ
  • ಸಾಣಿಕರೆ
  • ತಂಗಡ
  • ಆ‌ರ್.ನುಲೇನೂರು
  • ದೊಡ್ಡೇರಿ
  • ಜಾಜೂರು
  • ಗನ್ನಾಯನಕನಹಳ್ಳಿ

ಶೈಕ್ಷಣಿಕ ಅರ್ಹತೆ ಏನು? (Eligibility)

  • ವಿದ್ಯಾರ್ಹತೆ: ಅಭ್ಯರ್ಥಿಯು ದ್ವಿತೀಯ ಪಿಯುಸಿ (2nd PUC) ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. (ಕನ್ನಡವನ್ನು ಒಂದು ವಿಷಯವನ್ನಾಗಿ ಓದಿರಬೇಕು).
  • ಕಂಪ್ಯೂಟರ್ ಜ್ಞಾನ: ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಕನಿಷ್ಠ 3 ತಿಂಗಳ ಕಂಪ್ಯೂಟರ್ ಕೋರ್ಸ್ ಪ್ರಮಾಣ ಪತ್ರ ಹೊಂದಿರಬೇಕು.

ವಯಸ್ಸಿನ ಮಿತಿ (Age Limit) 

ದಿನಾಂಕ 08-02-2026 ಕ್ಕೆ ಅನ್ವಯವಾಗುವಂತೆ:

  • ಕನಿಷ್ಠ ವಯಸ್ಸು: 18 ವರ್ಷ.
  • ಗರಿಷ್ಠ ವಯಸ್ಸು:
    • ಸಾಮಾನ್ಯ ವರ್ಗ: 35 ವರ್ಷ.
    • 2A, 2B, 3A, 3B: 38 ವರ್ಷ.
    • SC/ST/Cat-1: 40 ವರ್ಷ.

ಆಯ್ಕೆ ಪ್ರಕ್ರಿಯೆ ಮತ್ತು ಸಂಬಳ

ಆಯ್ಕೆ ಹೇಗೆ?: ಪಿಯುಸಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು (Merit) ಮತ್ತು ಮೀಸಲಾತಿ (Roaster) ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.

ವೇತನ: ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ಮತ್ತು ತುಟ್ಟಿ ಭತ್ಯೆ (VDA) ಸಿಗಲಿದೆ.

ನೇಮಕಾತಿ ವಿವರಗಳು (Recruitment Details)

ಅರ್ಜಿ ಸಲ್ಲಿಕೆ ಆರಂಭ 09-ಜನವರಿ-2026
ಕೊನೆಯ ದಿನಾಂಕ (End Date) 08-ಫೆಬ್ರವರಿ-2026
ಅರ್ಜಿ ಶುಲ್ಕ (Fee) ಉಚಿತ (No Fee) ✅
ಅರ್ಜಿ ಸಲ್ಲಿಸುವ ವಿಧಾನ ಆನ್‌ಲೈನ್ ಮೂಲಕ

 ಗಮನಿಸಿ: ವೆಬ್‌ಸೈಟ್‌ಗೆ ಹೋದಾಗ “New” ಎಂದು ಮಿನುಗುತ್ತಿರುವ “ಚಿತ್ರದುರ್ಗದ ಗ್ರಾಮ ಪಂಚಾಯಿತಿಯಲ್ಲಿ ಕರವಸೂಲಿಗಾರರ ಹುದ್ದೆಗೆ ಅರ್ಜಿ” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ. ಫೋಟೋ ಮತ್ತು ಸಹಿಯನ್ನು ಸರಿಯಾದ ಅಳತೆಯಲ್ಲಿ ಸ್ಕ್ಯಾನ್ ಮಾಡಿಟ್ಟುಕೊಳ್ಳಿ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories