Picsart 25 10 18 22 29 04 804 scaled

ಚಿಕನ್ ಪ್ರಿಯರೇ ಎಚ್ಚರ! ಕೋಳಿ ಮಾಂಸದ ಈ ಭಾಗಗಳನ್ನು ತಿನ್ನುವುದು ಆರೋಗ್ಯಕ್ಕೆ ಅಪಾಯ

Categories:
WhatsApp Group Telegram Group

ಭಾರತದಲ್ಲಿ ಚಿಕನ್ ಪ್ರಿಯರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಹೋಟೆಲ್‌ಗಳಲ್ಲಿ, ಮನೆಗಳಲ್ಲಿ, ಸಡಗರದ ಕಾರ್ಯಕ್ರಮಗಳಲ್ಲಿ ಅಥವಾ ದಿನನಿತ್ಯದ ಊಟದಲ್ಲೂ ಚಿಕನ್ ಒಂದು ಪ್ರಮುಖ ಪದಾರ್ಥವಾಗಿದೆ. ಚಿಕನ್‌ನ ರುಚಿಯಾಗಿರುತ್ತದೆ, ಪೋಷಕಾಂಶಗಳು ಹಾಗೂ ಬೇರೆ ಮಾಂಸಗಳಿಗೆ ಹೋಲಿಕೆ ಮಾಡಿದರೆ ಅದರ ಬೆಲೆ ಕೂಡ ಕಡಿಮೆ ಈ ಕಾರಣದಿಂದ, ಅನೇಕರು ಅದನ್ನು ತಮ್ಮ ಆಹಾರದಲ್ಲಿ ನಿಯಮಿತವಾಗಿ ಸೇರಿಸಿಕೊಳ್ಳುತ್ತಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿಕನ್ ದೇಹಕ್ಕೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ, ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ವಿಟಮಿನ್ ಬಿ, ನಿಯಾಸಿನ್ ಮುಂತಾದ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದೆ. ಈ ಪೋಷಕಾಂಶಗಳು ದೇಹವನ್ನು ಡಿಎನ್‌ಎ ಹಾನಿಯಿಂದ ರಕ್ಷಿಸುವುದರ ಜೊತೆಗೆ, ಮೂಳೆ ಮತ್ತು ಹಲ್ಲುಗಳನ್ನು ಕಾಪಾಡುತ್ತದೆ. ಜೊತೆಗೆ, ಚಿಕನ್‌ನಲ್ಲಿರುವ ಖನಿಜಾಂಶಗಳು ಮೂತ್ರಪಿಂಡ, ಯಕೃತ್ತು ಮತ್ತು ನರಮಂಡಲದ ಸರಿಯಾದ ಕಾರ್ಯನಿರ್ವಹಣೆಗೆ ಸಹಕಾರಿಯಾಗುತ್ತವೆ.
ಆದರೆ, ಈ ಎಲ್ಲಾ ಪ್ರಯೋಜನಗಳಿದ್ದರೂ ಚಿಕನ್‌ನ ಎಲ್ಲಾ ಭಾಗಗಳೂ ಆರೋಗ್ಯಕರವಾಗಿಲ್ಲ ಎಂಬುದನ್ನು ಬಹುತೇಕ ಜನರು ಗಮನಿಸುತ್ತಿಲ್ಲ. ಕೆಲವು ಭಾಗಗಳಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾ, ಕೀಟಾಣುಗಳು ಮತ್ತು ಹೆಚ್ಚುವರಿ ಕೊಬ್ಬುಗಳು ಇರುವುದರಿಂದ, ಅವುಗಳನ್ನು ನಿಯಮಿತವಾಗಿ ಸೇವಿಸುವುದು ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಹಾಗಿದ್ದರೆ ತಪ್ಪದೇ ತಪ್ಪಿಸಬೇಕಾದ ಚಿಕನ್ ಭಾಗಗಳು ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಕೋಳಿಯ ಕುತ್ತಿಗೆ (Neck):

ಕೋಳಿಯ ಕುತ್ತಿಗೆಯ ಭಾಗದಲ್ಲಿ ವಿಷಕಾರಿ ಸೂಕ್ಷ್ಮಜೀವಿಗಳು ಹಾಗೂ ದುಗ್ಧರಸ ಗ್ರಂಥಿಗಳು ಇರುತ್ತವೆ. ಈ ಭಾಗವನ್ನು ಪದೇ ಪದೇ ಬೇಯಿಸಿ ತಿನ್ನುವುದರಿಂದ ದೀರ್ಘಾವಧಿಯಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಆದ್ದರಿಂದ ಚಿಕನ್ ಖರೀದಿಸುವಾಗ ಕುತ್ತಿಗೆಯ ಭಾಗವನ್ನು ತೆಗೆದು ಹಾಕುವುದು ಅತ್ಯಾವಶ್ಯಕ.

ಶ್ವಾಸಕೋಶ, ತಲೆ ಮತ್ತು ಕರುಳು:

ಈ ಭಾಗಗಳಲ್ಲಿ ಅನೇಕ ಬ್ಯಾಕ್ಟೀರಿಯಾ ಹಾಗೂ ಹಾನಿಕಾರಕ ಜೀವಾಣುಗಳು ಸಂಗ್ರಹವಾಗಿರುತ್ತವೆ. ಇವುಗಳನ್ನು ಆಗಾಗ್ಗೆ ಸೇವಿಸುವುದರಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗುವುದು ಮಾತ್ರವಲ್ಲ, ಜೀರ್ಣಕ್ರಿಯೆಯ ಸಮಸ್ಯೆಗಳು ಹಾಗೂ ಮೂತ್ರನಾಳದ ಸೋಂಕುಗಳ ಅಪಾಯವೂ ಹೆಚ್ಚಾಗುತ್ತದೆ.

ಕೋಳಿ ಕಾಲುಗಳು(Chicken Legs):

ಕೋಳಿ ಕಾಲುಗಳಲ್ಲಿ ಹೆಚ್ಚುವರಿ ಹಾರ್ಮೋನುಗಳ ಅಂಶ ಕಂಡುಬರುತ್ತದೆ. ಇವು ದೀರ್ಘಾವಧಿಯಲ್ಲಿ ಹಾರ್ಮೋನಲ್ ಅಸಮತೋಲನ, ತೂಕದ ಏರಿಕೆ ಮತ್ತು ಮೆಟಾಬಾಲಿಕ್(Metabolic) ಸಮಸ್ಯೆಗಳಿಗೆ ಕಾರಣವಾಗಬಹುದು.

ಕೋಳಿ ಚರ್ಮ (Chicken Skin):

ಕೋಳಿ ಚರ್ಮದಲ್ಲಿ ಸುಮಾರು 32% ಕೊಬ್ಬು ಇರುತ್ತದೆ. 100 ಗ್ರಾಂ ಚಿಕನ್ ಚರ್ಮದಲ್ಲಿ ಸುಮಾರು 32 ಗ್ರಾಂ ಕೊಬ್ಬು ಇರುವುದರಿಂದ, ಇದನ್ನು ನಿಯಮಿತವಾಗಿ ತಿನ್ನುವುದರಿಂದ ಹೃದ್ರೋಗ, ಅಧಿಕ ರಕ್ತದೊತ್ತಡ ಹಾಗೂ ಕೆಟ್ಟ ಕೊಲೆಸ್ಟ್ರಾಲ್ (LDL) ಪ್ರಮಾಣ ಹೆಚ್ಚಾಗುತ್ತದೆ.
ಯುಎಸ್ಟಿಎ ಸಂಶೋಧನೆಯ ಪ್ರಕಾರ, ಚರ್ಮವಿಲ್ಲದೆ ಬೇಯಿಸಿದ ಒಂದು ಕಪ್ ಚಿಕನ್ 231 ಕ್ಯಾಲೊರಿಗಳನ್ನು ಹೊಂದಿದ್ದರೆ, ಚರ್ಮದೊಂದಿಗೆ ಬೇಯಿಸಿದರೆ ಅದು 276 ಕ್ಯಾಲೊರಿಗಳನ್ನು ಹೊಂದಿರುತ್ತದೆ ಎಂದು ಹೇಳುತ್ತದೆ.

ಆರೋಗ್ಯಕರವಾಗಿ ಚಿಕನ್ ತಿನ್ನುವ ಸರಿಯಾದ ವಿಧಾನ ಕೆಳಗಿನಂತಿದೆ:

ಚಿಕನ್ ಖರೀದಿಸುವಾಗ ಕುತ್ತಿಗೆ, ತಲೆ, ಶ್ವಾಸಕೋಶ ಹಾಗೂ ಕರುಳು ಭಾಗಗಳನ್ನು ತೆಗೆದು ಹಾಕಿ.
ಚರ್ಮವಿಲ್ಲದ ಚಿಕನ್‌ ಖರೀದಿಸಿ ಹಾಗೂ ಬೇಯಿಸಿ ತಿನ್ನುವುದು ಒಳ್ಳೆಯದು.
ಎಣ್ಣೆಯಲ್ಲಿ ಕರಿಯುವ ಬದಲು ಬೇಯಿಸಿ ಅಥವಾ ಉಪ್ಪಿನ ನೀರಿನಲ್ಲಿ ಬೇಯಿಸಿದ ಚಿಕನ್‌ನ್ನು ಆಯ್ಕೆಮಾಡಿ.
ಅತಿಯಾಗಿ ಸೇವಿಸುವುದನ್ನು ತಪ್ಪಿಸಿ, ಸಮತೋಲನದ ಆಹಾರ ಪದ್ಧತಿಯನ್ನು ಅನುಸರಿಸಿ.

ಒಟ್ಟಾರೆಯಾಗಿ, ಚಿಕನ್ ಪೋಷಕಾಂಶಗಳಿಂದ ಸಮೃದ್ಧವಾದ ಆಹಾರವಾದರೂ, ಅದರ ಕೆಲವು ಭಾಗಗಳು ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು ಎಂಬುದನ್ನು ಮರೆಯಬಾರದು. ಸರಿಯಾದ ಆಯ್ಕೆ, ಸಿದ್ಧತೆ ಮತ್ತು ಸೇವನೆಯಿಂದ ಚಿಕನ್‌ನ ಪ್ರಯೋಜನವನ್ನು ಪಡೆಯಬಹುದು ಹಾಗೂ ಹಾನಿಯನ್ನು ತಪ್ಪಿಸಬಹುದು.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories