ಇಂದಿನ ಜೀವನಶೈಲಿ, ಆಹಾರ ಪದ್ಧತಿ ಮತ್ತು ಕೆಲಸದ ಒತ್ತಡದಿಂದಾಗಿ (Due to diet and work stress) ಅನೇಕರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು ಹೊಟ್ಟೆಯ ಕೊಬ್ಬು. ಇದು ಕೇವಲ ದೇಹದ ಆಕರ್ಷಕತೆಯನ್ನು ಹಾಳು ಮಾಡುವ ಅಲಂಕಾರಿಕ ಸಮಸ್ಯೆಯಷ್ಟೇ ಅಲ್ಲ, ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಅಂಶವಾಗಿದೆ. ವೈದ್ಯರ ಪ್ರಕಾರ, ಹೊಟ್ಟೆಯ ಸುತ್ತಮುತ್ತ ಬೆಳೆದ ಕೊಬ್ಬನ್ನು (Fat) ಸಾಮಾನ್ಯ ಕೊಬ್ಬಿನಂತೆ ಪರಿಗಣಿಸಬಾರದು, ಏಕೆಂದರೆ ಇದು ದೇಹದ ಆಂತರಿಕ ಅಂಗಗಳಿಗೆ ಒತ್ತಡ ತಂದು, ನಿಧಾನವಾಗಿ ಹಲವಾರು ಗಂಭೀರ ಕಾಯಿಲೆಗಳ ಇದು ಮಾರಕವಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಾಗಿ, ಹೊಟ್ಟೆಯ ಕೊಬ್ಬನ್ನು “ವಿಸ್ಸರಲ್ ಫ್ಯಾಟ್” (Visceral fat) ಎಂದು ಕರೆಯಲಾಗುತ್ತದೆ. ಇದು ಕರುಳು, ಯಕೃತ್ತು, ಮೂತ್ರಪಿಂಡ ಮುಂತಾದ ಜೀವಾನುಕೂಲ ಅಂಗಗಳ ಸುತ್ತಲೂ ಸಂಗ್ರಹವಾಗುತ್ತದೆ. ಸಮಯಕ್ಕೆ ಕ್ರಮ ಕೈಗೊಳ್ಳದಿದ್ದರೆ, ಮಧುಮೇಹ, ಹೃದಯ ರೋಗ, ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಹಾಗೂ ಮಹಿಳೆಯರಲ್ಲಿ ಹಾರ್ಮೋನು ಅಸಮತೋಲನ, ಪಿಸಿಒಡಿ ಮುಂತಾದ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಇಂತಹ ಹೊಟ್ಟೆಯ ಕೊಬ್ಬು ದೇಹದಲ್ಲಿ ಇನ್ಸುಲಿನ್ (Insulin) ಪ್ರತಿರೋಧವನ್ನು ಹೆಚ್ಚಿಸಿ ಶಕ್ತಿಯ ಸಮತೋಲನವನ್ನು ಅಸ್ತವ್ಯಸ್ತಗೊಳಿಸುತ್ತದೆ.
ಆದ್ದರಿಂದ, ಹೊಟ್ಟೆಯ ಕೊಬ್ಬು ಕೇವಲ ಅಲಕ್ಷ್ಯ ಮಾಡುವಂತಹ “ಬೊಜ್ಜು” ಅಲ್ಲ, ಬದಲಾಗಿ ಆರೋಗ್ಯ ಎಚ್ಚರಿಕೆ ಗಂಟೆ. ಹಾಗಿದ್ದರೆ, ಯಾವ ಕಾರಣಗಳಿಂದ ಹೊಟ್ಟೆಯ ಕೊಬ್ಬು ಹೆಚ್ಚಾಗುತ್ತದೆ ಮತ್ತು ಅದನ್ನು ತಡೆಗಟ್ಟಲು ಏನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಹೊಟ್ಟೆಯ ಕೊಬ್ಬು ಹೆಚ್ಚಾಗಲು ಪ್ರಮುಖ 5 ಕಾರಣಗಳು ಹೀಗಿವೆ:
1. ಹೆಚ್ಚು ಕಾರ್ಬೋಹೈಡ್ರೆಟ್ಗಳ ಸೇವನೆ(carbohydrates) :
ಬೆಳಿಗ್ಗೆ ಬ್ರೆಡ್, ಮಧ್ಯಾಹ್ನ ಅನ್ನ, ರಾತ್ರಿ ರೊಟ್ಟಿ ಇಂತಹ ಆಹಾರ ಪದ್ಧತಿಗಳು ದೇಹದಲ್ಲಿ ಕಾರ್ಬೋಹೈಡ್ರೆಟ್ಗಳ ಪ್ರಮಾಣವನ್ನು ಹೆಚ್ಚಿಸುತ್ತವೆ. ಇವು ಗ್ಲೂಕೋಸ್ ಆಗಿ ಪರಿವರ್ತಿತವಾಗಿ ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಸಂಗ್ರಹವಾಗುತ್ತವೆ.
2. ಸಂಸ್ಕರಿತ ಆಹಾರ ಸೇವನೆ(Consumption of processed foods):
ಪ್ಯಾಕ್ ಮಾಡಿದ, ಸಂಸ್ಕರಿಸಿದ ಆಹಾರಗಳು ಫೈಬರ್ ಕಡಿಮೆ ಹೊಂದಿರುತ್ತವೆ. ಇವು ಜೀರ್ಣವಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತವೆ ಮತ್ತು ದೇಹದಲ್ಲಿ ಕೊಬ್ಬಿನ ಸಂಗ್ರಹವನ್ನು ವೇಗವಾಗಿ ಹೆಚ್ಚಿಸುತ್ತವೆ.
3. ನಿಧಾನ ನಡಿಗೆ(Slow walk) :
ಹೊಟ್ಟೆಯ ಕೊಬ್ಬು ಕಡಿಮೆ ಮಾಡಲು ನಿಧಾನ ನಡಿಗೆ ಮಾತ್ರ ಸಾಕಾಗುವುದಿಲ್ಲ. ಚುರುಕಾದ ನಡಿಗೆ, ಓಟ ಅಥವಾ ಕಾರ್ಡಿಯೋ ವ್ಯಾಯಾಮಗಳನ್ನು ಅಭ್ಯಾಸ ಮಾಡಿದಾಗ ಮಾತ್ರ ಪರಿಣಾಮಕಾರಿ ಫಲಿತಾಂಶ ದೊರೆಯುತ್ತದೆ.
4. ಒತ್ತಡ ಮತ್ತು ನಿದ್ರೆಯ ಕೊರತೆ(Stress and Sleeping problem) :
ನಿರಂತರ ಒತ್ತಡ, ತೊಂದರೆ, ಮತ್ತು ನಿದ್ರೆಯ ಕೊರತೆ ದೇಹದಲ್ಲಿ “ಕಾರ್ಟಿಸೋಲ್” ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಹೊಟ್ಟೆಯ ಸುತ್ತಲೂ ಕೊಬ್ಬು ವೇಗವಾಗಿ ಶೇಖರವಾಗುತ್ತದೆ.
5. ಆನುವಂಶಿಕ ಕಾರಣಗಳು(Genetic causes) :
ಕೆಲವರಲ್ಲಿ ಆನುವಂಶಿಕ ಕಾರಣಗಳಿಂದಲೂ ಹೊಟ್ಟೆಯ ಕೊಬ್ಬು ಹೆಚ್ಚಾಗಬಹುದು. ಆದರೂ, ಆರೋಗ್ಯಕರ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಮತ್ತು ಒತ್ತಡ ನಿಯಂತ್ರಣದಿಂದ ಇದನ್ನು ತಡೆಯಬಹುದು.
ಹೊಟ್ಟೆಯ ಕೊಬ್ಬಿನಿಂದ ರಕ್ಷಿಸಿಕೊಳ್ಳುವುದು ಹೇಗೆ?
ಪ್ರತಿದಿನ ಕನಿಷ್ಠ 40 ನಿಮಿಷ ವ್ಯಾಯಾಮ ಮಾಡಿ.
ಆಹಾರದಲ್ಲಿ ಫೈಬರ್ ಸಮೃದ್ಧ ಹಣ್ಣು-ತರಕಾರಿ ಸೇರಿಸಿ.
ಒತ್ತಡವನ್ನು ಕಡಿಮೆ ಮಾಡಲು ಯೋಗ ಮತ್ತು ಧ್ಯಾನ (Yoga and Meditation) ಅಭ್ಯಾಸ ಮಾಡಿ.
ನಿಯಮಿತವಾಗಿ 7–8 ಗಂಟೆಗಳ ನಿದ್ರೆ ಪಡೆಯಿರಿ.
ತಡರಾತ್ರಿ ಎಚ್ಚರವಾಗಿರುವುದನ್ನು ತಪ್ಪಿಸಿ, ನಿಗದಿತ ಮಲಗು/ಏಳುವ ಸಮಯ ಪಾಲಿಸಿ.
ಪ್ಯಾಕ್ ಮತ್ತು ಸಂಸ್ಕರಿತ ಆಹಾರಗಳನ್ನು ದೂರವಿರಿಸಿ, ತಾಜಾ ಆಹಾರ ಸೇವನೆಗೆ ಒತ್ತು ನೀಡಿ.
ಒಟ್ಟಾರೆಯಾಗಿ, ಹೊಟ್ಟೆಯ ಕೊಬ್ಬು ಕೇವಲ ಸೌಂದರ್ಯಕ್ಕೆ ಧಕ್ಕೆ ತರುವುದಲ್ಲ, ಅದು ಭವಿಷ್ಯದಲ್ಲಿ ಗಂಭೀರ ಕಾಯಿಲೆಗಳ (Serious illnesses) ಕಾರಣವಾಗಬಹುದು. ಆದ್ದರಿಂದ ಇಂದಿನಿಂದಲೇ ಆರೋಗ್ಯಕರ ಜೀವನಶೈಲಿ, ಸರಿಯಾದ ಆಹಾರ ಮತ್ತು ವ್ಯಾಯಾಮದ ಮೂಲಕ ದೇಹವನ್ನು ಕಾಪಾಡಿಕೊಳ್ಳಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.