ಬ್ಯಾಂಕ್ ಗ್ರಾಹಕರಿಗೆ ಬಿಗ್‌ ಶಾಕ್‌ : ಜುಲೈ 1ರಿಂದ ʻATMʼ  ಶುಲ್ಕದಲ್ಲಿ ಭಾರಿ ಬದಲಾವಣೆ!

ATM cash withdrawal charges increased

ದೇಶದಾದ್ಯಂತ ಎಟಿಎಂ (ATM) ಮೂಲಕ ಹಣ ತೆಗೆಯುವ ಗ್ರಾಹಕರಿಗೆ ಬಿಗ್‌ ಶಾಕ್‌ : ನಗದು ಹಿಂಪಡೆಯುವ ಶುಲ್ಕ ಹೆಚ್ಚಳ (Cash Withdrawal Charges)

ಇಂದು ನಾವೆಲ್ಲರೂ ಡಿಜಿಟಲ್ ಯುಗದಲ್ಲಿ (Digital era) ಬದುಕುತ್ತಿದ್ದೇವೆ. ಹಲವಾರು ಕೆಲಸಗಳನ್ನು ಡಿಜಿಟಲ್ ಮುಖಾಂತರವೇ ಮುಗಿಸಿಕೊಳ್ಳುತ್ತೇವೆ. ಫೋನ್ ಪೇ (phone pay) ಗೂಗಲ್ ಪೇ (google pay) ಈ ರೀತಿಯ ಆಪ್ ಗಳ ಮೂಲಕ ಹಣವನ್ನು ವರ್ಗಾಯಿಸುತ್ತಿರುತ್ತೇವೆ. ಆದರೆ ಕೆಲವೊಮ್ಮೆ ನಮಗೆ ನಗದು ಬಹಳ ಮುಖ್ಯವಾಗುತ್ತದೆ. ಅಂತಹ ಸಮಯದಲ್ಲಿ ನಾವು ಎಟಿಎಂ (ATM) ಮೂಲಕ ಹಣ ತೆಗೆಯುಲು ಮುಂದಾಗುತ್ತೇವೆ. ಕೆಲವೊಮ್ಮೆ ನಾವು ಯಾವ ಬ್ಯಾಂಕ್ ನಲ್ಲಿ ಖಾತೆ ಮಾಡಿಸಿರುತ್ತೇವೆಯೋ ಆ ಬ್ಯಾಂಕ್ ಖಾತೆಯ ಎಟಿಎಂ ಹತ್ತಿರ ಇಲ್ಲವೆಂದಲ್ಲಿ ಬೇರೆ ಬ್ಯಾಂಕ್ ನ ಎಟಿಎಂ ಮುಖಾಂತರ ಹಣವನ್ನು ಹಿಂಪಡೆಯುತ್ತೇವೆ. ಒಟ್ಟಾರೆಯಾಗಿ ಯಾವ ಸಂದರ್ಭದಲ್ಲಿಯಾದರೂ ಯಾವ ಸಮಯದಲ್ಲಿಯಾದರೂ ಎಟಿಎಂ ಮುಖಾಂತರ ಹಣವನ್ನು ಹಿಂಪಡೆಯುತ್ತಿರುತ್ತೇವೆ. ಆದರೆ ಇದೀಗ  ಎಟಿಎಂ (ATM) ಮೂಲಕ ಹಣ ತೆಗೆಯುವ ಗ್ರಾಹಕರಿಗೆ ಬಿಗ್‌ ಶಾಕ್‌ ಎದುರಾಗಿದೆ. ಶೀಘ್ರದಲ್ಲಿ ನಗದು ಹಿಂಪಡೆಯುವ ಶುಲ್ಕ ಹೆಚ್ಚಳವಾಗುತ್ತದೆ (Cash Withdrawal Charges). ಎಷ್ಟು ಶುಲ್ಕ ಹೆಚ್ಚಳವಾಗಲಿದೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಹೌದು, ಎಟಿಎಂ ಆಪರೇಟರ್ಗಳು (ATM operaters), ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮತ್ತು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಬಳಿ ಭಾರತದತ್ಯಂತ ಇರುವಂತ ಎಟಿಎಂ (ATM) ಗಳನ್ನು ಆಪರೇಟ್ ಮಾಡುವ ಸಲುವಾಗಿ ಹೆಚ್ಚಿನ ವಿನಿಮಯ ಶುಲ್ಕದ (Interchange Fees) ಬೇಡಿಕೆ ಇಟ್ಟಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ನೀವೇನಾದರೂ ಎಟಿಎಂನಿಂದ ಹಣವನ್ನು ಹಿಂಪಡೆದರೆ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಎಂದಿನಿಂದ ಶುಲ್ಕ ಹೆಚ್ಚಳ :

ಎಟಿಎಂ ನಿರ್ವಾಹಕರು ಶುಲ್ಕವನ್ನು ಹೆಚ್ಚಿಸಲು ಒತ್ತಾಯಿಸಿರುವುದರಿಂದ ಹೆಚ್ಚಿನ ವಿನಿಮಯ ಶುಲ್ಕವು (Interchange Fees)ಜುಲೈ 1 ರಿಂದ ಜಾರಿಯಾಗಲಿದೆ. ಆದ್ದರಿಂದ ಜುಲೈ ಒಂದರಿಂದ ಹಣವನ್ನು ಹಿಂಪಡೆಯುವ ಗ್ರಾಹಕರು ಮುನ್ನೆಚ್ಚರಿಕೆ ಕ್ರಮವನ್ನು ವಹಿಸಬೇಕು. ಹೆಚ್ಚಿನ ವಿನಿಮಯ ಶುಲ್ಕವೆಂದರೆ (Interchange Fees) ಎಟಿಎಂಗಳಿಂದ ಹಣವನ್ನು ಹಿಂಪಡೆಯುವಾಗ ಗ್ರಾಹಕರು ಪಾವತಿಸುವ ಶುಲ್ಕವಾಗಿದೆ. ಆದ್ದರಿಂದ ಜುಲೈ 1 ರಿಂದ ಎಟಿಎಂಗಳಿಂದ ಹಣವನ್ನು ಹಿಂಪಡೆಯುವ ಗ್ರಾಹಕರು ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಈ ಹಿಂದೆ ಯಾವಾಗ ಶುಲ್ಕ ಹೆಚ್ಚಾಳವಾಗಿತ್ತು :

ಮಾಹಿತಿಗಳ ಪ್ರಕಾರ 2021ರ ಸಮಯದಲ್ಲಿ ಎಟಿಎಂ ಉತ್ಪಾದನಾ ಕಂಪನಿಗಳು, ಎಟಿಎಂ (ATM) ಬಳಸುವಿಕೆಯ ಶುಲ್ಕವನ್ನು 15 ರಿಂದ 17 ರೂಪಾಯಿಗಳಿಗೆ ಏರಿಕೆ ಮಾಡಿದ್ದರು, ಸದ್ಯದ ದಿನಮಾನಗಳಲ್ಲಿ ವಿನಿಮಯದ ಶುಲ್ಕವನ್ನು 21 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಇನ್ನು ಮುಂದೆ ಈ ಶುಲ್ಕವನ್ನು ಏರಿಕೆ ಮಾಡಲು ಚರ್ಚೆ ನಡೆಸಲಾಗುತ್ತಿದ್ದು, ಆರ್ ಬಿ ಐ ನಿಂದ (RBI) ಧನಾತ್ಮಕ ಪ್ರತಿಕ್ರಿಯೆ ದೊರಕಿದೆ. ಆದ್ದರಿಂದ ಎಟಿಎಂ ನಿರ್ವಾಹಕರ ಮನವಿಯಂತೆ ಆರ್ ಬಿಐ ಗ್ರೀನ್ ಸಿಗ್ನಲ್ ನೀಡಿದರೆ ಜುಲೈ 1 ರಿಂದ ₹23 ಹೆಚ್ಚಳ ಆಗಲಿದೆ(Increased ₹23).

ಮಿತಿಯನ್ನು ಮೀರಿದರೆ ಎಟಿಎಂ ಶುಲ್ಕ ಖಚಿತ :

ಮಿತಿಯನ್ನು ಮೀರಿದರೆ ಎಟಿಎಂ ಶುಲ್ಕಗಳು ಖಚಿತವಾಗಿ ಅನ್ವಯವಾಗುತ್ತವೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಮುಂಬೈ ಮತ್ತು ದೆಹಲಿಯಂತಹ ಆರು ಪ್ರಮುಖ ನಗರಗಳಲ್ಲಿ ಬ್ಯಾಂಕ್‌ಗಳು ತಮ್ಮ ಉಳಿತಾಯ ಖಾತೆ ಗ್ರಾಹಕರಿಗೆ ತಿಂಗಳಿಗೆ ಕನಿಷ್ಠ ಐದು ಉಚಿತ ವಹಿವಾಟುಗಳನ್ನು ನೀಡುತ್ತಿವೆ. ಈ ಆರು ಪ್ರಮುಖ ನಗರಗಳಲ್ಲಿ ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ತಿಂಗಳಿಗೆ ಐದು ಬಾರಿ ಎಟಿಎಂನಿಂದ ಹಣವನ್ನು ಉಚಿತವಾಗಿ ಪಡೆಯಬಹುದು. ಇತರ ಬ್ಯಾಂಕ್‌ಗಳ ಎಟಿಎಂಗಳು ತಿಂಗಳಿಗೆ ಮೂರು ಉಚಿತ ವಹಿವಾಟುಗಳನ್ನು ನೀಡುತ್ತವೆ. ಈ ಮಿತಿಯನ್ನು ಮೀರಿದ ಶುಲ್ಕವನ್ನು ವಿಧಿಸಲಾಗುತ್ತದೆ.

ಯಾರು ಶುಲ್ಕವಿಲ್ಲದೆ ಉಚಿತವಾಗಿ ಎಟಿಎಂ ಬಳಸಬಹುದು?:

ಉಳಿತಾಯ ಖಾತೆಯನ್ನು ಹೊಂದಿರುವ ಗ್ರಾಹಕರು ಪ್ರತಿ ತಿಂಗಳು 5 ಬಾರಿ ಉಚಿತವಾಗಿ ಎಟಿಎಂ ಕಾರ್ಡನ್ನು (Free Usage of ATM Card) ಯಾವುದೇ ಶುಲ್ಕವಿಲ್ಲದೆ ಉಪಯೋಗಿಸಬಹುದು. ಇನ್ನು ಕೆಲ ಬ್ಯಾಂಕುಗಳಲ್ಲಿ ಮೂರು ಉಚಿತ ATM ವಿನಿಮಯದ ಅವಕಾಶವನ್ನು ನೀಡಿರುತ್ತಾರೆ. ಹೀಗೆ ಒಂದೊಂದು ಬ್ಯಾಂಕ್ ನಲ್ಲಿ ಹಣ ವಿನಿಮಯದ ಕೊಡುಗೆಯು ವಿಭಿನ್ನವಾಗಿರುತ್ತದೆ. ಬ್ಯಾಂಕುಗಳ ನಿಯಮಾನಸಾರ ಎಟಿಎಂ ಗಳಲ್ಲಿ ಹಣವನ್ನು ಉಚಿತವಾಗಿ ಹಿಂಪಡೆಯಬಹುದು.

ಎಟಿಎಂ ಶುಲ್ಕವನ್ನು ಹೆಚ್ಚಿಸುವ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಭಾರತೀಯ ರಾಷ್ಟ್ರೀಯ ಪಾವತಿ ನಿಗಮದಿಂದ (NPCI) ನಿಯೋಗವನ್ನು ರಚಿಸಲಾಗಿದೆ. ತಂಡವು ಶುಲ್ಕವನ್ನು ಹೆಚ್ಚಿಸಲು ಬ್ಯಾಂಕ್‌ಗಳೊಂದಿಗೆ ಮಾತುಕತೆ ನಡೆಸಿದೆ. ಬ್ಯಾಂಕ್‌ಗಳು ಸಹ ಶುಲ್ಕವನ್ನು ಹೆಚ್ಚಿಸಲು ಒಪ್ಪಿಕೊಂಡಿವೆ” ಎಂದು ಎಟಿಎಂ ತಯಾರಕರೊಬ್ಬರು ತಿಳಿಸಿದ್ದಾರೆ.ಎಟಿಎಂ ನಿರ್ವಾಹಕರ ಮನವಿಯಂತೆ ಆರ್ ಬಿಐ ಗ್ರೀನ್ ಸಿಗ್ನಲ್ ನೀಡಿದರೆ ಜುಲೈ 1 ರಿಂದ ₹23 ಹೆಚ್ಚಳ ಆಗಲಿದೆ(Increased ₹23).

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

One thought on “ಬ್ಯಾಂಕ್ ಗ್ರಾಹಕರಿಗೆ ಬಿಗ್‌ ಶಾಕ್‌ : ಜುಲೈ 1ರಿಂದ ʻATMʼ  ಶುಲ್ಕದಲ್ಲಿ ಭಾರಿ ಬದಲಾವಣೆ!

Leave a Reply

Your email address will not be published. Required fields are marked *

error: Content is protected !!