ಸ್ವಾವಲಂಭಿ ಸಾರಥಿ ಯೋಜನೆ: ನಿರುದ್ಯೋಗಿ ಯುವಕರಿಗೆ ಆಟೋ/ಟ್ಯಾಕ್ಸಿ/ಸರಕು ವಾಹನ ಖರೀದಿ ಸಬ್ಸಿಡಿ:
ಕರ್ನಾಟಕ ರಾಜ್ಯದ ನಿರುದ್ಯೋಗಿ ಯುವಕರಿಗೆ ಸರ್ಕಾರದಿಂದ ಸ್ವಂತ ಉದ್ಯೋಗ ಆರಂಭಿಸಲು ಸುವರ್ಣ ಅವಕಾಶ ಸಿಕ್ಕಿದ್ದು, “ಸ್ವಾವಲಂಭಿ ಸಾರಥಿ” ಯೋಜನೆಯಡಿ (Swavalambi Sarathi Scheme) ಟ್ಯಾಕ್ಸಿ ಅಥವಾ ಸರಕು ವಾಹನ ಖರೀದಿಸಲು ಸರ್ಕಾರದ ನಿಂದ ಸಬ್ಸಿಡಿಯನ್ನು (Subsidy) ನೀಡಲಾಗುತ್ತಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಮತ್ತು ಅಗತ್ಯ ದಾಖಲೆಗಳ ಸಂಪೂರ್ಣ ವಿವರ ಇಲ್ಲಿ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸಬ್ಸಿಡಿ ಪ್ರಮಾಣ:
ಯೋಜನೆಯಡಿ ಗರಿಷ್ಠ ಶೇ 75% ಅಥವಾ ಗರಿಷ್ಠ ₹4.0 ಲಕ್ಷವರೆಗೆ ಸಬ್ಸಿಡಿ ದೊರೆಯುತ್ತದೆ. ಇದು ನಿರುದ್ಯೋಗಿ ಯುವಕರಿಗೆ ತಮ್ಮ ಸ್ವಂತ ಟ್ಯಾಕ್ಸಿ ಅಥವಾ ಸರಕು ಸಾಗಣಾ ವಾಹನವನ್ನು ಖರೀದಿಸಲು ನೆರವಾಗುತ್ತದೆ.
ಅರ್ಹತಾ ಮಾನದಂಡ:
ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವಕರು: ಯೋಜನೆಯಡಿಯಲ್ಲಿ, ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕರು ಅರ್ಹರಾಗಿರುತ್ತಾರೆ.
ಚಾಲನಾ ಪರವಾನಗಿ ಹೊಂದಿರುವವರು: ಯೆಲ್ಲೋ ಬೋರ್ಡ್ ವಾಹನಗಳನ್ನು ಚಾಲನೆ ಮಾಡಲು ಚಾಲನಾ ಪರವಾನಗಿ ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಆರ್ಥಿಕವಾಗಿ ಹಿಂದುಳಿದ ವರ್ಗ: ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆಯಬಹುದು.
ರಾಜ್ಯದ ಖಾಯಂ ನಿವಾಸಿ: ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ಅಗತ್ಯವಿರುವ ದಾಖಲೆಗಳು:
ಆಧಾರ್ ಕಾರ್ಡ್
ಪಾನ್ ಕಾರ್ಡ್
ರೇಶನ್ ಕಾರ್ಡ್
ಚಾಲನಾ ಪರವಾನಗಿ (DL)
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಬ್ಯಾಂಕ್ ಪಾಸ್ ಬುಕ್
ಅಭ್ಯರ್ಥಿಯ ಪೋಟೋ
ಅರ್ಜಿ ಸಲ್ಲಿಸಲು ಹಂತಗಳ ವಿವರ:
ಆಧಿಕೃತ ಜಾಲತಾಣ ಪ್ರವೇಶ: ಸೇವಾ ಸಿಂಧು ಪೋರ್ಟಲ್ (Seva sindhu Portal) ಅನ್ನು (https://sevasindhu.karnataka.gov.in) ಲಾಗಿನ್ ಮಾಡಿ, ಹೊಸ ಬಳಕೆದಾರರಾಗಿ ನೋಂದಾಯಿಸಿಕೊಂಡು ಅಥವಾ ಇತರ ಡಿಟೈಲ್ಸ್‌ನೊಂದಿಗೆ ಲಾಗಿನ್ (Login) ಮಾಡಿ.
ಯೋಜನೆ ಆಯ್ಕೆ: ಲಾಗಿನ್ ನಂತರ “ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ದಿ ನಿಗಮ” ಎಂದು ಸರ್ಚ್ ಮಾಡಿ, “ಸ್ವಾವಲಂಭಿ ಸಾರಥಿ” ಯೋಜನೆಯನ್ನು ಆಯ್ಕೆ ಮಾಡಿ.
ಅಗತ್ಯ ವಿವರಗಳ ಭರ್ತಿ: ಅರ್ಜಿಯಲ್ಲಿ ಬೇಡಿದ ವಿವರಗಳನ್ನು ನೀಡಿದಂತೆ ಸಕಾಲದಲ್ಲಿ ಭರ್ತಿ ಮಾಡಿ, ಸಂಬಂಧಿತ ದಾಖಲೆಗಳನ್ನು ಸ್ಕಾನ್ ಮಾಡಿಸಿ (Scan) ಅರ್ಜಿ ಸಲ್ಲಿಸಿ.
ಅಪ್ಲಿಕೇಶನ್ ಸ್ಟೇಟಸ್ ಟ್ರ್ಯಾಕ್: ಸೇವಾ ಸಿಂಧು ಪೋರ್ಟಲ್‌ನಲ್ಲಿ ನಿಮ್ಮ ಅರ್ಜಿಯ ಸ್ಥಿತಿಯನ್ನು ತಪಾಸಿಸಬಹುದು.
ಅರ್ಜಿ ಸಲ್ಲಿಕೆಗೆ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ: 23-10-2024
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 23-11-2024
ಇನ್ನಷ್ಟು ಮಾಹಿತಿ:
ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗೆ ಅಥವಾ ಸಹಾಯಕ್ಕಾಗಿ, ಸಹಾಯವಾಣಿ ಸಂಖ್ಯೆ: 9482300400 ಅನ್ನು ಸಂಪರ್ಕಿಸಬಹುದು.
ಕೊನೆಯದಾಗಿ ಹೇಳುವುದಾದರೆ, ಸ್ವಾವಲಂಭಿ ಸಾರಥಿ ಯೋಜನೆ ನಿರುದ್ಯೋಗಿ ಪರಿಶಿಷ್ಟ ಪಂಗಡ ಯುವಕರಿಗೆ ಟ್ಯಾಕ್ಸಿ ಅಥವಾ ಸರಕು ವಾಹನಗಳನ್ನು ಖರೀದಿಸಿ ಸ್ವಂತ ಉದ್ಯೋಗ ಆರಂಭಿಸಲು ನೀಡುತ್ತಿರುವ ಅತ್ಯುತ್ತಮ ಅವಕಾಶವಾಗಿದೆ.ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




