karthik and sangeeta quarrel

Bigg boss Kannada- ಕಾರ್ತಿಕ್ ಮತ್ತು ಸಂಗೀತಾ ನಡುವೆ ಮನಸ್ತಾಪ..! ಯೂ ಆರ್ ಫೇಕ್ ಎಂದ ಸಂಗೀತಾ

Categories:
WhatsApp Group Telegram Group

ಕನ್ನಡ ದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10(BigBoss Season 10) ಈಗಾಲೇ ಹಲವಾರು ತಿರುವುಗಳನ್ನು ಕಂಡಿದೆ. ಸದ್ಯಕ್ಕೆ ವಿಜಯದಶಮಿ ಹಬ್ಬವನ್ನು ಆಚರಿಸುತ್ತಾ ಮನೆ ಮನೆಯಿಂದ ಎಲ್ಲ ಸಡಗರ ದಿಂದ ಕುಣಿದು ಕುಪ್ಪಳಿಸಿದ್ದಾರೆ. ಹಾಗೆಯೇ ಬಿಗ್ ಬಾಸ್ ನಲ್ಲಿ ಕಾರ್ತಿಕ್ ಮತ್ತು ಸಂಗೀತ ಬೆಸ್ಟ್ ಜೋಡಿ ಎಂದು ಗುರುತಿಸಿ ಕೊಂಡಿದ್ದಾರೆ. ಆದರೆ ಇದೀಗ ಇವರಿಬ್ಬರ ನಡುವೆ ಮನಸ್ತಾಪ ಸೃಷ್ಟಿಯಾಗಿದೆ. ಕ್ಯಾಪ್ಟನ್ಸಿ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿಯಿಂದ ಬಿರುಕು ಕಾಣಿಸಿಕೊಂಡಿದೆ. ಏನಿದು ಬಿರುಕು ಯಾವ ವಿಷಯಕ್ಕೆ ಎಂದು ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಕಾರ್ತಿಕ್ ಹಾಗೂ ಸಂಗೀತ ನಡುವೆ ಮನಸ್ತಾಪ :

ಬಿಗ್ ಬಾಸ್ ಮನೆಯೊಳಗೆ ಹಬ್ಬದ ವತಾವರಣ ಇತ್ತು, ಅದರ ನಡುವೆ ಕ್ಯಾಪ್ಟನ್ಸಿ ವಿಚಾರ ಸೇರಿಕೊಂಡು ಸ್ಪರ್ಧಿಗಳ ನಡುವೆ ಮಾತಿನ ಚಕಾಮಕಿ ಶುರುವಾಗಿದೆ. ಕ್ಯಾಪ್ಟನ್ಸಿ ಟಾಸ್ಕ್‌ನ ಬಗ್ಗೆ ಸ್ಪರ್ಧಿಗಳ ನಡುವೆ ಕಿತ್ತಾಟ ಸಾಮನ್ಯ. ಕ್ಯಾಪ್ಟನ್ಸಿ ಟಾಸ್ಕ್ ನ ವಿಚಾರವಾಗಿ ಮನೆಯ ಕ್ಯಾಪ್ಟನ್‌ ಆಗಲು ಅರ್ಹರಾದ ಇಬ್ಬರು ಸದಸ್ಯರನ್ನು ಮನೆಯ ಎಲ್ಲ ಸದಸ್ಯರೂ ಆರಿಸಬೇಕು ಎಂದು ಬಿಗ್‌ಬಾಸ್‌ ಆದೇಶ ನೀಡಿದ್ದರು.

ಹೀಗೆ ಸಂಗೀತಾ, ತಾನು ಲೀಡರ್ ಆಗಬೇಕು ಎಂದು ಘೋಷಿಸಿದ್ದಾರೆ. ಆದರೆ ಅವರ ಆಪ್ತಸ್ನೇಹಿತ ಕಾರ್ತಿಕ್ ರವರು ನಮ್ರತಾ ಮತ್ತು ತನಿಷಾ ಅವರನ್ನು ಕ್ಯಾಪ್ಟನ್ ಆಗಲು ಅರ್ಹರು ಎಂದು ಹೇಳಿದರು. ಈ ಮಾತು ಸಂಗೀತಾ ರವರಿಗೆ ಸರಿ ಎನಿಸಿಲ್ಲ. ತನ್ನ ಮನಸಿನಲ್ಲಿ ಇರುವ ವಿಷಯವನ್ನು ನೇರವಾಗಿ ಹೇಳಿಬಿಡುವ ಸಂಗೀತಾ ರವರು ಈ ವಿಷಯವನ್ನು ಕಾರ್ತಿಕ್ ಬಳಿ ನೇರವಾಗಿಯೇ ಹೇಳಿಬಿಟ್ಟರು.

ಬಿಗ್ ಬಾಸ್ ಗೆ ನಾನು ಯಾರ ಮೇಲೂ ಡಿಫೆಂಡ್ ಆಗಿ ಬಂದಿಲ್ಲ , ಜೊತೆಗಿದ್ದೋರೇ ಬೆನ್ನಿಗೆ ಚುಚ್ಚುತ್ತಾರೆ ಎಂದು ಹೇಳಿ ಕೊನೆಗೆ ‘ಯು ಆರ್ ಫೇಕ್‌’ ಎಂಬ ಮಾತನ್ನು ಕೂಡ ಹೇಳಿಬಿಟ್ಟರು. ಇದನ್ನು ಕೇಳಿದ ಕಾರ್ತಿಕ್ ಬೇಸಗೊಂಡು ಅಲ್ಲಿಂದ ಎದ್ದು ಹೊರಟುಹೋಗಿದ್ದಾರೆ.

ಯಾವಾಗಲೂ ಒಬ್ಬರಿಗೊಬ್ಬರು ಸಪೋರ್ಟ್‌ ಮಾಡುತ್ತ, ಒಬ್ಬರ ಸಲಹೆಯನ್ನು ಇನ್ನೊಬ್ಬರು ಕೇಳುತ್ತ ಬಂದಿದ್ದ ಕಾರ್ತಿಕ್ ಮತ್ತು ಸಂಗೀತಾ ರವರು ಈಗ ಕ್ಯಾಪ್ಟನ್ಸಿ ಟಾಸ್ಕ್ ವಿಚಾರದಲ್ಲಿ ಒಬ್ಬರಿಗೊಬ್ಬರು ಬೇಸರಗೊಂಡಿದ್ದಾರೆ.

ಇಷ್ಟೆಲ್ಲ ಆದ ನಂತರ ವೀಕ್ಷಕರಲ್ಲಿ ಹಲವಾರು ಪ್ರಶ್ನೆಗಳು ಕಾಣಿಸಿಕೊಂಡಿವೆ. ಯಾವಾಗಲೂ ಖುಷಿಯಿಂದ ಇರುತ್ತಿದ್ದ ಕಾರ್ತಿಕ್ ಮತ್ತು ಸಂಗೀತ ಬೇರೆಯಾಗಿದ್ದಾರೆಯೇ? ಅವರ ನಡುವೆ ಬಿರುಕು ಮೂಡಿದೆಯೇ? ಇವರಿಬ್ಬರು ಈ ವಿಚಾರ ವನ್ನು ಮರೆತು ಒಂದಾಗುತ್ತಾರಾ? ಅಥವಾ ಅವರಿಬ್ಬರ ನಡುವೆ ಈ ಬಿರುಕು ಒಡೆದು ಇನ್ನು ಮುಂದುವರಿಯುತ್ತಾ? ಎಂಬ ಹಲವಾರು ಪ್ರಶ್ನೆಗಳು ಕಾಡುತ್ತವೆ.
ಕಾರ್ತಿಕ್ ಮತ್ತು ಸಂಗೀತ ನಡುವೆ ಏನಾಗುತ್ತದೆ ಎಂದು ಮುಂದಿನ ಸಂಚಿಕೆಯಲ್ಲಿ ನೋಡೋಣ.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Popular Categories