ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ದೇಶದ ದೊಡ್ಡ ಕಂಪನಿಗಳು ಮುಂದೆ ಬಂದಿವೆ. ನವೆಂಬರ್-ಡಿಸೆಂಬರ್ 2025ರಲ್ಲಿ ಮುಕ್ತಾಯವಾಗುತ್ತಿರುವ ಮೂರು ಪ್ರಮುಖ ವಿದ್ಯಾರ್ಥಿವೇತನಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಆದಾಯ ಮಿತಿ ₹6 ಲಕ್ಷದೊಳಗಿನ ಕುಟುಂಬಗಳ ಹುಡುಗಿಯರು ತಪ್ಪದೇ ಅರ್ಜಿ ಸಲ್ಲಿಸಿ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ನಿಕಾನ್ ಸ್ಕಾಲರ್‌ಷಿಪ್ 2025 – ಛಾಯಾಗ್ರಹಣ ಕಲಿಯುವ ಹೆಣ್ಣುಮಕ್ಕಳಿಗೆ ಗೋಲ್ಡನ್ ಚಾನ್ಸ್!
ಪ್ರಸಿದ್ಧ ಕ್ಯಾಮೆರಾ ಬ್ರ್ಯಾಂಡ್ ನಿಕಾನ್ ಇಂಡಿಯಾ ತನ್ನ ಸಿಎಸ್‌ಆರ್ ಯೋಜನೆಯಡಿ ಹೆಣ್ಣುಮಕ್ಕಳಿಗೆ ಮಾತ್ರ ವಿಶೇಷ ವಿದ್ಯಾರ್ಥಿವೇತನ ನೀಡುತ್ತಿದೆ.
ಅರ್ಹತೆಗಳು:
- 12ನೇ ತರಗತಿ ಉತ್ತೀರ್ಣ
- ಕನಿಷ್ಠ 3 ತಿಂಗಳ ಅವಧಿಯ ವೃತ್ತಿಪರ ಫೋಟೋಗ್ರಫಿ ಕೋರ್ಸ್‌ಗೆ ದಾಖಲಾತಿ
- ಕುಟುಂಬ ವಾರ್ಷಿಕ ಆದಾಯ ₹6 ಲಕ್ಷಕ್ಕಿಂತ ಕಡಿಮೆ
- ವಿದ್ಯಾರ್ಥಿವೇತನ ಮೊತ್ತ: ಗರಿಷ್ಠ ₹1 ಲಕ್ಷ (ಕೋರ್ಸ್ ಶುಲ್ಕದ ಆಧಾರದ ಮೇಲೆ)
ಕೊನೆಯ ದಿನಾಂಕ: 28-11-2025
ಅರ್ಜಿ ವಿಧಾನ: ಆನ್‌ಲೈನ್ ಮಾತ್ರ
ಅರ್ಜಿ ಲಿಂಕ್: www.b4s.in/praja/NIKON13
ಆದಿತ್ಯ ಬಿರ್ಲಾ ಕ್ಯಾಪಿಟಲ್ ಸ್ಕಾಲರ್‌ಷಿಪ್ 2025 – ಶಾಲೆಯಿಂದ ಪಿಜಿ ವರೆಗೆ ಎಲ್ಲ ಹಂತದ ಹುಡುಗಿಯರಿಗೂ!
ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಷನ್ ನೀಡುತ್ತಿರುವ ಈ ಸ್ಕಾಲರ್‌ಷಿಪ್ ದೇಶದಾದ್ಯಂತದ ಹೆಣ್ಣುಮಕ್ಕಳಿಗೆ ತೆರೆದಿದೆ.
ಅರ್ಹತೆಗಳು:
- 9ರಿಂದ 12ನೇ ತರಗತಿ, ಸಾಮಾನ್ಯ ಪದವಿ (3 ವರ್ಷ), ವೃತ್ತಿಪರ ಪದವಿ (4 ವರ್ಷ)
- IIT, NIT, IIM ನಂತಹ ಟಾಪ್ ಸಂಸ್ಥೆಗಳಲ್ಲಿ ಸ್ನಾತಕೋತ್ತರ/ವೃತ್ತಿಪರ ಕೋರ್ಸ್‌ಗಳು
- ಹಿಂದಿನ ವರ್ಷ ಕನಿಷ್ಠ 60% ಅಂಕಗಳು
- ಕುಟುಂಬ ವಾರ್ಷಿಕ ಆದಾಯ ₹6 ಲಕ್ಷಕ್ಕಿಂತ ಕಡಿಮೆ
- ವಿದ್ಯಾರ್ಥಿವೇತನ ಮೊತ್ತ: ಗರಿಷ್ಠ ₹60,000
ಕೊನೆಯ ದಿನಾಂಕ: 07-12-2025 ಅರ್ಜಿ ವಿಧಾನ: ಆನ್‌ಲೈನ್ ಅರ್ಜಿ ಲಿಂಕ್: www.b4s.in/praja/ABCC13
ರೋಲ್ಸ್-ರಾಯ್ಸ್ ವಿಂಗ್ಸ್‌ಫಾರ್‌ಹರ್ ಸ್ಕಾಲರ್‌ಷಿಪ್ – ಎಂಜಿನಿಯರಿಂಗ್ ಹುಡುಗಿಯರಿಗೆ ₹35,000!
ವಿಶ್ವಪ್ರಸಿದ್ಧ ರೋಲ್ಸ್-ರಾಯ್ಸ್ ಇಂಡಿಯಾ ಎಂಜಿನಿಯರಿಂಗ್ ಕ್ಷೇತ್ರದ ಹೆಣ್ಣುಮಕ್ಕಳನ್ನು ಪ್ರೋತ್ಸಾಹಿಸಲು ವಿಶೇಷ ಸ್ಕಾಲರ್‌ಷಿಪ್ ಘೋಷಿಸಿದೆ.
ಅರ್ಹತೆಗಳು:
- ಏರೋಸ್ಪೇಸ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಮರೈನ್ ಎಂಜಿನಿಯರಿಂಗ್‌ನ 1, 2 ಅಥವಾ 3ನೇ ವರ್ಷ
- AICTE ಮಾನ್ಯತೆ ಪಡೆದ ಕಾಲೇಜು (ಸರ್ಕಾರಿ ಕಾಲೇಜುಗಳಿಗೆ ಆದ್ಯತೆ)
- 10 ಮತ್ತು 12ನೇ ತರಗತಿಯಲ್ಲಿ ಕನಿಷ್ಠ 60%ಕ್ಕಿಂತ ಹೆಚ್ಚು
- ಕುಟುಂಬ ವಾರ್ಷಿಕ ಆದಾಯ ₹4 ಲಕ್ಷಕ್ಕಿಂತ ಕಡಿಮೆ
- ಅಂಗವಿಕಲ, ಏಕಪೋಷಕ, ಅನಾಥ ಹುಡುಗಿಯರಿಗೆ ವಿಶೇಷ ಆದ್ಯತೆ
- ವಿದ್ಯಾರ್ಥಿವೇತನ ಮೊತ್ತ: ₹35,000
ಕೊನೆಯ ದಿನಾಂಕ: 30-11-2025
ಅರ್ಜಿ ವಿಧಾನ: ಆನ್‌ಲೈನ್
ಈ ಮೂರು ಸ್ಕಾಲರ್‌ಷಿಪ್‌ಗಳು ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ದೊಡ್ಡ ಬೆಂಬಲ ನೀಡುತ್ತವೆ. ದಾಖಲಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಬ್ಯಾಂಕ್ ವಿವರ, ಅಂಕಪಟ್ಟಿ ರೆಡಿಯಾಗಿಟ್ಟುಕೊಂಡು ಈಗಲೇ ಅರ್ಜಿ ಸಲ್ಲಿಸಿ!

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾ

“ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ಉದ್ಯೋಗ ಮಾಹಿತಿ ಕ್ಷೇತ್ರದಲ್ಲಿ 4 ವರ್ಷಗಳ ವೃತ್ತಿಪರ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ವಲಯದ ನೇಮಕಾತಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಉದ್ಯೋಗಾಕಾಂಕ್ಷಿಗಳಿಗೆ ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (verified) ಮತ್ತು ನಿಖರವಾದ ಉದ್ಯೋಗದ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದು ಸಾಗರಿ ಅವರ ಪ್ರಮುಖ ಗುರಿಯಾಗಿದೆ.”


WhatsApp Group




