ಬಿಎಸ್ಏನ್ಎಲ್ (BSNL) ಸಿಮ್ ಬಳಸುತ್ತಿರುವವರಿಗೆ ಇದೊಂದು ಗುಡ್ ನ್ಯೂಸ್. ಅತಿ ಕಡಿಮೆ ಬೆಲೆಗೆ ಸಿಗಲಿದೆ ಬೆಸ್ಟ್ ಪ್ಲಾನ್!.
ಇಂದು ನಾವೆಲ್ಲರೂ ಮೊಬೈಲ್ ಫೋನ್ ಗಳನ್ನು ಬಳಸುತ್ತಿದ್ದೇವೆ. ಬರೀ ಫೋನ್ ಗಳನ್ನು ತೆಗೆದುಕೊಂಡರೆ ಸಾಕಾಗುವುದಿಲ್ಲ, ಇದಕ್ಕೆ ಸರಿಹೊಂದುವಂತಹ ಸಿಮ್ ಗಳನ್ನೂ ಕೂಡ ಖರೀದಿಸುತ್ತೇವೆ. ಇಂದು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸಿಮ್ ಗಳನ್ನು ನಾವು ನೋಡಬಹುದು. ಜಿಯೋ, ಏರ್ಟೆಲ್, ಬಿಎಸ್ಎಲ್ಎನ್ ಹೀಗೆ ಹಲವು ಸಿಮ್ ಗಳನ್ನು ಕಾಣಬಹುದು. ಇದರಲ್ಲಿ ಬಿಎಸ್ಏನ್ಎಲ್ ಬಹಳ ಹಳೆಯ ಹಾಗೂ ನಮ್ಮ ಭಾರತದ ಸಿಮ್ ಕಾರ್ಡ್ ಆಗಿದೆ. ಈ ಒಂದು ಸಿಮ್ ಕಾರ್ಡ್ ಕಡಿಮೆ ಗ್ರಾಹಕರನ್ನು ಹೊಂದಿದ್ದರೂ ಕೂಡ ವಿಶ್ವಾಸಾರ್ಹ ಗ್ರಾಹಕರನ್ನು ಹೊಂದಿದೆ.
ಇದೀಗ ಬಿಎಸ್ಏನ್ಎಲ್ ತನ್ನ ಗ್ರಾಹಕರಿಗೆ ಒಂದು ವಿಶೇಷವಾದಂತಹ ಆಫರ್ (special offer )ಅನ್ನು ನೀಡುತ್ತಿದೆ. ಹೌದು, ಬಿಎಸ್ಏನ್ಎಲ್ ಕಂಪೆನಿಯು (BSNL company) ತನ್ನ ಗ್ರಾಹಕರಿಗೆ ಇದೀಗ ಹೊಸ ಪ್ಲ್ಯಾನ್ (new plan) ಒಂದನ್ನು ನೀಡಿದೆ. ಅದು ಯಾವುದು? ಮತ್ತು ಅದರಲ್ಲಿ ಇರುವ ಇತರೆ ಆಫರ್ ಗಳೇನು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಭಾರತದ ಜನಪ್ರಿಯ ಕಂಪೆನಿ ಬಿಎಸ್ಏನ್ಎಲ್ (BSNL) :
ಭಾರತದಲ್ಲಿ ಅತ್ಯಂತ ಜನಪ್ರಿಯ ಮತ್ತು ಸರ್ಕಾರೀ ಸೌಮ್ಯದ (government owned) ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ದೇಶದ ಅತ್ಯಂತ ಹಳೆಯ ಮತ್ತು ಸರ್ಕಾರಿ ಟೆಲಿಕಾಂ ಕಂಪನಿಯಾಗಿದೆ. ಈ ಒಂದು ಕಂಪೆನಿಯು ಉಳಿದ ಸಿಮ್ ಕಂಪೆನಿಗಿಂತ ಬಹು ಹಳೆಯದಾದ ಸಿಮ್ ಕಂಪೆನಿ (old sim comapny) ಆಗಿದೆ. ಆದರೂ ಈಗಲೂ ಕೂಡ ಈ ಕಂಪೆನಿಯು ತನ್ನ ಉತ್ತಮ ಕೊಡುಗೆ ಮತ್ತು ಯೋಜನೆಗಳ ಮೂಲಕ ತನ್ನತ್ತ ಗ್ರಾಹಕರನ್ನು ಸೆಳೆಯುತ್ತಿದೆ.
ಇದೀಗ ಬಿಎಸ್ಏನ್ಎಲ್ (BSNL) ತನ್ನ ಗ್ರಾಹಕರಿಗೆ ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಅದರಲ್ಲಿ ಇದೀಗ ಅತಿ ಕಡಿಮೆ ಬೆಲೆಗೆ ಒಂದು ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಒಂದು ಹೊಸ ಯೋಜನೆಯಲ್ಲಿ ಹಲವು ಕೊಡುಗೆಗಳು ಇದ್ದು, ಗ್ರಾಹಕರು ಈ ಪ್ಲ್ಯಾನ್ ಅನ್ನು ಸುಲಭವಾಗಿ ರೀಚಾರ್ಜ್ ಮಾಡಿಕೊಳ್ಳಬಹುದು.
ಬಿಎಸ್ಎನ್ಎಲ್ ಬೆಸ್ಟ್ ಪ್ಲಾನ್ (BSNL Best Plan) :
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ನೀಡುತ್ತಿರುವ ಈ ರೀಚಾರ್ಜ್ ಯೋಜನೆಯು 197 ರೂಗಳಾಗಿದ್ದು ಈ ಯೋಜನೆಯಲ್ಲಿ ಗ್ರಾಹಕರು ಹಲವು ಕೊಡುಗೆಗಳನ್ನು ಪಡೆಯಬಹುದು.
ಈ ಯೋಜನೆಯ ಅವಧಿ (date of expiring recharge) ಮತ್ತು ಕೊಡುಗೆಗಳು (offers) :
ಈ ಯೋಜನೆಯು 70 ದಿನಗಳ ಅವಧಿಯನ್ನು ಹೊಂದಿದೆ. ಹೌದು, ಬಿ ಎಸ್ ಎಲ್ ಎನ್ ನ ಒಂದು ಉತ್ತಮ ಯೋಜನೆ ಇದಾಗಿದ್ದು, ಗ್ರಾಹಕರು ಬೇರೆ ಬೇರೆ ರೀಚಾರ್ಜ್ ಪ್ಲ್ಯಾನ್ ಗಳ (recharge plan) ತರ ತಿಂಗಳಿಗೊಮ್ಮೆ ರೀಚಾರ್ಜ್ ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಹಾಗೆಯೇ ಇದರಲ್ಲಿ ಪ್ರತಿ ತಿಂಗಳು ಕೇವಲ 84 ರೂ. 2 ರೂಪಾಯಿಗಿಂತ ಸ್ವಲ್ಪ ಹೆಚ್ಚು ಖರ್ಚು ಮಾಡಿದರೆ ಸಾಕು ಗ್ರಾಹಕರು ಅನೇಕ ಸೌಲಭ್ಯಗಳನ್ನು ಪಡೆಯಬಹುದು.
BSNL ರೂ.197 ರಿಚಾರ್ಜ್ ಪ್ಲಾನ್ ಹೀಗಿದೆ :
ಬಿಎಸ್ಏನ್ಎಲ್ ಕಂಪೆನಿಯ ಅತೀ ಕಡಿಮೆ ಬೆಲೆಯ ರೀಚಾರ್ಜ್ ಪ್ಲ್ಯಾನ್ ಇದಾಗಿದ್ದು, ಇದರಲ್ಲಿ ಕಂಪನಿಯು 2GB ದೈನಂದಿನ ಡೇಟಾದ ಸೌಲಭ್ಯವನ್ನು ನೀಡಿದೆ. ಇದರಲ್ಲಿ ಬರುವ ಮುಖ್ಯ ವಿಷಯವೆಂದರೆ ದಿನಕ್ಕೆ 2GB ಡೇಟಾವನ್ನು 15 ದಿನಗಳವರೆಗೆ ಮಾತ್ರ ಪಡೆಯಬಹುದಾಗಿದೆ. ಇದರೊಂದಿಗೆ ಅನಿಯಮಿತ ಉಚಿತ ಕರೆ ಸೌಲಭ್ಯವನ್ನು ಕೂಡ ಪಡೆಯಬಹುದು. ಹಾಗೆಯೇ ಪ್ರತಿದಿನ 100 ಉಚಿತ SMS ಅನ್ನು ಕೂಡ ಈ ಒಂದು ಪ್ಲ್ಯಾನ್ ನಲ್ಲಿ ಪಡೆಯಬಹುದು.
ಬಿಎಸ್ಏನ್ಎಲ್ ಕಂಪನಿಯ ಗೊತ್ತಿರದ ಇನ್ನಷ್ಟು ಮಾಹಿತಿಗಳು :
ಜಿಯೋ (jio), ಏರ್ಟೆಲ್ (Airtel) ಮತ್ತು ಇನ್ನು ಉಳಿದ ಕಂಪೆನಿಗಳಲ್ಲಿ ಮಾಡಿಕೊಂಡ ರೀಚಾರ್ಜ್ ಪ್ಲ್ಯಾನ್ ಖಾಲಿ ಆದ ನಂತರ ಒಳ ಬರುವ (incoming calls) ಮತ್ತು ಹೊರ ಹೋಗುವ ಕರೆಗಳನ್ನು (out going calls) ಕಂಪೆನಿಯು ನಿರ್ಬಂಧಿಸಿದೆ. ಆದರೆ ಬಿ ಎಸ್ ಎನ್ ಎಲ್ ನಲ್ಲಿ ಈ ತರಹದ ಯಾವುದೇ ಕರೆಗಳನ್ನು ನಿರ್ಬಂಧಿಸಲ್ಲ, ರೀಚಾರ್ಜ್ ಪ್ಲ್ಯಾನ್ ಖಾಲಿ ಆದರೂ ಕೂಡ ಸ್ವಲ್ಪ ಸಮಯದ ತನಕ ಕರೆಗಳು ದೊರೆಯುತ್ತವೆ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
ಈ ಮಾಹಿತಿಗಳನ್ನು ಓದಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




