ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, BSNL ನ ವಾರ್ಷಿಕ ರಿಚಾರ್ಜ್ ಪ್ಲಾನ್(BSNL yearly Recharge plan) ಕುರಿತು ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಒಮ್ಮೆ ರಿಚಾರ್ಜ್ ಮಾಡಿದರೆ ಸಾಕು, ವರ್ಷಪೂರ್ತಿ ತಲೆ ಬಿಸಿ ಇಲ್ಲ :
ಸ್ನೇಹಿತರೆ, ತಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿನ ದಿನಮಾನಗಳಲ್ಲಿ ಭಾರತದಲ್ಲಿ Airtel, Jio, Vi, BSNL ಟೆಲಿಕಾಂ ಕಂಪನಿಗಳು ಹೊಸ ಹೊಸ ರಿಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಈ ಯೋಜನೆಗಳಲ್ಲಿ ಮಾಸಿಕ ತ್ರಿಮಾಸಿಕ, ಮತ್ತು ವಾರ್ಷಿಕ ರಿಚಾರ್ಜ್ ಪ್ಲಾನ್ ಗಳು ಲಭ್ಯವಿದೆ.
ಭಾರತದ ಅತ್ಯಂತ ಹಳೆಯ ಕಾರ್ಯನಿರ್ವಹಣೆಯ ಟೆಲಿಕಾಂ ಕಂಪನಿ, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL), ತನ್ನ ಕೈಗೆಟುಕುವ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ರೀಚಾರ್ಜ್ ಯೋಜನೆ(prepaid and postpaid recharge plans)ಗಳೊಂದಿಗೆ ಉತ್ತಮ ಸೇವೆಯನ್ನು ಒದಗಿಸುತ್ತದೆ. BSNL ತನ್ನ ಗ್ರಾಹಕರ ಅಗತ್ಯಗಳಿಗೆ ಸರಿಹೊಂದುವ ಆಕರ್ಷಕ ಮತ್ತು ಕಡಿಮೆ ಬೆಲೆಯ ಪ್ಯಾಕೇಜ್‌ಗಳನ್ನು ಸಹ ನೀಡುತ್ತದೆ.
ರಾಷ್ಟ್ರೀಯ ಟೆಲಿಕಾಂ BSNL ಪ್ರಸ್ತುತ 5G ಅಥವಾ 4G ಆಯ್ಕೆಗಳನ್ನು ನೀಡುವುದಿಲ್ಲ ಆದರೆ ಶೀಘ್ರದಲ್ಲೇ ತನ್ನ ಪೋರ್ಟ್ಫೋಲಿಯೊವನ್ನು ವಿಸ್ತರಿಸುತ್ತದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಆದರೆ ಬೇರೆ ಟೆಲಿಕಾಂ ಕಂಪನಿಗಳ ರಿಚಾರ್ಜ್ ಪ್ಲಾನ್ ಹೋಲಿಸಿದರೆ BSNL ಕಂಪನಿಯು ಅತೀ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಪ್ಲಾನ್ ಕೊಡುತ್ತದೆ. ಹೀಗಿರುವಾಗ BSNL ಬಳಕೆದಾರರು ವಾರ್ಷಿಕ ಪ್ಲಾನ್( Annual plan) ಅನ್ನು ಕೂಡ ಅತಿ ಕಡಿಮೆ ಬೆಲೆಗೆ ಪಡೆಯಬಹುದಾಗಿದೆ. ಇದೀಗ BSNL ನ ಬೆಸ್ಟ್ Annual Plan ಯಾವುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ. ನೀವು BSNL ಬಳಕೆದಾರರಾಗಿದ್ದರೆ ಮತ್ತು ಅಗ್ಗದ ಆದರೆ ದೀರ್ಘಾವಧಿಯ ಮಾನ್ಯತೆಯನ್ನು ಹೊಂದಿರುವ ಯೋಜನೆಯನ್ನು ಹುಡುಕುತ್ತಿದ್ದರೆ, ಇಂದು ನಾವು ಅಂತಹ ಒಂದು ಕೈಗೆಟುಕುವ ಯೋಜನೆಯ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.
BSNL Annual plan :
BSNL ತನ್ನ ಬಳಕೆದಾರರಿಗೆ 1570 ರಿಚಾರ್ಜ್ ಪ್ಲ್ಯಾನ್ ಪರಿಚಯಿಸಿದೆ, ಈ ಯೋಜನೆಯು ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಸಿಗಲಿದೆ. ಡೇಟಾ ಜೊತೆಗೆ ಉಚಿತ ಕರೆಯ ಸೌಲಭ್ಯವನ್ನು ಕೂಡ ಪಡೆಯಬಹುದಾಗಿದೆ
ಒಟ್ಟಾರೆ ಈ ಪ್ಲ್ಯಾನ್ ಬಳಕೆದಾರರಿಗೆ 730GB ಡೇಟಾ ನೀಡಲಿದ ಹಾಗೂ ಅನ್ಲಿಮಿಟೆಡ್ ಕರೆ ಜೊತೆಗೆ 100 SMS ಸೌಲಭ್ಯವನ್ನು ನೀವು ಈ ರಿಚಾರ್ಜ್ ಪ್ಲಾನ್ ನಲ್ಲಿ ಪಡೆಯಬಹುದು. ಆದರೆ ಈ ಯೋಜನೆಯಲ್ಲಿ ಯಾವುದೇ hotstar ಅಥವಾ Netflix ನಂತಹ ಯಾವದೇ OTT ಚಂದಾದಾರಿಕೆ(Subscription) ಯನ್ನು ಲಭ್ಯವಾಗುವುದಿಲ್ಲ.
ಇತರ ಕಂಪನಿಗಳು ವಾರ್ಷಿಕ ಯೋಜನೆಗಳಿಗೆ ರೂ 2,000 ರಿಂದ ರೂ 3,000 ವರೆಗೆ ವಿಧಿಸುತ್ತವೆ, ಆದರೆ BSNL ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಅನೇಕ ಕೊಡುಗೆಗಳನ್ನು ನೀಡುತ್ತಿದೆ. ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ, ಬಂಧುಗಳಿಗೂ ಹಾಗೂ ಬಿಎಸ್ಎನ್ಎಲ್ ಸಿಮ್(BSNL Sim) ಬಳಕೆದಾರರಿಗೂ ಶೇರ್ ಮಾಡಿ, ಧನ್ಯವಾದಗಳು.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group





