ಕರ್ನಾಟಕದಲ್ಲಿ ನಕಲಿ BPL ಕಾರ್ಡ್ ಹೊಂದಿರುವವರ ಮೇಲೆ ಕ್ರಮ – ಗೃಹಲಕ್ಷ್ಮಿ, ಅನ್ನಭಾಗ್ಯ ಸೌಲಭ್ಯಗಳು ಸ್ಥಗಿತ
ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಅನರ್ಹರಿಂದ ನಕಲಿ ಬಿಪಿಎಲ್ (BPL) ಕಾರ್ಡ್‌ಗಳ ಬಳಕೆಯನ್ನು ತಡೆಗಟ್ಟಲು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಇತ್ತೀಚೆಗೆ ಈ ಬಗ್ಗೆ ವ್ಯಾಪಕವಾದ ಪರಿಶೀಲನೆ ನಡೆಸುತ್ತಿದ್ದು, ಅನರ್ಹರಿಗೆ ನೀಡಲಾದ ಬಿಪಿಎಲ್ ಕಾರ್ಡ್‌ಗಳನ್ನು ಮುಲಾಜಿಲ್ಲದೇ ರದ್ದುಗೊಳಿಸಲು ನಿರ್ಧರಿಸಿದೆ. ಇದರ ಪರಿಣಾಮವಾಗಿ, ಅನೇಕ ಕುಟುಂಬಗಳು ಗೃಹಲಕ್ಷ್ಮಿ ಯೋಜನೆ, ಅನ್ನಭಾಗ್ಯ ಸೌಲಭ್ಯ ಮತ್ತು ಇತರ ಸರ್ಕಾರಿ ಸಹಾಯಧನಗಳಿಂದ ವಂಚಿತರಾಗುವ ಸಾಧ್ಯತೆ ಇದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
1.27 ಕೋಟಿ BPL ಕಾರ್ಡ್‌ಗಳ ಪರಿಶೀಲನೆ
ರಾಜ್ಯದಲ್ಲಿ ಪ್ರಸ್ತುತ 1.27 ಕೋಟಿ ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿದ್ದು, ಇವುಗಳಲ್ಲಿ ಅನೇಕವು ಅನರ್ಹರಿಂದ ದುರ್ಬಳಕೆ ಮಾಡಲ್ಪಟ್ಟಿವೆ ಎಂದು ಸರ್ಕಾರಿ ವರದಿಗಳು ತಿಳಿಸಿವೆ. ಇದನ್ನು ತಡೆಗಟ್ಟಲು, ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲನೆ ನಡೆಸಲಾಗುತ್ತಿದ್ದು, ಅನರ್ಹರನ್ನು ಗುರುತಿಸಿ ಅವರ ಕಾರ್ಡ್‌ಗಳನ್ನು ರದ್ದುಗೊಳಿಸಲಾಗುವುದು.
ಯಾರಿಗೆ BPL ಕಾರ್ಡ್ ಅನರ್ಹ?
ಕೆಳಗಿನ ವರ್ಗಗಳಿಗೆ ಸೇರಿದವರು ಬಿಪಿಎಲ್ ಕಾರ್ಡ್ ಹೊಂದಲು ಅರ್ಹರಲ್ಲ ಎಂದು ಸರ್ಕಾರ ನಿಗದಿ ಪಡಿಸಿದೆ:
- ಬಡತನ ರೇಖೆಗಿಂತ ಹೆಚ್ಚು ಆದಾಯ ಹೊಂದಿರುವವರು
- ಸರ್ಕಾರಿ ಉದ್ಯೋಗಿಗಳು
- ಆದಾಯ ತೆರಿಗೆ ಪಾವತಿದಾರರು
- ವೈಟ್ ಬೋರ್ಡ್ ಕಾರು ಅಥವಾ ಟ್ರಾಕ್ಟರ್ ಹೊಂದಿರುವ ರೈತರು
- ಟಿಲ್ಲರ್ ಮತ್ತು ಇತರ ಕೃಷಿ ಸಾಮಗ್ರಿಗಳನ್ನು ಹೊಂದಿರುವವರು
ಇಂತಹ ವ್ಯಕ್ತಿಗಳು ಬಿಪಿಎಲ್ ಕಾರ್ಡ್ ಬಳಸಿದಲ್ಲಿ, ಅದನ್ನು ತಕ್ಷಣ ರದ್ದುಗೊಳಿಸಲಾಗುವುದು ಮತ್ತು ಅವರು ಸರ್ಕಾರದ ಯಾವುದೇ ಸಬ್ಸಿಡಿ ಯೋಜನೆಗಳಿಂದ ವಂಚಿತರಾಗುವರು.
ಗೃಹಲಕ್ಷ್ಮಿ, ಗೃಹಜ್ಯೋತಿ ,ಮತ್ತು ಅನ್ನಭಾಗ್ಯ ಯೋಜನೆಗಳಿಗೆ ಪರಿಣಾಮ
ಬಿಪಿಎಲ್ ಕಾರ್ಡ್ ಇಲ್ಲದವರು ಗೃಹಲಕ್ಷ್ಮಿ ಯೋಜನೆ (ಮಹಿಳೆಯರಿಗೆ ಮಾಸಿಕ 2,000 ರೂ. ಸಹಾಯಧನ) ಮತ್ತು ಅನ್ನಭಾಗ್ಯ ಯೋಜನೆ (ಉಚಿತ ಅನ್ನಧಾನ್ಯ) ಸೇರಿದಂತೆ ಇತರ ಸರ್ಕಾರಿ ಸಹಾಯಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲಾ ಅಂತಾ ಕ್ರಮ ಹೊರಡಿಸುತ್ತಾರೆ . ಹೀಗಾಗಿ, ನಕಲಿ ಕಾರ್ಡ್ ಹೊಂದಿರುವವರ ಮೇಲೆ ಕಠಿಮ ಕ್ರಮ ಕೈಗೊಳ್ಳುವುದರಿಂದ ಸರ್ಕಾರದ ದುರ್ಬಳಕೆ ತಗ್ಗಿಸಲು ಮತ್ತು ನಿಜವಾದ ಬಡವರಿಗೆ ಸಹಾಯ ಮುಟ್ಟಿಸಲು ಸಾಧ್ಯವಾಗುತ್ತದೆ.
ಶುದ್ಧೀಕರಣದಿಂದ ನಿಜವಾದ ಬಡವರಿಗೆ ಲಾಭ
ಈ ಕ್ರಮವು ರಾಜ್ಯದ BPL ಪಟ್ಟಿಯನ್ನು ಶುದ್ಧೀಕರಿಸುವ ಉದ್ದೇಶ ಹೊಂದಿದೆ. ಸರ್ಕಾರಿ ಯೋಜನೆಗಳು ಕೇವಲ ನಿಜವಾದ ಬಡ ಕುಟುಂಬಗಳಿಗೆ ಮುಟ್ಟುವಂತೆ ಮಾಡುವುದು ಇದರ ಮುಖ್ಯ ಗುರಿ. ಹೀಗಾಗಿ, ಯಾರು ಅನರ್ಹರೋ ಅವರ ಕಾರ್ಡ್‌ಗಳನ್ನು ತೆಗೆದುಹಾಕಿ, ಸರ್ಕಾರದ ನೀತಿಗಳನ್ನು ಹೆಚ್ಚು ಪಾರದರ್ಶಕವಾಗಿ ಮಾಡಲಾಗುತ್ತಿದೆ.
ಈ ಕ್ರಮದಿಂದ ರಾಜ್ಯದ ಸಾಮಾಜಿಕ ಸುರಕ್ಷತಾ ಯೋಜನೆಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯವಾಗುವುದು ಎಂದು ನಿರೀಕ್ಷಿಸಲಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.