Ration card – ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ, ಈ ದಾಖಲಾತಿಗಳು ಕಡ್ಡಾಯ, ಇಲ್ಲಿದೆ ಕಂಪ್ಲಿಟ್ ಮಾಹಿತಿ | Ration card Amendment request.

WhatsApp Image 2023 08 15 at 12.18.29 PM

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಪಡಿತರ ಚೀಟಿಯ(Ration card) ತಿದ್ದುಪಡಿ ಆರಂಭವಾಗಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಹೌದು, ರೇಷನ್ ಕಾರ್ಡನ್ನು ತಿದ್ದುಪಡಿ ಮಾಡಲು ಸರ್ಕಾರವು ಅವಕಾಶವನ್ನು ನೀಡಿದೆ. ನಿಮ್ಮ ರೇಷನ್ ಕಾರ್ಡಿನಲ್ಲಿ ಹೆಸರು ಸೇರ್ಪಡೆ ಮಾಡುವುದು, ಹೆಸರನ್ನು ತೆಗೆದುಹಾಕುವುದು, ರೇಷನ್ ಅಂಗಡಿ ಬದಲಾವಣೆ, ಹೆಸರು ತಿದ್ದುಪಡಿ, ಫೋಟೋ ಬದಲಾವಣೆಯನ್ನು ಮಾಡಲಾಗುತ್ತದೆ. ಅರ್ಹ ನಾಗರಿಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದು. ರೇಷನ್ ಕಾರ್ಡ್ ತಿದ್ದುಪಡಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ರೇಷನ್ ಕಾರ್ಡ್ ತಿದ್ದುಪಡಿ ಆರಂಭ :

ಪಡಿತರ ಚೀಟಿದಾರರು ಪಡಿತರ ಚೀಟಿಯಲ್ಲಿನ ವಿವರಗಳಲ್ಲಿ ಯಾವುದೇ ತಪ್ಪು ಕಂಡುಬಂದಲ್ಲಿ ವಿವರಗಳನ್ನು ಸರಿಪಡಿಸಿಕೊಳ್ಳಲೇಬೇಕು. ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ಆರಂಭವಾದ ಬಳಿಕ ಮಹಿಳೆಯರು ಪಡಿತರ ಚೀಟಿಯಲ್ಲಿ ಯಜಮಾನಿ ಸ್ಥಾನಕ್ಕಾಗಿ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಮತ್ತಿತರೆ ದಾಖಲೆಗಳನ್ನು ಹಿಡಿದು ಸೇವಾಕೇಂದ್ರ ಹಾಗೂ ಸರಕಾರಿ ಕಚೇರಿಗಳ ಮುಂದೆ ಬೆಳಂಬೆಳಗ್ಗೆಯೇ ಠಿಕಾಣಿ ಹೂಡುತ್ತಿದ್ದಾರೆ. ಹಾಗಾಗಿ ಪಡಿತರ ಚೀಟಿಯ ತಿದ್ದುಪಡಿಗೆ ಸರ್ಕಾರವು ಅವಕಾಶವನ್ನು ಒದಗಿಸಿಕೊಟ್ಟಿದೆ. ನಿಮ್ಮ ಪಡಿತರ ಚೀಟಿಯಲ್ಲಿ ಏನಾದರೂ ತಪ್ಪುಗಳಿದ್ದು ಗೃಹಲಕ್ಷ್ಮಿ ಅಥವಾ ಇನ್ನಿತರ ಗ್ಯಾರಂಟಿ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಲು ತಡವಾಗುತ್ತಿದ್ದರೆ, ಈಗ ಪಡಿತರ ಚೀಟಿಯ ತಪ್ಪುಗಳನ್ನು ತಿದ್ದುಪಡಿ ಮಾಡಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾದ ಅವಕಾಶ ಒದಗಿ ಬಂದಿದೆ.

whatss

ರೇಷನ್ ಕಾರ್ಡ್ ತಿದ್ದುಪಡಿ(correction)ಗೆ ಇದೇ 16ನೇ ತಾರೀಖಿನಿಂದ ಅವಕಾಶ ನೀಡಲಾಗಿದೆ:

WhatsApp Image 2023 08 15 at 12.28.31 PM

ರೇಶನ್ ಕಾರ್ಡ್ ತಿದ್ದುಪಡಿಗೆ ಸರ್ಕಾರವು ದಿನಾಂಕ ಹಾಗೂ ಸಮಯವನ್ನು ಗುರುತು ಮಾಡಿದೆ. ಸಮಯ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ದಿನಾಂಕ 16-08-2023 ರಿಂದ 19-08-2023 ರವರಿಗೆ ಅವಕಾಶ ನೀಡಲಾಗಿದೆ. ಪಡಿತರ ಚೀಟಿಯ ತಿದ್ದುಪಡಿಗೆ ಕೇವಲ ನಾಲ್ಕು ದಿನಗಳ ಕಾಲ ಮಾತ್ರ ಅವಕಾಶ ಇರುತ್ತದೆ. ಕೇವಲ ನಾಲ್ಕು ದಿನಗಳ ಅವಕಾಶವನ್ನು ನೀಡಿರುವುದರಿಂದ ಈ ಕೂಡಲೇ ಈ ಲೇಖನವನ್ನು ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ.

ಬೇಕಾದ ದಾಖಲೆಗಳು:

ಕುಟುಂಬ ಸದಸ್ಯರ ಆಧಾರ್ ಕಾರ್ಡ್.
ಐದು ವರ್ಷದ ಒಳಗಿನ ಮಕ್ಕಳನ್ನು ಸೇರ್ಪಡೆ ಮಾಡಬೇಕಾಗಿದ್ದಲ್ಲಿ ಅವರ ಆಧಾರ್ ಕಾರ್ಡ್ ಹಾಗೂ ಜನನ ಪ್ರಮಾಣ ಪತ್ರ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಎಲ್ಲಿ ಹಾಗೂ ಹೇಗೆ ರೇಷನ್ ಕಾರ್ಡ್ ತಿದ್ದುಪಡಿಯನ್ನು ಮಾಡಿಸಬೇಕು?:

ರೇಷನ್ ಕಾರ್ಡ್ ತಿದ್ದುಪಡಿಗೆ ಪಡಿತರ ಚೀಟಿಯ ಪೋರ್ಟಲ್ ನಲ್ಲಿ ಅವಕಾಶ ನೀಡಿರುವುದರ ಬಗ್ಗೆ ಇನ್ನೂ ಮಾಹಿತಿಯು ದೊರಕಿಲ್ಲ ಆದರೆ ನೀವು ಹತ್ತಿರದ ಗ್ರಾಮವನ್, ಕರ್ನಾಟಕ ಒನ್ ಹಾಗೂ  ಬೆಂಗಳೂರು ಒನ್ ಕೇಂದ್ರಗಳಿಗೆ ತೆರಳಿ ನಿಮ್ಮ ರೇಷನ್ ಕಾರ್ಡ್ ಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ.
ಮೇಲೆ ತಿಳಿಸಲಾದ ಕೇಂದ್ರಗಳಿಗೆ ತೆರಳಿ ನಿಮ್ಮ ರೇಷನ್ ಕಾರ್ಡನ್ನು ತಿದ್ದುಪಡಿ ಮಾಡಿಸಿಕೊಂಡ ನಂತರ ನಿಮಗೆ ಒಂದು ಸ್ವೀಕೃತಿಯನ್ನು ನೀಡುತ್ತಾರೆ, ಅದನ್ನು ನೀವು ತೆಗೆದುಕೊಂಡು ಆಹಾರ ಇಲಾಖೆಯ ಕಚೇರಿಗೆ ನೀಡಬೇಕು. ಆಹಾರ ಇಲಾಖೆಯಲ್ಲಿ ಕೆಲವೊಮ್ಮೆ ದಾಖಲೆಯನ್ನು ಕೇಳುವ ಅವಕಾಶ ಇರುತ್ತದೆ. ಹಾಗಾಗಿ ನೀವು ಆಹಾರ ಇಲಾಖೆಗೆ ತೆರಳುವಾಗ ಆಧಾರ್ ಕಾರ್ಡಿನ ಪ್ರತಿ ಹಾಗೂ ಪಡಿತರ ಚೀಟಿಯ ಪ್ರತಿಯನ್ನು ಕೊಂಡೊಯ್ಯುವುದು ಒಳ್ಳೆಯದು.

ಸರ್ಕಾರವು ರೇಷನ್ ಕಾರ್ಡ್ ತಿದ್ದುಪಡಿಗೆ ಕೇವಲ 4 ದಿನಗಳ ಕಾಲ ಮಾತ್ರ ಅವಕಾಶವನ್ನು ನೀಡಿರುವುದರಿಂದ ಈ   ಮುಖ್ಯವಾದ ಮಾಹಿತಿಯನ್ನು ಹೊಂದಿರುವ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.

tel share transformed

ಹೀಗೆ ನೀವು ಗೃಹಲಕ್ಷ್ಮಿ ಯೋಜನೆಯಡಿಯಲ್ಲಿನ ಹಣವು ನಿಮಗೆ ಜಮಾ ಆಗಿದೆಯೇ ಅಥವಾ ಅದರ ಸ್ಥಿತಿ ಹೇಗಿದೆ ಎಂಬುವುದನ್ನು ಚೆಕ್ ಮಾಡಬಹುದು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

Leave a Reply

Your email address will not be published. Required fields are marked *