ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಕರ್ನಾಟಕದ ಜನತೆಯ ನಿರೀಕ್ಷಿತ ಹಾಗೂ ಅಚ್ಚು – ಮೆಚ್ಚಿನ ಟೆಲಿವಿಶನ್ ಶೋ ಬಿಗ್ ಬಾಸ್ ಸೀಸನ್ 10 (Bigg Boss- season10) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಇದು ಇನ್ನೇನು ಶುರುವಾಗಲಿದೆ. ಈಗಾಗಲೇ ಒಂದಷ್ಟು ಸ್ಪರ್ಧಿಗಳ ಹೆಸರು ಸೋಷಿಯಲ್ ಮೀಡಿಯಾ(social media)ದಲ್ಲಿ ಹರಿದಾಡುತ್ತಿದೆ. ಹಾಗಿದ್ದರೆ ಯಾವಾಗ ಬಿಗ್ ಬಾಸ್ ಸ್ಟಾರ್ಟ್ ಆಗುತ್ತೆ? ಯಾರು ಯಾರು ಈ ಸಲದ ಬಿಗ್ ಬಾಸ್ ನಲ್ಲಿ ಭಾಗವಹಿಸುತ್ತಾರೆ?, ಯಾವ ಘಳಿಗೆಯಲ್ಲಿ ಬಿಗ್ ಬಾಸ್ ಪ್ರಸಾರವಾಗುತ್ತದೆ? ಹೀಗೆ ಇಂತಹ ಸುಮಾರು ಪ್ರಶ್ನೆಗಳಿಗೆ ಉತ್ತರ ಈ ಲೇಖನದಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಬಿಗ್ ಬಾಸ್ ಸೀಸನ್ 10 ಯಾವಾಗಿನಿಂದ ಶುರು :
ಹೌದು, ಕಿಚ್ಚ ಸುದೀಪ್ ಅವರು ಹೊಸ್ಟ್ ಮಾಡುವ ಬಿಗ್ ಬಾಸ್ ಸೀಸನ್-10 ಅಕ್ಟೋಬರ್ 8 ರಿಂದ ಮತ್ತೆ ಕನ್ನಡದ ಅಭಿಮಾನಿಗಳಲ್ಲಿ ಕ್ರೇಜ್ ಸೃಷ್ಟಿಸಲು ನಿಮ್ಮೆಲ್ಲರ ಜನಪ್ರಿಯ ಕಲರ್ಸ್ ಕನ್ನಡ(colors kannada) ವಾಹಿನಿಯಲ್ಲಿ ಶುರುವಾಗಲಿದೆ. ಕಲರ್ಸ್ ಕನ್ನಡ ವಾಹಿನಿಯ ಅತ್ಯಂತ ಪ್ರಸಿದ್ಧ ಅವಾರ್ಡ್ ಶೋ ‘ಅನುಬಂಧ 2023’ ಸಮಾರಂಭದಲ್ಲಿ ಬಿಗ್ ಬಾಸ್ ಯಾವಾಗ ಶುರು ಮಾಡಲಾಗುವುದು ಎಂದು ರೆವೆಲ್ ಮಾಡಿದ್ದಾರೆ. ಕಿಚ್ಚ ಸುದೀಪ್(kiccha sudeep) ಅವರು ಈ ಶೋ ಅನ್ನು ನಿರೂಪಣೆ ಮಾಡಲಿದ್ದು, 100 ದಿನಗಳ ಕಾಲ ಬಿಗ್ ಬಾಸ್ ಶೋ ನಡೆಯಲಿದೆ. ಹಾಗೆಯೇ ಪ್ರೋಮೋ (Promo ) ನಲ್ಲಿ ಈ ಸೀಸನ್ ತುಂಬಾ ವಿಶೇಷವಾಗಿರುತ್ತದೆ ಎಂದು ಹೇಳಲಾಗಿದೆ. ಈ ಬಾರಿ ನೂರು ದಿನಗಳ ಹಬ್ಬವೆಂಬ ಥೀಮ್(Theme )ನಲ್ಲಿ ಪ್ರೊಮೋ ಬಿಡುಗಡೆ ಮಾಡಿದ್ದಾರೆ.
ಬಿಗ್ ಬಾಸ್ ಯಾವ ಸಮಯದಲ್ಲಿ ಪ್ರಸಾರವಾಗುತ್ತದೆ ಗೊತ್ತಾ :
ಬಿಗ್ ಬಾಸ್ ಸೀಸನ್ 10 ನೇಯ ಗ್ರಾಂಡ್ ಪ್ರೀಮಿಯರ್ ( Grand premier) ಅಕ್ಟೋಬರ್ 8, ಸಂಜೆ 6 ಗಂಟೆಗೆ ನಡೆಯಲಿದೆ ಮತ್ತು ಪ್ರತಿ ದಿನ 9:30 pm ಗೆ ಪ್ರಸಾರವಗಾಲಿದೆ. ಈಗ ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿಗಳು ಯಾರು ಎಂದು ತಿಳಿಯಲು ಕನ್ನಡಿಗರು ಸಾಕಷ್ಟು ಉತ್ಸುಕರಾಗಿದ್ದಾರೆ.
ಬಿಗ್ ಬಾಸ್ ಸೀಸನ್ ಗಳ ಇತಿಹಾಸ ದಲ್ಲಿ ಪ್ರಪ್ರಥಮವಾಗಿ ಮೊದಲನೆಯ ಕಂಟೆಸ್ಟಂಟ್ (Contestent) ಆಗಿ ‘ಬೆಸ್ಟ್ ರೇಟೆಡ್ ಚಲನಚಿತ್ರವಾದ ‘777 ಚಾರ್ಲಿ’ ಯಲ್ಲಿರುವ ಚಾರ್ಲಿ ಎಂಟ್ರಿ ನೀಡಲಿದೆ. ಬಿಗ್ ಬಾಸ್ ಆಟ ಮುಗಿಯುವರೆಗೂ ಚಾರ್ಲಿ ಬಿಗ್ ಬಾಸ್ ಹೌಸ್(House) ನಲ್ಲಿ ಇರುತ್ತಾ ಇಲ್ವಾ ಅನ್ನೋದು ಇನ್ನು ಸ್ಪಷ್ಟವಾಗಿಲ್ಲ.
ಈ ಸಾರಿ ಯಾರೆಲ್ಲಾ ಬಿಗ್ ಬಾಸ್ ಗೆ ಹೋಗಬಹುದು?:
ಇನ್ನು ಮುಂಬರುವ ನಿರೀಕ್ಷಿತ ಕಂಟೆಸ್ಟಂಟ್ ಗಳ ಹೆಸರು ಇಂತಿವೆ, ಖ್ಯಾತ ನಟಿಯರಾದ ಮೇಘಾ ಶೆಟ್ಟಿ, ರೇಖಾ ವೇದವ್ಯಾಸ, ನಮ್ರತಾ ಗೌಡ, ನಟ ಸುನೀಲ್ ರಾವ್, ಇನ್‌ಸ್ಟಾಗ್ರಾಮ್ ರೀಲ್ ಖ್ಯಾತಿಯ ಭೂಮಿಕಾ ಬಸವರಾಜ್, ಸೋಷಿಯಲ್ ಮೀಡಿಯಾ ಇನ್ಫ್ಲುಎನ್ಸರ್ ( Influencer)ವರ್ಷಾ ಕಾವೇರಿ ಮತ್ತು ವರುಣ್ ಆರಾಧ್ಯ, ಮಾಜಿ ಕ್ರಿಕೆಟಿಗ ವಿನಯ್ ಕುಮಾರ್ ಬಿಗ್ ಬಾಸ್, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್, ಲಕ್ಷಣ ಧಾರವಾಹಿಯಲ್ಲಿ ನಟಿಸುತ್ತಿರುವ ಸುಕೃತಾ ನಾಗ್. ಇವರೆಲ್ಲರೂ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಲಿದ್ದಾರೆ ಎಂದು ಸುದ್ದಿ ಹರಡುತ್ತಿದೆ.
ಇನ್ನು ಗಾಯಕಿ ಆಶಾ ಭಟ್, ರವಿ ಶ್ರೀವಾತ್ಸ, ಮಿಮಿಕ್ರಿ ಗೋಪಿ, ನಟ ತರುಣ್ ಚಂದ್ರ, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸ್ (Influencer) ಬಿಂದು ಗೌಡ, ಹಾಗೂ KGF ಖ್ಯಾತಿಯ ರೂಪ ರಾಯಪ್ಪ. ಇವೆರಲ್ಲರ ಹೆಸರು ಕೂಡ ಸೋಶಿಯಲ್ ಮೀಡಿಯಾ ದಲ್ಲಿ ಕೇಳಿಬರುತ್ತಿವೆ. ಈ ಸಲ ಬಿಗ್ ಬಾಸ್ ನಲ್ಲಿ ಹೊಸ ಮುಖಗಳು ಕಾಣಲಿವೆ ಎಂದು ಹೇಳಲಾಗುತ್ತಿದೆ. ಹಾಗೆ ಬಿಗ್ ಬಾಸ್ ಸೀಸನ್ 10 VOOT ಸೆಲೆಕ್ಟ್ ನಲ್ಲಿ 24*7 ಲೈವ್ ಇರಲಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಇನ್ನೇನು ಬಿಗ್ ಬಾಸ್ ಆರಂಭವಾಗುತ್ತಿದಲೇ ಕೆಲವೊಂದು ಸೀರಿಯಲ್ ಗಳಿಗೆ ‘The End’ ಎನ್ನಲಾಗುತ್ತದೆ ಎಂದು ಸುದ್ದಿ ತಿಳಿದುಬಂದಿದೆ. 9.30 ಕ್ಕೆ ಪ್ರಸಾರವಾಗುವ ತ್ರಿಪುರ ಸುಂದರಿ, 10 ಪ್ರ ಗಂಟೆಗೆ ಪ್ರಸಾರವಾಗುವ ಪುಣ್ಯವತಿ ಮತ್ತು 10.30ಕ್ಕೆ ಪ್ರಸಾರವಾಗುವ ಲಕ್ಷಣ ಸೀರಿಯಲ್, ಈ ಮೂರು ಸೀರಿಯಲ್ ಗಳನ್ನು ಮುಕ್ತಾಯಗೊಳಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಬಿಗ್ ಬಾಸ್ ಪ್ರಿಯರಿಗೆ, ಈ ಸೀಸನ್ 10 ಶುರುವಾಗುತ್ತಿರುವುದು ಖುಷಿಯ ವಿಷಯವಾಗಿದೆ. ಇಂತಹ ವಿಷಯದ ಬಗ್ಗೆ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ – ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಆಹ್ವಾನ, ಇಂದೇ ಕೊನೆಯ ದಿನ ತಪ್ಪದೇ ಅರ್ಜಿ ಸಲ್ಲಿಸಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group







