Top Scooters : ಹೆಚ್ಚು ಮೈಲೇಜ್ ಕೊಡುವ ಟಾಪ್ 5 ಸ್ಕೂಟಿಗಳ ಪಟ್ಟಿ ಇಲ್ಲಿದೆ

best mileage scooty within 1 lack

ಜನರು ಪ್ರಯಾಣ ಮಾಡಲು ಇಂದು ಹೆಚ್ಚಾಗಿ ಸ್ಕೂಟರ್ ( Scooter ) ಗಳನ್ನು ಪರ್ಚೆಸ್ ಮಾಡುತ್ತಾರೆ. ಇದೀಗ ಹೊಸ ಹೊಸ ಫೀಚರ್ಸ್ ನ ಅತ್ಯಾಧುನಿಕ ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಅದರಲ್ಲೂ ಎಲೆಕ್ಟ್ರಿಕ್ ಸ್ಕೂಟರ್(Electric scooter) ಗಳದ್ದೇ ಹವಾ. ಇಂದು ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್(mileage) ನೀಡುವ ಸ್ಕೂಟರ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಆದ್ದರಿಂದ, ನೀವು ಕೂಡ ಇಂಧನ-ಸಮರ್ಥ ಸ್ಕೂಟರ್‌ಗಾಗಿ ಹುಡುಕುತ್ತಿದ್ದಾರೆ.1 ಲಕ್ಷಕ್ಕಿಂತ ಕಡಿಮೆ ಬೆಲೆಯ ಸ್ಕೂಟರ್‌ಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೋಂಡಾ ಆಕ್ಟಿವಾ 6G :

honda activa 6G

ಹೋಂಡಾ ಆಕ್ಟಿವಾ (Honda Activa) 6G ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡು ಮಾರುಕಟ್ಟೆಗೆ ಬರಲಿದೆ. ಇದರಲ್ಲಿ ಎಲ್ಇಡಿ ಲೈಟ್‌ಗಳಿಂದ ಹಿಡಿದು ಇಂಧನ ಇಂಜೆಕ್ಷನ್ (Fuel injection), ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್‌ಗಳವರೆಗೆ ವೈಶಿಷ್ಟ್ಯಗಳನ್ನು ಪ್ಯಾಕ್ ಗಳನ್ನು ನೀಡಲಾಗಿದೆ. ಹಾಗೆಯೇ 60 ಕಿಮೀ/ಲೀ ಮೈಲೇಜ್ ನೀಡುತ್ತದೆ.
ಇದರ ಬೆಲೆಯು ರೂ. 73,086 (ಎಕ್ಸ್ ಶೋರೂಂ, ದೆಹಲಿ ) ನಿಂದ ಪ್ರಾರಂಭವಾಗಲಿದೆ.

ಸುಜುಕಿ ಅಕ್ಸಿಸ್ 125 :

uzuki access 125

ಇನ್ನೊಂದು ವಿಶಿಷ್ಟ ಸ್ಕೂಟರ್ ಎಂದರೆ ಸುಜುಕಿ ಆಕ್ಸೆಸ್ 125 (Suzuki Access 125). ಇದು ಒಂದು ಉತ್ತಮ ಮೈಲೇಜ್ ನೀಡುವ ಸ್ಕೂಟರ್ ಆಗಿದೆ. ಇದು ಕಡಿಮೆ ಬೆಲೆಗೆ ದೊರೆಯುವ ಸ್ಕೂಟರ್ ಆಗಿದೆ. ಇದರಲ್ಲಿ ಇರುವ ಮುಖ್ಯ ಫೀಚರ್ಸ್ ಗಳೆಂದರೆ :
ಎಲ್‌ಇಡಿ ಹೆಡ್‌ಲೈಟ್
ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
ಮೊಬೈಲ್ ಚಾರ್ಜಿಂಗ್‌ಗಾಗಿ ಯುಎಸ್‌ಬಿ ಪೋರ್ಟ್
ಉದ್ದವಾದ ಫುಟ್‌ಬೋರ್ಡ್ ಹೊಂದಿದೆ.
64 ಕಿಮೀ/ಲೀ ಮೈಲೇಜ್ ನೀಡುತ್ತದೆ.
ಇನ್ನು ಇದರ ಬೆಲೆಯ ಬಗ್ಗೆ ನೋಡುವುದಾದರೆ, ರೂ. 77,600 (ಎಕ್ಸ್ ಶೋ ರೂಂ) ನಿಂದ ಪ್ರಾರಂಭವಾಗಲಿದೆ.

whatss

ಹೀರೋ ಮೆಸ್ಟ್ರೋ ಎಡ್ಜ್ 125 :

hero maestro edge 125

ಮತ್ತೊಂದು ವಿಶಿಷ್ಟ ಸ್ಕೂಟರ್ ಎಂದರೆ, Hero Maestro Edge 125 ಇದು ನಾಲ್ಕು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದೆ. ಇದರ ಮುಖ್ಯ ಸ್ಕೂಟರ್ ಗಳೆಂದರೆ :
ಫುಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್
LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್
LED ಟೈಲ್ ಲ್ಯಾಂಪ್
ಮೊಬೈಲ್ ಚಾರ್ಜರ್ ಮತ್ತು ಬೂಟ್ ಲೈಟ್ ಮತ್ತು ಡೈಮಂಡ್-ಕಟ್ ಅಲಾಯ್ ವೀಲ್‌ಗಳನ್ನು ಹೊಂದಿದೆ.

Hero Maestri Edge 125 ಈ ಬೈಕ್ ನ ಎಕ್ಸ್ ಶೋ ರೂಂ ಬೆಲೆಯು ರೂ. 86,256 ರಿಂದ ಪ್ರಾರಂಭವಾಗುತ್ತದೆ. Maestro Edge 125 ಕನೆಕ್ಟೆಡ್ ರೂಪಾಂತರ ಬೇಕೆಂದರೆ ರೂ. 96, 586 ಬೆಲೆಗೆ ದೊರೆಯುತ್ತದೆ. ಇವೆರಡು ಎಕ್ಸ್‌ ಶೋರೂಂ ಬೆಲೆಗಳಾಗಿವೆ. ಇನ್ನು ಈ ಸ್ಕೂಟರ್ ನ ಮೈಲೇಜ್ ಬಗ್ಗೆ ನೋಡುವುದಾದರೆ ಲೀ.ಗೆ 60 ಕಿ.ಮೀ ಸಿಗುತ್ತದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಟಿವಿಎಸ್ ಜುಪಿಟರ್ 125 :

TVS jupiter 125

ಮತ್ತೊಂದು ಹೊಸ ಸ್ಕೂಟರ್ ಎಂದರೆ, ಟಿವಿಎಸ್’ ಜುಪಿಟರ್ (TVS Jupiter 125) ಆಗಿದೆ.
ಈ ಸ್ಕೂಟರ್ ಡಿಜಿಟಲ್ ಅನಲಾಗ್ ಕ್ಲಸ್ಟರ್
LED ಹೆಡ್‌ಲೈಟ್ ಮತ್ತು ಡೈಮಂಡ್-ಕಟ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ.
ಈ ಸ್ಕೂಟರ್ ಅನ್ನು ಆಕ್ಟಿವಾಗೆ ಹೋಲಿಸಿದರೆ ಜುಪಿಟರ್ ಸಾಕಷ್ಟು ಪ್ರೀಮಿಯಂ ಆಗಿದೆ. ಹಾಗೆಯೇ ಈ ಸ್ಕೂಟರ್ ಲೀಟರ್ ಗೆ 50km ಮೈಲೇಜ್ ನೀಡುತ್ತದೆ.
TVS ಜುಪಿಟರ್ ಬೆಲೆಯು ರೂ. 82,825 (ಎಕ್ಸ್ ಶೋ ರೂಂ) ನಿಂದ ಪ್ರಾರಂಭವಾಗುತ್ತದೆ.

tel share transformed

ಯಮಹಾ ರೇ ZR :

yamaha ray ZR

ಈ ಸ್ಕೂಟರ್ Yamaha RayZR ಮೇಲೆ ತಿಳಿಸಿದ ಇತರ ನಾಲ್ಕು ಸ್ಕೂಟರ್‌ಗಳಿಗಿಂತ 98 ಕೆ.ಜಿ ಹಗುರವಾಗಿರುತ್ತದೆ. ಇದರ ಹೈಬ್ರಿಡ್ ಎಂಜಿನ್ ಅನ್ನು ಸ್ಮಾರ್ಟ್ ಮೋಟಾರ್ ಜನರೇಟರ್‌ಗೆ ಕನೆಕ್ಟ್ ಮಾಡಲಾಗಿದೆ. ಈ ಸ್ಕೂಟರ್ ಲೀಟರ್ ಗೆ 68km/l ಮೈಲೇಜ್ ನೀಡುತ್ತದೆ.
ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
LED ಹೆಡ್‌ಲೈಟ್
ಬ್ಲೂಟೂತ್ ಸಂಪರ್ಕವನ್ನು ಒಳಗೊಂಡಿವೆ. ಹಾಗೆಯೇ ಈ ಸ್ಕೂಟರ್ ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು, ಮೊದಲನೆಯದು ರೂ. 84,730 ಮತ್ತು ಎರಡನೆಯದು ರೂ. 90,830 (ಎಕ್ಸ್ ಶೋ ರೂಂ, ದೆಹಲಿ) ಆಗಿದೆ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!