Headphones: ಕಡಿಮೆ ಬೆಲೆಯಲ್ಲಿ ಲಭ್ಯ ಇರುವ 5 ಟಾಪ್ ಬೆಸ್ಟ್‌ ಹೆಡ್‌ ಫೋನ್‌ ಲಿಸ್ಟ್ ಇಲ್ಲಿದೆ!

best headphones under 2000

ಒಳ್ಳೆ ಬ್ರಾಂಡ್ ನ ಹೊಸ ಹೆಡ್ ಫೋನ್ ಖರೀದಿಸಬೇಕೆಂದಿದ್ದೀರಾ? ಇಲ್ಲಿವೆ 5 ಬೆಸ್ಟ್ ಹೆಡ್ ಫೋನ್ (Headphones) ಆಯ್ಕೆಗಳು.

ಇಂದು ತಂತ್ರಜ್ಞಾನ (technology) ಬಹಳ ಮುಂದುವರಿದಿದೆ, ಆ ನಿಟ್ಟಿನಲ್ಲಿ ನೋಡುವುದಾದರೆ ನಾವೆಲ್ಲರೂ ಇಂದು ಸ್ಮಾರ್ಟ್ ಫೋನ್ ಗಳನ್ನು (smart phone) ಬಳಸುತ್ತಿದ್ದೇವೆ. ಹಾಗೂ ಈ ಸ್ಮಾರ್ಟ್ ಫೋನ್ ಜನರ ಅಗತ್ಯ ಸಾಧನವಾಗಿದೆ. ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಇರುವ ಕಾರಣ ಯುವಕರಿಂದ ಹಿಡಿದು ಮುದುಕರವರೆಗೂ ಸ್ಮಾರ್ಟ್ ಫೋನ್ ಬಳಸುವ ಕಲೆಯನ್ನು ಕಲಿತಿದ್ದಾರೆ. ಬಸ್ ನಲ್ಲಿ ಪ್ರಯಾಣಿಸುವಾಗ ಬೈಕ್ ಸವಾರಿ ಮಾಡುವಾಗ ನಾವು ಒಳ್ಳೆ ಒಳ್ಳೆ ಮ್ಯೂಸಿಕ್ ಆಲಿಸಲು ಹೆಡ್ ಫೋನ್ ಗಳನ್ನು ಬಳಸುತ್ತೇವೆ. ಹಾಗೂ ಒಳ್ಳೆಯ ಬ್ರ್ಯಾಂಡ್ ಹೆಡ್ ಫೋನ್ ಗಳನ್ನು(Branded headphones) ಹುಡುಕುತ್ತೇವೆ ಹಾಗೂ ಖರೀದಿಸುತ್ತೇವೆ. ಒಳ್ಳೆಯ ಬ್ರಾಂಡ್ ಹೆಡ್ ಫೋನ್ ಗಳನ್ನು ಬಳಸುವ ಮೂಲಕ ತಮ್ಮ ನೆಚ್ಚಿನ ಸಂಗೀತವನ್ನು ಪರಿಣಾಮಕಾರಿ ಆಡಿಯೋ ಮೂಲಕ ಆಲಿಸಬಹುದು. ಹಾಗೂ ಬೇರೆಯವರಿಗೆ ತೊಂದರೆಯನ್ನು ನೀಡದೆ ಚಲನಚಿತ್ರಗಳನ್ನು (cinema) ಸಹ ನೋಡಬಹುದು. ಇದೀಗ ಸ್ಮಾರ್ಟ್ ಫೋನ್ ಗಳ ಜೊತೆಯಲ್ಲಿ ಹೆಡ್ ಫೋನ್ ಗಳನ್ನು ಕೂಡ ಹೆಚ್ಚಿನ ಜನರು ಬಳಸುತ್ತಿದ್ದಾರೆ. ಇನ್ನು ಈ ವಿಷಯವನ್ನು ಗಮನಿಸಿದ ಹೆಡ್ ಫೋನ್ ಕಂಪನಿಗಳು ಮಾರುಕಟ್ಟೆಗೆ ಉತ್ತಮ ಫೀಚರ್ಸ್ ಗಳನ್ನು (features) ಒಳಗೊಂಡ ಕಡಿಮೆ ಬೆಲೆಯ ಹೆಡ್ (low budget Head phones) ಫೋನ್ ಗಳನ್ನು ಪರಿಚಯಿಸುತ್ತಿವೆ. ನೀವೇನಾದರೂ ಹೊಸ ಹೆಡ್ ಫೋನ್ ಗಳನ್ನು ಖರೀದಿಸಬೇಕೆಂದಿದ್ದರೆ ಇಲ್ಲಿವೆ 5 ಬೆಸ್ಟ್ ಹೆಡ್ ಫೋನ್ ಆಯ್ಕೆಗಳು.

2,000 /- ಒಳಗೆ ಬೆಸ್ಟ್ ಬ್ರಾಂಡ್ ನ 5 ಬೆಸ್ಟ್ ಹೆಡ್ ಫೋನ್ ಗಳು :

boat rockerz 255 pro +
realme buds wireless 2 neo
sony WI-C100 wireless headphones
oneplus bullets Z2
boat Rockerz 330 pro
ಈ ಐದು ಹೆಡ್ ಫೋನ್ ಗಳು ಬೆಸ್ಟ್ ಬ್ರಾಂಡ್ (brand)ಗಳಾಗಿದ್ದು, ಹೊಸ ಹೆಡ್ ಫೋನ್ ಗಳನ್ನು ಖರೀದಿಸುತ್ತಿರುವ ಗ್ರಾಹಕರಿಗೆ ಉತ್ತಮ ಆಯ್ಕೆಗಳು ಎನ್ನಬಹುದು.

boat rockerz 255 pro +
756866f0 25e4 4b5d 8b7c 546c2111da69

ಹೆಡ್ ಫೋನ್ ಗಳ ಖರೀದಿಯಲ್ಲಿಯೇ ಜನಪ್ರಿಯವಾಗಿರುವ ಹಾಗೂ ಭಾರತದ ಮೂಲವಾಗಿರುವ boat ಕಂಪನಿ ಹೆಚ್ಚು ಗ್ರಾಹಕರನ್ನು ಹೊಂದಿದೆ. ಇನ್ನು  boat rockerz 255 pro + ಕೂಡ ಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಗ್ರಾಹಕರು ಹೆಚ್ಚು boat rockerz 255 pro + ನ ಕಡೆಗೆ ಒಲವು ತೋರಿಸಲು ಕಾರಣ ಈ ಒಂದು ಹೆಡ್ ಫೋನ್ ನಲ್ಲಿ 10ಕ್ಕೂ ಹೆಚ್ಚು ಬಣ್ಣಗಳ ಆಯ್ಕೆ ಇದೆ. ಹಾಗೂ ಈ ಒಂದು ಬ್ರಾಂಡ್ ಧ್ವನಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಟ್ಟಿದೆ. ಮ್ಯಾಗ್ನೆಟಿಕ್ ಇಯರ್ ಬಡ್ ಗಳು ಮತ್ತು ಎಂಎಂ ಡ್ರೈವರ್ ಗಳನ್ನು ಹೊಂದಿದೆ. ಹಾಗೂ boat rockerz 255 pro + ನಲ್ಲಿ ವಿಶೇಷವಾಗಿ ಸಿಂಗಲ್ ಪ್ರೆಸ್ ವಾಯ್ಸ್ ಅಸಿಸ್ಟೆಂಟ್ ಜೊತೆಗೆ ವಾಲ್ಯೂಮ್ ನಿಯಂತ್ರಣಗಳನ್ನು ನೋಡಬಹುದು. 10 ನಿಮಿಷಗಳ ಚಾರ್ಜಿಂಗ್ ನಲ್ಲಿ 10 ಗಂಟೆಗಳವರೆಗೂ ಉಪಯೋಗಿಸುವ ಹಾಗೂ ಆನ್ಲೈನ್ ನಲ್ಲಿ ಇದು IPX7 ರೇಟಿಂಗ್ ಹೊಂದಿರುವ ಬೆಸ್ಟ್ ಬ್ರಾಂಡ್ ಇದಾಗದೆ.
boat rockerz 255 pro + ಬೆಲೆ :
ರೂ.1299

realme buds wireless 2 neo

Boat ಕಂಪನಿಯ ರೀತಿಯಲ್ಲಿಯೇ ರಿಯಲ್ ಮಿ  ಹೆಡ್ ಫೋನ್ ಗಳು ಸಿಕ್ಕಾಪಟ್ಟೆ ಚಾಲ್ತಿಯಲ್ಲಿರುವ ಹಾಗೂ ಸದ್ದು ಮಾಡುತ್ತಿರುವ ಹೆಡ್ ಫೋನ್ ಗಳು. ಇನ್ನು ರಿಯಲ್ ಮಿ ಹೆಡ್ ಫೋನ್ ಗಳಲ್ಲಿ ಒಂದಾದ realme buds wireless 2 neo ಈ ಒಂದು ಹೆಡ್ ಫೋನ್ ಗಳು ಸಂಗೀತ ಪ್ರಿಯರಿಗೆ ಹೆಚ್ಚು ಇಷ್ಟವಾಗುತ್ತವೆ. ಹಾಗೂ ಈ ಒಂದು ಹೆಡ್ ಸೆಟ್ ಗಳನ್ನು ಬಳಸಬೇಕಾದರೆ ಹೊರಗಿನ ಯಾವ ಗಲಾಟೆಯು ಕೂಡ ಕೇಳಿಸುವುದಿಲ್ಲ. ಟೈಪ್ ಸಿ ಚಾರ್ಜಿಂಗ್ ಪೋರ್ಟ್ ನೊಂದಿಗೆ (type C charging port) 17 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು (play back time) ಹೊಂದಿದೆ. ಮೂರು ಬಣ್ಣಗಳಲ್ಲಿ ಲಭ್ಯವಿರುವ ಈ ಒಂದು ಹೆಡ್ ಸೆಟ್ ಕೇವಲ ಸಂಗೀತ ಹಾಗೂ ಚಿತ್ರಗಳನ್ನು ಕೇಳಲು ಉಪಯೋಗಿಸುವುದಲ್ಲದೆ, ಗೇಮಿಂಗ್ ಪರ್ಪಸ್ ಗೂ ಸಹಾಯ ಮಾಡುತ್ತದೆ ಹಾಗೂ ಆನ್ಲೈನ್ ನಲ್ಲಿ ಇದು IPX4 ವಾಟರ್ ರೆಸಿಸ್ಟೆಂಟ್ ರೇಟಿಂಗ್ ಪಡೆದುಕೊಂಡಿದೆ.
realme buds wireless 2 neo ನ ಬೆಲೆ : ರೂ.1199

sony WI-C100 wireless headphones

ನಾವು ಇಂದು ಒಳ್ಳೆಯ ಬ್ರ್ಯಾಂಡ್ ಗಳ ಹೆಡ್ ಫೋನ್ ಗಳನ್ನು ನೋಡುತ್ತೇವೆ ಹಾಗೂ ಹಲವಾರು ಬಣ್ಣಗಳ ಆಯ್ಕೆಗಳೊಂದಿಗೆ ಒಳ್ಳೆಯ ಬ್ರಾಂಡ್ ಖರೀದಿಸುತ್ತೇವೆ. ಆದರೆ ಸೌಂಡ್ ಎಂಬ ವಿಷಯಕ್ಕೆ ಬಂದರೆ ನಮಗೆ ಮೊದಲು ನೆನಪಾಗೋದು ಸೋನಿ ಕಂಪನಿ. ಹೌದು ಈ ಕಂಪನಿ ಹೆಡ್ ಫೋನ್ ಗಳಲ್ಲಿ ಒಂದಾದ sony WI-C100 wireless headphones ಸೌಂಡ್ ಪ್ರಿಯರಿಗೆ ಬಹಳ ಇಷ್ಟವಾಗುತ್ತದೆ. ಹಾಗೂ ಮಾರುಕಟ್ಟೆಯಲ್ಲಿ ಸೌಂಡ್ ಪ್ರಿಯರಿಗೆ ಹೆಚ್ಚು ಇಷ್ಟವಾಗುವಂತಹ sony WI-C100 wireless headphones ಬೆಸ್ಟ್ ಹೆಡ್ ಫೋನ್ ಗಳಲ್ಲಿ ಒಂದಾಗಿದೆ. ಇನ್ನು ಈ ಹೆಡ್ ಸೆಟ್ ಕೂಡ  ಮೂರು ಬಣ್ಣಗಳಲ್ಲಿ ಗ್ರಾಹಕರ ಮನಸ್ಸನ್ನು ಗೆದ್ದಿದೆ. 25 ಗಂಟೆಗಳ ಬ್ಯಾಟರಿ ಬ್ಯಾಕಪ್ ಹೊಂದಿರುವ ಈ ಒಂದು ಹೆಡ್ ಸೆಟ್ ಆನ್ಲೈನ್ ನಲ್ಲಿ IPX4 ರೇಟಿಂಗ್ ಪಡೆದುಕೊಂಡಿದೆ.
sony WI-C100 wireless headphones ಬೆಲೆ : ರೂ.1690

oneplus bullets Z2

ಇನ್ನು ಮೊಬೈಲ್ ಫೋನ್ ಗಳಲ್ಲಿಯೇ ಹೆಚ್ಚು ಜನಪ್ರಿಯತೆಯನ್ನು ಹೊಂದಿರುವ ಮೊಬೈಲ್ ಫೋನ್ ಒನ್ ಪ್ಲಸ್ (oneplus). ಕೇವಲ ಸ್ಮಾರ್ಟ್ ಫೋನ್  ಗಳಲ್ಲದೆ ಒನ್ ಪ್ಲಸ್ ನಿಂದ ಒಳ್ಳೆಯ ಹೆಡ್ ಫೋನ್ ಕೂಡ ಲಭ್ಯವಿದೆ.oneplus bullets Z2 ಈ ಒಂದು ಹೆಡ್ ಫೋನ್ ಬೇಸ್ ಹಾಗೂ ಬೆಸ್ಟ್ ಆಡಿಯೋ ಕೇಳುಗರಿಗೆ ಹೆಚ್ಚು ಇಷ್ಟವಾಗುತ್ತದೆ.ಈ ಒಂದು ಹೆಡ್ ಫೋನ್ 10 ನಿಮಿಷಗಳ ಚಾರ್ಜಿಂಗ್ ನಲ್ಲಿ 20 ಗಂಟೆಗಳ ಕಾಲ ಬಳಸಬಹುದು. ಕೆಂಪು, ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿರುವ ಈ ಹೆಡ್ ಫೋನ್ ಆನ್ಲೈನ್ ನಲ್ಲಿ IP55 ವಾಟರ್ ರೆಸಿಸ್ಟೆಂಟ್ ರೇಟಿಂಗ್ ಪಡೆದುಕೊಂಡಿದೆ.
oneplus bullets Z2 ಬೆಲೆ :
ರೂ. 1799

boat Rockerz 330 pro

Boat ಕಂಪನಿಯ ಬೆಸ್ಟ್ ಹೆಡ್ ಫೋನ್ ಗಳಲ್ಲಿಯೇ boat Rockerz 330 pro ಬಜೆಟ್ ಫ್ರೆಂಡ್ಲಿ ಹೆಡ್ ಸೆಟ್ ಗಳಲ್ಲಿ ಒಂದಾಗಿದೆ. ಕೇವಲ 10 ನಿಮಿಷಗಳ ಚಾರ್ಜಿಂಗ್ ನಲ್ಲಿ 20 ಗಂಟೆಗಳ ಕಾಲ ಬಳಸಬಹುದು. ಈ ಒಂದು ಹೆಡ್ ಫೋನ್ಸ್ ಕೇಳುಗರಿಗೆ ವಿಭಿನ್ನ ರೀತಿಯಲ್ಲಿ  ಕಾಲ್ಪನಿಕ ಜಗತ್ತನ್ನು ಕಟ್ಟಿಕೊಡುತ್ತದೆ. ನೆಕ್ ಬ್ಯಾಂಡ್ ಹಾಗೂ ಮ್ಯಾಗ್ನೆಟಿಕ್ ಇಯರ್ ಬಡ್ ಗಳ ವಿನ್ಯಾಸವನ್ನು ಹೊಂದಿದೆ. ಈ ಒಂದು ಹೆಡ್ ಫೋನ್ ಆನ್ಲೈನ್ ನಲ್ಲಿ IPX5 ವಾಟರ್ ರೆಸಿಸ್ಟೆಂಟ್ ಮತ್ತು 10 ಎಂಎಂ ಡ್ರೈವರ್ ಅನ್ನು ಹೊಂದಿದೆ.
boat Rockerz 330 pro ಬೆಲೆ :
ರೂ.1299

ಹೊಸ ಹೆಡ್ ಫೋನ್ ಗಳ (new head phone’s) ಖರೀದಿಗೆ ಮುಂದಾಗಿರುವ ಗ್ರಾಹಕರಿಗೆ ಈ 5 ಬ್ರ್ಯಾಂಡ್ ಗಳ ಹೆಡ್ ಫೋನ್ ಗಳು ಉತ್ತಮ ಆಯ್ಕೆಗಳಾಗಿವೆ.

ಈ ಮಾಹಿತಿಗಳನ್ನು ಓದಿ


WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!