ಬೈಕ್ ಪ್ರಿಯರೇ ಗಮನಿಸಿ 1.5 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ ಪ್ರೀಮಿಯಂ ಬೈಕ್‌ಗಳಿವು..!

WhatsApp Image 2024 04 19 at 11.49.25 AM

ಇತ್ತೀಚಿನ ದಿನಗಳಲ್ಲಿ ದೈನಂದಿನ ಬಳಕೆಗೆ ಉತ್ತಮ ಪ್ರಯಾಣಕ್ಕೆ ದ್ವಿಚಕ್ರ ವಾಹನಗಳು ತುಂಬಾ ಅನುಕೂಲವಾಗಿದೆ. ತಮ್ಮ ಕಾಂಪ್ಯಾಕ್ಟ್ ಫ್ರೇಮ್‌ನಿಂದಾಗಿ ಪ್ರಯಾಣಕ್ಕೆ ಉತ್ತಮ ಆಯ್ಕೆಯಾಗಿದೆ. ಕಾರುಗಳಿಗಿಂತ ಉತ್ತಮ ಇಂಧನ ದಕ್ಷತೆಯನ್ನು ಸಹ ನೀಡುತ್ತವೆ, ಅದಕ್ಕಾಗಿಯೇ ಹಲವಾರು ಜನರು ದ್ವಿಚಕ್ರ ವಾಹನಗಳನ್ನ ಇಷ್ಟ ಪಡುತ್ತಾರೆ. ಆದರೆ ಇದೀಗ ಪೆಟ್ರೋಲ್ ಬೆಲೆ ಗಗನಕ್ಕೆ ಏರುತ್ತಿದೆ 100 ರೂಗೆ 1ಲೀಟರ್ ಪೆಟ್ರೋಲ್ ಸಿಗುತ್ತಿದೆ. ಆದರಿಂದ ಜನರು ಉತ್ತಮ ಮೈಲೇಜ್(mileage) ನೀಡುವ ಬೈಕ್ ಗಳನ್ನು ಖರೀದಿ ಮಾಡುತ್ತಿದ್ದರೆ. ನೀವು ಕೂಡಾ ಉತ್ತಮ ದಿನ ಬಳಕೆಗೆ, ಮೈಲೇಜ್  ಬೈಕು ಖರೀದಿಸಲು ಯೋಚನೆ ಮಾಡುತ್ತಿದ್ದರೆ, ಭಾರತದಲ್ಲಿ ಇಂಧನ-ಸಮರ್ಥ ದ್ವಿಚಕ್ರ ವಾಹನಗಳ ಆಯ್ಕೆಗೆ ತುಂಬಾ ಇವೆ. ಬನ್ನಿ ಹಾಗಾದರೆ ಇದೀಗ ನಿಮಗೆ ಉತ್ತಮ ಮೈಲೇಜ್  ಹೊಂದಿರುವ ಬೈಕ ಗಳ ಪಟ್ಟಿ ಹಾಗೂ ಅವುಗಳ ವಿಶೇಷತೆ ಉತ್ತಮ ಬೆಲೆ ಬಗ್ಗೆ ತಿಳಿಸಿ ಕೊಡಲಾಗುತ್ತದೆ. ಯಾವೆಲ್ಲ ಬೈಕ್ ಗಳು ಉತ್ತಮ ಮೈಲೇಜ್ ಅನ್ನು ನೀಡುತ್ತವೆ ಮತ್ತು ಅವುಗಳ ಬೆಲೆ, ಫೀಚರ್ ಗಳ ಬಗ್ಗೆ ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಉತ್ತಮ ಮೈಲೇಜ್ ಕೊಡುವ ಕಡಿಮೆ ಬೆಲೆಯ ಬೈಕ್ ಗಳಿಗೂ :

ಇದೀಗ ಮಾರುಕಟ್ಟೆಯಲ್ಲಿ1.5 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ ಅತ್ಯಾಧುನಿಕ ಹೋಂಡಾ ಯುನಿಕಾರ್ನ್, ಬಜಾಜ್ ಪಲ್ಸರ್ ಎನ್‌ಎಸ್125, ಟಿವಿಎಸ್ ರೈಡರ್ 125 ಮೋಟಾರ್‌ಸೈಕಲ್ ಕುರಿತು ತಿಳಿಸಿಕೊಡುತ್ತೇವೆ.

ಹೋಂಡಾ ಯುನಿಕಾರ್ನ್ (Honda Unicorn) :
33203508 cfc2 4321 bf8d 188dea277454

ಈ ಬೈಕ್ ರೂ.1,09,800 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇದು 162.71 ಸಿಸಿ, ಏರ್-ಕೋಲ್ಡ್, ಫ್ಯುಯೆಲ್ ಇಂಜೆಕ್ಟ್ದ್ ಎಂಜಿನ್ ಪಡೆದಿದ್ದು, 12.91 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 14.58 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ 5-ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.

ಈ ಹೋಂಡಾ ಯುನಿಕಾರ್ನ್(Honda Unicorn) ಮೋಟಾರ್‌ಸೈಕಲ್, 60 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ. ಇಂಪೀರಿಯಲ್ ರೆಡ್ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಪರ್ಲ್ ಇಗ್ನಿಯಸ್ ಬ್ಲ್ಯಾಕ್ & ಪರ್ಲ್ ಸೈರನ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿಯೂ ಈ ಬೈಕ್ ಸಿಗಲಿದ್ದು, ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್ ಅನ್ನು ಪಡೆದಿದೆ. ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

ಬಜಾಜ್ ಪಲ್ಸರ್ ಎನ್‌ಎಸ್125 (Bajaj Pulsar NS125) :

ಈ ಬೈಕ್ ರೂ.1.05 ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. 124.45 ಸಿಸಿ ಎಂಜಿನ್ ಹೊಂದಿದ್ದು, 11.99 ಪಿಎಸ್ ಪವರ್ ಮತ್ತು 11 ಎನ್‌ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. 64.75 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ

ಈ ಬಜಾಜ್ ಪಲ್ಸರ್ ಎನ್‌ಎಸ್125(Bajaj Pulsar NS125) ಮೋಟಾರ್‌ಸೈಕಲ್, ಫಿರಿ ಆರೆಂಜ್, ಬರ್ನ್ಟ್ ರೆಡ್, ಬೀಚ್ ಬ್ಲೂ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ. ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮುಂಭಾಗ (ಫ್ರಂಟ್), ಹಿಂಭಾಗ (ರೇರ್) ಡಿಸ್ಕ್ ಬ್ರೇಕ್ ಅನ್ನು ಒಳಗೊಂಡಿದೆ. 805 ಎಂಎಂ ಸೀಟ್ ಹೈಟ್ ಇದ್ದು, 12-ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಅನ್ನು ಪಡೆದಿದೆ.

ಟಿವಿಎಸ್ ರೈಡರ್ 125 (TVS Raider 125):

ಈ ಬೈಕ್ ರೂ.98,709 ದಿಂದ ರೂ.1.08 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. ಇದು 124.8 ಸಿಸಿ ಏರ್ ಕೋಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 11.38 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 11.2 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ವೀಡ್ ಗೇರ್ ಬಾಕ್ಸ್ ಅನ್ನು ಪಡೆದಿದೆ.

ಈ ಟಿವಿಎಸ್ ರೈಡರ್ 125 (TVS rider 125) ಮೋಟಾರ್‌ಸೈಕಲ್, ಇಕೋ & ಸ್ಪೋರ್ಟ್ಸ್ ಎಂಬ ರೈಡಿಂಗ್ ಮೋಡ್ ಆಯ್ಕೆಯನ್ನು ಒಳಗೊಂಡಿದೆ. ಎಲ್‌ಇಡಿ ಹೆಡ್ ಲೈಟ್, ಎಲ್‌ಇಡಿ ಟೈಲ್ ಲೈಟ್, ಹ್ಯಾಲೊಜೆನ್ ಇಂಡಿಕೇಟರ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದ್ದು, 71.94 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ.

ನೀವೇನಾದರೂ ಉತ್ತಮ ಬೆಲೆಯಲ್ಲಿ ಮತ್ತು ಉತ್ತಮ ಮೈಲೇಜ್ ನೀಡುವ ಬೈಕ್ ಗಳನ್ನು ಖರೀದಿಸಲು ಯೋಚನೆ ಮಾಡುತ್ತಿದ್ದರೆ ಮೇಲೆ ನೀಡಿರುವ ಮಾಹಿತಿಯನ್ನು ಅನುಸರಿಸಿ ನಿಮಗೆ ಸೂಕ್ತವಾದ ಉತ್ತಮ ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳಿ.
ಮತ್ತು ಇಂತಹ ಉತ್ತಮವಾದ  ಮಾಹಿತಿಯನ್ನು ನೀವು ತಿಳಿದಮೇಲೆ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಈ ಮಾಹಿತಿಗಳನ್ನು ಓದಿ

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!