Picsart 25 11 09 21 12 13 567 scaled

8.2% ಬಡ್ಡಿದರ, ತೆರಿಗೆ ವಿನಾಯಿತಿ – ಸುಕನ್ಯಾ ಸಮೃದ್ಧಿ ಯೋಜನೆಯ 10 ಪ್ರಮುಖ ಲಾಭಗಳು ಹೀಗಿವೆ

Categories:
WhatsApp Group Telegram Group

ದೇಶದಲ್ಲಿ ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಅವರ ದೀರ್ಘಾವಧಿ ಭದ್ರತೆ ಸರ್ಕಾರದ ಪ್ರಮುಖ ಗುರಿಗಳಲ್ಲಿ ಒಂದಾಗಿದೆ. ಸಮಾಜದಲ್ಲಿ ಆರ್ಥಿಕ ಅಸಮಾನತೆ, ಶಿಕ್ಷಣದ ವೆಚ್ಚದ ಏರಿಕೆ ಮತ್ತು ಹೆಣ್ಣುಮಕ್ಕಳಿಗೆ ಸುರಕ್ಷಿತವಾದ ಭವಿಷ್ಯ ನಿರ್ಮಿಸುವ ಅಗತ್ಯ ಹೆಚ್ಚುತ್ತಿರುವ ಹೊತ್ತಿನಲ್ಲಿ, ಸರ್ಕಾರವು ಪೋಷಕರಿಗೆ ವಿಶ್ವಾಸದ ಶಕ್ತಿ ತುಂಬುವಂತೆ ಸುಕನ್ಯಾ ಸಮೃದ್ಧಿ ಯೋಜನೆಯನ್ನು (Sukanya Samriddhi Yojana – SSY) ಪರಿಚಯಿಸಿತು.
ಬೇಟಿ ಬಚಾವೋ, ಬೇಟಿ ಪಢಾವೋ ಅಭಿಯಾನದ ಭಾಗವಾಗಿರುವ ಈ ಯೋಜನೆ ಕೇವಲ ಒಂದು ಉಳಿತಾಯ ಖಾತೆಯಲ್ಲ, ಅದು ಮಗುವಿನ ಭವಿಷ್ಯಕ್ಕೆ ಸೇರಿಸಲಾದ ಆರ್ಥಿಕ ವಿಮೆ, ಲಾಭ ಮತ್ತು ಸರ್ಕಾರಿ ರಕ್ಷಣೆಯನ್ನು ಒದಗಿಸುತ್ತದೆ.

ಪ್ರಸ್ತುತ 8.2% ರಷ್ಟು ಅತ್ಯಧಿಕ ವಾರ್ಷಿಕ ಬಡ್ಡಿದರ, ಸಂಪೂರ್ಣ ತೆರಿಗೆ ವಿನಾಯಿತಿ, ಕಡಿಮೆ ಹೂಡಿಕೆ ಅವಶ್ಯಕತೆ ಮತ್ತು ದೀರ್ಘಾವಧಿ ಸಂಯುಕ್ತ ಬಡ್ಡಿಯ ಶಕ್ತಿ ಇವೆಲ್ಲವೂ ಸೇರಿ SSY ಅನ್ನು ಇಂದು ದೇಶದ ಅತ್ಯಂತ ವಿಶ್ವಾಸಾರ್ಹ Small Savings Scheme ಗಳಲ್ಲಿ ಒಂದಾಗಿದೆ. ಬಹುತೇಕ ಹಣಕಾಸು ತಜ್ಞರು, ಹೆಣ್ಣುಮಕ್ಕಳ ಶಿಕ್ಷಣ ಅಥವಾ ವಿವಾಹದಂತಹ ದೀರ್ಘಾವಧಿಯ ವೆಚ್ಚಗಳಿಗೆ ಸುರಕ್ಷಿತ ಮತ್ತು ಅಪಾಯರಹಿತ ಹೂಡಿಕೆ ಬೇಕಾದ ಕುಟುಂಬಗಳಿಗೆ ಇದು ಅತ್ಯುತ್ತಮ ಆಯ್ಕೆ. ಹಾಗಾದರೆ ಸುಕನ್ಯಾ ಸಮೃದ್ಧಿ ಯೋಜನೆಯ 10 ಪ್ರಮುಖ ಮಾಹಿತಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಸುಕನ್ಯಾ ಸಮೃದ್ಧಿ ಯೋಜನೆ ಎಂದರೇನು?:

ಸರ್ಕಾರದ ಬೇಟಿ ಬಚಾವೋ, ಬೇಟಿ ಪದಾವೋ ಉಪಕ್ರಮದ ಭಾಗವಾಗಿ ಆರಂಭವಾದ SSY, ಪೋಷಕರು ತಮ್ಮ ಹೆಣ್ಣುಮಗುವಿಗಾಗಿ ಶಿಸ್ತುಬದ್ಧವಾಗಿ ಉಳಿತಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದು ಸರ್ಕಾರಿ ಬೆಂಬಲಿತ, ಖಾತರಿಯ ಬಡ್ಡಿದರ ಹೊಂದಿರುವ, ಅತ್ಯುತ್ತಮ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದು.

ಖಾತೆ ತೆರೆಯಲು ಇರಬೇಕಾದ ಅರ್ಹತೆಗಳು ಏನು?:

10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳಿಗೆ ಮಾತ್ರ.
ಪೋಷಕರು ಅಥವಾ ಕಾನೂನುಬದ್ಧ ಗಾರ್ಡಿಯನ್ ಖಾತೆ ತೆರೆಯಬಹುದು.
ಪ್ರತಿ ಮಗುವಿಗೆ ಒಂದು ಖಾತೆ, ಒಂದು ಕುಟುಂಬಕ್ಕೆ 2 ಹೆಣ್ಣುಮಕ್ಕಳಿಗೆ 2 SSY ಖಾತೆಗಳು. (ಅವಳಿ/ತ್ರಿವಳಿಗಳಲ್ಲಿ ವಿಶೇಷ ವಿನಾಯಿತಿ).

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗು ಅಗತ್ಯ ದಾಖಲೆಗಳು ಯಾವುವು?:

ಮಗುವಿನ ಜನನ ಪ್ರಮಾಣಪತ್ರ
ಪೋಷಕರ ಗುರುತುಪತ್ರ (KYC)
ಯಾವುದೇ ಅಧಿಕೃತ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಸುಲಭವಾಗಿ ಖಾತೆ ತೆರೆದುಕೊಳ್ಳಬಹುದು.

ಹೂಡಿಕೆ ಮಿತಿಗಳು :

ಕನಿಷ್ಠ ಹೂಡಿಕೆ: ₹250 ಪ್ರತಿವರ್ಷ
ಗರಿಷ್ಠ ಹೂಡಿಕೆ: ₹1.5 ಲಕ್ಷ ಪ್ರತಿವರ್ಷ
ವರ್ಷದಲ್ಲಿ ಬೇಕಾದಷ್ಟು ಬಾರಿ ಹೂಡಿಕೆ ಮಾಡಬಹುದು (ಕಂತುಗಳ ಸಂಖ್ಯೆ ಮೇಲೆ ನಿರ್ಬಂಧ ಇಲ್ಲ).
ಇದರಿಂದ ವಿವಿಧ ಆದಾಯಗಳನ್ನು ಹೊಂದಿರುವ ಕುಟುಂಬಗಳಿಗೂ ಅನುಭವಕ್ಕೆ ತಕ್ಕಂತೆ ಹೂಡಿಕೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ.

ಬಡ್ಡಿದರ – 8.2% (ಪ್ರಸ್ತುತ):

ಮಾರುಕಟ್ಟೆಯ ಏರಿಳಿತಕ್ಕೆ ಸಂಬಂಧಿಸದ ಖಾತರಿಪಡಿಸಿದ ಸರಕಾರಿ ಬಡ್ಡಿ.
ಬಡ್ಡಿಯನ್ನು ಪ್ರತಿವರ್ಷ ಸಂಯೋಜನೆ (compounding) ಮೂಲಕ ಸೇರಿಸಲಾಗುತ್ತದೆ.
ಹಣಕಾಸು ಸಚಿವಾಲಯವು ಪ್ರತಿ ತ್ರೈಮಾಸಿಕ ದರವನ್ನು ಪರಿಷ್ಕರಿಸುತ್ತದೆ.
ತೆರಿಗೆ ಕಾಯ್ದೆ 80C ಅಡಿಯಲ್ಲಿ ಗರಿಷ್ಠ ತೆರಿಗೆ ವಿನಾಯಿತಿ ಲಭ್ಯ.
ಒಬ್ಬ ಪೋಷಕನು ವರ್ಷಕ್ಕೆ ₹1 ಲಕ್ಷ ಹೂಡಿಕೆ ಮಾಡಿದರೆ, ಪ್ರಸ್ತುತ ಬಡ್ಡಿದರದ ಮೇಲೆ 21 ವರ್ಷಗಳಿಗೆ ₹46 ಲಕ್ಷಕ್ಕೂ ಹೆಚ್ಚು ಮೆಚೂರಿಟಿ ಮೊತ್ತ ಸಿಗಬಹುದು ಎಂಬುದು ಹಣಕಾಸು ತಜ್ಞರ ಅಂದಾಜು.

ಹೂಡಿಕೆ ಅವಧಿ ಮತ್ತು ಮೆಚೂರಿಟಿ:

ಖಾತೆಯ ಅವಧಿ: 21 ವರ್ಷ
ಆದರೆ ಠೇವಣಿ ಮಾಡಬೇಕಾದ ಅವಧಿ: ಮಾತ್ರ ಮೊದಲ 15 ವರ್ಷಗಳು.
ನಂತರ 21 ವರ್ಷಗಳವರೆಗೆ ಖಾತೆಯು ಬಡ್ಡಿ ಗಳಿಸುತ್ತಿರುತ್ತದೆ.
ಮೆಚೂರಿಟಿ ಮೊತ್ತ ಪೂರ್ಣವಾಗಿ ತೆರಿಗೆ ಮುಕ್ತ.

ಹಿಂಪಡೆಯುವ ಅವಕಾಶ ಇದೆಯೇ?:

ಹುಡುಗಿಗೆ:
18 ವರ್ಷ ತುಂಬಿದಾಗ ಅಥವಾ 10ನೇ/12ನೇ ನಂತರದ ಉನ್ನತ ಶಿಕ್ಷಣಕ್ಕಾಗಿ ಪ್ರವೇಶ ದೃಢೀಕರಣ ಇದ್ದಲ್ಲಿ ಖಾತೆಯ 50% ವರೆಗೆ ಹಣ ಹಿಂಪಡೆಯಲು ಅನುಮತಿ ನೀಡಲಾಗಿದೆ.

ಅಕಾಲಿಕ ಖಾತೆ ಮುಚ್ಚುವಿಕೆ:

ಕೆಲವು ವಿಶೇಷ ಸಂದರ್ಭಗಳಲ್ಲಿ SSY ಖಾತೆಯನ್ನು ಮುಚ್ಚಬಹುದು. ಉದಾಹರಣೆಗೆ, ಪೋಷಕರ ಅಕಾಲಿಕ ಮರಣ, ಹುಡುಗಿಯ ಆರೋಗ್ಯ ಕೆಟ್ಟರೆ, ಗಂಭೀರ ಆರ್ಥಿಕ ತೊಂದರೆ ಈ ಸಂದರ್ಭದಲ್ಲಿ ಬಾಕಿ ಮೊತ್ತಕ್ಕೆ ಅನ್ವಯಿಸುವ ಬಡ್ಡಿಯೊಂದಿಗೆ ಹಣವನ್ನು ತೆಗೆದುಕೊಳ್ಳಬಹುದು.

SSY ಪೋಷಕರಿಗೆ ಯಾಕೆ ಅತ್ಯುತ್ತಮ ಯೋಜನೆ?:

ಅಪಾಯರಹಿತ, ಭದ್ರ ಸರ್ಕಾರಿ ಯೋಜನೆ.
ತೆರಿಗೆ ಉಳಿತಾಯ (80C).
ಸಂಯುಕ್ತ ಬಡ್ಡಿಯಿಂದ ದೊಡ್ಡ ನಿಧಿ ನಿರ್ಮಾಣ.
ಮಾರುಕಟ್ಟೆ ಅಸ್ಥಿರತೆಯ ಪ್ರಭಾವವಿಲ್ಲ.
ಶಿಕ್ಷಣ/ವಿವಾಹದ ಮಹತ್ವದ ಖರ್ಚುಗಳಿಗೆ ಸೂಕ್ತ.
ಈ ಎಲ್ಲಾ ಕಾರಣದಿಂದ ಬಹುತೇಕ ಹಣಕಾಸು ಸಲಹೆಗಾರರು SSY ಅನ್ನು ಹೆಣ್ಣು ಮಕ್ಕಳಿರುವ ಕುಟುಂಬಗಳ ಬೆಸ್ಟ್ ಲಾಂಗ್-ಟರ್ಮ್ ಇನ್ವೆಸ್ಟ್ಮೆಂಟ್ ಎಂದು ಶಿಫಾರಸು ಮಾಡುತ್ತಾರೆ.

ಸಾಮಾಜಿಕ ಮಹತ್ವ, ಹೆಣ್ಣುಮಕ್ಕಳ ಸಬಲೀಕರಣ:

SSY ಮೂಲಕ, ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವನ್ನು ಪಡೆದುಕೊಳ್ಳಬಹುದು. ಪೋಷಕರು ಮಕ್ಕಳ ಭವಿಷ್ಯವನ್ನು ಭಯವಿಲ್ಲದೆ ಯೋಜಿಸಬಹುದು. ಸಮಾನತೆಗೆ ಸರ್ಕಾರ ನೀಡಿರುವ ಬಲವಾದ ಆರ್ಥಿಕ ನೆರವು ಇದು. ಇದು ಕೇವಲ ಹೂಡಿಕೆ ಯೋಜನೆಯಲ್ಲ, ಮಹಿಳಾ ಸಬಲೀಕರಣದ ದೀರ್ಘಾವಧಿ ಸಾಮಾಜಿಕ ನ್ಯಾಯ ಒದಗಿಸುವ ಯೋಜನೆ.

ಇನ್ನು, ಸುಕನ್ಯಾ ಸಮೃದ್ಧಿ ಯೋಜನೆ ಪೋಷಕರು ತಮ್ಮ ಮಗಳ ಜೀವನದ ಅತ್ಯಂತ ಮಹತ್ತರ ಗುರಿಗಳು ಉನ್ನತ ಶಿಕ್ಷಣ, ವೃತ್ತಿ, ವಿವಾಹ, ವೈಯಕ್ತಿಕ ಬೆಳವಣಿಗೆ ಇವೆಲ್ಲ ಕಾರ್ಯಗಳಿಗೆ ಬಲವಾದ ಆರ್ಥಿಕ ನೆಲೆಯಲ್ಲಿ ನಿಲ್ಲಲು ಸಹಾಯ ಮಾಡುತ್ತದೆ. ಈ ಯೋಜನೆ ಭದ್ರತೆ, ಶಿಸ್ತು, ವಿಶ್ವಾಸ ಹಾಗೂ ದೀರ್ಘಾವಧಿ ಲಾಭಗಳನ್ನು ಒದಗಿಸುತ್ತದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories