BBMP Recruitment : ಪೌರ ಕಾರ್ಮಿಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೇ 15 ಕೊನೆ ದಿನ

IMG 20240501 WA0010

ಈ ವರದಿಯಲ್ಲಿ ಬಿಬಿಎಂಪಿ ಪೌರಕಾರ್ಮಿಕರ  ನೇಮಕಾತಿಯ(BBMP Recruitment)  ಕುರಿತು ತಿಳಿಸಲಾಗಿದೆ. ಈ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಹುದ್ದೆಗಳಿಗೆ 11,307  ಅರ್ಜಿ ಆಹ್ವಾನ ಮಾಡಲಾಗಿದ್ದು, ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ಮೇ 15, 2024 ರ ವರೆಗೂ ವಿಸ್ತರಿಸಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

BBMP ಗ್ರೂಪ್ D ನೇಮಕಾತಿ 2024 (BBMP Group DRecruitment 2024) ಅವಲೋಕನ :

ನಿಮಗೆಲ್ಲರಿಗೂ ತಿಳಿದಿರುವಂತೆ ಲೋಕಸಭಾ ಚುನಾವಣೆ(Lokhsabha election)ಯು ರಂಗೇರಿದೆ. ಈ ಚುನಾವಣೆಯ ಸಲುವಾಗಿ ಬಿಬಿಎಂಪಿ ಪೌರಕಾರ್ಮಿಕರ ನೇಮಕಾತಿಯ ಅವಧಿಯನ್ನು ಮೇ 15ಕ್ಕೆ ವಿಸ್ತರಿಸಲಾಗಿದೆ.   ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಗ್ರೂಪ್ D “ಸಿವಿಲ್ ಸರ್ವೆಂಟ್ (KK & RPC)” ಹುದ್ದೆಗೆ ನೇಮಕಾತಿ ಡ್ರೈವ್ ಅನ್ನು ತೆರೆದಿದೆ. ಈ ಉಪಕ್ರಮವು ನಗರದ ಆಡಳಿತಾತ್ಮಕ ಚೌಕಟ್ಟಿನೊಳಗೆ ವಿವಿಧ ಸಾಮರ್ಥ್ಯಗಳಲ್ಲಿ ಸೇವೆ ಸಲ್ಲಿಸಲು ಬಯಸುವ ವ್ಯಕ್ತಿಗಳಿಗೆ ಅವಕಾಶವನ್ನು ಸೂಚಿಸುತ್ತದೆ. ಅಧಿಸೂಚನೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ದಯವಿಟ್ಟು ಓದಿ, ಪಠ್ಯಕ್ರಮ, ವಯಸ್ಸಿನ ಮಿತಿ, ವಿದ್ಯಾರ್ಹತೆ, ಸಂಬಳ ಮತ್ತು ಎಲ್ಲಾ ಇತರ ಮಾಹಿತಿಯ ಸಂಪೂರ್ಣ ವಿವರಕ್ಕಾಗಿ ಉದ್ಯೋಗ ಅಧಿಸೂಚನೆಯ ನೇರವಾದ ಲಿಂಕನ್ನು ಕೆಳಗಡೆ ನೀಡಲಾಗಿದೆ. ಅಷ್ಟೇ ಅಲ್ಲದೆ ಈ ಹುದ್ದೆಯ ಕುರಿತಾದ ಸಂಪೂರ್ಣ ಮಾಹಿತಿ ಕೆಳಗಿನಂತಿದೆ :

BBMP ನೇಮಕಾತಿಯ ಹುದ್ದೆಗಳ ವಿವರ:

ಖಾಲಿ ಹುದ್ದೆಗಳ ವಿವರ : 
ಹುದ್ದೆಯ ಹೆಸರು: BBMP ಗುಂಪು D “ಸಿವಿಲ್ ಸರ್ವೆಂಟ್ (KK & RPC)”
ಒಟ್ಟು ಹುದ್ದೆಗಳ  ಸಂಖ್ಯೆ: 11,307
ಉದ್ಯೋಗ ಸ್ಥಳ:  ಬೆಂಗಳೂರು (ಕರ್ನಾಟಕ)

ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ಅರ್ಹತೆ :

ಕನ್ನಡ ಭಾಷೆಯಲ್ಲಿ ಪ್ರಾವೀಣ್ಯತೆ ಕಡ್ಡಾಯವಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಡಿಯಲ್ಲಿನ ತ್ಯಾಜ್ಯ ನಿರ್ವಹಣೆ ಕಾರ್ಯಗಳಲ್ಲಿ ಹಾಲಿ ನೇರಪಾವತಿ ಅಥವಾ ಕ್ಷೇಮಾಭಿವೃದ್ಧಿ ಅಥವಾ ದಿನಗೂಲಿ (ಪೌರಕಾರ್ಮಿಕರು) ಆಧಾರದ ಮೇಲೆ ಕನಿಷ್ಠ 2 ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ನಿರಂತರವಾಗಿ ಸೇವೆಯನ್ನು ಸಲ್ಲಿಸಿರುವ ಹಾಗೂ ಸದರಿ ನಿಯಮಗಳು ಜಾರಿಗೆ ಬಂದ ದಿನಾಂಕದಿಂದ ಕಾರ್ಯ ನಿರ್ವಹಿಸುತ್ತಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ:

ಅರ್ಜಿಗಳನ್ನು ಸಲ್ಲಿಸುವ ಅಂತಿಮ ದಿನದವರೆಗೆ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 55 ವರ್ಷಗಳು.

ಸಂಬಳದ ಪ್ಯಾಕೇಜ್ ಎಷ್ಟು ?

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು  ರೂ.17,00-28,950/- ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ :

ಸಂದರ್ಶನ  

ಅರ್ಜಿ ಶುಲ್ಕ :

ಅರ್ಜಿಯನ್ನು ಸಲ್ಲಿಸಲು ಯಾವುದೇ ರೀತಿಯ ಶುಲ್ಕ ವಿಧಿಸಲಾಗುವುದಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ?:

ಬಿಬಿಎಂಪಿ ಹುದ್ದೆಗೆ ಅರ್ಜಿ ಹಾಕಲು ನೀವು ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಅಭಿಯಂತರ ಕಚೇರಿಗೆ ಭೇಟಿ ಅರ್ಜಿ ಹಾಕಬಹುದು.
ಬೆಳಗ್ಗೆ 10 ಗಂಟೆಯಿಂದ ಸಂಜೆ 5:30ರ ವರೆಗೂ ಅರ್ಜಿಯನ್ನು ಸ್ವೀಕರಿಸಲಾಗುವುದು. 

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 15-03-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-05-2024
ಪ್ರಮುಖ ಲಿಂಕುಗಳು 
ಅಧಿಕೃತ ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ 
ಹೊಸ ನೋಟಿಫಿಕೇಶನ್ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಫಾರ್ಮ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಈ ಮಾಹಿತಿಗಳನ್ನು ಓದಿ

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!