ನಿಮ್ಮ ಲೋನ್ ಬಾಕಿ ಇದೆಯಾ? ಇನ್ನು EMI ಪಾವತಿ ಬಾಕಿ ಇದ್ದಲ್ಲಿ, ಸುದ್ದಿಯನ್ನು ಪೂರ್ತಿಯಾಗಿ ಓದಿ.
ಇಂದು ಎಲ್ಲರೂ ತಮ್ಮ ತಮ್ಮ ಜೀವನ ಉತ್ತಮ ರೀತಿಯಲ್ಲಿ ನಡೆಯಲು ದುಡಿದು ಹಣ ಸಂಪಾದನೆ ಮಾಡುತ್ತಾರೆ. ಆದರೂ ಕೆಲವೊಂದು ಸಮಯದಲ್ಲಿ ತಾವು ದುಡಿದ ಹಣ ತಮ್ಮ ಜೀವನಕ್ಕೆ ಅಥವಾ ಇನ್ನಾವುದೇ ಖರ್ಚು ವೆಚ್ಚಗಳಿಗೆ ಸಾಕಾಗದಾಗ ಸಾಲದ ಮೊರೆ ಹೋಗುತ್ತಾರೆ. ಅದಕ್ಕಾಗಿ ಹಲವಾರು ರೀತಿಯ ಸಾಲ ಸೌಲಭ್ಯ (Loan) ಪಡೆಯುತ್ತಾರೆ. ಹೀಗೆ ಪಡೆದ ಸಾಲ ಸೌಲಭ್ಯ ತೀರಿಸಲು ಆಗದೆ ದುಃಖ ಪಡುತ್ತಾರೆ. ಹಾಗೆ ಮಾಡಿದಾಗ ಏನೆಲ್ಲಾ ತೊಂದರೆಗಳು ಎದುರಗುತ್ತವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸಾಲ ಪಡೆದ ನಂತರ ಸಮಯಕ್ಕೆ ತಕ್ಕಂತೆ EMI ಕಟ್ಟುವುದು ಬಹಳ ಮುಖ್ಯ :
ಪಡೆದ ಸಾಲ ಸೌಲಭ್ಯ ಕೆಲವು ಸಮಯದಲ್ಲಿ ಕುಟುಂಬದ ಆರ್ಥಿಕ ಸಮಸ್ಯೆಯಿಂದಾಗಿ ಸಾಲದ EMI ಪಾವತಿಸಲು ಸಾಧ್ಯವಾಗದೇ ಇರಬಹುದು. ಅಥವಾ ಬೇರೆ ಸಮಸ್ಯೆಯಿಂದಾಗಿ EMI ಪಾವತಿ ಸಾಧ್ಯವಾಗದೇ ಇರಬಹುದು. ಹೀಗಾದಾಗ ಹಲವು ತೊಂದರೆಗಳು ಎದುರಗುತ್ತವೆ. ನೀವು ಬ್ಯಾಂಕ್ (bank) ಅಥವಾ ಇತರ ಹಣಕಾಸು ಕಂಪನಿಯಿಂದ ಸಾಲವನ್ನು ತೆಗೆದುಕೊಳ್ಳುವಾಗ, ನೀವು ಮೊತ್ತವನ್ನು EMI ರೂಪದಲ್ಲಿ ಪಾವತಿಸಬೇಕಾಗುತ್ತದೆ. ಇದೊಂದು ಮುಖ್ಯ ವಿಚಾರವಾಗಿದೆ. ಸಮಯಕ್ಕೆ ತಕ್ಕಂತೆ EMI ಕಟ್ಟದೆ ಹೋದರೆ ದೊಡ್ಡ ಸಾಲದ ಹೊರೆ ತಲೆಯ ಮೇಲೆ ಬಂದು ಕುರುತ್ತದೆ.
EMI ಕಟ್ಟದೇ ಇದ್ದಲ್ಲಿ ಹಲವು ಸಮಸ್ಯೆಗಳು ಎದುರಗುತ್ತವೆ, ಅದಕ್ಕಾಗಿ ಹಲವು ನಿಯಮಗಳನ್ನು ತಿಳಿದುಕೊಳ್ಳಿ :
ಪ್ರತಿ ತಿಂಗಳೂ ಪಡೆದ ಸಾಲಕ್ಕೆ ಅಥವಾ ಇನ್ನಾವುದೇ ಹಣದ ವಿಚಾರಕ್ಕೆ EMI ಪಾವತಿಸಬೇಕು. ಇದರಿಂದ, ಸಾಲದ ಮೊತ್ತವನ್ನು ಪಾವತಿಸುವುದರ ಜೊತೆಗೆ, CIBIL ಕ್ರೆಡಿಟ್ ಸ್ಕೋರ್ ಕೂಡ ಸುಧಾರಿಸುತ್ತದೆ. ಒಂದು ವೇಳೆ EMI ಪಾವತಿಸುವುದನ್ನು ನಿಲ್ಲಿಸಿದರೆ, ಸಮಸ್ಯೆಗಳು (Problems) ಎದುರಾಗಲು ಪ್ರಾರಂಭವಾಗುತ್ತವೆ. ಅದಕ್ಕೆ ನೀವು ಹೆದರುವ ಅಗತ್ಯವಿಲ್ಲ. ತಿಳಿದುಕೊಳ್ಳಬೇಕಾದ ಕೆಲವು ಕಾನೂನು ಅಂಶಗಳು ಇಲ್ಲಿವೆ.
ಇಎಂಐ ಕಟ್ಟಲು ವಿಫಲವಾಗೋದು ಜೈಲು ಪಾಲಾಗುವಷ್ಟು ಅಪರಾಧವಲ್ಲ. ಚೆಕ್ ಬೌನ್ಸ್ (check bounce) ಆದಲ್ಲಿ ವ್ಯಕ್ತಿ ಜೈಲಿಗೆ ಹೋಗಬೇಕಾಗುತ್ತದೆ. ಆದರೆ ಬ್ಯಾಂಕ್ ಸಾಲದ ವಿಷಯದಲ್ಲಿ ಇದು ಅನ್ವಯ ಆಗೋದಿಲ್ಲ. ಆಸ್ತಿಯೂ ಹರಾಜಾಗುತ್ತದೆ ಎಂದು ಭಯಪಡುವ ಅಗತ್ಯವೂ ಇಲ್ಲ.
ಸಾಲ ಮಾಡಿ ಸಮಸ್ಯೆ ಎದುರಾದಾಗ ನಿಜವಾದ ಕಾನೂನು ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳಿ :
ಆರ್‌ಬಿಐನ ಹೊಸ ನಿಯಮಗಳ ಪ್ರಕಾರ, ಸಾಲದ ಇಎಂಐ (EMI) ಪಾವತಿಸದ ಯಾವುದೇ ವ್ಯಕ್ತಿಗೆ ಅವರು ಕರೆ ಮಾಡಿ ಬೆದರಿಕೆ ಹಾಕಬಾರದು ಎಂದು ಮಾರ್ಗಸೂಚಿಗಳು ಹೇಳುತ್ತವೆ. ಈ ಹಿಂದೆ ಸಾಲ ನೀಡಿದ ಬ್ಯಾಂಕ್ ಸತತವಾಗಿ ಎರಡು ಅಥವಾ ಮೂರು ಇಎಂಐ ಕಟ್ಟದಿದ್ದರೆ ನೋಟಿಸ್ ನೀಡಬೇಕು.
ಸಾಲ ವಸೂಲಿ ಮಾಡುವವರು ಗ್ರಾಹಕರಿಗೆ ತೊಂದರೆ ಕೊಡಬಾರದು. ಅವರನ್ನು ಸೌಜನ್ಯದಿಂದ ನಡೆಸಿಕೊಳ್ಳಬೇಕು. ಪಾವತಿಸದಿದ್ದಲ್ಲಿ ಆಸ್ತಿಯ (property) ಹರಾಜಿನ ಸಮಯದಲ್ಲಿ ಅವರನ್ನು ಸಂಪರ್ಕಿಸಬೇಕು.
ಅಲ್ಲದೇ ಅವರ ಒಪ್ಪಿಗೆಯೊಂದಿಗೆ ಮಾತ್ರ ಹರಾಜು ಮಾಡಲಾಗುತ್ತದೆ. ಯಾವುದೇ ಸಮಸ್ಯೆಯಿಂದಾಗಿ ನೀವು ಸಾಲದ EMI ಅನ್ನು ಪಾವತಿಸಲು ಸಾಧ್ಯವಾಗದಿದ್ದರೆ.. ಅದರ ಬಗ್ಗೆ ಬ್ಯಾಂಕ್ ಮ್ಯಾನೇಜರ್‌ನೊಂದಿಗೆ ಮಾತನಾಡಬಹುದಾಗಿದೆ. ಸಾಲದ ಅವಧಿಯನ್ನು ವಿಸ್ತರಿಸಲು ಅಥವಾ ಇನ್ನಾವುದೇ ಪರಿಹಾರಕ್ಕಾಗಿ ಮಾತನಾಡಬಹುದು. ಬ್ಯಾಂಕ್ ಗಳೂ ಕೂಡ ಇದಕ್ಕೆ ಒಪ್ಪಿಗೆ ನೀಡುವ ಸಾಧ್ಯತೆ ಹೆಚ್ಚಿದೆ.
ಈ ಎಲ್ಲಾ ನಿಯಮಗಳನ್ನು ತಿಳಿದುಕೊಂಡು ನೀವೇನಾದರೂ ಸಾಲ ಅಥವಾ EMI ಕಟ್ಟಲು ಆಗದೆ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈ ಮೇಲೆ ತಿಳಿಸಿದಂತೆ ನಿಮಯಗಳನ್ನು (Rules) ಪಾಲಿಸಿದರೆ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




