ಪ್ರಮುಖ ನಗರಗಳನ್ನು ವೇಗವಾಗಿ ಸಂಪರ್ಕಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ಆರಂಭಿಸಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಹೆಸರಾದ “ಅರ್ಧ-ಹೈಸ್ಪೀಡ್ ಟ್ರೈನ್(Semi-high speed train)” ಯೋಜನೆಯು ದಿನೇ ದಿನೇ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಈಗ ಕರ್ನಾಟಕದ ಸಂಚಾರದ ಚಿತ್ರಣವೇ ಬದಲಾಗುವಂತಾಗಿದೆ. ರಾಜ್ಯದ 11ನೇ ವಂದೇ ಭಾರತ್ ರೈಲು ಈಗ ಬೆಂಗಳೂರು – ಬೆಳಗಾವಿ ಮಾರ್ಗದಲ್ಲಿ ಆರಂಭವಾಗಿದ್ದು, ಇದು ಕಿತ್ತೂರು ಕರ್ನಾಟಕ ಹಾಗೂ ದಕ್ಷಿಣ ಕನ್ನಡ ಭಾಗದ ನಡುವೆ ನೇರ ಮತ್ತು ವೇಗದ ಸಂಪರ್ಕವನ್ನು ಒದಗಿಸುತ್ತಿದೆ. ಈ ರೈಲು ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಹಾವೇರಿ ಮುಂತಾದ ಪ್ರಮುಖ ನಗರಗಳ ಮೂಲಕ ಸಾಗಿ, ನೂರಾರು ಪ್ರಯಾಣಿಕರ ಸಮಯವನ್ನು ಉಳಿಸುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಹೊಸ ವಂದೇ ಭಾರತ್(Vande Bharat) ರೈಲಿಗೆ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರು ಅಧಿಕೃತ ಚಾಲನೆ ನೀಡಲಿದ್ದು, ಬುಧವಾರ ಹೊರತುಪಡಿಸಿ ವಾರದ ಆರು ದಿನಗಳ ಕಾಲ ಇದು ನಿತ್ಯ ಸಂಚರಿಸಲಿದೆ. ಬೆಳಿಗ್ಗೆ ಬೆಳಗಾವಿಯಿಂದ ಹೊರಟು ಮಧ್ಯಾಹ್ನಕ್ಕೆ ಬೆಂಗಳೂರಿಗೆ ತಲುಪುವುದು, ಹಾಗೂ ಮಧ್ಯಾಹ್ನ ಬೆಂಗಳೂರಿನಿಂದ ಹೊರಟು ರಾತ್ರಿ ಬೆಳಗಾವಿಗೆ ಮರಳುವುದು ಇದರ ನಿರಂತರ ಗತಿಯಾಗಿದೆ.
ಸಂಚಾರ ಮಾರ್ಗ ಹಾಗೂ ನಿಲ್ದಾಣಗಳು:
ಈ ವಂದೇ ಭಾರತ್ ರೈಲು ಕರ್ನಾಟಕದ 8 ಪ್ರಮುಖ ಜಿಲ್ಲೆಗಳ ಮೂಲಕ ಸಂಚರಿಸಲಿದೆ ಮತ್ತು 6 ಪ್ರಮುಖ ನಿಲ್ದಾಣಗಳಲ್ಲಿ ನಿಲ್ಲಲಿದೆ. ಇದರ ಪರಿಣಾಮವಾಗಿ ಕಿತ್ತೂರು ಕರ್ನಾಟಕ (ಉತ್ತರ ಕರ್ನಾಟಕ) ಹಾಗೂ ದಕ್ಷಿಣ ಕರ್ನಾಟಕದ ರಾಜಧಾನಿ ಬೆಂಗಳೂರಿನ ನಡುವೆ ಬಲವಾದ ಸಂಪರ್ಕ ಸಾಧ್ಯವಾಗಲಿದೆ.
ಬೆಳಗಾವಿ – ಬೆಂಗಳೂರು ವಂದೇ ಭಾರತ್ ರೈಲಿನ ವೇಳಾಪಟ್ಟಿ (BEL to SBC):
ಬೆಳಗಾವಿ: ಬೆಳಿಗ್ಗೆ 5:20 (ಪ್ರಾರಂಭ)
ಧಾರವಾಡ: ಬೆಳಿಗ್ಗೆ 7:08
ಹುಬ್ಬಳ್ಳಿ: ಬೆಳಿಗ್ಗೆ 7:30
ಹಾವೇರಿ: ಬೆಳಿಗ್ಗೆ 8:35
ದಾವಣಗೆರೆ: ಬೆಳಿಗ್ಗೆ 9:25
ತುಮಕೂರು: ಮಧ್ಯಾಹ್ನ 12:15
ಯಶವಂತಪುರ: ಮಧ್ಯಾಹ್ನ 1:03
ಬೆಂಗಳೂರು (ಕೆಎಸ್‌ಆರ್): ಮಧ್ಯಾಹ್ನ 1:50 (ಮುಕ್ತಾಯ)
ಬೆಂಗಳೂರು – ಬೆಳಗಾವಿ ವಂದೇ ಭಾರತ್ ರೈಲಿನ ವೇಳಾಪಟ್ಟಿ (SBC to BEL):
ಬೆಂಗಳೂರು (ಕೆಎಸ್‌ಆರ್):ಮಧ್ಯಾಹ್ನ 2:20 (ಪ್ರಾರಂಭ)
ಯಶವಂತಪುರ: ಮಧ್ಯಾಹ್ನ 2:28
ತುಮಕೂರು : ಮಧ್ಯಾಹ್ನ 3:03
ದಾವಣಗೆರೆ: ಸಂಜೆ 5:48
ಹಾವೇರಿ ::ಸಂಜೆ 6:48
ಹುಬ್ಬಳ್ಳಿ: ರಾತ್ರಿ 8:00
ಧಾರವಾಡ: ರಾತ್ರಿ 8:25
ಬೆಳಗಾವಿ :ರಾತ್ರಿ 10:40 (ಮುಕ್ತಾಯ)
ಪ್ರಯಾಣ ದರ ಕೆಳಗಿನಂತಿವೆ:
ಈ ಹೊಸ ಮಾರ್ಗದಲ್ಲಿ ಚೇರ್‌ಕಾರ್ (CC) ಹಾಗೂ ಎಕ್ಸಿಕ್ಯೂಟಿವ್ ಚೇರ್‌ಕಾರ್ (EC) ದರ್ಜೆಯ ಪ್ರಯಾಣಿಕರಿಗೆ ಯೋಗ್ಯ ದರಗಳಲ್ಲಿ ಟಿಕೆಟ್ ಲಭ್ಯವಿದೆ. ಹಳೆ ವಂದೇ ಭಾರತ್ ಸೇವೆಗಳ ಜೊತೆ ಹೋಲಿಸಿದರೆ ದರಗಳು ಸಾಕಷ್ಟು ಕಡಿಮೆ ಇದೆ.
ಬೆಂಗಳೂರು – ಬೆಳಗಾವಿ: 1118ರೂ(ಚೇರ್‌ಕಾರ್(ಸಿಸಿ)) . 2279ರೂ(ಎಕ್ಸಿಕ್ಯೂಟಿವ್ ಚೇರ್‌ಕಾರ್ (ಇಸಿ))
ಬೆಂಗಳೂರು – ಧಾರವಾಡ : 914 0.ರೂ(ಚೇರ್‌ಕಾರ್(ಸಿಸಿ)) 1863 .ರೂ(ಎಕ್ಸಿಕ್ಯೂಟಿವ್ ಚೇರ್‌ಕಾರ್ (ಇಸಿ))
ಬೆಂಗಳೂರು – ಹುಬ್ಬಳ್ಳಿ : 885 ರೂ.(ಚೇರ್‌ಕಾರ್(ಸಿಸಿ)) 1802 .ರೂ(ಎಕ್ಸಿಕ್ಯೂಟಿವ್ ಚೇರ್‌ಕಾರ್ (ಇಸಿ))
ಬೆಂಗಳೂರು – ಹಾವೇರಿ : 778 .ರೂ(ಚೇರ್‌ಕಾರ್(ಸಿಸಿ)) 1588 .ರೂ(ಎಕ್ಸಿಕ್ಯೂಟಿವ್ ಚೇರ್‌ಕಾರ್ (ಇಸಿ))
ಬೆಂಗಳೂರು – ದಾವಣಗೆರೆ : 676 .ರೂ(ಚೇರ್‌ಕಾರ್(ಸಿಸಿ)) 1379 .ರೂ(ಎಕ್ಸಿಕ್ಯೂಟಿವ್ ಚೇರ್‌ಕಾರ್ (ಇಸಿ))
ಬೆಂಗಳೂರು – ತುಮಕೂರು : 298 .ರೂ(ಚೇರ್‌ಕಾರ್(ಸಿಸಿ)) 615 .ರೂ(ಎಕ್ಸಿಕ್ಯೂಟಿವ್ ಚೇರ್‌ಕಾರ್ (ಇಸಿ))
ಬೆಂಗಳೂರು – ಯಶವಂತಪುರ: 242 .ರೂ(ಚೇರ್‌ಕಾರ್(ಸಿಸಿ)) 503 .ರೂ(ಎಕ್ಸಿಕ್ಯೂಟಿವ್ ಚೇರ್‌ಕಾರ್ (ಇಸಿ))
ದಾವಣಗೆರೆ – ಹುಬ್ಬಳ್ಳಿ ನಡುವೆ ಸೂಕ್ತ ದರದ ಪ್ರಯಾಣ:
ಈ ಹೊಸ ರೈಲಿನಲ್ಲಿ ದಾವಣಗೆರೆ ಅಥವಾ ಹುಬ್ಬಳ್ಳಿ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಈ ಮಾರ್ಗ ಬಹುತೇಕ ಅಗ್ಗದ ಆಯ್ಕೆಯಾಗಲಿದೆ. ಉದಾಹರಣೆಗೆ, ಬೆಂಗಳೂರು – ದಾವಣಗೆರೆ ಮಾರ್ಗದ ಚೇರ್‌ಕಾರ್ ಟಿಕೆಟ್(Chaircar ticket) ಕೇವಲ ₹676. ಇತರೆ ವಂದೇ ಭಾರತ್ ರೈಲುಗಳ ಹೋಲಿಕೆಗೆ ಬಂದ್ರೆ, ಇದೊಂದು ಶ್ರೇಷ್ಠ ಆಯ್ಕೆಯಾಗಿದೆ. ಈಗಾಗಲೇ ಸಂಚರಿಸುತ್ತಿರುವ ಬೆಂಗಳೂರು – ಹುಬ್ಬಳ್ಳಿ ವಂದೇ ಭಾರತ್ ರೈಲಿನಲ್ಲಿ ಇದೇ ಮಾರ್ಗಕ್ಕೆ ಟಿಕೆಟ್ ದರ ₹1000 ಕ್ಕೂ ಮೇಲಿದೆ.
ಗಮನಿಸಿ:
ವಂದೇ ಭಾರತ್ ರೈಲು ಪ್ರಯಾಣಕ್ಕೆ 15 ನಿಮಿಷಗಳ ಹಿಂದೆ ಟಿಕೆಟ್ ಬುಕ್ಕಿಂಗ್ ಸಾಧ್ಯವಿದೆ.
ಹೊಸ ವಂದೇ ಭಾರತ್ ಸೇವೆಯು ಕನ್ನಡನಾಡಿನಲ್ಲಿ ವ್ಯಾಪಕ ಸ್ಪಂದನೆ ಪಡೆದುಕೊಂಡಿದ್ದು, ಪ್ರಯಾಣಿಕರಿಗೆ ಸಮಯ ಹಾಗೂ ಹಣದ ಉಳಿತಾಯದೊಂದಿಗೆ ಹೊಸ ಅನುಭವ ನೀಡಲಿದೆ.
ಒಟ್ಟಾರೆಯಾಗಿ, ಬೆಂಗಳೂರು – ಬೆಳಗಾವಿ ವಂದೇ ಭಾರತ್ ರೈಲು ರಾಜ್ಯದ ಪ್ರಮುಖ ಭಾಗಗಳನ್ನು ಸಂಪರ್ಕಿಸುವ ವೇಗದ, ಆರಾಮದಾಯಕ ಮತ್ತು ಕೈಗೆಟುಕುವ ರೈಲು ಸೇವೆಯಾಗಿದ್ದು, ವಿಶೇಷವಾಗಿ ಮಧ್ಯಮ ದೂರದ ಪ್ರಯಾಣಿಕರಿಗೆ ಅಗ್ಗದ ದರದಲ್ಲಿ ಅತ್ಯುತ್ತಮ ಆಯ್ಕೆ. ಪ್ರಯಾಣದ ವೇಗವಷ್ಟೇ ಅಲ್ಲ, ಸಮಯ ಪ್ರಜ್ಞೆಯೂ ಈ ರೈಲಿನ ಪ್ರಮುಖ ಲಕ್ಷಣವಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.