Bajaj CNG : ಬಜಾಜ್‌ನಿಂದ ಭರ್ಜರಿ ಎಂಟ್ರಿ ಕೊಡಲಿದೆ ಸಿಎನ್‌ಜಿ ಬೈಕ್! ಮೈಲೇಜ್ ಎಷ್ಟು & ಬೆಲೆ ಎಷ್ಟು ಗೊತ್ತಾ ?

bajaj cng bike

ಬಜಾಜ್ (bajaj) ನಿಂದ ‘ಪ್ಲಾಟಿನಾ’ (platina) ಎಂಬ ಹೆಸರಿನೊಂದಿಗೆ ವಿಶ್ವದ ಮೊದಲ ಸಿಎನ್‌ಜಿ ಬೈಕ್ (CNG bike) ಬಿಡುಗಡೆ.

ಉತ್ತಮವಾದ ಮೈಲೇಜ್ (mileage) ನೀಡುವಂತಹ ದ್ವಿಚಕ್ರ ವಾಹನಗಳನ್ನು ಖರೀದಿಸಬೇಕೆಂಬ ಆಸೆ ಎಲ್ಲಾರಿಗೂ  ಇರುತ್ತದೆ. ಅದರಲ್ಲೂ ಇಂದು ಯುವಕರು ದ್ವಿಚಕ್ರ ವಾಹನಗಳ (Two wheeler vehicles) ಹುಡುಕಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ದ್ವಿಚಕ್ರ ವಾಹನಗಳಲ್ಲಿ ಅದರಲ್ಲೂ ಬೈಕ್ ಮೇಲೆ ಹೆಚ್ಚು ವ್ಯಾಮೋಹವನ್ನು ಇಟ್ಟುಕೊಂಡಿರುವ ಈಗಿನ ಕಾಲದ ಯುವಕರು ಹೆಚ್ಚು ಮೈಲೇಜ್ ನೀಡುವ ಹಾಗೂ ಉತ್ತಮವಾದ ಬೈಕ್ ಗಳನ್ನು ಖರೀದಿಸಲು ಕಾಯುತ್ತಿರುತ್ತಾರೆ. ಬಜಾಜ್ ತನ್ನ ಗ್ರಾಹಕರಿಗಾಗಿ ಒಂದೊಳ್ಳೆ ಉತ್ತಮ ಆಯ್ಕೆಯನ್ನು ನೀಡಿದೆ.

ಹೌದು, ದೇಶದಾದ್ಯಂತ ಸ್ಕೂಟರ್ ಹಾಗೂ ಬೈಕ್ ಗಳ ಮಾರಾಟದಲ್ಲಿ ಪ್ರಖ್ಯಾತಿಯನ್ನು ಹೊಂದಿರುವ ಬಜಾಜ್ ಪ್ರಪಂಚದಲ್ಲೇ ಮೊಟ್ಟ ಮೊದಲ ಬಾರಿಗೆ ಸಿ ಎನ್ ಜಿ ಚಾಲಿತ ಮೋಟರ್ ಸೈಕಲ್ (CNG motor cycle) ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಭಾರತದಲ್ಲೇ ದ್ವಿಚಕ್ರ ವಾಹನ ಮಾರಾಟದಲ್ಲಿ ಹಾಗೂ ತಯಾರಿಕೆಯಲ್ಲಿ ಹೆಚ್ಚು ಪ್ರಚಲಿತವಾಗಿ ಕೇಳಿಬರುವ ಕಂಪನಿ ಬಜಾಜ್. ಇದೀಗ ಈ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಹಾಗೂ ಮಾರಾಟದಲ್ಲಿ ಹೊಸ ಕ್ರಾಂತಿಗೆ ಮುಂದಾಗಿರುವ ಬಜಾಜ್ ಶೀಘ್ರದಲ್ಲೇ ವಿಶ್ವದ ಮೊದಲ ಸಿಎನ್‌ಜಿ (gas ) ಚಾಲಿತ ಮೋಟಾರ್‌ಸೈಕಲ್ (ಬೈಕ್ ) ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸಿಎನ್‌ಜಿ ಬೈಕ್ ಯಾವಾಗ ಬಿಡುಗಡೆಯಾಗುತ್ತದೆ? ಇದರ ಬೆಲೆ ಎಷ್ಟು? ಈ ಬೈಕ್ ಎಷ್ಟು ಮೈಲೇಜ್ ಕೊಡುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

bajaj cng bike 1
ಬಿಡುಗಡೆ ಯಾವಾಗ?:

ಇತ್ತೀಚಿಗೆ ಬಜಾಜ್ ನೂತನ’ ಪಲ್ಸರ್ ಎನ್ ಎಸ್ 400ಝಡ್ (pulsar NS 400 Z) ಬಿಡುಗಡೆ ಕಾರ್ಯಕ್ರಮವನ್ನು ಶುಕ್ರವಾರದಂದು ಪುಣೆಯಲ್ಲಿ ಆಯೋಜಿಸಿತ್ತು. ಈ ಸಮಾರಂಭದಲ್ಲಿ ಮಾತನಾಡಿದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ರಾಜೀವ್ ಬಜಾಜ್ (Rajiv Bajaj) ವಿಶ್ವದ ಮೊದಲ ಸಿಎನ್‌ಜಿ ಬೈಕ್‌ ಅನ್ನು ಜುಲೈ 18, 2024ರಂದು ಲಾಂಚ್ ಮಾಡುವುದಾಗಿ ಘೋಷಣೆ ಮಾಡಿದರು. ಆದರೆ ಈ  ಸಿಎನ್‌ಜಿ ಬೈಕ್ ಬಜಾಜ್ ಬ್ರಾಂಡ್ ಅಡಿಯಲ್ಲಿ ಬಿಡುಗಡೆಗೊಳ್ಳುತ್ತಿಲ್ಲ, ಬದಲಾಗಿ ಬಜಾಜ್ ಸಬ್ ಬ್ರಾಂಡ್ ಅಡಿಯಲ್ಲಿ ಮಾರುಕಟ್ಟೆಗೆ ತರಲಾಗುತ್ತದೆ ಎಂದು ತಿಳಿಸಿದರು.

ಬೈಕ್ ನ ಬೆಲೆ ಎಷ್ಟು (price) ?

ಉತ್ತಮ ಮೈಲೇಜ್ ಬೈಕ್ ಗಳ ಖರೀದಿಗೆ ಮುಂದಾಗಿರುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಬಜಾಜ್  ಸಿಎನ್ ಜಿ ಬೈಕ್ ವಿನ್ಯಾಸ ಮಾಡಲಾಗಿದೆ. ಹೆಚ್ಚು ಜನರು ದ್ವಿಚಕ್ರ ವಾಹನಗಳ ನಿರ್ವಹಣೆಗೆ ಮಾಡುತ್ತಿರುವ ಖರ್ಚುಗಳನ್ನು ಕಡಿತ ಗೊಳಿಸುವ ಉದ್ದೇಶದಿಂದ  ಬಜಾಜ್ ಹೊಸ ಕ್ರಾಂತಿಗೆ ಮುಂದಾಗಿದೆ. ಡ್ಯುಯಲ್ ಇಂಧನ ತಂತ್ರಜ್ಞಾನದಿಂದಾಗಿ (dual engine technology) ಇಂಧನ ಟ್ಯಾಂಕ್ ವಿನ್ಯಾಸಗೊಳಿಸಿರುವ ಕಾರಣ, ಸಿಎನ್ ಜಿ ಬೈಕ್ ನ ಬೆಲೆ ಪೆಟ್ರೋಲ್ ಮೋಟಾರ್‌ಸೈಕಲ್‌ಗಳಿಗಿಂತ ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇದೆ. ವಿಶೇಷವಾಗಿ ಈ ಬೈಕ್ ನಲ್ಲಿ CNG ಮತ್ತು ಪೆಟ್ರೋಲ್ ಇಂಧನ ಆಯ್ಕೆಗಳನ್ನು ಒದಗಿಸಲಾಗಿದೆ. ಮಾಹಿತಿಗಳ ಪ್ರಕಾರ ಬೈಕ್ ನ ಆರಂಭಿಕ ಬೆಲೆ ₹80,000ಯಿಂದ ಶುರುವಾಗುತ್ತದೆ.

ಶೀಘ್ರದಲ್ಲೇ ಬಿಡುಗಡೆಗೊಳ್ಳುತ್ತಿರುವ ಸಿಎನ್ ಜಿ ಬೈಕ್‌ಗೆ ‘ಪ್ಲಾಟಿನಾ’ ಎಂಬ ಹೆಸರನ್ನು ಇಡಬಹುದು. ಸಿಎನ್‌ಜಿ ಮೋಟಾರ್‌ಸೈಕಲ್‌ ಫ್ಯುಯೆಲ್ (ಇಂಧನ) ಟ್ಯಾಂಕ್ ವಿನ್ಯಾಸ ವಿಭಿನ್ನ ರೀತಿಯಿಂದ ಹಾಗೂ ಗ್ರಾಹಕರನ್ನು ಆಕರ್ಷಿಸುವಂತೆ  ಟ್ಯಾಂಕ್ ವಿನ್ಯಾಸ ಗೊಳ್ಳುತ್ತಿರುವ ಕಾರಣ ಇದರ ತಯಾರಿಕೆಯ ವೆಚ್ಚ  ಸ್ವಲ್ಪಮಟ್ಟಿಗೆ ಹೆಚ್ಚಾಗಬಹುದು.

ಗ್ರಾಹಕರು ಸಿಎನ್‌ಜಿ ಚಾಲಿತ ತ್ರಿಚಕ್ರ ವಾಹನದ (CNG three wheeler vehicle) ಮಾರುಕಟ್ಟೆಯಲ್ಲಿ ಭಾರೀ ಯಶಸ್ಸನ್ನು ತಂದುಕೊಟ್ಟಿದ್ದರು. ಇದೇ ರೀತಿಯ ಯಶಸ್ಸನ್ನು ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿಯೂ ತಂದುಕೊಡುತ್ತಾರೆ ಎಂಬ ನಿರೀಕ್ಷೆಯನ್ನು ಬಜಾಜ್ ಆಟೋ (Bajaj Auto) ಇಟ್ಟುಕೊಂಡಿದೆ. ಆದ್ದರಿಂದ  ವಿಶ್ವದ ಮೊದಲ ಸಿಎನ್‌ಜಿ ಮೋಟಾರ್‌ಸೈಕಲ್‌ನ್ನು ಅನ್ನು ಜುಲೈ 18, 2024ರಂದು ಲಾಂಚ್ ಮಾಡುವುದಾಗಿ ಘೋಷಣೆ ಮಾಡಿದೆ.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿ

ಈ ಮಾಹಿತಿಗಳನ್ನು ಓದಿ


WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!