ಇದೀಗ ಸಿಹಿ ಸುದ್ದಿಯೊಂದು ತಿಳಿದು ಬಂದಿದೆ. ಹೌದು, ಭಾರತದಲ್ಲಿ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆಯು ( Ayushman Bharath Health Scheme ) ಬಹಳಷ್ಟು ಜನರಿಗೆ ಉತ್ತಮ ರೀತಿಯಿಂದ ಸಹಾಯವಾಗಿದೆ. ನಾವು ಆಯುಷ್ಮಾನ್ ಭಾರತ್ ಕಾರ್ಡ್ ಅನ್ನು ಪಡೆಯಲು ಅರ್ಜಿ ಸಲ್ಲಿಸಬೇಕಾಗಿತ್ತು, ಹಾಗೆಯೇ ಸಂಬಂಧ ಪಟ್ಟ ಇಲಾಖೆಗೆ ಭೇಟಿ ನೀಡಿ ಆಯುಷ್ಮಾನ್ ಕಾರ್ಡ್ ಗಳನ್ನು ( Ayushman Card ) ಪಡೆಯಬೇಕಿತ್ತು. ಆದರೆ ಅದು ಈಗ ಇನ್ನೂ ಸುಲಭವಾಗಿದೆ. ಅದೇನೆಂದು ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸ್ಮಾರ್ಟ್ ಫೋನ್ ನಲ್ಲಿ ಆಯುಷ್ಮಾನ್ ಕಾರ್ಡ್ :
ಹೌದು, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ್ ಮಂತ್ರಿ ಭಾರತ್ ಆಯುಷ್ಮಾನ್ ಕಾರ್ಡ್‍ಗಳನ್ನು ಪಡೆಯಲು ಸಾರ್ವಜನಿಕರು ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್(BPL and APL card) ಮತ್ತು ಆಧಾರ್ ಕಾರ್ಡ್(Aadhar card) ನೊಂದಿಗೆ ತಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿಯೇ ನೋಂದಣಿ ಮಾಡಿಕೊಂಡು ಆಯುಷ್ಮಾನ್ ಕಾರ್ಡ್ ಗಳನ್ನು ಪಡೆದುಕೊಳ್ಳಬಹುದು.

ಈ ಆಯುಷ್ಮಾನ್ ಕಾರ್ಡ್ ನಿಂದ ದೊರೆಯುವ ಸೌಲಭ್ಯಗಳು ( Facilities ) :
ಈ ಕಾರ್ಡ್‍ಗಳಿಂದ 1650 ವಿವಿಧ ಶಸ್ತ್ರಚಿಕಿತ್ಸಾ ವಿಧಾನಗಳಿಗೆ ಸಂಬಂಧಿಸಿದಂತೆ ಬಿಪಿಎಲ್ ( BPL ) ಕುಟುಂಬಗಳಿಗೆ ವಾರ್ಷಿಕ 5 ಲಕ್ಷದವರೆಗೆ ಹಾಗೂ ಎಪಿಎಲ್ ಕುಟುಂಬಗಳಿಗೆ ವಾರ್ಷಿಕ 1.5 ಲಕ್ಷದವರೆಗೆ ಸರ್ಕಾರಿ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸಾ ವೆಚ್ಚ ಸೌಲಭ್ಯ ಪಡೆದುಕೊಳ್ಳಬಹುದು.
ಆಯುಷ್ಮಾನ್ ಕಾರ್ಡ್ ಅನ್ನು ಪಡೆಯಲು ನೋಂದಣಿ ಮಾಡಿಕೊಳ್ಳುವ ವಿಧಾನ ( Steps of Application ):
ಹಂತ 1: ಆಂಡ್ರಾಯ್ಡ್ ಮೊಬೈಲ್ ಫೋನ್ ನ ಗೂಗಲ್ ವೆಬ್‍ಸೈಟ್‍ನಲ್ಲಿ https://abdm.gov. in ಎಂದು ಟೈಪ್ ಮಾಡಬೇಕು.
ಹಂತ 2: ನಂತರ ಪಿ.ಎಮ್.ಜೆ.ವೈ ಬೆನಿಫಿಸಿರಿ ಪೋರ್ಟಲ್ ಕಾಣಿಸಿಕೊಳ್ಳುತ್ತದೆ.
ಹಂತ 3: ನಂತರ ಪೋರ್ಟಲ್ ಅನ್ನು ತೆರೆದಾಗ ಲಾಗಿನ್ ಆಸ್ ಎಂದು ಮಾಹಿತಿ ಕೇಳುವ ಹಂತದಲ್ಲಿ ಬೆನ್‍ಫಿಸಿರಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು.
ಹಂತ 4: ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಒಟಿಪಿ ಮುಖಾಂತರ ಲಾಗಿನ್ ಮಾಡಿಕೊಳ್ಳಬೇಕು.
ಹಂತ 5: ಒಟಿಪಿ ನೊಂದಾಯಿಸಿ ಸಬ್‍ಮಿಟ್ ಮಾಡಿದ ನಂತರ ಪಿ.ಎಮ್.ಜೆ.ವೈ ( PMJY ) ಪೊರ್ಟಲ್ ಒಪನ್ ಆಗುತ್ತದೆ.
ಹಂತ 6: ನಂತರ ಇಲ್ಲಿ ಸಾರ್ವಜನಿಕರು ತಮ್ಮ ರಾಜ್ಯ ಎಂಬಲ್ಲಿ ಕರ್ನಾಟಕ, ಜಿಲ್ಲೆ ಎನ್ನುವಲ್ಲಿ ತಮ್ಮ ಮೂಲ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಕ್ಲೈಮ್‍ಟೈಪ್ ( Claim Type ) ಎನ್ನುವಲ್ಲಿ ಕುಟುಂಬ ಎಂದು ಆಯ್ಕೆ ಮಾಡಿಕೊಂಡು ಆಧಾರ್ ಸಂಖ್ಯೆ ನಮೂದಿಸಿ ಸರ್ಚ್ ಮಾಡಬೇಕು.
ಹಂತ 7 : ಈಗಾಗಲೇ ಎಬಿ.ಪಿ.ಎಮ್.ಜೆ.ವೈ-ಸಿಎಮ್ ಆರೋಗ್ಯ ಕರ್ನಾಟಕ ಕಾರ್ಡ್ ಅನ್ನು ಬೇರೆ ಯಾವುದಾದರೂ ಯೋಜನೆಗೆ ನೋಂದಣಿ (ಇ-ಕೆವೈಸಿ) ಲಿಂಕ್ ಮಾಡಿಕೊಂಡಿದ್ದರೆ ನೇರವಾಗಿ ಪೊರ್ಟಲ್‍ನಲ್ಲಿ ಕಾರ್ಡ್ ಜನರೇಷನ್ ವೆರಿಪೈ ಎಂದು ಕಂಡು ಬರುತ್ತದೆ.
ಹಂತ 8 : ಒಂದು ವೇಳೆ ಬೇರೆ ಯಾವುದಾದರು ಯೋಜನೆಗೆ ಕಾರ್ಡ್ ಅನ್ನು ನೋಂದಣಿ ಮಾಡದೇ ಇದ್ದರೆ (ನಿಮ್ಮ ಇ-ಕೆವೈಸಿ ಹೊಂದಿಲ್ಲದಿದ್ದರೆ) ಆಧಾರ್ ಒಟಿಪಿ ಮುಖಾಂತರ ಇ-ಕೆವೈಸಿ ( KYC ) ಮಾಡಿಕೊಂಡು ಆಯುಷ್ಮಾನ್ ಕಾರ್ಡ್ ಅನ್ನು ಪಡೆಯಬಹುದಾಗಿದೆ.
ವಿಶೇಷ ಸೂಚನೆಗಳು ( Important Notice ) :
ಅತೀ ಮುಖ್ಯವಾಗಿ ಆಯುಷ್ಮಾನ್ ಕಾರ್ಡ್ ಅನ್ನು ಪಡೆಯಲು ಪ್ರತಿ ಕುಟುಂಬದ ಎಪಿಎಲ್ ಅಥವಾ ಬಿಪಿಎಲ್ ರೇಷನ್ ಕಾರ್ಡ್(Ration card) ತಪ್ಪದೇ ಹೊಂದಿರಬೇಕು. ಹಾಗೆಯೇ ರೇಷನ್ ಕಾರ್ಡ್‍ಗಳಿಗೆ ಆಧಾರ್ ಸಂಖ್ಯೆ ಜೋಡಣೆಯಾಗಿರಬೇಕು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group





