ʻAPL-BPLʼ ಕಾರ್ಡ್ ಇದ್ದವರಿಗೆ ಇನ್ನು ಮುಂದೆ ʻಆರೋಗ್ಯ ಕಾರ್ಡ್ʼನಡಿ ದೇಶಾದ್ಯಂತ ಚಿಕಿತ್ಸೆಗೆ ಅವಕಾಶ – ಸಿ ಎಂ ಸಿದ್ದರಾಮಯ್ಯ

Ayushman bharat card

WhatsApp Group Telegram Group

ಇದೀಗ ಎಲ್ಲರಿಗೂ ಹೊಸ ಸುದ್ದಿ ತಿಳಿದು ಬಂದಿದೆ. ಅದೇನೆಂದರೆ, ಆರೋಗ್ಯ ಇಲಾಖೆಯು ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ ಗಳನ್ನು ಬದಲಾವಣೆ ಮಾಡಿ ಅವುಗಳಿಗೆ ಹೊಸ ರೂಪ ನೀಡುತ್ತಿದೆ. ಆ ಬದಲಾವಣೆಗೊಂಡ ಹೆಲ್ತ್ ಕಾರ್ಡ್‌ಗಳನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಬಿಡುಗಡೆಗೊಳಿಸಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಆಯುಷ್ಮಾನ್ ಭಾರತ ಕಾರ್ಡ್ ಗೆ ಹೊಸ ಹೆಸರು :

ಆಯುಷ್ಮಾನ್ ಭಾರತ್ ಕಾರ್ಡ್ ನಲ್ಲಿ ಹಲವಾರು ಬದಲಾವಣೆ ಮಾಡಿ ಇದೀಗ ಆಯುಷ್ಮಾನ್ ಭಾರತ್ (Ayushman Bharat) ಆರೋಗ್ಯ ಕರ್ನಾಟಕದ ಹೆಲ್ತ್ ಕಾರ್ಡ್ ಗಳನ್ನ, ಆಯುಷ್ಮಾನ್‌ ಭಾರತ್ – ಪ್ರಧಾನ ಮಂತ್ರಿ ಜನಾರೋಗ್ಯ –ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ” ಎಂದು ಹೆಸರು ಇಡಲಾಗಿದೆ. ರಾಜ್ಯದ 5.9 ಕೋಟಿ ಜನರಿಗೆ ಹೆಲ್ತ್ ಕಾರ್ಡ್‌ಗಳನ್ನು ವಿತರಿಸುವ ಗುರಿಯನ್ನ ಆರೋಗ್ಯ ಇಲಾಖೆ ಹೊಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದ್ದಾರೆ.

ನೂತನ ಕಾರ್ಡ್ ಗೆ ಚಾಲನೆ ನೀಡಿದ ಸಿಎಂ :

ಆಯುಷ್ಮಾನ್‌ ಭಾರತ್ – ಪ್ರಧಾನ ಮಂತ್ರಿ ಜನಾರೋಗ್ಯ –ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ನೂತನ ಕಾರ್ಡ್ ಗಳನ್ನ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿ. ರಾಜ್ಯದಲ್ಲಿರುವ ಒಟ್ಟು5.09 ಕೋಟಿ ಫಲಾನುಭವಿಗಳಿಗೆ ಮುಂದಿನ 6 ತಿಂಗಳ ಒಳಗಾಗಿ ಆಯುಷ್ಮಾನ್‌ ಭಾರತ್ – ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಕಾರ್ಡ್‌ ಸೃಜನೆ ಮತ್ತು ವಿತರಣಾ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಒಂದು ಯೋಜನೆಯ ಮುಖ್ಯ ಉದ್ದೇಶ :

ರಾಜ್ಯದ ಪ್ರತಿಯೊಬ್ಬ ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ಹಾಗೂ ಚಿಕಿತ್ಸೆಗಳು ಬಹಳ ಸುಲಭವಾಗಿ ದೊರೆಯಬೇಕು. ಹಾಗೆಯೇ ಅವರು ಸರ್ಕಾರದ ಈ ಒಂದು ಉತ್ತಮ ಸೇವೆಯನ್ನು ಪಡೆಯಬೇಕು. ಹಾಗೂ ರಾಜ್ಯದ ಬಿಪಿಎಲ್ ಕಾರ್ಡ್ ಹೊಂದಿರುವವರು ಈ ಒಂದು ಹೊಸ ಬದಲಾವಣೆ ಆದ ಕಾರ್ಡ್ ಮುಖಾಂತರ ಇತರೆ ರಾಜ್ಯಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಈ ಒಂದು ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ನ್ಯಾಷನಲ್ ಪೊರ್ಟಲ್ ಗೆ ನೂತನ ಹೆಲ್ತ್ ಕಾರ್ಡ್ ಗಳನ್ನ ಜೋಡಿಸಲಾಗಿದೆ.

ಬಿಪಿಎಲ್ ಕಾರ್ಡ್ ದಾರರಿಗೆ 5 ಲಕ್ಷ ಮೌಲ್ಯದ ಚಿಕಿತ್ಸೆ :

ಈಗ ಈ ಯೋಜನೆಯು ರಾಜ್ಯ ಸರ್ಕಾರ(State government)ದಲ್ಲಿ 66% ರಷ್ಟು ಅನುದಾನ ಇದೆ. ಹಾಗೆಯೇ ಕೇಂದ್ರ ಸರ್ಕಾರದಲ್ಲಿ 34% ಅನುದಾನ ಇದೆ. ಮತ್ತು ಈ ಯೋಜನೆಯಡಿಯಲ್ಲಿ ಬಿಪಿಎಲ್‌ ಪಡಿತರ(BPL cards) ಚೀಟಿ ಹೊಂದಿರುವ ಬಡ ಕುಟುಂಬಗಳು ವಾರ್ಷಿಕ 5 ಲಕ್ಷ ಮೌಲ್ಯದ ಚಿಕಿತ್ಸೆಯನ್ನು ಕುಟುಂಬದ ಒಬ್ಬರು ಅಥವಾ ಹಲವರು ( Family Floater ) ಆಧಾರದ ಮೇಲೆ ಬಳಸಿಕೊಳ್ಳಬಹುದು ಎಂದು ತಿಳಿದು ಬಂದಿದೆ.

ಎಪಿಎಲ್ ಕಾರ್ಡ್ ದಾರರಿಗೂ ಅವಕಾಶ :

ಕರ್ಣಾಟಕ ರಾಜ್ಯ ಎಪಿಎಲ್‌ ಕಾರ್ಡ್(APL ration card) ಹೊಂದಿದವರಿಗೂ ಈ ಒಂದು ಯೋಜನೆಯಲ್ಲಿ ಅವಕಾಶ ಕಲ್ಪಿಸಿದೆ. ಎಪಿಎಲ್‌ ಕುಟುಂಬಗಳಿಗೆ 5 ಲಕ್ಷದ ಮೌಲ್ಯದ ಚಿಕಿತ್ಸೆಯಲ್ಲಿ ಗರಿಷ್ಠ ರೂ.1.5 ಲಕ್ಷ ವೆಚ್ಚವನ್ನ ರಾಜ್ಯ ಸರ್ಕಾರ ಪಾವತಿಸಲಿದೆ ಎಂದು ತಿಳಿದು ಬಂದಿದೆ. ಎಪಿಎಲ್ ಕಾರ್ಡ್‌ದಾರರು 70% ರಷ್ಟು ಚಿಕಿತ್ಸಾ ವೆಚ್ಚವನ್ನ ಪಾವತಿಸಿದರೆ 30% ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ತಿಳಿಸಿದ್ದಾರೆ.

ಉಚಿತ co barnaded ಗುರುತಿನ ಚೀಟಿ :

ಈ ಒಂದು ಆಯುಷ್ಮಾನ್‌ ಭಾರತ್‌ – ಪ್ರಧಾನ ಮಂತ್ರಿ ಜನಾರೋಗ್ಯ ಯೋಜನಾ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯ Co-branded ಗುರುತಿನ ಚೀಟಿಗಳಾಗಿದೆ. ಹಾಗೆಯೇ ಈ Co-branded ಗುರುತಿನ ಚೀಟಿಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸದ್ದಾರೆ.

ಹಾಗೆಯೇ ಈ ಗುರುತಿನ ಚೀಟಿಗಳನ್ನು ರಾಷ್ಟ್ರೀಯ ಆರೋಗ್ಯ ID (ABHA ID) ಯೊಂದಿಗೆ ವಿನಿಮಯ ಮಾಡಲಾಗುತ್ತದೆ. ಮತ್ತು ಈ ಚೀಟಿಗಳ ಮೂಲಕ ಫಲಾನುಭವಿಗಳ ವ್ಯೆದ್ಯಕೀಯ ದಾಖಲೆಗಳನ್ನು ಸಂರಕ್ಷಿಸಿ ಸುಲಭ ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡಲು ಉತ್ತಮ co branded ಗುರುತಿನ ಚೀಟಿ ಯಾಗಿ ಕಾರ್ಯ ನಿರ್ವಹಿಸುತ್ತದೆ.

ಹಾಗೆಯೇ ಇನ್ನೊಂದು ಮುಖ್ಯ ವಿಷಯ ಎಂದರೆ, ನಿಮ್ಮ ಹತ್ತಿರದ ಗ್ರಾಮ-1(Grama one) ಕೇಂದ್ರಗಳು ಅಥವಾ ನಾಗರೀಕ ಸೇವಾ “ಆಯುಷ್ಮಾನ್‌ ಭಾರತ್ – ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ” ಗುರುತಿನ ಚೀಟಿಗಳನ್ನು ಸುಲಭವಾಗಿ ನೊಂದಾಯಿಸಿ ಪಡೆಯಲು ಅವಕಾಶ ಇರುತ್ತದೆ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download


Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Editor in Chief

Editor in Chief

Lingaraj Ramapur BCA, MCA, MA ( Journalism );as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.

Leave a Reply

Your email address will not be published. Required fields are marked *

error: Content is protected !!