ರಾಜ್ಯ ಸರ್ಕಾರ ರೈತರಿಗಾಗಿ ಇನ್ನೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಇದರಿಂದ ಸಾವಿರಾರು ರೈತ ಕುಟುಂಬಗಳು ನೇರವಾಗಿ ಲಾಭ ಪಡೆಯಲಿವೆ. ಸಾಮಾನ್ಯವಾಗಿ ಜಮೀನು ಮಾಲೀಕರು ಮೃತರಾದ ನಂತರ, ಅವರ ವಾರಸುದಾರರ ಹೆಸರಿಗೆ ಭೂಮಿಯನ್ನು ವರ್ಗಾಯಿಸಲು ರೈತರು ಸಂಬಂಧಿತ ಕಚೇರಿಗಳಿಗೆ ಅನೇಕ ಬಾರಿ ಓಡಾಡಬೇಕಾಗುತ್ತಿತ್ತು. ಅರ್ಜಿ ಸಲ್ಲಿಕೆ, ದಾಖಲೆ ಸಾಬೀತು, ತಪಾಸಣೆ ಪ್ರಕ್ರಿಯೆಗಳು ದೀರ್ಘಕಾಲ ತೆಗೆದುಕೊಳ್ಳುತ್ತಿದ್ದವು. ಇದರಿಂದ ಪಿಎಂ ಕಿಸಾನ್, ಹನಿ ನೀರಾವರಿ, ಯಂತ್ರೋಪಕರಣಗಳ ಸಬ್ಸಿಡಿ ಮೊದಲಾದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಗಳಿಂದ ರೈತರು ವಂಚಿತರಾಗುತ್ತಿದ್ದರು. ಇಂತಹ ಪರಿಸ್ಥಿತಿಗೆ ತೆರೆ ಎಳೆಯಲು ಕಂದಾಯ ಸಚಿವ ಕೃಷ್ಣಬೈರೇಗೌಡ(Revenue Minister Krishnabaire Gowda) ಅವರ ನೇತೃತ್ವದಲ್ಲಿ ಮಹತ್ವದ ಅಭಿಯಾನ ಆರಂಭವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಅಭಿಯಾನ ಮಾದರಿಯಲ್ಲಿ ಪೌತಿ ಖಾತೆ:
ರಾಜ್ಯದಲ್ಲಿ ಸದ್ಯ ಸುಮಾರು 52 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲೇ ದಾಖಲಾಗಿವೆ. ಈಗಾಗಲೇ “ಪೌತಿ ಖಾತೆ(Pouthi khate) ಆಂದೋಲನ” ಮೂಲಕ 3,35,727 ಪ್ರಕರಣಗಳಲ್ಲಿ ಮೃತರ ಹೆಸರಿನಿಂದ ಅವರ ವಾರಸುದಾರರ ಹೆಸರಿಗೆ ಜಮೀನು ವರ್ಗಾವಣೆ ಮಾಡಲಾಗಿದೆ. ಆದರೆ, ಈ ಕಾರ್ಯ ಇನ್ನೂ ತೃಪ್ತಿಕರವಾಗಿಲ್ಲ ಎಂದು ಸಚಿವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ತಾಲೂಕುಗಳಲ್ಲಿ ಅಭಿಯಾನ ಮಾದರಿಯಲ್ಲಿ ರೈತರ ಮನೆ ಬಾಗಿಲಿಗೇ ತೆರಳಿ, ಅರ್ಜಿಯ ಅವಶ್ಯಕತೆ ಇಲ್ಲದೆ ಸ್ವಯಂಪ್ರೇರಿತವಾಗಿ ಜಮೀನು ವರ್ಗಾವಣೆ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ರೈತರಿಗೆ ನೇರ ಪ್ರಯೋಜನ:
ಮೃತರ ಹೆಸರಿನಲ್ಲಿರುವ ಜಮೀನುಗಳಿಗೆ ಪಿಎಂ ಕಿಸಾನ್, ಹನಿ ನೀರಾವರಿ, ಯಂತ್ರೋಪಕರಣ ಖರೀದಿ ಸಬ್ಸಿಡಿ ನೀಡದಂತೆ ಕೇಂದ್ರ ಸರ್ಕಾರ ಆದೇಶಿಸಿದ್ದರಿಂದ ರೈತರು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಜಮೀನುಗಳನ್ನು ವಾರಸುದಾರರ ಹೆಸರಿಗೆ ವರ್ಗಾವಣೆ ಮಾಡಿದರೆ ರೈತರಿಗೆ ಸರ್ಕಾರದ ಎಲ್ಲಾ ಕಲ್ಯಾಣ ಯೋಜನೆಗಳ ಲಾಭ ತಕ್ಷಣ ದೊರಕುತ್ತದೆ.
ಡಿಜಿಟಲ್ ದಾಖಲೆಗಳತ್ತ ಹೆಜ್ಜೆ:
ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಕೇವಲ ಹಕ್ಕು ಪತ್ರ ನೀಡುವುದರಿಂದ ಕೆಲಸ ಮುಗಿಯುವುದಿಲ್ಲ. ಬದಲಾಗಿ, ಇ-ಖಾತಾ ಜನರೇಟ್ ಮಾಡಿ, ಇ-ಆಸ್ತಿ ದಾಖಲಾತಿಯನ್ನ(e-property) ಒದಗಿಸಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ. ಜೊತೆಗೆ, ರಾಜ್ಯದ ಎಲ್ಲಾ ತಹಶೀಲ್ದಾರ್ ಕಚೇರಿಗಳಲ್ಲಿರುವ ಭೂ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ಗೊಳಿಸುವ ಕಾರ್ಯವನ್ನು ಅಭಿಯಾನ ಮಾದರಿಯಲ್ಲಿ ನಡೆಸಲಾಗುತ್ತಿದೆ. ಈ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ ತಹಶೀಲ್ದಾರ್‌ಗಳಿಗೆ ನೋಟಿಸ್ ನೀಡಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
ಪೋಡಿ ದುರಸ್ತಿ ಅಭಿಯಾನ:
ರಾಜ್ಯಾದ್ಯಂತ ಪೋಡಿ ದುರಸ್ತಿ ಕಾರ್ಯಕ್ಕೂ ಚಾಲನೆ ನೀಡಲಾಗಿದೆ. ನಾನಾ ಕಾರಣಗಳಿಂದ ಅನೇಕ ಜಮೀನುಗಳು ಇನ್ನೂ ಸರಿಯಾಗಿ ಪೋಡಿ ದುರಸ್ತಿಯಾಗದೆ ಬಾಕಿ ಉಳಿದಿವೆ. ಇದರಿಂದ ರೈತರು ಸರ್ಕಾರಿ ಕಚೇರಿಗಳ ಸುತ್ತಲೂ ಅಲೆದಾಡುವಂತಾಗಿದೆ. ಈ ಸಮಸ್ಯೆ ನಿವಾರಣೆಗೆ ಪೋಡಿ ದುರಸ್ತಿ ಪ್ರಕ್ರಿಯೆಯನ್ನು ವೇಗಗೊಳಿಸಲು ಸೂಚನೆ ನೀಡಲಾಗಿದೆ.
ಒಟ್ಟಾರೆಯಾಗಿ, ಈ ಹೊಸ ನಿರ್ಧಾರದಿಂದ ರೈತರಿಗೆ ದಾಖಲೆ ಸಂಬಂಧಿತ ತೊಂದರೆಗಳು ಕಡಿಮೆಯಾಗುವುದರೊಂದಿಗೆ, ಸರ್ಕಾರದ ಎಲ್ಲ ಯೋಜನೆಗಳ ಲಾಭವನ್ನು ತಕ್ಷಣ ಪಡೆಯುವ ಮಾರ್ಗ ಸುಗಮವಾಗಲಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.