WhatsApp Image 2025 11 21 at 6.11.24 PM

‘ರಾಜ್ಯ ಸರ್ಕಾರಿ ನೌಕರ’ರಿಗೆ ಮಹತ್ವದ ಮಾಹಿತಿ : ಹೀಗಿವೆ ‘ಕರ್ನಾಟಕ ಸೇವಾ ನಿಯಮ’ಗಳು, ಉಲ್ಲಂಘಿಸಿದ್ರೆ ಕ್ರಮ ಫಿಕ್ಸ್.!

Categories:
WhatsApp Group Telegram Group

ಕರ್ನಾಟಕ : ರಾಜ್ಯ ಸರ್ಕಾರಿ ನೌಕರರೇ ಗಮನಿಸಿ. ಕರ್ನಾಟಕ ನಾಗರಿಕ ಸೇವೆ (ವರ್ತನೆ) ನಿಯಮಗಳು 1966ರ ಮುಖ್ಯಾಂಶಗಳು ಉಲ್ಲಂಘನೆಗೆ ವಿಧಿಸಬಹುದಾದ ದಂಡನೆಗಳು ಹಾಗೂ ಕೆ.ಸಿ.ಎಸ್. (ಸಿಸಿಎ) ನಿಯಮಗಳ ಸ್ಕೂಲ ಪರಿಚಯ ಇಲ್ಲಿದೆ.

ಈ ನಿಯಮಗಳು ಸರ್ಕಾರಿ ಹುದ್ದೆಗಳಿಗೆ ನೇಮಿಸಿದ ಮತ್ತು ಸರ್ಕಾರಿ ಕಾರ್ಯ ಸಂಬಂಧಕ್ಕೆ ತೈನಾತಿಸಲ್ಪಟ್ಟ ಎಲ್ಲಾ ನೌಕರರಿಗೂ ಅನ್ವಯಿಸುತ್ತದೆ.

(ನಿಯಮ 1) ಆದರೆ ಈ ಮುಂದೆ ಕಾಣಿಸಿದ ವರ್ಗಕ್ಕೆ ಸೇರಿದ ನೌಕರರಿಗೆ ಅನ್ವಯವಾಗುವುದಿಲ್ಲ.

ಅ) ಅಖಿಲ ಭಾರತ ಸೇವಾ ಸದಸ್ಯರು

ಆ) ರಾಜ್ಯಪಾಲರು, ಸಾಮಾನ್ಯ ಅಥವಾ ವಿಶೇಷ ಅಧಿಸೂಚನೆ ಹೊರಡಿಸಿ ಯಾವ ಹುದ್ದೆಯಲಿ ಇರುವಂತಹವರಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ತಿಳಿಸಿರುವ ನೌಕರರು.

ಇ) ಔದ್ಯಮಿಕ ನಿಯೋಜನೆ (ಸ್ಥಾಯೀ ಆದೇಶಗಳು) ಶಾಸನ 1946 (1946ರ ಕೇಂದ್ರ ಶಾಸನ ಸಂಖ್ಯೆ 20)ರ ಉಪಬಂಧಗಳು ಅನ್ವಯವಾಗುವ ಸರ್ಕಾರದ ಯಾವುದೇ ಕೈಗಾರಿಕಾ ಉದ್ಯಮದ ನೌಕರರು.

ಅರ್ಥವಿವರಣೆ : (ನಿಯಮ 2)

(ಆ) ಸರ್ಕಾರಿ ನೌಕರ ಎಂದರೆ :

ಕರ್ನಾಟಕ ರಾಜ್ಯದ ಸರ್ಕಾರಿ ಸೇವೆಗೆ ಸದಸ್ಯನಾಗಿರುವ ಅಥವಾ ಕರ್ನಾಟಕ ರಾಜ್ಯದ ವ್ಯವಹಾರಗಳಿಗೆ ಸಂಬಂಧಪಟ್ಟ ಹುದ್ದೆಯಲ್ಲಿರುವ ವ್ಯಕ್ತಿ. ಈ ನೌಕರರ ಸೇವೆಗಳನ್ನು ಯಾವುದೇ ಕಂಪನಿ, ನಿಗಮ, ಸಂಸ್ಥೆ, ಅಥವಾ ಸ್ಥಳೀಯ ಸಂಸ್ಥೆಗಳ ಕಾರ್ಯನಿಮಿತ್ತ ವಹಿಸಿಕೊಡಲಾಗಿದ್ದರೆ, ಹಾಗೂ ಇವರ ವೇತನವನ್ನು ಸ್ಥಳೀಯ ನಿಧಿಯಿಂದ ಪಡೆಯಲಾಗುತ್ತಿದ್ದು ಸಂಚಿತ ನಿಧಿಯಿಂದ ಪಡೆಯಲಾಗುತ್ತಿಲ್ಲದಿದ್ದರೂ ಸಹ ಅವರನ್ನು ಈ ನಿಯಮಗಳ ಉದ್ದೇಶಕ್ಕಾಗಿ ಸರ್ಕಾರಿ ನೌಕರರೆಂದು ತಿಳಿಯುವುದು.

(ಇ) ಕುಟುಂಬ :

(i ) ಸರ್ಕಾರಿ ನೌಕರನ/ಳ, ಪತ್ನಿ ಅಥವಾ ಪತಿ,

(ನ್ಯಾಯಾಲಯದಿಂದ ವಿವಾಹ ವಿಚ್ಛೇದನ ಡಿಕ್ಕಿ ಪಡೆದಿರುವವರನ್ನು ಹೊರತುಪಡಿಸಿ)

ii) ಸರ್ಕಾರಿ ನೌಕರನಿಗೆ ಅವಲಂಬಿತವಾಗಿರುವ ಮಗ ಅಥವಾ ಮಗಳು, ಮಲ ಮಗ ಅಥವಾ ಮಲ ಮಗಳು, ಆದರೆ ಸರ್ಕಾರಿ ನೌಕರನಿಗೆ ಅವಲಂಬಿತನಲ್ಲದಿರುವ ಮಕ್ಕಳು ಅಥವಾ ಮಲ ಮಕ್ಕಳು

(ನ್ಯಾಯಾಲಯ ಆದೇಶದ ರೀತ್ಯ) ಕುಟುಂಬದ ವ್ಯಾಪ್ತಿಗೆ ಬರುವುದಿಲ್ಲ.

(iii) ಸರ್ಕಾರಿ ನೌಕರನಿಗೆ ಅವಲಂಬಿತನಾಗಿರುವ ರಕ್ತ ಸಂಬಂಧಿಗಳು.

ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಯಾವ ಸರ್ಕಾರವೇ ಆಗಲೀ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕಾದರೆ, ಅಧಿಕಾರದಲ್ಲಿ ಉಳಿಯಬೇಕಾದರೆ ಹಾಗೂ ಜನಪ್ರಿಯವಾಗಬೇಕಾದರೆ, ತನ್ನ ನೌಕರರ ಶಿಸ್ತು ಮತ್ತು ಕಾರ್ಯದಕ್ಷತೆ ಅವಶ್ಯಕ. ಆದಕಾರಣ ನೌಕರರ ನಡತೆ ನಿಯಮಗಳು ಮೇಲಿನ ಉದ್ದೇಶಗಳನ್ನು ಹೊಂದಿರುತ್ತದೆ. ನಿಯಮ 3ರಲ್ಲಿ ಕೆಳಗಿನಂತೆ ನಮೂದಿಸಲಾಗಿದೆ.

ಸರ್ಕಾರಿ ನೌಕರರು ಎಲ್ಲಾ ಸಮಯದಲ್ಲಿ :

ಅ) ಸಂಪೂರ್ಣ ಪ್ರಾಮಾಣಿಕತೆ ಹೊಂದಿರಬೇಕು.

ಆ) ಕರ್ತವ್ಯ ನಿಷ್ಠರಾಗಿರಬೇಕು. ಮತ್ತು

ಇ) ಅನುಚಿತ ವರ್ತನೆಯಲ್ಲಿ ತೊಡಗಬಾರದು

ಪ್ರತಿಯೊಬ್ಬ ಸರ್ಕಾರಿ ನೌಕರನು ಖಾಯಂ ಹುದ್ದೆಯನ್ನು ಹೊಂದಿದ್ದು, ಶಿಕ್ಷೆ ವಿಧಿಸುವುದರಿಂದ ಸಾಕಷ್ಟು ರಕ್ಷಣೆಯನ್ನು ಹೊಂದಿರುತ್ತಾನೆ. ಸಾರ್ವಜನಿಕ ನಿಧಿಯಿಂದ ಅವರಿಗೆ ಒಪ್ಪಿಸಿದ ಹೊಣೆಗಾರಿಕೆ ಹಾಗೂ ಕಾರ್ಯಬಾರಕ್ಕೆ ವೇತನ ಕೊಡಲಾಗುತ್ತದೆ. ಆದಕಾರಣ ಸಂಪೂರ್ಣ ಪ್ರಾಮಾಣಿಕತೆ, ಕಾರ್ಯದಕ್ಷತೆ. ಹಾಗೂ ಕರ್ತವ್ಯನಿಷ್ಠೆಯನ್ನು ಹೊಂದಿದ್ದು, ರಾಷ್ಟ್ರದ ಪ್ರಗತಿಗೆ ಪ್ರತಿಯೊಬ್ಬ ಸರ್ಕಾರಿ ನೌಕರನು ಸಹಕಾರಿಯಾಗಬೇಕು.

ಮೇಲ್ವಿಚಾರಣಾಧಿಕಾರಿಗಳು ಮೇಲ್ಕಾಣಿಸಿದ ಈ ಎರಡು ಕರ್ತವ್ಯಗಳನ್ನು ತಾವಷ್ಟೇ ಪಾಲಿಸಿದರೆ ಸಾಲದು. ತಮ್ಮ ಅಧೀನಾಧಿಕಾರಿಗಳಲ್ಲೂ ಕೂಡ ಈ ಗುಣಗಳು ಮೂಡುವಂತೆ ನೋಡಿಕೊಳ್ಳಬೇಕು. ಅಧಿಕಾರ ಪಡೆದ ನೌಕರರು ನ್ಯಾಯ ಸಮ್ಮತವಾಗಿ ಕಾರ್ಯ ನಿರ್ವಹಿಸಬೇಕು. ಮತ್ತು ಇತರ ಅಧಿಕಾರಿಗಳು ಲಿಖಿತ ಆದೇಶಗಳನ್ನು ಪಡೆದು ವರ್ತಿಸಬೇಕು. ಕೇವಲ ಮೌಖಿಕ ಆದೇಶಗಳನ್ನು ಹೊಂದಿದರೆ ಸಾಲದು. ಮೌಖಿಕ ಆದೇಶದ ರೀತ್ಯ ಕರ್ತವ್ಯ ಪಾಲನೆ ಮಾಡಬೇಕಾಗಿ ಬಂದರೂ ತದ ನಂತರ ಶೀಘ್ರವಾಗಿ ಲಿಖಿತ ಒಪ್ಪಿಗೆ ಪಡೆದುಕೊಳ್ಳಬೇಕು.

ಅನುಚಿತ ವರ್ತನೆಯ ಅರ್ಥ ಬಹು ವಿಶಾಲವಾಗಿದೆ. ಅವಿಧೇಯತೆ, ತನ್ನ ಹೆಂಡತಿ ಮಕ್ಕಳನ್ನು ಕಡೆಗಾಣಿಸುವುದು, ತನ್ನ ಮೇಲಾಧಿಕಾರಿಗಳ ಹಾಗೂ ಇಲಾಖಧಿಕಾರಿಗಳ ವಿರುದ್ಧ ಸುಳ್ಳು ಆರೋಪ ಮಾಡುವುದು, ಮುಂತಾದವುಗಳು ಅನುಚಿತ ವರ್ತನೆಗಳ ವ್ಯಾಖ್ಯೆಯಲ್ಲಿ ಬರುತ್ತದೆ. ಆದಕಾರಣ ಪ್ರತಿಯೊಬ್ಬ ಸರ್ಕಾರಿ ನೌಕರನು ತನ್ನ ವೈಯಕ್ತಿಕ ಜೀವನದಲ್ಲಿ ಯೋಗ್ಯ ರೀತಿಯ ವರ್ತನೆ ನಡೆಸಿ ತನ್ನ ಹುದ್ದೆಯ ಸ್ಥಾನ ಮಾನ ಹಾಗೂ ಘನತೆಯನ್ನು ಕಾಪಾಡಿಕೊಳ್ಳಬೇಕು.

ಅಧಿಕಾರಿಗಳು ತಮ್ಮ ಸ್ಥಾನ ಮಾನ ಹಾಗೂ ಅಧಿಕಾರದ ದುರುಪಯೋಗದಿಂದ ವೈಯಕ್ತಿಕ ಲಾಭ ಪಡೆಯುವ ಹಾಗೂ ಅವರ ಪ್ರಭಾವದಿಂದ ಯಾವ ಸಂಬಂಧಿಕರೂ ತಮ್ಮ ಏಳಿಗೆಗಾಗಿ ದುರ್ಲಾಭ ಪಡೆಯದಂತೆ ಮಾಡಲು ಕಾನೂನು ಪ್ರಕಾರ ಕೆಳಗಿನ * 2 .

ನಿಯಮ : 4

ಯಾವ ಸರ್ಕಾರಿ ನೌಕರನು ತನ್ನ ಸಂಬಂಧಿಕರಿಗೆ ಖಾಸಗಿ ಸಂಸ್ಥೆಗಳಲ್ಲಿ ತಮ್ಮ ಅಧಿಕಾರ ಹಾಗೂ ಸ್ಥಾನಮಾನದ ಪ್ರಭಾವದಿಂದ ನೌಕರಿಯನ್ನು ಕೊಡಿಸತಕ್ಕದ್ದಲ್ಲ. ಅಂಥಹ ಪ್ರಸಂಗ ಬಂದಲ್ಲಿ ಸೂಕ್ತ ಅಧಿಕಾರಿಗಳಿಂದ ಅಪ್ಪಣೆ ಪಡೆದುಕೊಳ್ಳಬೇಕು. ಸಂಬಂಧಿಕರು ಯಾವುದಾದರೊಂದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರೆ ಅಂಥವರುಗಳಿಂದ ಸಾಮಾನುಗಳನ್ನು ಖರೀದಿ ಮಾಡುವುದನ್ನು ತಪ್ಪಿಸಬೇಕು. ಸರ್ಕಾರಿ ನೌಕರರ ಸಂಬಂಧಿಕರು, ಆ ಸಂಸ್ಥೆಯಲ್ಲಿ ಕೆಲ ಮಾಡುತ್ತಿದ್ದರೆ ಅಂಥಹ ಸಂಸ್ಥೆಗಳೊಡನೆ ಗುತ್ತಿಗೆ ವ್ಯವಹಾರವನ್ನು ಮಾಡಬಾರದು. ಇಂಥಹ ಪ್ರಕರಣಗಳಲ್ಲಿ ಸೂಕ್ತ ಅಧಿಕಾರಿಗಳ ನಿರ್ಣಯ ಕೋರಿ ವರದಿ ಸಲ್ಲಿಸಬೇಕು.

ನಿಯಮ : 5

ನೌಕರರು ರಾಜಕಾರಣದಲ್ಲಿ ಹಾಗೂ ಚುನಾವಣೆಗಳಲ್ಲಿ ಭಾಗವಹಿಸುವುದು ನಿಷೇಧಿಸಲ್ಪಟ್ಟಿದೆ. ಒಂದು ವೇಳೆ ಸಂಬಂಧಿಕರು ಭಾಗವಹಿಸುತ್ತಿದ್ದರೆ ಸರ್ಕಾರಕ್ಕೆ ಆ ಬಗ್ಗೆ ಮಾಹಿತಿ ತಿಳಿಯಪಡಿಸಬೇಕು. ಬೆಂಬಲ ನೀಡುವುದು, ಪ್ರಚಾರ ಮಾಡುವುದು, ಸಹಾಯ ಮಾಡುವುದು, ಅಡ್ಡಿ ಮಾಡುವುದು, ಚುನಾವಣಾ ಕಾರ್ಯದಲ್ಲಿ ತನ್ನ ಅಧಿಕಾರ ಬಳಸುವುದು ಮುಂತಾದವುಗಳು ನಿಷೇದಿಸಲ್ಪಟ್ಟಿವೆ. ಚುನಾವಣಾ ಚಿನೆಗಳನ್ನು ತನ್ನ ನಿವಾಸಗಳ ಮೇಲೆ, ಸ್ವಂತ ವಾಹನಗಳ ಮೇಲೆ ಪ್ರದರ್ಶಿಸುವುದು ಅಧಿಕಾರದ ಪ್ರಭಾವ ಬೀರಿದಂತೆ ಎಂದು ಪರಿಗಣಿಸಲ್ಪಡುತ್ತದೆ. ರಾಷ್ಟ್ರ ವಿರೋದಿ ಶಕ್ತಿಗಳಿಗೆ ಬೆಂಬಲ ನೀಡುವಿಕೆ, ಪರೋಕ್ಷ ಅಥವಾ ಅಪರೋಕ್ಷವಾಗಿ ಸಹಾಯ ನೀಡುವಿಕೆ ಮುಂತಾದ ಕೃತಿಗಳಿಂದ ಸರ್ಕಾರಿ ನೌಕರನು ತನ್ನ ಸಂಬಂಧಿಕರನ್ನು ದೂರ ಇಡಬೇಕು. ಹೀಗೆ ಮಾಡುವುದು ಸಾಧ್ಯವಿಲ್ಲದಿದ್ದಲ್ಲಿ ವಿಷಯವನ್ನು ಸೂಕ್ತ ಅಧಿಕಾರಿಗಳಿಗೆ ತಿಳಿಸಬೇಕು. ಆದರೆ ಚುನಾವಣಾ ಅಧಿಕಾರಿಗಳಾಗಿ ಕೆಲಸ ನಿರ್ವಹಿಸುವುದು, ಮತ ಚಲಾಯಿಸುವುದರಿಂದ ಈ ನಿಯಮವನ್ನು ಉಲ್ಲಂಘಿಸಿದಂತಾಗುವುದಿಲ್ಲ.

ನಿಯಮ : 8

ರಾಷ್ಟ್ರ ವಿರೋದಿ ಗುಣಗಳುಳ್ಳ ಶಕ್ತಿಗಳ ಸಂಗಡ ಪ್ರದರ್ಶನಗಳನ್ನಾಗಲೀ ಅಥವಾ ಹರತಾಳಗಳಲ್ಲಾಗಲೀ ಭಾಗವಹಿಸಕೂಡದು.

ನಿಯಮ : 9

ಆಕಾಶವಾಣಿ ಹಾಗೂ ಪತ್ರಕರ್ತರೊಡನೆ ಸಂಬಂಧ ತನ್ನ ಅಧಿಕೃತ ಕರ್ತವ್ಯ ಪಾಲನೆಗೆ ಸೀಮಿತವಾಗಿರಬೇಕು.

ನಿಯಮ : 9(ಬಿ)

ಸಾಹಿತ್ಯ ವೈಜ್ಞಾನಿಕ ಅಥವಾ ಕಲೆಗೆ ಸಂಬಂಧಪಟ್ಟವುಗಳನ್ನು ಹೊರತುಪಡಿಸಿ ಇತರ ವರ್ತಮಾನ ಪತ್ರಿಕೆಗಳ ಸಂಪಾದಕತ್ವ ಹಾಗೂ ಸಾಪ್ತಾಹಿಕಗಳ ಪ್ರಕಟಣೆಗಳ ವ್ಯವಸ್ಥೆಯಲ್ಲಿ ಭಾಗವಹಿಸಕೂಡದು.

ನಿಯಮ : 10

ವರ್ತಮಾನ ಪತ್ರಿಕೆಗಳ ಮುಖಾಂತರ ಅಥವಾ ರೇಡಿಯೋ ಮೂಲಕ ಸರ್ಕಾರ ಅಥವಾ ಅದರ ಕಾರ್ಯನೀತಿಯನ್ನು ಟೀಕಿಸಕೂಡದು.

ನಿಯಮ : 11

ಅವಶ್ಯಕ. ಅಧಿಕೃತವಲ್ಲದ ಖಾಸಗಿ ಸಮಿತಿಗಳ ಸಮ್ಮುಖದಲ್ಲಿ ಸಾಕ್ಷಿ ಕೊಡಕೂಡದು, ಇಂಥ ಸಾಕ್ಷಿಗೆ ಸೂಕ್ತ ಅಧಿಕಾರಿಗಳ ಅಪ್ಪಣೆ

ನಿಯಮ : 12

ತನ್ನ ಅಧಿಕಾರ ಸ್ಥಾನದಿಂದ ಪಡೆದ ಮಾಹಿತಿಗಳನ್ನು ಪ್ರತ್ಯಕ್ಷವಾಗಿಯಾಗಲೀ ಪರೋಕ್ಷವಾಗಿಯಾಗಲೀ ಸಂಬಂಧಪಡದ ವ್ಯಕ್ತಿಗಳಿಗೆ ತಿಳಿಸತಕ್ಕದ್ದಲ್ಲ.

ನಿಯಮ : 13

ನಿಧಿ ಸಂಗ್ರಹಣೆಯಲ್ಲಿ ಯಾವುದೇ ಸಂಘ ಸಂಸ್ಥೆಯೊಡನೆ ಸಂಪರ್ಕ ಹೊಂದಿರಕೂಡದು. ಹೀಗೆ ಮಾಡುವುದಕ್ಕೆ ಸರ್ಕಾರದ ಪೂರ್ವಭಾವಿ ಅಪ್ಪಣೆ ಅವಶ್ಯಕ.

ನಿಯಮ : 14

ಸರ್ಕಾರದ ಪೂರ್ವಭಾವಿ ಅಪ್ಪಣೆ ಪಡೆದು ನಿರ್ದಿಷ್ಟ ಕಟ್ಟಳೆಗಳನ್ವಯ ಕೊಡುಗೆ ಅಥವಾ ಬಹುಮಾನಗಳನ್ನು ಪಡೆಯಬಹುದು. ಪ್ರಾಸಂಗಿಕ ಊಟ, ಪ್ರಾಸಂಗಿಕ ವಾಹನ ಸೌಕರ್ಯ ಮತ್ತು ಇತರ ಸಾಮಾಜಿಕ ಅತಿಥ್ಯ ಇವು ಕೊಡುಗೆ ಅಥವಾ ಬಹುಮಾನಗಳೆಂದು ಪರಿಗಣಿಸಲ್ಪಡುವುದಿಲ್ಲ. ಸಾಂಪ್ರಾದಾಯಿಕ ಪದ್ಧತಿಯಂತೆ ಮದುವೆ ಅಥವಾ ಧಾರ್ಮಿಕ ಕಾರ್ಯಗಳಲ್ಲಿ ತನ್ನ ಸಂಬಂಧಿಕರಿಂದ ಕೊಡುಗೆಯನ್ನು ಮುಂದೆ ನಮೂದಿಸಿದ ಮೊತ್ತದ ಮಿತಿಗೆ ಒಳಪಟ್ಟು ಪಡೆಯಬಹುದು. ಕೊಡುಗೆಯ ಮೊತ್ತ ಈ ಮಿತಿಗಿಂತ ಜಾಸ್ತಿಯಾದರೆ ಸರ್ಕಾರದ ಗಮನಕ್ಕೆ ತರಬೇಕು.

ಸಂಬಂಧಿಕರಿಂದ

ಗುಂಪು ಎ ಮತ್ತು ಗುಂಪು ಬಿ ಅಧಿಕಾರಿಗಳು : 5000/-

ಗುಂಪು ಸಿ ನೌಕರರು. 2500/-

ಗುಂಪು ಡಿ ನೌಕರರು 1250/-

ಸರ್ಕಾರಿ ವ್ಯವಹಾರದಲ್ಲಿ ತೊಡಗಿರದ ವೈಯಕ್ತಿಕ ಸ್ನೇಹಿತರಿಂದ

ಗುಂಪು ಎ ಮತ್ತು ಗುಂಪು ಬಿ ಅಧಿಕಾರಿಗಳು : 2500/-

WhatsApp Image 2025 11 21 at 6.07.30 PM
WhatsApp Image 2025 11 21 at 6.07.30 PM 1
WhatsApp Image 2025 11 21 at 6.07.31 PM
WhatsApp Image 2025 11 21 at 6.07.32 PM
WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories