ಕೇಂದ್ರದ ಈ ಯೋಜನೆಯ ಮೂಲಕ ಪಡೆಯಿರಿ ಪ್ರತಿ ತಿಂಗಳು 5,000 ರೂ ಪಿಂಚಣಿ!

IMG 20241109 WA0001

WhatsApp Group Telegram Group
ಅಟಲ್ ಪೆನ್ಶನ್ ಯೋಜನೆಯಿಂದ ಗುಡ್ ನ್ಯೂಸ್, ಈ ಯೋಜನೆಯಲ್ಲಿ 100 ರೂನಿಂದ ಆರಂಭಿಸಿ ಮಾಸಿಕ 5,000 ರೂ ಪಿಂಚಣಿ ಪಡೆಯಬಹುದು…!

ಅಟಲ್ ಪಿಂಚಣಿ ಯೋಜನೆ (Atal Pinchani Yojana) ಅಸಂಘಟಿತ ವಲಯದಲ್ಲಿ ಭಾರತದ ನಾಗರಿಕರಿಗೆ ಖಾತರಿಯ ಕನಿಷ್ಠ ಪಿಂಚಣಿಯನ್ನು ಒದಗಿಸುವ ಸರ್ಕಾರಿ ಯೋಜನೆಯಾಗಿದೆ.  ನೌಕರರು ನಿವೃತ್ತಿಯ ನಂತರ ಹಣ ಉಳಿಸಲು ಮತ್ತು ಭವಿಷ್ಯದ ಅಪಾಯಗಳನ್ನು (Future Problems) ಪರಿಹರಿಸಲು ಸಹಾಯ ಮಾಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಿಂದ ಹಲವಾರು ಜನರ ಬದುಕು ರೂಪುಗೊಂಡಿದೆ.

ಇಂದಿನ ಸಮಾಜದಲ್ಲಿ ಬದುಕಲು ಬಹಳ ಕಷ್ಟವಿದೆ. ಇಂದು ದುಡಿದ ಹಣ ಇಂದಿಗಷ್ಟೇ ಸಾಲುತ್ತದೆ. ಆದರೆ ನಮ್ಮ ಮುಂದಿನ ಭವಿಷ್ಯ ಉತ್ತಮವಾಗಿರಬೇಕೆಂದರೆ, ಇಂದೇ ಅಲ್ಪ ಸ್ವಲ್ಪ ಹಣವನ್ನು ಹೂಡಿಕೆ ಮಾಡಬೇಕು. ಅದಕ್ಕಾಗಿ ಇಂದು ಹಲವಾರು ಯೋಜನೆಗಳಿದ್ದು. ಹಣವನ್ನು ಹೂಡಿಕೆ (Investment) ಮಾಡಬಯಸುವವರಿಗೆ ಬಹಳ ಉಪಯುಕ್ತವಾಗಿದೆ. ಅದರಲ್ಲೂ ಈ ಹೂಡಿಕೆ ಹಣವು ವೃದ್ಧಾಪ್ಯಾ ಜೀವನದಲ್ಲಿ ಬಹಳ ಉಪಯೋಗವಾಗಲಿದೆ. ಇಂತಹ ಯೋಜನೆಗಳಲ್ಲಿ ಮುಖ್ಯವಾಗಿ ಕೇಂದ್ರ ಸರ್ಕಾರ (Central Government) ಜಾರಿಗೆ ತಂದ ಅಟಲ್ ಪೆನ್ಶನ್ ಯೋಜನೆಯೂ ಕೂಡ ಒಂದು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಯಾವುದೇ ಆತಂಕವಿಲ್ಲದೆ ಸಣ್ಣ ಮೊತ್ತದದಿಂದ ಹೂಡಿಕೆ ಮಾಡಲು ಶುರುಮಾಡಿ :

ಈ ಯೋಜನೆಯಲ್ಲಿ ಮೊದಲು ಸಣ್ಣ ಮೊತ್ತದಲ್ಲಿ (Low budget) ಹೂಡಿಕೆ ಮಾಡುವ ಮೂಲಕ ಉತ್ತಮ ಆದಾಯ ಪಡೆಯಬಹುದಾಗಿದೆ. ಹಾಗೆಯೇ ಈ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿರುವ ಕಾರಣ ಯಾವುದೇ ಆತಂಕವಿಲ್ಲದೆ, ಮಾರುಕಟ್ಟೆ ಏರಿಳಿತದ ಭಯವಿಲ್ಲದೆ ಹೂಡಿಕೆ ಮಾಡಬಹುದು. ಅಷ್ಟೇ ಅಲ್ಲದೆ ಅಟಲ್ ಪೆನ್ಶನ್ ಯೋಜನೆ ಮೂಲಕ ಹಣ ಹೂಡಿಕೆ ಮಾಡಿದ ವ್ಯಕ್ತಿ ಮೃತಪಟ್ಟರೆ, ಸಂಗಾತಿ ಅಂದರೆ ಪತಿ ಅಥವಾ ಪತ್ನಿ ಪಿಂಚಣಿ ಮೊತ್ತ ಪಡೆಯಲಿದ್ದಾರೆ.

100 ರೂನಿಂದ ಆರಂಭಿಸಿ ಮಾಸಿಕ 5,000 ರೂ ಪಿಂಚಣಿ :

ಹೌದು, ಇದೀಗ ಒಂದು ಖುಷಿಯ ವಿಷಯ ಏನೆಂದರೆ, ಅಟಲ್ ಪಿಂಚಣಿ ಯೋಜನೆಯಲ್ಲಿ ನೀವು 100 ರೂ, 200 ರೂ ಸೇರಿದಂತೆ ಒಂದು ಮೊತ್ತವನ್ನು ಪ್ರತಿ ತಿಂಗಳು ಹೂಡಿಕೆ ಮಾಡಿದರೆ ಸಾಕು, ನಿಗಧಿತ ಅವಧಿ ಬಳಿಕ ಪ್ರತಿ ತಿಂಗಳು ಗರಿಷ್ಠ 5,000 ರೂಪಾಯಿ ಪಿಂಚಣಿ ಪಡೆಯಬಹುದು.

ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲು ಇರಬೇಕಾದ ವಯಸ್ಸಿನ ಮಿತಿ :

ವಯಸ್ಸಿನ ಮಿತಿ ಕನಿಷ್ಠ 18 ವರ್ಷ ದಿಂದ ಗರಿಷ್ಠ 40 ವರ್ಷ ಆಗಿರಬೇಕು. ಪ್ರಮುಖವಾಗಿ ಬಡವರು, ಮಧ್ಯಮ ವರ್ಗದ ಜನರಿಗೆ ಈ ಯೋಜನೆ ಉತ್ತಮವಾಗಿದೆ. ಕಾರಣ ತಿಂಗಳಿಗೆ 42 ರೂಪಾಯಿಯಂತೆ ಹೂಡಿಕೆ ಮಾಡಿದರೂ 1,000 ರೂಪಾಯಿ ಪಿಂಚಣಿ ಪಡೆಯಲು ಈ ಯೋಜನೆಯಲ್ಲಿ ಸಾಧ್ಯವಿದೆ. ಬಡವರ ಪಾಲಿಗೆ ಈ ಒಂದು ಯೋಜನೆಯು ಬಹಳ ಉಪಯುಕ್ತವಾಗಿದೆ.

ಈ ಯೋಜನೆಯಲ್ಲಿ 60ನೇ ವಯಸ್ಸಿಗೆ ಪಿಂಚಣಿ ಮೊತ್ತ ಬರಲು ಆರಂಭವಾಗುತ್ತದೆ :

ಅಟಲ್ ಪೆನ್ಶನ್ ಯೋಜನೆಯೂ ಮುಖ್ಯವಾಗಿ ನಮ್ಮ ಭವಿಷ್ಯದ ಜೀವನವನ್ನು ರೂಪಿಸಿಕೊಳ್ಳಲು ಸಹಾಯ ಮಾಡಲಿದೆ. ಹೌದು, ಈ ಯೋಜನೆಯ ಮೂಲಕ ನೀವು ಹಣವನ್ನು ಹೂಡಿಕೆ ಮಾಡಿದರೆ ತಿಂಗಳಿಗೆ 1,000 ರೂಪಾಯಿ, 2,000 ರೂಪಾಯಿ, 3,000 ರೂಪಾಯಿ, 4,000 ರೂಪಾಯಿ ಹಾಗೂ 5,000 ರೂಪಾಯಿ ಪಿಂಚಣಿ ಪಡೆಯಲು ಸಾಧ್ಯವಿದೆ. 60ನೇ ವಯಸ್ಸಿಗೆ ಪಿಂಚಣಿ ಮೊತ್ತ (Pension Price) ಬರಲು ಆರಂಭವಾಗುತ್ತದೆ.

ಈ ಯೋಜನೆಯಲ್ಲೂ ಪ್ರತಿ ತಿಂಗಳು ದೊರೆಯುವ ಹೂಡಿಕೆಯ ಲಾಭ ಹೀಗಿದೆ :

ಈ ಯೋಜನೆಯಲ್ಲಿ 1,000 ರೂಪಾಯಿ ಮಾಸಿಕ ಪಿಂಚಣಿಗೆ ಪ್ರತಿ ತಿಂಗಳು 42 ರೂಪಾಯಿ ಹೂಡಿಕೆ ಮಾಡಬೇಕು. ತಿಂಗಳು 84 ರೂಪಾಯಿ ಹೂಡಿಕೆ ಮಾಡಿದರೆ 2,000 ರೂಪಾಯಿ ಮಾಸಿಕ ಪಿಂಚಣಿ, 126 ರೂಪಾಯಿಗೆ 3,000 ರೂಪಾಯಿ ಪಿಂಚಣಿ, 168 ರೂಪಾಯಿಗೆ 4,000 ರೂಪಾಯಿ ಪಿಂಚಣಿ, 210 ರೂಪಾಯಿ ಹೂಡಿಕೆ ಮಾಡಿದರೆ 5,000 ರೂಪಾಯಿ ಮಾಸಿಕ ಪಿಂಚಣಿ ಸಿಗಲಿದೆ.18ನೇ ವಯಸ್ಸಿಗೆ ಹೂಡಿಕೆ ಆರಂಭಿಸಿದರೆ ಒಟ್ಟು 42 ವರ್ಷ ಹೂಡಿಕೆ ಮಾಡಿದರೆ ನಿಮ್ಮ 60ನೇ ವಯಸ್ಸಿಗೆ ಪಿಂಚಣಿ ಮೊತ್ತ ಬರಲು ಆರಂಭವಾಗುತ್ತದೆ.

40ನೇ ವಯಸ್ಸಿಗೆ ಅಟಲ್ ಪೆನ್ಶನ್ ಯೋಜನೆ ಆರಂಭಿಸಿದರೆ, ಮಾಸಿಕ ಪಿಂಚಣಿಗೆ ತಿಂಗಳ ರೂಪಾಯಿ ಹೂಡಿಕೆಯ ವಿವರ ಹೀಗಿದೆ :

ಒಂದು ವೇಳೆ ನೀವೇನಾದರೂ 40ನೇ ವಯಸ್ಸಿಗೆ ಅಟಲ್ ಪೆನ್ಶನ್ ಯೋಜನೆ ಆರಂಭಿಸಿದರೆ ಈ ಯೋಜನೆಯಲ್ಲಿ 20 ವರ್ಷ ಹೂಡಿಕೆ ಮಾಡಬೇಕು. ಇಲ್ಲಿ 1,000 ರೂಪಾಯಿ ಮಾಸಿಕ ಪಿಂಚಣಿಗೆ ತಿಂಗಳು 291 ರೂಪಾಯಿ ಹೂಡಿಕೆ, 2,000 ರೂಪಾಯಿ ಪಿಂಚಣಿಗೆ ತಿಂಗಳು 582 ರೂಪಾಯಿ ಹೂಡಿಕೆ, 3,000 ರೂಪಾಯಿ ಮಾಸಿಕ ಪಿಂಚಣಿಗೆ ತಿಂಗಳು 873 ರೂಪಾಯಿ ಹೂಡಿಕೆ, 4,000 ರೂಪಾಯಿ ಪಿಂಚಣಿಗೆ 1,164 ರೂಪಾಯಿ ಹೂಡಿಕೆ ಹಾಗೂ 5,000 ರೂಪಾಯಿ ಪಿಂಚಣಿಗೆ 1,454 ರೂಪಾಯಿ ಪ್ರತಿ ತಿಂಗಳು ಹೂಡಿಕೆ ಮಾಡಬೇಕು.

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Editor in Chief

Editor in Chief

Lingaraj Ramapur BCA, MCA, MA ( Journalism );as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.

Leave a Reply

Your email address will not be published. Required fields are marked *

error: Content is protected !!