addike dara

ಅಡಿಕೆ ಧಾರಣೆ: ರಾಜ್ಯದಲ್ಲಿ ಅಡಿಕೆ ಬೆಲೆ ಭಾರಿ ಏರಿಕೆ..! ರೈತರಲ್ಲಿ ಹೆಚ್ಚಿದ ಸಂತಸ, ಇಂದಿನ ಬೆಲೆ ಎಷ್ಟಿದೆ

Categories:
WhatsApp Group Telegram Group

ರಾಜ್ಯದಲ್ಲಿ ಅಡಿಕೆ ಧಾರಣೆ ಕ್ವಿಂಟಾಲ್‌ಗೆ ಭರ್ಜರಿ ಏರಿಕೆಯ ಹಾದಿಯಲ್ಲಿದೆ. ಅದರಲ್ಲೂ ಮುಖ್ಯವಾಗಿ ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ಸೇರಿದಂತೆ ಹಲವು ಭಾಗಗಳಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದ್ದು, ಈ ಪ್ರದೇಶದ ಜನರು ತಮ್ಮ ಬೆಳೆಯನ್ನು ಸಾಮಾನ್ಯವಾಗಿ ಶಿವಮೊಗ್ಗ ಮಾರುಕಟ್ಟೆಗೆ ಮಾರಾಟ ಮಾಡುತ್ತಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ದಾವಣಗೆರೆ ಮಾರುಕಟ್ಟೆಯಲ್ಲಿ ಇಂದಿನ (ಅಕ್ಟೋಬರ್ 2) ಧಾರಣೆ

ದಾವಣಗೆರೆ ಜಿಲ್ಲೆಯು ಅಡಿಕೆ ವಾಣಿಜ್ಯ ಬೆಳೆಗೆ ಪ್ರಸಿದ್ಧವಾಗಿದೆ. ಇಂದು (ಅಕ್ಟೋಬರ್ 2) ಕ್ವಿಂಟಾಲ್‌ ಅಡಿಕೆಗೆ ಗರಿಷ್ಠ ದರ 64,139 ರೂಪಾಯಿ ತಲುಪಿದೆ. ಕಳೆದ ಎರಡು ದಿನಗಳಿಂದ ಇದೇ ದರ ಮುಂದುವರೆದಿರುವುದು ಬೆಳೆಗಾರರ ಮುಖದಲ್ಲಿ ನಗು ತಂದಿದೆ. ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಲ್ಲಿ ರೈತ ಸಮುದಾಯವಿದೆ.

ಪ್ರಸ್ತುತ ಅಡಿಕೆ ಧಾರಣೆಗಳು (ಕ್ವಿಂಟಾಲ್‌ಗೆ) ಈ ರೀತಿ ಇವೆ:

  • ಗರಿಷ್ಠ ದರ: 64,139 ರೂಪಾಯಿ
  • ಕನಿಷ್ಠ ದರ: 57,099 ರೂಪಾಯಿ
  • ಸರಾಸರಿ ಬೆಲೆ: 62,599 ರೂಪಾಯಿ

ಕಳೆದ ಕೆಲವು ತಿಂಗಳುಗಳ ಹಿಂದೆ 55,000 ರೂಪಾಯಿಗಿಂತ ಕೆಳಗಿಳಿದಿದ್ದ ಬೆಲೆಯು, ಇದೀಗ ದಿಢೀರ್ ಏರಿಕೆ ಕಂಡು ಮತ್ತೆ ಗಗನಮುಖಿಯಾಗಿದೆ.

ಅಡಿಕೆ ಬೆಲೆಯ ಏರಿಳಿತಗಳ ಒಂದು ನೋಟ

ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಭಾಗದಲ್ಲಿ 2025ರ ಜನವರಿ ಅಂತ್ಯದಲ್ಲಿ ಕ್ವಿಂಟಾಲ್‌ ಅಡಿಕೆ ದರ 52,000 ರೂಪಾಯಿಗಳ ಆಸುಪಾಸಿನಲ್ಲಿತ್ತು. ಆದರೆ ಫೆಬ್ರವರಿಯಲ್ಲಿ ಅದು 53,000 ರೂಪಾಯಿ ಗಡಿಯನ್ನು ದಾಟಿತ್ತು. ಅಲ್ಲಿಂದ ಸತತವಾಗಿ ಏರುತ್ತಾ ಬಂದು, ಏಪ್ರಿಲ್ ಅಂತ್ಯದಲ್ಲಿ 60,000 ರೂಪಾಯಿ ಗಡಿ ದಾಟಿತ್ತು. ಇದೀಗ ಧಾರಣೆಯು 65,000 ರೂಪಾಯಿ ಗಡಿ ಸಮೀಪಿಸುತ್ತಿದೆ.

ಕಳೆದ ವರ್ಷದ ಬೆಲೆಗಳನ್ನು ನೋಡಿದರೆ, 2023ರ ಜುಲೈ ತಿಂಗಳಲ್ಲಿ ಗರಿಷ್ಠ ದರ 57,000 ರೂಪಾಯಿ ಮುಟ್ಟಿತ್ತು. 2024ರ ಮೇ ತಿಂಗಳಿನಲ್ಲಿ ಗರಿಷ್ಠ 55,000 ರೂಪಾಯಿ ತಲುಪಿತ್ತು. 2025ರ ಜುಲೈ ತಿಂಗಳಿಗೆ ಹೋಲಿಸಿದರೆ, ಆಗಸ್ಟ್‌ನಲ್ಲಿ ಧಾರಣೆಯಲ್ಲಿ ಸ್ವಲ್ಪ ಸುಧಾರಣೆಯಾಗಿತ್ತು. ಇದೀಗ ಸೆಪ್ಟೆಂಬರ್ ಅಂತ್ಯದಲ್ಲಿ ಭರ್ಜರಿ ಏರಿಕೆ ಕಂಡುಬಂದಿದ್ದು, ಇದರಿಂದ ರೈತರಲ್ಲಿನ ಸಂತಸ ಇಮ್ಮಡಿಯಾಗಿದೆ.

ಈ ವರ್ಷ ವಾಡಿಕೆಯಂತೆ ಜೂನ್ ಆರಂಭದಲ್ಲಿ ಮುಂಗಾರು ಪ್ರವೇಶಿಸಿ ಉತ್ತಮ ಮಳೆಯಾಗಿದ್ದರಿಂದ ಫಸಲು ಕೂಡ ಚೆನ್ನಾಗಿ ಬಂದಿದ್ದು, ಇದರ ಜೊತೆಗೆ ಬೆಲೆಯೂ ಏರಿಕೆಯತ್ತ ಸಾಗುತ್ತಿರುವುದು ರೈತರಿಗೆ ಡಬಲ್ ಬೋನಸ್ ನೀಡಿದಂತಾಗಿದೆ.

ಸದ್ಯ ಅಡಿಕೆ ಧಾರಣೆ ಏರುಗತಿಯಲ್ಲಿ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಮುಂದುವರೆಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories