ರಾಜ್ಯದ ಆರೋಗ್ಯ ಸೇವಾ ವ್ಯವಸ್ಥೆಯನ್ನು ಬಲಪಡಿಸುವ ದಿಶೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯನ್ನಿಡಲು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ಧತೆ ನಡೆಸಿದೆ. ರಾಜ್ಯದ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸಲು 432 ಸ್ಟಾಫ್ ನರ್ಸ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿಯುಳ್ಳ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಭರ್ತಿ ಪ್ರಕ್ರಿಯೆಯು ನರ್ಸಿಂಗ್ ವೃತ್ತಿಯಲ್ಲಿ ವೃತ್ತಿಪರವಾಗಿ ಸೇವೆ ಸಲ್ಲಿಸಲು ಬಯಸುವವರಿಗೆ ಒಳ್ಳೆಯ ಅವಕಾಶವಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಶೈಕ್ಷಣಿಕ ಅರ್ಹತೆ:
ಸ್ಟಾಫ್ ನರ್ಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜನರಲ್ ನರ್ಸಿಂಗ್ ಮತ್ತು ಮಿಡ್ವೈಫರಿ (GNM) ಅಥವಾ ಬ್ಯಾಚಲರ್ ಆಫ್ ಸೈನ್ಸ್ (B.Sc) ನರ್ಸಿಂಗ್ ಪದವಿ ಹೊಂದಿರಬೇಕು. ಈ ಶೈಕ್ಷಣಿಕ ಅರ್ಹತೆ ಕಡ್ಡಾಯವಾಗಿದೆ. ಅನುಭವ ಮತ್ತು ಇತರ ನಿರ್ದಿಷ್ಟ ನಿಬಂಧನೆಗಳನ್ನು ಸರ್ಕಾರಿ ಅಧಿಸೂಚನೆಯಲ್ಲಿ ವಿವರವಾಗಿ ತಿಳಿಸಲಾಗುವುದು.
ವಯೋಮಿತಿ:
ಈ ಭರ್ತಿಯಲ್ಲಿ ಭಾಗವಹಿಸಲು ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 40 ವರ್ಷಗಳಾಗಿರುತ್ತದೆ. ಹಾಗೂ, ಎಸ್ಸಿ/ಎಸ್ಟಿ, ಓಬಿಸಿ, ವಿಕಲಾಂಗರು ಮತ್ತು ಇತರೆ ರಕ್ಷಿತ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ವಯೋ ಮಿತಿಯಲ್ಲಿ ರಿಯಾಯತಿ ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ (Written Test) ಮತ್ತು ನಂತರದ ವೈಯಕ್ತಿಕ ಸಂದರ್ಶನ (Personal Interview) ಮೂಲಕ ನಡೆಯುವ ನಿರೀಕ್ಷೆಯಿದೆ. ಈ ಎರಡೂ ಹಂತಗಳಲ್ಲಿ ಯಶಸ್ವಿಯಾಗುವ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರದ ನಿರ್ಧರಿಸಿದ ಡಿಎಚ್ಎಫ್ಡಬ್ಲ್ಯೂಎಸ್ (DHAFWSS) ಮಾನದಂಡಗಳ ಪ್ರಕಾರ ಸಂಬಳ ಮತ್ತು ಇತರ ಲಾಭಗಳನ್ನು ನೀಡಲಾಗುವುದು.
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಈ ಭರ್ತಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸುವುದು ಸಂಪೂರ್ಣವಾಗಿ ಆನ್ ಲೈನ್ ಮಾಧ್ಯಮದಲ್ಲಿ ನಡೆಯುತ್ತದೆ. ಅಭ್ಯರ್ಥಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ ಸೈಟ್ಗೆ ಭೇಟಿ ನೀಡಬೇಕು. ನಂತರ, ವೆಬ್ ಸೈಟ್ನಲ್ಲಿರುವ ‘ಕೆರಿಯರ್’ ಅಥವಾ ‘ರಿಕ್ರೂಟ್ಮೆಂಟ್’ ವಿಭಾಗದಲ್ಲಿ ಲಭ್ಯವಿರುವ ಅರ್ಜಿ ಫಾರ್ಮ್ ಅನ್ನು ಸರಿಯಾಗಿ ಪೂರೈಸಿ ಸಲ್ಲಿಸಬೇಕು.
ಅಧಿಕೃತ ವೆಬ್ ಸೈಟ್: https://hfwcom.karnataka.gov.in
ಈ ಭರ್ತಿ ಪ್ರಕ್ರಿಯೆಗೆ ಯಾವುದೇ ರೀತಿಯ ಅರ್ಜಿ ಶುಲ್ಕವಿಲ್ಲ (No Application Fee). ಅರ್ಜಿದಾರರು ಶುಲ್ಕವಿಲ್ಲದೆ ಅರ್ಜಿ ಸಲ್ಲಿಸಬಹುದು.
ಮುಖ್ಯ ಸೂಚನೆಗಳು:
ಅರ್ಜಿ ಫಾರ್ಮ್ ಅನ್ನು ಸಲ್ಲಿಸುವ ಮುನ್ನ, ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆಗಳು, ವಯಸ್ಸು, ವಿಳಾಸ, ಮೊಬೈಲ್ ನಂಬರ್, ಇಮೇಲ್ ID, ಇತ್ಯಾದಿ ಎಲ್ಲಾ ವಿವರಗಳನ್ನು ಎರಡು ಬಾರಿ ಪರಿಶೀಲಿಸುವಂತಿ ಸೂಚಿಸಲಾಗಿದೆ. ಅಗತ್ಯವಾದ ದಾಖಲೆಗಳಾದ ಪಾಸ್ ಪೋರ್ಟ್ ಗಾತ್ರದ ಫೋಟೋ, ಸಹಿ, ಶೈಕ್ಷಣಿಕ ಪ್ರಮಾಣಪತ್ರಗಳ ಸ್ಕ್ಯಾನ್ ಕಾಪಿ, ಇತ್ಯಾದಿಗಳನ್ನು ಸರಿಯಾದ ಸೈಜ್ ಮತ್ತು ನಿಗದಿತ ಫಾರ್ಮ್ಯಾಟ್ನಲ್ಲಿ ಮಾತ್ರ ಅಪ್ಲೋಡ್ ಮಾಡಬೇಕು. ದಾಖಲೆಗಳು ಸ್ಪಷ್ಟವಾಗಿ ಗೋಚರಿಸುವಂತಿರಬೇಕು.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Kavitha holds a Master’s degree in Computer Applications (MCA) and has a deep interest in technology. Leveraging her academic background, she writes articles on science and technology, simplifying complex technical topics for general readers. Her work focuses on making cutting-edge advancements in tech accessible and engaging.


WhatsApp Group




