Ampere Nexus: ಭರ್ಜರಿ ಎಂಟ್ರಿ ಕೊಟ್ಟಿದೆ ಹೈ-ಪರ್ಫಾಮೆನ್ಸ್ ಫ್ಯಾಮಿಲಿ ಇ ಸ್ಕೂಟರ್!

Ampere nexus

ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಭರ್ಜರಿಯಾಗಿ ಬಿಡುಗಡೆಗೊಂಡ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ (Family electric scooter ) ಆಂಪಿಯರ್ ನೆಕ್ಸಸ್ (Ampere Nexus).

ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ದಾಖಲೆಯ ಪ್ರಯಾಣವನ್ನು ಸಾಧಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ (India book of record) ನಿರ್ಮಿಸಿರುವ ಆಂಪಿಯರ್ ನೆಕ್ಸಸ್   ಬಿಡುಗಡೆಯಾಗಿದೆ. ಗ್ರೀವ್ ಕಾಟನ್ (greev cotton) ಮಾಲೀಕತ್ವದ ಆಂಪಿಯರ್ ಎಲೆಕ್ಟ್ರಿಕ್ (Ampere Electric) ಕಂಪನಿ ಅದ್ಭುತವಾದ ವೈಶಿಷ್ಟ್ಯತೆಗಳೊಂದಿಗ ತನ್ನ ಹೊಚ್ಚ ಹೊಸ ನೆಕ್ಸಸ್ (Nexus) ಇವಿ ಸ್ಕೂಟರ್ ಬಿಡುಗಡೆ ಮಾಡಿದೆ. ಬಿಡುಗಡೆಗೆ ಮುನ್ನವೇ ಹಲವಾರು ಜನರನ್ನು ಆಕರ್ಷಿಸಿತ್ತು ಆಂಪಿಯರ್ ನೆಕ್ಸಸ್. 1,860 ಕೆ.ಜಿ ತೂಕದ ಪಿಕಪ್ ಟ್ರಕ್ ಅನ್ನು ಎಳೆಯುವ ಸಾಮರ್ಥ್ಯವಿರುವ ಆಂಪಿಯರ್ ನೆಕ್ಸಸ್ ನ ವೈಶಿಷ್ಟ್ಯತೆಗಳೇನು? ಇದರ ಆರಂಭಿಕ ಬೆಲೆ? ಯಾವ ಯಾವ ಬಣ್ಣಗಳಲ್ಲಿ ಆಂಪಿಯರ್ ನೆಕ್ಸಸ್ ಸಿಗುತ್ತದೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ampere select model lunar white 1714464659517

ಇಂದು ಜನಗಳಿಗೆ ಹೆಚ್ಚು ಇಷ್ಟವಾಗುವ ಹಾಗೂ ಅನುಕೂಲವಾಗುವಂತಹ ವಾಹನಗಳನ್ನು ಖರೀದಿಸುವಲ್ಲಿ ಜನರು ಯಾವಾಗಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಹಾಗೆ ಯುವಕ ಯುವತಿಯರು ಬಹಳ ಇಷ್ಟ ಪಡುವುದು ಸ್ಕೂಟರ್ ಗಳನ್ನು. ಇನ್ನು ತಮಗಿಷ್ಟವಾದ ಸ್ಕೂಟರ್ ಗಳನ್ನು  ಖರೀದಿಸಬೇಕೆಂದು ಹುಡುಕಾಟ ನಡೆಸುತ್ತಲೇ ಇರುತ್ತಾರೆ. ಅಂತವರಿಗೆ ಇದೊಂದು ಭರ್ಜರಿ ಆಯ್ಕೆ.1,860 ಕೆ.ಜಿ ತೂಕದ ಪಿಕಪ್ ಟ್ರಕ್ (pickup truck) ಅನ್ನು ಎಳೆಯುವ ಸಾಮರ್ಥ್ಯವಿರುವ ಮೊದಲ ಇಲೆಕ್ಟ್ರಿಕ್ ಸ್ಕೂಟರ್ ಆಗಿ ಗುರುತಿಸಿಕೊಂಡಿರುವ  ಆಂಪಿಯರ್ ನೆಕ್ಸಸ್  ಬಿಡುಗಡೆಯಾಗಿದೆ.

ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಆಂಪಿಯರ್ ನೆಕ್ಸಸ್ 1.10 ಲಕ್ಷ ಆರಂಭಿಕ ಬೆಲೆಯೊಂದಿಗೆ ಗ್ರಾಹಕ ಮನ ಸೆಳೆದಿದೆ.ಇನ್ನು ಈ ಸ್ಕೂಟರ್, ಇದುವರೆಗೆ ಪರಿಚಯಿಸಿರುವ ಬೆರಲ್ಲಾ ಸ್ಕೂಟರ್ ಗಳಿಗಿಂತ ದುಬಾರಿ ಇವಿ ಸ್ಕೂಟರ್ (electronic scooter) ಮಾದರಿಯಾಗಿದೆ. ಹಲವಾರು ವಿಶೇಷತೆಗಳನ್ನು ಒಳಗೊಂಡಿರುವ ಈ ಸ್ಕೂಟರ್ ಭರ್ಜರಿಯಾಗಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ.

ಈ ಸ್ಕೂಟರ್ ವಿಶೇಷತೆಗಳು (scooter Specialties) :

ಆಂಪಿಯರ್ ನೆಕ್ಸಸ್ 3kWh ಎಲ್ಎಫ್ ಪಿ ಬ್ಯಾಟರಿ ಪ್ಯಾಕ್ (LFP battery pack) ನೊಂದಿಗೆ 4kWh ಸಾಮರ್ಥ್ಯದ ಮಿಡ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ (mid mounted electric scooter) ಜೋಡಣೆ ಹೊಂದಿದೆ. ಈ ಮೂಲಕ ಇದು ಪ್ರತಿ ಚಾರ್ಜ್ ಗೆ 136 ಕಿ.ಮೀ ಮೈಲೇಜ್ ನೀಡುವ ಮೂಲಕ ಪ್ರತಿ ಗಂಟೆಗೆ 93 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ. ಆಂಪಿಯರ್ ನೆಕ್ಸಸ್ ನ ಬ್ಯಾಟರಿ ಪ್ಯಾಕ್  ಚಾರ್ಜ್ ಮಾಡಲು ಗರಿಷ್ಠ 3.5 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳಲಿದೆ. ಶೇ30 ಹೆಚ್ಚುವರಿ ಬ್ಯಾಟರಿ ಬಾಳಿಕೆ, ಸುರಕ್ಷಿತ  LFP ಬ್ಯಾಟರಿ, ಪವರ್‌ಫುಲ್ ಮಿಡ್-ಮೌಂಟ್ ಡ್ರೈವ್‌ನೊಂದಿಗೆ ತನ್ನ 4 ಕಿಲೋವ್ಯಾಟ್ ಪೀಕ್ ಮೋಟಾರ್‌ (kilovate peak motor) ಸವಾರಿ ಅನುಭವವನ್ನು ಹೆಚ್ಚಿಸುತ್ತದೆ.

ಆಂಪಿಯರ್ ನೆಕ್ಸಸ್ ಯಾವ ಯಾವ ಬಣ್ಣಗಳಲ್ಲಿ ಸಿಗಲಿದೆ :

ಆಂಪಿಯರ್ ನೆಕ್ಸಸ್ ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಬರುತ್ತಿದ್ದು. ಈ ರೀತಿಯ ವಿಭಿನ್ನವಾದ ಬಣ್ಣಗಳಿಂದ ಜನರನ್ನು ತನ್ನತ್ತ ಸೆಳೆದುಕೊಂಡಿದೆ. ಝನ್ಸ್ಕರ್ ಆಕ್ವಾ (zanskar aqva), ಇಂಡಿಯನ್ ರೆಡ್(Indian red), ಲೂನಾರ್ ವೈಟ್ (loonar White) ಮತ್ತು ಸ್ಟೀಲ್ ಗ್ರೇ(steal grey). ಈ ರೀತಿಯ ನಾಲ್ಕು ವಿಶಿಷ್ಟ  ಬಣ್ಣಗಳನ್ನು ಹೊಂದಿದ್ದು. ಗ್ರಾಹಕರಿಗೆ ಸರಿಹೊಂದುವಂತಹ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ.

ಈ ಸ್ಕೂಟರ್ ವಿನ್ಯಾಸ (scooter style) :

ಹೊಸ ಇವಿ ಸ್ಕೂಟರಿನ ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚಿನ ಫೀಚರ್ಸ್ ಗಳನ್ನು ನೀಡಲಾಗಿದೆ.ಇದರಲ್ಲಿ 7 ಇಂಚಿನ ಕಲರ್ ಸ್ಕ್ರೀನ್ ಡಿಸ್ ಪ್ಲೇ, ಸ್ವಿಚ್ ಗೇರ್ ಹೊಂದಿರುವ ಹ್ಯಾಂಡಲ್ ಬಾರ್, ಫುಲ್ ಎಲ್ಇಡಿ ಲೈಟಿಂಗ್, ಡೈಮಂಡ್ ಕಟ್ ಹೆಡ್‌ಲ್ಯಾಂಪ್‌ಗಳು ಮತ್ತು ಆರ್ಕ್ಟಿಕ್ ಟರ್ನ್-ಪ್ರೇರಿತ ಟೈಲ್ ಲ್ಯಾಂಪ್‌ಗಳು, ಹಗುರವಾದ ಅಲ್ಯೂಮಿನಿಯಂ ಗ್ರಾಬ್ ಹ್ಯಾಂಡಲ್‌, ದೊಡ್ಡ ಆಸನ ಮತ್ತು ಬ್ಲೂಟೂಥ್ ಕನೆಕ್ವಿಟಿ ಗಳನ್ನು ನೀಡಲಾಗಿದೆ. ಐದು ರೈಡಿಂಗ್ ಮೋಡ್ ಗಳನ್ನು ನೀಡಲಾಗಿದ್ದು. ಹಿಲ್ ಹೋಲ್ಡ್ ಫೀಚರ್ಸ್ (hearo gold feature) ಸಹ ಜೋಡಣೆಯಾಗಿದೆ.

ಗ್ರೀವ್ಸ್ ಇಲೆಕ್ಟ್ರಿಕ್ ಮೊಬಿಲಿಟಿ ಸಿಇಒ (greevs electric mobility CEO) ವಿಜಯ ಕುಮಾರ್ (vijay kumar) ಮಾತನಾಡಿ, “ಹೊಸ ಆಂಪಿಯರ್ ನೆಕ್ಸಸ್‌ನ ಬಿಡುಗಡೆಯು ತುಂಬಾ ಸಂತಸವನ್ನು ತಂದಿದೆ. ಹೈ-ಸ್ಪೀಡ್ (high speed) ಎಲೆಕ್ಟ್ರಿಕ್ ಸ್ಕೂಟರ್ ಸುಸ್ಥಿರ ಸಾರಿಗೆಯ ಬಗ್ಗೆ ನಮಗಿರುವ ಬದ್ಧತೆಯ ಮಹತ್ವದ ಸಾಧನೆಯನ್ನು ಸೂಚಿಸುತ್ತದೆ. ಜನರ ನಿತ್ಯದ ಆಕಾಂಕ್ಷೆಗಳನ್ನು ನಿಭಾಯಿಸಿಕೊಳ್ಳಲು ಸಿದ್ಧವಾಗಿರುವವರಿಗೆ ಆಂಪಿಯರ್ ನೆಕ್ಸಸ್ ಬದ್ಧವಾಗಿದೆ ಎಂದರು.

ಸೂಚನೆ (notice) :

ಆಂಪಿಯರ್ ನೆಕ್ಸಸ್ ಅನ್ನು ಆನ್‌ಲೈನ್‌ನಲ್ಲಿ ಎರಡು ರೂಪಾಂತರಗಳಲ್ಲಿ (ನೆಕ್ಸಸ್ ಎಕ್ಸ್ ಮತ್ತು ನೆಕ್ಸಸ್ ಎಸ್.ಟಿ) ಬುಕ್ ಮಾಡಬಹುದು. ರಾಷ್ಟ್ರವ್ಯಾಪಿ 400 ಡೀಲರ್‌ಶಿಪ್‌ಗಳು ಮತ್ತು ಟಚ್‌ಪಾಯಿಂಟ್‌ಗಳಲ್ಲಿ ಟೆಸ್ಟ್ ರೈಡ್‌ಗಳ ಅವಕಾಶವನ್ನು ಕಲ್ಪಿಸಲಾಗಿದೆ. ವಿತರಣೆಯು ಮೇ 2024 ರ ದ್ವಿತೀಯಾರ್ಧದಿಂದ ಭಾರತದಾದ್ಯಂತ ಲಭ್ಯವಿರುತ್ತದೆ ಎಂದು ಕಂಪನಿ ತಿಳಿಸಿದೆ.

ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ (family electric scooter ) ಆಂಪಿಯರ್ ನೆಕ್ಸಸ್ (Ampere Nexus)  ಯುವಕ ಹಾಗೂ ಯುವತಿಯರಿಗೆ ಬಹಳ ಇಷ್ಟವಾಗುವಂತಹ ಹಾಗೂ ಅರಾಮದಾಯಕ ಸವಾರಿಗೆ ಸವಾರರಿಗೆ ಒಂದು ಉತ್ತಮ ಆಯ್ಕೆ ಎಂದರೆ ತಪ್ಪಾಗಲಾರದು.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿ

ಈ ಮಾಹಿತಿಗಳನ್ನು ಓದಿ


WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!