Picsart 25 11 21 22 22 46 737 scaled

ಈ ತಿಂಗಳ ಕೊನೆ ಅಥವಾ ಡಿಸೆಂಬರ್‌ಗೆ ಎಲ್ಲಾ ITR ರಿಫಂಡ್ ಬಿಡುಗಡೆ: ತೆರಿಗೆದಾರರಿಗೆ CBDT ಭರವಸೆ

Categories:
WhatsApp Group Telegram Group

ಭಾರತದಲ್ಲಿ ಪ್ರತೀ ಹಣಕಾಸು ವರ್ಷ ಮುಗಿದ ನಂತರ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವುದು ಕಾನೂನುಬದ್ಧ ಜವಾಬ್ದಾರಿ. ವ್ಯಕ್ತಿಯೊಬ್ಬನು ವರ್ಷದಲ್ಲಿ ಗಳಿಸಿದ ಸಂಪೂರ್ಣ ಆದಾಯ, ಅದರಲ್ಲಿ ಈಗಾಗಲೇ ಕಡಿತಗೊಂಡಿರುವ ತೆರಿಗೆ (TDS), ಪಾವತಿಸಬೇಕಾದ ಹೆಚ್ಚುವರಿ ತೆರಿಗೆ ಅಥವಾ ಮರುಪಾವತಿಯಾಗಬೇಕಾದ ಮೊತ್ತ ಇವೆಲ್ಲವನ್ನೂ ಐಟಿಆರ್ ಮೂಲಕ ಘೋಷಿಸುತ್ತಾರೆ. ಕೆಲಸಗಾರರು, ಉದ್ಯಮಿಗಳು, ಸ್ವಯಂ ಉದ್ಯೋಗಿಗಳು ಸೇರಿದಂತೆ ಕೋಟ್ಯಂತರ ತೆರಿಗೆದಾರರು ಈಗಾಗಲೇ 2025–26 ರ ಐಟಿಆರ್ ಸಲ್ಲಿಸಿದ್ದಾರೆ. ಆದರೆ ರಿಟರ್ನ್ ಹಾಕಿ ಬಹಳ ದಿನ ಆಯಿತು ಇನ್ನೂ ರಿಫಂಡ್ ಏಕೆ ಬಂದಿಲ್ಲ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕೆಲವರು ತಮ್ಮ ಐಟಿಆರ್ ರಿಫಂಡ್ ಈಗಾಗಲೇ ಪಡೆದಿದ್ದರೆ, ಇನ್ನೂ ಹಲವರು ಪ್ರತಿದಿನವೂ ಖಾತೆಯನ್ನು ಪರಿಶೀಲಿಸುತ್ತಾ ನಿರೀಕ್ಷೆಯಲ್ಲಿ ಇದ್ದಾರೆ. ರಿಫಂಡ್ ವಿಳಂಬವಾಗುತ್ತಿರುವ ಕಾರಣಗಳ ಬಗ್ಗೆ ಸ್ಪಷ್ಟನೆ ಕೊಡಲು, ಕೇಂದ್ರ ನೇರ ತೆರಿಗೆ ಮಂಡಳಿ (CBDT) ಅಧ್ಯಕ್ಷ ರವಿ ಅಗರ್‌ವಾಲ್ ವಿಳಂಬದ ಕಾರಣಗಳನ್ನು ತಿಳಿಸಿದ್ದಾರೆ.

ರಿಟರ್ನ್ ರಿಫಂಡ್ ವಿಳಂಬವಾಗಲು ಪ್ರಮುಖ ಕಾರಣಗಳೇನು?:

ನವದೆಹಲಿಯ ಇಂಡಿಯಾ ಇಂಟರ್ನ್ಯಾಷನಲ್ ಟ್ರೇಡ್ ಫೇರ್ (IITF) ವೇಳೆ ಮಾತನಾಡಿದ CBDT ಅಧ್ಯಕ್ಷ ರವಿ ಅಗರ್‌ವಾಲ್ ಕೆಲವು ಮುಖ್ಯ ಕಾರಣಗಳನ್ನು ತಿಳಿಸಿದ್ದಾರೆ.
ತಪ್ಪಾಗಿ ತೆರಿಗೆ ಕಡಿತ (TDS mismatch):
ಕೆಲವು ತೆರಿಗೆದಾರರ ಖಾತೆಯಲ್ಲಿ ತಪ್ಪು ಪ್ರಮಾಣದಲ್ಲಿ ತೆರಿಗೆ ಕಟ್ ಆಗಿ ದಾಖಲಾಗಿರುವುದು ಕಂಡುಬಂದಿದೆ.
ಇದನ್ನು ಇಲಾಖೆ ಪರಿಶೀಲಿಸುತ್ತಿರುವುದರಿಂದ ರಿಫಂಡ್ ತಡವಾಗುತ್ತಿದೆ.

ಐಟಿಆರ್ ಸಲ್ಲಿಸುವಾಗ ಬಿಟ್ಟ ಮಾಹಿತಿಗಳು:

ಪ್ಯಾನ್–ಆಧಾರ್ ಮ್ಯಾಚ್ ಆಗದಿರುವುದು, ಬ್ಯಾಂಕ್ ಖಾತೆ ಸರಿಯಾಗಿ ಲಿಂಕ್ ಮಾಡದಿರುವುದು, ಅಥವಾ ಆದಾಯದ ವಿವರಗಳಲ್ಲಿ ತಪ್ಪು ಇಂತಹ ಮಾಹಿತಿಯ ಕೊರತೆ ಕಂಡುಬಂದರೆ ಇಲಾಖೆ ಅದನ್ನು ತಿದ್ದುಪಡಿ ಮಾಡಲು ತೆರಿಗೆದಾರರನ್ನು ಸಂಪರ್ಕಿಸುತ್ತದೆ. ಇದರಿಂದ ಪ್ರಕ್ರಿಯೆ ನಿಧಾನಗೊಳ್ಳುತ್ತದೆ.

ಕಡಿಮೆ ಮೊತ್ತದ ರಿಫಂಡ್‌ಗಳನ್ನು ಮೊದಲಿಗೆ ಬಿಡುಗಡೆ ಮಾಡಲಾಗುತ್ತಿದೆ:

ಅತಿ ಕಡಿಮೆ ಮೊತ್ತದ ರಿಫಂಡ್‌ಗಳನ್ನು ತಕ್ಷಣ ಬಿಡುಗಡೆ ಮಾಡಲಾಗುತ್ತದೆ. ಹೆಚ್ಚು ಮೊತ್ತದ ಅಥವಾ ಪರಿಶೀಲನೆ ಅಗತ್ಯವಿರುವ ರಿಫಂಡ್‌ಗಳಿಗೆ ಸ್ವಲ್ಪ ಸಮಯ ಹಿಡಿಯುತ್ತದೆ.

ಇದೊಂದು ನಿರಂತರ ಪ್ರಕ್ರಿಯೆಯಾಗಿದೆ, ಉಳಿದಿರುವ ಎಲ್ಲಾ ITR ರಿಫಂಡ್‌ಗಳನ್ನು ಈ ತಿಂಗಳ ಕೊನೆಯಲ್ಲಿ ಅಥವಾ ಡಿಸೆಂಬರ್ ವೇಳೆಗೆ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ನೇರ ತೆರಿಗೆ ಮಂಡಳಿ (CBDT) ಅಧ್ಯಕ್ಷ ರವಿ ಅಗರ್‌ವಾಲ್ ತಿಳಿಸಿದ್ದಾರೆ.

ಐಟಿಆರ್ ರಿಫಂಡ್ ಸ್ಟೇಟಸ್ ಹೇಗೆ ನೋಡಬೇಕು?:

ಮೊದಲಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ.
ನಂತರ ನಿಮ್ಮ User ID ಮತ್ತು Password ಬಳಸಿ ಲಾಗಿನ್ ಆಗಿ.
e-file -Income Tax Returns – View Filed Returns ಕ್ಲಿಕ್ ಮಾಡಿ.
ಬೇಕಾದ Assessment Year ಆಯ್ಕೆ ಮಾಡಿ, ರಿಫಂಡ್ ಸ್ಟೇಟಸ್ ನೋಡಬಹುದು.
View Details ಕ್ಲಿಕ್ ಮಾಡಿದರೆ ಐಟಿಆರ್ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ.

ರಿಟರ್ನ್ ವಿಳಂಬವಾಗುವ ಇತರೆ ಸಾಮಾನ್ಯ ಕಾರಣಗಳು ಯಾವುವು?:

ಬ್ಯಾಂಕ್ ಖಾತೆ pre-validation ಆಗಿರದಿರುವುದು.
ಹೆಸರು/ಪ್ಯಾನ್/ಆಧಾರ್ ಅಸಮಾನತೆ.
Form 26AS ಮತ್ತು ITR ಡೇಟಾ ಹೊಂದಿಕೆಯಾಗದಿರುವುದು.
ಹೆಚ್ಚುವರಿ ಪರಿಶೀಲನೆ (scrutiny) ಗೆ ಕೇಸ್ ಹೋಗಿರುವುದು.
ITR ಸಲ್ಲಿಸುವಾಗ ಮಾಹಿತಿ ತಪ್ಪಿದ್ದರೆ ಅಥವಾ ದಾಖಲೆಗಳಲ್ಲಿ ಹೊಂದಾಣಿಕೆ ಇಲ್ಲದಿದ್ದರೆ ಮರುಪಾವತಿ ಪ್ರಕ್ರಿಯೆ  ನಿಧಾನಗೊಳ್ಳುತ್ತದೆ.

ಒಟ್ಟಾರೆಯಾಗಿ, ITR ರಿಫಂಡ್ ವಿಳಂಬವಾಗಿರುವುದು ಸಾಮಾನ್ಯ ವಿಷಯ. ಆದರೆ, ಇದರ ಹಿಂದೆ ನಿಖರ ಕಾರಣಗಳಿವೆ ಮಾಹಿತಿ ಹೊಂದಾಣಿಕೆ, ತಪ್ಪಾದ TDS, ಬ್ಯಾಂಕ್ ಡೀಟೆಲ್ಸ್ ತೊಂದರೆ, ಅಥವಾ ಹೆಚ್ಚುವರಿ ಪರಿಶೀಲನೆ. CBDT ಪ್ರಕಾರ, ಬಾಕಿ ಉಳಿದ ಎಲ್ಲಾ ರಿಫಂಡ್‌ಗಳನ್ನು ಈ ತಿಂಗಳಲ್ಲಿ ಅಥವಾ ಡಿಸೆಂಬರ್ ವೇಳೆಗೆ ಬಿಡುಗಡೆ ಮಾಡಲು ಇಲಾಖೆ ಕ್ರಮ ಕೈಗೊಂಡಿದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories