ರಾಜ್ಯ ಸರ್ಕಾರಿ ನೌಕರರೇ ಆಸ್ತಿ ಮತ್ತು ಋಣ ಪಟ್ಟಿ ಸಲ್ಲಿಸಲು ಕೊನೆಯ ಸೂಚನೆ!

for government employees

ಎಲ್ಲಾ ನೌಕರರು/ಅಧಿಕಾರಿಗಳಿಗೆ ಗಮನ: ಏಪ್ರಿಲ್ ಕೊನೆಯೊಳಗೆ ಆಸ್ತಿ-ಋಣ ಪಟ್ಟಿ ಸಲ್ಲಿಸಿ!ರಾಜ್ಯ ಸರ್ಕಾರದಿಂದ ಕಡ್ಡಾಯ ಸೂಚನೆ.

2023-24ನೇ ಸಾಲಿಗೆ ಎಲ್ಲಾ ನೌಕರರು ಮತ್ತು ಅಧಿಕಾರಿಗಳು ತಮ್ಮ ಆಸ್ತಿ ಮತ್ತು ಸಾಲದ ಪಟ್ಟಿಯನ್ನು ಈ ತಿಂಗಳ ಅಂತ್ಯದೊಳಗೆ ಸಲ್ಲಿಸುವಂತೆ ರಾಜ್ಯ ಸರ್ಕಾರವು ಕಡ್ಡಾಯಗೊಳಿಸಲಾಗಿದೆ. ಈ ಸೂಚನೆಯನ್ನು ಎಲ್ಲಾ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಕಳುಹಿಸಲಾಗಿದೆ. ಈ ಸೂಚನೆಯ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿಯಬೇಕೇ? , ಹಾಗಿದ್ದಲ್ಲಿ ಪ್ರಸ್ತುತ ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ.

ಕರ್ನಾಟಕ ಆಡಳಿತ ಸುಧಾರಣಾ ಆಯೋಗ(Karnataka Administrative Reforms Commission)ದ 7ನೇ ವರದಿಯ ಪ್ರಕಾರ, ರಾಜ್ಯ ಸರ್ಕಾರ, ಸಾರ್ವಜನಿಕ ವಲಯದ ಮಂಡಳಿಗಳು ಮತ್ತು ನಿಗಮಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಗ್ರೂಪ್ ಎ, ಬಿ ಮತ್ತು ಸಿ ನೌಕರರು ತಮ್ಮ ಆಸ್ತಿ ಮತ್ತು ಋಣದ ವಿವರಗಳನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಬೇಕು. ಈ ಉದ್ದೇಶಕ್ಕಾಗಿ, ಆಸ್ತಿ-ಋಣ ಪಟ್ಟಿ ಮಾಹಿತಿಯನ್ನು ಸಂಬಂಧಿತ ಇಲಾಖೆಗಳ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

ಅಧಿಕೃತ ಜ್ಞಾಪನ ಹಾಗೂ ಸುತ್ತೋಲೆಯ ಪ್ರಕಾರ, ಸರ್ಕಾರಿ ನೌಕರರು ತಮ್ಮ ಆಸ್ತಿ ಮತ್ತು ಋಣ ಪಟ್ಟಿಯನ್ನು ಸಕಾಲದಲ್ಲಿ  ಸಲ್ಲಿಸಬೇಕು ಮತ್ತು ಈ ಪಟ್ಟಿಯನ್ನು ಸಕ್ಷಮ ಪ್ರಾಧಿಕಾರಿಗಳು ಪರಿಶೋಧಿಸಬೇಕೆಂತಲೂ ಸೂಚನೆ ನೀಡಲಾಗಿದೆ.

ಜ್ಞಾಪನ ಹಾಗೂ ಸುತ್ತೋಲೆಯಲ್ಲಿ ವಿವರಿಸಿದ ಮಾರ್ಗ ಸೂಚಿಗಳು ಇಂತಿವೆ:

ಎಲ್ಲಾ ಸರ್ಕಾರಿ ನೌಕರರು (ಗ್ರೂಪ್-ಡಿ ನೌಕರರನ್ನೂ ಒಳಗೊಂಡಂತೆ) ನಡತೆ ನಿಯಮಗಳು 24 ರ ಉಪ ನಿಯಮ (2) ಪಾಲಿಸಬೇಕು. ವಾರ್ಷಿಕ ಆಸ್ತಿ ಮತ್ತು ಋಣ ಪಟ್ಟಿಗಳನ್ನು ಮಾರ್ಚ್ 31-2024 ಒಳಗಾಗಿ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ನಿಗದಿತ ಪ್ರಾಧಿಕಾರಿಗಳಿಗೆ ಸಲ್ಲಿಸಬೇಕು.

ಕರ್ನಾಟಕದಲ್ಲಿ ಗ್ರೂಪ್-ಸಿ ಮತ್ತು ಗ್ರೂಪ್-ಡಿ ನೌಕರರ ಆಸ್ತಿ ಪರಿಶೋಧನೆ, ಆಯಾ ಜಿಲ್ಲಾ ಮಟ್ಟದ ಖಜಾನೆ ಇಲಾಖಾ ಕಚೇರಿಯ ಅಧ್ಯಕ್ಷರು ಪರಿಶೋಧಿಸುವ ಪ್ರಾಧಿಕಾರಿಗಳಾಗಿರುತ್ತಾರೆ.

ಪರಿಶೋಧನೆ ಮತ್ತು ಕ್ರಮಗಳ ಕುರಿತು ಸೂಚನೆಗಳು

ಪರಿಶೋಧನೆ:

ಪರಿಶೋಧನಾ ಅಧಿಕಾರಿಗಳು ಈ ಪಟ್ಟಿಯಲ್ಲಿ ನಮೂದಿಸಲಾದ ವ್ಯವಹಾರಗಳ ಕಾನೂನುಬದ್ಧತೆಯನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು.

ನೌಕರರು ಗಳಿಸಿದ ಆಸ್ತಿಯು ಅವರ ಘೋಷಿತ ಆದಾಯಕ್ಕೆ ಅನುಗುಣವಾಗಿದೆಯೇ ಎಂದು ಪರಿಶೀಲಿಸಬೇಕು.

ಕ್ರಮ:

ಯಾವುದೇ ನೌಕರರ ಆಸ್ತಿ ಅವರ ಘೋಷಿತ ಆದಾಯಕ್ಕಿಂತ ಹೆಚ್ಚಾಗಿ ಕಂಡುಬಂದಿದೆ ಮತ್ತು ಅವರು ಸಮರ್ಥನೆ ನೀಡಲು ವಿಫಲವಾದರೆ, ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸಬೇಕು.

ಈ ರೀತಿಯ ಪ್ರಕರಣಗಳನ್ನು ತನಿಖೆಗಾಗಿ ಲೋಕಾಯುಕ್ತಕ್ಕೆ ವಹಿಸಬೇಕು.

ಹೀಗೆ ಪರಿಶೋಧಿಸಿದ ಫಲಿತಾಂಶವನ್ನು (ಅನುಬಂಧ -01 ರಲ್ಲಿ ಲಗತ್ತಿಸಿದ) ದೃಢೀಕರಣದೊಂದಿಗೆ ಖಜಾನೆ ಆಯುಕ್ತಾಲಯಕ್ಕೆ 2 ತಿಂಗಳೊಳಗಾಗಿ ತಿಳಿಸಬೇಕು.

ಗ್ರೂಪ್ ‘ಸಿ’ ಮತ್ತು ‘ಡಿ’ ಸರ್ಕಾರಿ ನೌಕರರು ತಮ್ಮ ಆಸ್ತಿ ಮತ್ತು ಸಾಲ ಪಟ್ಟಿಯನ್ನು ಖಜಾನೆ ಆಯುಕ್ತಾಲಯಕ್ಕೆ ಕಳುಹಿಸಬೇಕಾಗಿಲ್ಲ.

ಬದಲಾಗಿ, ಈ ಕೆಳಗಿನ ಕ್ರಮ ಅನುಸರಿಸಬೇಕು:

ಜಿಲ್ಲಾ ಖಜಾನೆ:
ಆಸ್ತಿ ಮತ್ತು ಋಣ ಪಟ್ಟಿಯನ್ನು ಸಲ್ಲಿಸಬೇಕು ಮತ್ತು ಸುರಕ್ಷಿತವಾಗಿ ಇರಿಸಬೇಕು.

ಖಜಾನೆ ಆಯುಕ್ತಾಲಯ:
ಅಗತ್ಯಬಿದ್ದರೆ, ಜಿಲ್ಲಾ ಖಜಾನೆಯಿಂದ ಒಟ್ಟಾರೆಯಾಗಿ ಅಥವಾ ಪ್ರತ್ಯೇಕವಾಗಿ ಆಸ್ತಿ ಮತ್ತು ಋಣ ಪಟ್ಟಿಯನ್ನು ಪಡೆಯಬಹುದು.

ಗ್ರೂಪ್’ ಎ’ ಮತ್ತು ‘ಬಿ’ ಅಧಿಕಾರಿಗಳು ತಮ್ಮ ಆಸ್ತಿ ಮತ್ತು ಋಣ ಪಟ್ಟಿಗಳನ್ನು ಏಪ್ರಿಲ್ ಕೊನೆಗೊಳ್ಳುವ ವರೆಗೆ ಖಜಾನೆ ಆಯುಕ್ತಾಲಯಕ್ಕೆ ಸಲ್ಲಿಸುವಂತೆ ಕ್ರಮ ಕೈಗೊಳ್ಳುವುದು.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿ

ಈ ಮಾಹಿತಿಗಳನ್ನು ಓದಿ


WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!