Annabhagya – ಇವತ್ತು ಬ್ಯಾಂಕ್ ಖಾತೆಗೆ ಅಕ್ಕಿ ಹಣ 1530/- ಬಂತು ? ನಿಮಗೆ ಬಂತಾ..? ಈಗಲೇ ಸ್ಟೇಟಸ್ ಚೆಕ್ ಮಾಡಿ. ಇಲ್ಲಿದೆ ಡೈರೆಕ್ಟ್ ಲಿಂಕ್

Picsart 23 07 21 18 28 12 851 1

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಅನ್ನಭಾಗ್ಯ ಯೋಜನೆ(Annabhagya scheme)ಯ ಅಡಿಯಲ್ಲಿ ಹಣವು ನಿಮ್ಮ ಖಾತೆಗೆ ಜಮಾ ಆಗಿದೆಯೇ ಎಂಬ ಸ್ಟೇಟಸ್ ಅನ್ನು ಚೆಕ್ ಮಾಡುವಾಗ PAV response not at received ಎಂದು ಪೇಮೆಂಟ್ ಡೀಟೇಲ್ಸ್ ನಲ್ಲಿ ಬಂದರೆ ಹಣ ಜಮಾ ಆಗುತ್ತದೆಯೇ? ಇಲ್ಲವೇ?, ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಅನ್ನ ಭಾಗ್ಯ ಯೋಜನೆಯ ಸ್ಟೇಟಸ್ (Status of DBT):

ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲಾಗಿ ಹಣ ಹಾಕಲಾಗುತ್ತಿದ್ದು, ನಿಮ್ಮ ಖಾತೆಗೆ ಹಣ ಬಂದಿದೆಯೇ? ಎಷ್ಟು ಹಣ ಜಮೆಯಾಗಿದೆ? ಯಾರ ಖಾತೆಗೆ ಜಮೆಯಾಗಿದೆ? ಎಂಬ ಇತ್ಯಾದಿ ಮಾಹಿತಿ ತಿಳಿಸಿಕೊಡುವ ನಿಟ್ಟಿನಲ್ಲಿ ಆಹಾರ ಇಲಾಖೆಯು ವೆಬ್‌ಸೈಟ್‌ ಲಿಂಕ್‌ ಬಿಡುಗಡೆ ಮಾಡಿರುವುದು ನಿಮಗೆಲ್ಲ ತಿಳಿದೇ ಇದೆ. ಹಾಗೆಯೇ ತುಂಬಾ ಜನರು ಈಗಾಗಲೇ ಅವರ ಸ್ಟೇಟಸ್ ಗಳನ್ನು ಚೆಕ್ ಮಾಡಿ ಕೊಂಡಿದ್ದೀರಿ.

ration card 444

ಹೀಗೆ ಅನ್ನ ಭಾಗ್ಯ ಯೋಜನೆಯ ಹಣದ ಸ್ಟೇಟಸ್ ಅನ್ನು ಚೆಕ್ ಮಾಡುವಾಗ ಕೆಲವೊಬ್ಬರಿಗೆ, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ಸಂಖ್ಯೆ ಸರಿಯಾಗಿ ಲಿಂಕ್ ಮಾಡಲಾಗಿಲ್ಲ ಎಂಬುವಂತಹ ಹಲವಾರು ಸಮಸ್ಯೆಗಳನ್ನು ನೀವು ಕಾಣುತ್ತೀರಾ, ಅದರಂತೆಯೇ ನೀವು  ಅವುಗಳಿಗೆ ಪರಿಹಾರವನ್ನು ಕೂಡ ಕಂಡುಕೊಂಡಿರುತ್ತೀರಾ. ಇನ್ನು ಕೆಲವರಿಗೆ ಸ್ಟೇಟಸ್ ಅನ್ನು ಚೆಕ್ ಮಾಡುವಾಗ ಯಾವುದೇ ರೀತಿಯ ಸಮಸ್ಯೆ ಇಲ್ಲದಿದ್ದರೂ ಕೂಡ ಪೇಮೆಂಟ್ ಡೀಟೇಲ್ಸ್ ನಲ್ಲಿ, PAV response not at received ಎಂದು ಕಾಣುತ್ತದೆ. ಈ ರೀತಿಯ ಮೆಸೇಜ್ ನಿಮಗೆ ಕಾಣುತ್ತಿದ್ದರೆ ಇದಕ್ಕೆ ಯಾವುದೇ ರೀತಿಯ ಭಯವನ್ನು ನೀವು ಪಡುವ ಅವಶ್ಯಕತೆ ಇಲ್ಲ.

whatss

ಅನ್ನ ಭಾಗ್ಯ ಯೋಜನೆ ಯ ಸ್ಟೇಟಸ್ ಅನ್ನು ಚೆಕ್ ಮಾಡುವಾಗ PAV  ಎಂದು ಬಂದರೆ ಇನ್ನೂ ಹಣ ನಿಮ್ಮ ಖಾತೆಗೆ ಜಮಾ ಆಗಿಲ್ಲ ಎಂದರ್ಥ. ಆದರೆ ಹಣವು ಖಂಡಿತವಾಗಿಯೂ ಜಮವಾಗುತ್ತದೆ. PAV ಎಂದರೆ Pay Adjustment voture. ಈ ಸಮಸ್ಯೆ ನಿಮ್ಮ ಸ್ಟೇಟಸ್ ಚೆಕ್ ಮಾಡುವಾಗ ಕಾಣಿಸಿಕೊಂಡರೆ, ಬ್ಯಾಂಕಿನ ಸಿಬ್ಬಂದಿಗಳು ಇನ್ನು ಹಣ ಜಮಾ ಆಗಿರುವ ಮಾಹಿತಿಯನ್ನು ಕೊಟ್ಟಿಲ್ಲ ಎಂದು ಹೇಳಲಾಗುತ್ತದೆ. ನಿಮ್ಮ ಖಾತೆಗೆ ಯಾವ ಬ್ಯಾಂಕ್ನಿಂದ ಹಣ ಜಮಾ ಆಗುತ್ತದೆಯೋ ಆ ಬ್ಯಾಂಕಿನ ಸಿಬ್ಬಂದಿಗಳು ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ ಎಂದರ್ಥ. ಹಣ ಜಮಾ ಆದ ನಂತರ, PAV response not at received ಎಂಬ ಜಾಗದಲ್ಲಿ, ಬ್ಯಾಂಕಿನ ಮಾಹಿತಿಗಳನ್ನು ಅಪ್ಡೇಟ್ ಮಾಡಲಾಗುತ್ತದೆ. ಅವುಗಳೆಂದರೆ : ಯಾರ ಖಾತೆಗೆ ಹಣ ಜಮವಾಗಿದೆಯೋ ಅವರ ಹೆಸರು, ಬ್ಯಾಂಕಿನ ಖಾತೆಯ ಸಂಖ್ಯೆ, ಬ್ಯಾಂಕಿನ ಹೆಸರು, ಎಷ್ಟು ಹಣ ಜಮಾ ಆಗಿದೆ  ಎಂಬ ಮಾಹಿತಿಗಳು ಅಲ್ಲಿ ದೊರೆಯುತ್ತವೆ. ಆದರೆ ನೀವು ಈ ಸಮಸ್ಯೆಯ ಮಾಹಿತಿ ಬಂದರೆ ಕೆಲವು ದಿನಗಳು ಕಾಯಬೇಕು ನಂತರ ನಿಮ್ಮ ಖಾತೆಗೆ ಹಣವು ಖಂಡಿತವಾಗಿಯೂ ಜಮವಾಗುತ್ತದೆ. ಯಾವುದೇ ರೀತಿಯ ಹೆದರಿಕೆ ಬೇಡ.

ಅನ್ನಭಾಗ್ಯ ಯೋಜನೆಯ(Annabhagya scheme ) ಹಣ ಬರಲಿದೆ :

ಅಕ್ಕಿ ದಾಸ್ತಾನು ಕೊರತೆಯಿಂದ ಅನ್ನಭಾಗ್ಯ ಅಕ್ಕಿಯ ಬದಲು ಹಣ ಜಮೆ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿರುವುದರ ಬಗ್ಗೆ ನಿಮಗೆಲ್ಲ ತಿಳಿದೇ ಇದೆ. ಅದರಂತೆಯೇ ಜಿಲ್ಲೆಗಳ ಅನುಗುಣವಾಗಿ ಹಣವನ್ನು ಜಮೆಮಾಡಲಾಗುತ್ತಿದೆ. ಬಿಪಿಎಲ್ ರೇಷನ್ ಕಾರ್ಡ್(ration card) ಹೊಂದಿದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಮನೆಯ ಒಬ್ಬ ಸದಸ್ಯರಿಗೆ ರೂ.170ಗಳಂತೆ ಹಣವನ್ನು DBT ಮೂಲಕ transfer ಮಾಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ತಲಾ ಐದು ಕೆಜಿ ಅಕ್ಕಿ ಬದಲು 170 ರೂ.ಗಳನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರ ನಗದು ವರ್ಗಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈವರೆಗೆ 27 ಜಿಲ್ಲೆಗಳ 3.45 ಕೋಟಿ ಫಲಾನುಭವಿಗಳಿಗೆ ಒಟ್ಟು 566 ಕೋಟಿ ರೂಗಳನ್ನು ಪಾವತಿಸಲಾಗಿದೆ.

ನೀವು ಕೆಳಗಡೆ ಗಮನಿಸಬಹುದು ಹಲವಾರು ಜಿಲ್ಲೆಗಳ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಈಗಾಗಲೇ ಹಣ ಜಮಾ ಆಗಿದ್ದು ಒಂದೇ ಕುಟುಂಬದಲ್ಲಿ 9 ಜನ ಇರುವ ಬಿಪಿಎಲ್ ಕಾರ್ಡಿಗೆ ರೂ.1530 ರೂಪಾಯಿ ಜಮಾ ಆಗಿರುವುದನ್ನು ನೀವು ಗಮನಿಸಬಹುದು

ration card 44

ಅನ್ನಭಾಗ್ಯದ ಹಣ ಜಮಾ ಆಗಿದೆಯೇ ಎಂಬುದನ್ನು ನೋಡುವ ವಿಧಾನ :

ಹಂತ 1: ಮೊದಲನೆಯದಾಗಿ ಆಹಾರ ಮತ್ತು ನಾಗರಿಕ ಸರಜರಾಜು ಇಲಾಖೆಯ ಜಾಲತಾಣಕ್ಕೆ ತೆರಳಲು ಇಲ್ಲಿ ಕ್ಲಿಕ್ ಮಾಡಿ  

https://ahara.kar.nic.in/Home/Eservices

ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ

ನಂತರ ಮುಖ ಪುಟ ತೆಗೆಯುತ್ತದೆ ಅದರಲ್ಲಿ ಈ ಸ್ಟೇಟಸ್ ಎಂಬ ಆಯ್ಕೆಯನ್ನು ಒತ್ತಿ, ನಂತರ ಡಿಬಿಟಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.

h1

ಹಂತ 2: ನಂತರ ನಿಮ್ಮ ಜಿಲ್ಲೆಯ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ.

h2

ಹಂತ 3 : ನಂತರ ಕೆಳಗಿನ ಭಾಗದಲ್ಲಿರುವ  ಡಿಬಿಟಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.  h3

ಹಂತ 4: ಮುಂದುವರೆದು ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ. ನಂತರ ಗೋ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವವರ ಸದಸ್ಯರ ಸಂಖ್ಯೆ, ಮುಖ್ಯಸ್ಥರ ಹೆಸರು, ಸದಸ್ಯರ ಯುಐಡಿ,   ಎಷ್ಟು ಹಣ ಜಮಾ ಆಗುತ್ತದೆ ಅಥವಾ ಆಗಿದೆ ಎಂಬುದರ ಮಾಹಿತಿಯನ್ನು ನೀವು ನೋಡಬಹುದು.

ಹೀಗೆ ನೀವು ಅನ್ನಭಾಗ್ಯ ಯೋಜನೆಯಡಿಯಲ್ಲಿನ ಹಣವು ನಿಮಗೆ ಜಮಾ ಆಗಿದೆಯೇ ಅಥವಾ ಅದರ ಸ್ಥಿತಿ ಹೇಗಿದೆ ಎಂಬುವುದನ್ನು ಚೆಕ್ ಮಾಡಬಹುದು.

tel share transformed

ಹಣ ಬಂದ ತಕ್ಷಣ ಮೆಸೇಜ್ ಕೂಡ ಬರಲಿದೆ :

ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗಿದ ತಕ್ಷಣ, ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಇದ್ದ ಮೊಬೈಲ್ ನಂಬರಿಗೆ ಹಣ ಜಮಾ ಆಗಿರುವುದರ ಬಗ್ಗೆ ಮೆಸೇಜ್ ಕೂಡ ಬರುತ್ತದೆ. ರಾಜ್ಯದಲ್ಲಿ ಮೊದಲ ಹಂತದಲ್ಲಿಯೇ ಮೈಸೂರು ಜಿಲ್ಲೆಯ ಜನರಿಗೆ ಅನ್ನಭಾಗ್ಯ ಯೋಜನೆಯ ಹಣ ದೊರೆತಿದೆ. ಜಿಲ್ಲೆಯಲ್ಲಿ 50432 ಅಂತ್ಯೋದಯ ಅನ್ನ ಯೋಜನೆ ಕಾರ್ಡ್‌ದಾರ ಕುಟುಂಬದ ಒಟ್ಟು 2,17,199 ಫಲಾನುಭವಿಗಳು, 6,61,290 ಬಿಪಿಎಲ್‌ ಕಾರ್ಡ್‌ಗಳ 20,83,627 ಜನರಿಗೆ ಅನ್ನಭಾಗ್ಯ ಯೋಜನೆಯಡಿ ಹತ್ತು ಕೆಜಿ ಅಕ್ಕಿ ವಿತರಿಸ ಬೇಕಿದೆ. ಅದರಂತೆ ಎಂದಿನಂತೆ ತಲಾ ಐದು ಕೆಜಿ ಅಕ್ಕಿ ವಿತರಿಸಲಾಗಿದೆ. ಇನ್ನುಳಿದ ಐದು ಕೆಜಿ ಅಕ್ಕಿಗೆ ಬದಲಾಗಿ 170 ರೂ.ಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. ಹಾಗಾಗಿ ಎಲ್ಲಾ ಹಂತಗಳಲ್ಲಿಯೂ ಪ್ರತಿ ಜಿಲ್ಲೆಗೆ ಅನ್ನ ಭಾಗ್ಯದ ಹಣವನ್ನು ಜಮಾ ಮಾಡಲಾಗುತ್ತದೆ. ಇಂತಹ ಮುಖ್ಯವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಅನ್ನಭಾಗ್ಯ, ಗೃಹಲಕ್ಷ್ಮಿ ಹಾಗೂ ಸರ್ಕಾರದ ಯಾವುದೇ ಯೋಜನೆಯ DBT ನೇರ ನಗದು ವರ್ಗಾವಣೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ಚೆಕ್ ಮಾಡಿ

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿapp download

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

app download

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!