ಅತೀ ಕಡಿಮೆ ಬೆಲೆಗೆ ಉತ್ತಮ ಫಿಚರ್ಸ್ ಗಳ ಪ್ರೀಮಿಯಂ ಸ್ಮಾರ್ಟ್ ಟಿವಿಯನ್ನು (smart TV) ಬಿಡುಗಡೆ ಮಾಡಿದ ಶಿಯೋಮಿ (Xiaomi).
ಶಿಯೋಮಿ ಕಂಪೆನಿಯು ರೇಡ್ಮಿ ಕಂಪೆನಿಯ (Redmi company) ಭಾಗವಾಗಿತ್ತು. ಆದರೆ ಇತ್ತೀಚೆಗೆ ಶಿಯೋಮಿ ರೇಡ್ಮಿ ಯನ್ನು ತನ್ನ ಪ್ರತ್ಯೇಕ ಅಂಗಸಂಸ್ಥೆಯನ್ನಾಗಿ ಮಾರ್ಪಡಿಸಿದೆ. ಶಿಯೋಮಿ ಕಂಪನಿ (Xiaomi Company) ತನ್ನ ಬ್ರಾಂಡ್ ನ ಅಡಿಯಲ್ಲಿ ಸಾಕಷ್ಟು ಸ್ಮಾರ್ಟ್ ಫೋನ್ ಗಳನ್ನು (Smartphones) ಬಿಡುಗಡೆ ಮಾಡಿದೆ. ಶಿಯೋಮಿ ಕಂಪನಿ ಮೊಬೈಲ್ ಮಾರುಕಟ್ಟೆಯಲ್ಲಿ ಬಹಳಷ್ಟು ಮುಂಚೂಣಿಯಲ್ಲಿದ್ದು, ಹಲವಾರು ಮೊಬೈಲ್ ಕಂಪೆನಿಗಳಿಗೆ ಪೈಪೋಟಿ ನೀಡುತ್ತಿದೆ. ಇದುವರೆಗೆ ಈ ಕಂಪನಿಯ ಅಡಿಯಲ್ಲಿ ಬಿಡುಗಡೆಗೊಂಡಂತಹ ಸ್ಮಾರ್ಟ್ ಫೋನ್ ಗಳು (smart phones) ಬಹಳಷ್ಟು ಬೇಡಿಕೆಯಲ್ಲಿವೆ. ಹಾಗೆಯೇ ಇದೀಗ ಶಿಯೋಮಿ ಕಂಪೆನಿಯು ತನ್ನ ಹೊಸ ಸ್ಮಾರ್ಟ್ ಟಿವಿಯನ್ನು (smart TV) ಬಿಡುಗಡೆ ಮಾಡಿದೆ. ಈ ಟಿವಿ ಯ ಫೀಚರ್ಸ್ ಗಳೇನು? ಇದರ ಬೆಲೆ ಎಷ್ಟು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
32 ಇಂಚಿನ ಸ್ಮಾರ್ಟ್ ಟಿವಿ A32 :

ಶಿಯೋಮಿ ಕಂಪೆನಿಯು ಭಾರತದಲ್ಲಿ ಹೊಸ 32 ಇಂಚಿನ ಸ್ಮಾರ್ಟ್ ಟಿವಿ A32 ಅನ್ನು ಲಾಂಚ್ ಮಾಡಿದೆ. ಇದು ಕಡಿಮೆ ಬಜೆಟ್ ನ (low budget) ಟಿವಿಯಾಗಿದ್ದು, 15,000 ರೂ.ಗಿಂತ ಕಡಿಮೆ ಬೆಲೆಗೆ ಗ್ರಾಹಕರಿಗೆ ಲಭ್ಯವಿದೆ. ಹಾಗೆಯೇ ಈ ಸ್ಮಾರ್ಟ್ ಟಿವಿಯು ಹಲವಾರು ಫೀಚರ್ಸ್ ಗಳನ್ನು ಹೊಂದಿದ್ದು ಶಿಯೋಮಿ (xiaomi) ಕಂಪನಿಯ ಒಂದು ಉತ್ತಮ ಸ್ಮಾರ್ಟ್ ಟಿವಿಯಾಗಿದೆ.
ಶಿಯೋಮಿ ಸ್ಮಾರ್ಟ್‌ಟಿವಿ ವಿನ್ಯಾಸ (style) :
ಶಿಯೋಮಿ ಕಂಪನಿಯ 32 ಇಂಚಿನ ಸ್ಮಾರ್ಟ್ ಟಿವಿ A32 ಅನ್ನು ಕಂಪೆನಿಯ ಸ್ಮಾರ್ಟ್ ಟಿವಿ ಹಿಂದಿನ ಮಾದರಿಗಳಿಗೆ ಹೋಲಿಸಿದರೆ ಈ ಒಂದು ಸ್ಮಾರ್ಟ್ ಟಿವಿಯು ಹೆಚ್ಚು ಶಕ್ತಿಯ ದಕ್ಷತೆಯನ್ನು ಹೊಂದಿದೆ. ಹಾಗೆಯೇ 2024 ರ ಈ ಟಿವಿಯ ಆವೃತ್ತಿಯು ಲೋಹದ ಬೆಜೆಲ್-ಲೆಸ್ (Begel less) ವಿನ್ಯಾಸವನ್ನು ಹೊಂದಿದೆ. ಶಿಯೋಮಿಯ ಸ್ಥಳೀಯ ವಿವಿಡ್ ಪಿಕ್ಚರ್ ಇಂಜಿನ್‌ನೊಂದಿಗೆ 32-ಇಂಚಿನ ಹೆಚ್‌ಡಿ ಡಿಸ್ಪ್ಲೇಯನ್ನು ಹೊಂದಿದೆ.
ಅಷ್ಟೇ ಅಲ್ಲದೆ ಈ ಸ್ಮಾರ್ಟ್ ಟಿವಿಯು ಬಹು ಬಣ್ಣಗಳನ್ನು ಮತ್ತು ಸ್ಪಷ್ಟವಾದ ಚಿತ್ರವನ್ನು ಪ್ರತಿ ಫ್ರೇಮ್‌ನ ಸ್ಪಷ್ಟತೆಯಲ್ಲಿ ದೊರೆಯುತ್ತದೆ. ಅಷ್ಟೇ ಅಲ್ಲದೆ 8GB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯ ಇದ್ದು, ಕಡಿಮೆ ಲೇಟೆನ್ಸಿ ಮೋಡ್ ಮತ್ತು ಡ್ಯುಯಲ್ ಬ್ಯಾಂಡ್ ವೈ-ಫೈ (dual band WiFi) ಹಾಗೂ ಮಿರಾಕಾಸ್ಟ್ (miracast) ಸೇರಿದಂತೆ ಬಹು ಕನೆಕ್ಟಿವಿಟಿ ಪೋರ್ಟ್‌ಗಳನ್ನು ಈ ಸ್ಮಾರ್ಟ್‌ಟಿವಿಯಲ್ಲಿ ಅಳವಡಿಸಲಾಗಿದೆ.
ಶಿಯೋಮಿ ಸ್ಮಾರ್ಟ್‌ಟಿವಿ ಫಿಚರ್ಸ್ (features) :
ಸ್ಮಾರ್ಟ್ ಟಿವಿ A32 ಯು ಗೂಗಲ್ ಟಿವಿಯಿಂದ ರನ್ ಆಗುತ್ತದೆ. ಹಾಗೆಯೇ ಇದರಲ್ಲಿ 20W ಡಾಲ್ಬಿ ಆಡಿಯೋ ತಂತ್ರಜ್ಞಾನ (dalbi audio technology) ಮತ್ತು ಡಿಟಿಎಸ್ ವರ್ಚುವಲ್ X ಹೊಂದಾಣಿಕೆಗೆ ಬೆಂಬಲವನ್ನು ನೀಡಲಾಗಿದೆ.
ಈ ಸ್ಮಾರ್ಟ್ ಟಿವಿಯು ಶೇಕಡಾ 24 ರಷ್ಟು ಹೆಚ್ಚು ಪವರ್ ಉಳಿತಾಯವನ್ನು ಮಾಡುತ್ತದೆ. ಮತ್ತು ಗ್ರಾಹಕರಿಗೆ ಉತ್ತಮ ವೀಕ್ಷಣೆ ಅನುಭವವನ್ನು ನೀಡುತ್ತದೆ.
ಈ ಟಿವಿಯು 30 ಓಟಿಟಿ ಆಪ್‌ಗಳು (OTT App) ಮತ್ತು 90+ ಲೈವ್ ಚಾನಲ್‌ಗಳಿಗೆ ಪ್ರವೇಶವನ್ನು ಅನುಮತಿಸಲಿದ್ದು, ಯಾವುದೇ ಹೆಚ್ಚುವರಿ ವೆಚ್ಚಗಳಿಲ್ಲದೆ 150+ ಚಾನಲ್‌ಗಳಲ್ಲಿ ಉಚಿತ ಲೈವ್ ಟಿವಿಯನ್ನು ಇದರಲ್ಲಿ ವೀಕ್ಷಿಸಬಹುದಾಗಿದೆ. ಅಷ್ಟೇ ಅಲ್ಲದೆ ಕಿಡ್ಸ್ ಮೋಡ್, ಲೈವ್ ಸ್ಪೋರ್ಟ್ಸ್ ಮತ್ತು ಸ್ಮಾರ್ಟ್ ಶಿಫಾರಸುಗಳಂತಹ ಫೀಚರ್ಸ್ ಅನ್ನೂ ಸಹ ಈ ಸ್ಮಾರ್ಟ್‌ಟಿವಿಯಲ್ಲಿ ನೀಡಲಾಗಿದೆ.
ಶಿಯೋಮಿ ಸ್ಮಾರ್ಟ್‌ಟಿವಿ ಬೆಲೆ (price) ಹಾಗೂ ಲಭ್ಯತೆ (availability) :
ಶಿಯೋಮಿ ಸ್ಮಾರ್ಟ್‌ಟಿವಿ A32 2024 ಆವೃತ್ತಿಯು 12,499 ರೂ.ಗಳ ಅತಿ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ಇದನ್ನು ನೀವು ಮೇ 28 ರಿಂದ ಅಮೆಜಾನ್ (Amazon), ಫ್ಲಿಪ್‌ಕಾರ್ಟ್ (flifcart) ಹಾಗೂ ಶಿಯೋಮಿ ರಿಟೇಲರ್ ಸ್ಟೋರ್ (xiaomi retail store) ಮೂಲಕ ಖರೀದಿ ಮಾಡಬಹುದಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




