ರಾಜ್ಯದಲ್ಲಿ ಹೊಸ ಪೊಲೀಸ್ ನಿಯಮ: ಈ IPC ಸೆಕ್ಷನ್ ಗಳನ್ನು ಹಾಕಲು ಮೇಲಾಧಿಕಾರಿ ಅನುಮೋದನೆ ಕಡ್ಡಾಯ: ಡಿಜಿ-ಐಜಿಪಿ ಆದೇಶ.!

WhatsApp Image 2025 07 25 at 1.26.34 PM

WhatsApp Group Telegram Group

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಡಿಜಿ-ಐಜಿಪಿ ಡಾ. ಎಂ.ಎ. ಸಲೀಂ ಅವರು ಹೊಸ ಆದೇಶವೊಂದನ್ನು ಹೊರಡಿಸಿದ್ದಾರೆ. ಇನ್ನುಮುಂದೆ ಭಾರತೀಯ ದಂಡ ಸಂಹಿತೆ (IPC) 2023ರ ಅಡಿಯಲ್ಲಿ 304, 103(2), 111 ಮತ್ತು 113(b) ಸೆಕ್ಷನ್ಗಳನ್ನು ಪ್ರಥಮ ವರದಿ (FIR) ಅಥವಾ ತನಿಖೆಯಲ್ಲಿ ಸೇರಿಸುವ ಮೊದಲು ಮೇಲ್ಧಿಕಾರಿಗಳ ಲಿಖಿತ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ. ಈ ನಿರ್ಣಯವು ಪೊಲೀಸ್ ಕಾರ್ಯವಿಧಾನದಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಖಚಿತಪಡಿಸುತ್ತದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೊಸ ನಿಯಮದ ವಿವರಗಳು

ಡಿಜಿ-ಐಜಿಪಿ ಅವರು ಹೊರಡಿಸಿದ ಸುತ್ತೋಲೆಯ ಪ್ರಕಾರ, ಕರ್ನಾಟಕದ ಎಲ್ಲಾ ಠಾಣಾ ಮತ್ತು ತನಿಖಾಧಿಕಾರಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು:

1. ದೂರುದಾರರು ಸಲ್ಲಿಸುವ ದೂರನ್ನು ಸ್ವೀಕರಿಸಿದಾಗ, ಅದರಲ್ಲಿ ಭಾರತ ನ್ಯಾಯ ಸಂಹಿತೆ-2023 ರ ಅಪರಾಧಿಕ ಕಲಂ ಗಳಾದ 304, 103(2), 111 & 113(ಬಿ) ಗಳ ಅಪರಾಧಿಕ ಅಂಶಗಳು ಮೇಲ್ನೋಟಕ್ಕೆ ಕಂಡುಬರುತ್ತವೆಯೇ ಎಂಬುದನ್ನು ಪರಿಶೀಲಿಸುವುದು.

2. ಸದರಿ ದೂರಿನಲ್ಲಿ ಮೇಲ್ಕಾಣಿಸಿದ ಅಪರಾಧಿಕ ಅಂಶಗಳು ಮೇಲ್ನೋಟಕ್ಕೆ ಕಂಡುಬರುತ್ತಿವೆ ಎಂದು ಠಾಣಾಧಿಕಾರಿಗೆ ಅಥವಾ ತನಿಖಾಧಿಕಾರಿಗಳಿಗೆ ಕಂಡುಬಂದಾಗ ತನ್ನ ಅಭಿಪ್ರಾಯ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿ, ಸದರಿ ಅನ್ವಯವಾಗುವ ಕಲಂಗಳನ್ನು ಪ್ರಥಮ ವರ್ತಮಾನ ವರದಿಯಲ್ಲಿ ಅಥವಾ ತನಿಖೆಯಲ್ಲಿ ಅಳವಡಿಸಿಕೊಳ್ಳಲು ಅನುಮೋದಿಸುವಂತೆ ಕೋರಿಕೆ

3. ಸದರಿ ಅಭಿಪ್ರಾಯ ವರದಿ ಹಾಗೂ ಕೋರಿಕೆಯನ್ನು ಸ್ವೀಕರಿಸಿದ ಹಿರಿಯ ಪೊಲೀಸ್‌ ಅಧಿಕಾರಿಗಳು ಅವುಗಳನ್ನು ಪರಿಶೀಲಿಸಿ, ಮೇಲ್ನೋಟಕ್ಕೆ ದೂರಿನಲ್ಲಿ ಹಾಗೂ ತನಿಖೆಯಲ್ಲಿ ಸದರಿ ಅಪರಾಧಗಳ ಅಂಶಗಳು ಮೇಲ್ನೋಟಕ್ಕೆ ಕಂಡುಬಂದರೆ ಅಂತಹ ಕಲಂಗಳನ್ನು ಅಳವಡಿಸಿಕೊಳ್ಳಲು ಅನುಮೋದನೆಯನ್ನು ನೀಡುವುದು. ಸದರಿ ಅನುಮೋದನೆಯ ನಂತರ ಠಾಣಾಧಿಕಾರಿ | ತನಿಖಾಧಿಕಾರಿಯು ಅನುಮೋದಿತ ಅಪರಾಧಿಕ ಕಲಂಗಳನ್ನು ಪ್ರಥಮ ವರ್ತಮಾನ ವರದಿ | ತನಿಖೆಯಲ್ಲಿ ಅಳವಡಿಸಿಕೊಂಡು, ತನಿಖೆಯನ್ನು ಕೈಗೊಳ್ಳುವುದು.

4. ಜಿಲ್ಲಾ ಮಟ್ಟದಲ್ಲಿ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರ ಮೇಲ್ಪಟ್ಟು ಹಾಗೂ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸಂಬಂಧಿಸಿದ ವಿಭಾಗದ ಉಪ ಪೊಲೀಸ್ ಆಯುಕ್ತರನ್ನೊಳಗೊಂಡಂತೆ ಮೇಲಾಧಿಕಾರಿಗಳು 304, 103(2) & 111 ಅನುಮೋದನೆಯನ್ನು ನೀಡುವಂತ ಅಧಿಕಾರಿಗಳಾಗಿರುತ್ತಾರೆ.

5. ಕಲಂ, 113(ಬಿ) ಗೆ ಸಂಬಂಧಿಸಿದಂತೆ ಅನುಮೋದನೆ ನೀಡುವ ಅಧಿಕಾರಿಯು, ಜಿಲ್ಲಾ ಮಟ್ಟದಲ್ಲಿ ಪೊಲೀಸ್ ಅಧೀಕ್ಷಕರು ಹಾಗೂ ಕಮೀಷನರೇಟ್ ವ್ಯಾಪ್ತಿಯಲ್ಲಿ ಉಪ ಪೊಲೀಸ್ ಆಯುಕ್ತರು ಒಳಗೊಂಡಂತೆ ಮೇಲಾಧಿಕಾರಿಗಳು ಆಗಿರುತ್ತಾರೆ.

6. ಒಂದು ವೇಳೆ ಕಾನೂನು ಮತ್ತು ಸುವ್ಯವಸ್ಥೆ ಅಥವಾ ಸಾರ್ವಜನಿಕ ಸುರಕ್ಷತೆಯ ತುರ್ತು ಸಂದರ್ಭಗಳಲ್ಲಿ ಲಿಖಿತವಾಗಿ ಕೋರಿಕೆಯನ್ನು ಸಲ್ಲಿಸಲು ಮತ್ತು ಅನುಮೋದನೆಯನ್ನು ಪಡೆದುಕೊಳ್ಳಲು ಸಾಧ್ಯವಾಗದಿದ್ದಲ್ಲಿ, ಆಗ ಸಂಬಂಧಿಸಿದ ಠಾಣಾಧಿಕಾರಿ | ತನಿಖಾಧಿಕಾರಿಗಳು ಮೌಖಿಕವಾಗಿ ತಮ್ಮ ಕೋರಿಕೆಯನ್ನು ಸಲ್ಲಿಸಿ, ಅನುಮೋದಿಸುವ ಹಿರಿಯ ಅಧಿಕಾರಿಯಿಂದ ಮೌಖಿಕವಾಗಿ ಅನುಮೋದನೆಯ ಆದೇಶವನ್ನು ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳುವುದು. ತದನಂತರ 24 ಘಂಟೆಯೊಳಗಾಗಿ ಲಿಖಿತ ರೂಪದಲ್ಲಿ ಘಟನೋತ್ತರ ಅನುಮೋದನೆಯನ್ನು ಘಟಕದ ಮುಖ್ಯಸ್ಥರು ಮೇಲ್ಕಂಡ ಎಲ್ಲಾ ಕ್ರಮಗಳು ಪಾಲನೆಯಾಗುವಂತೆ ನೋಡಿಕೊಳ್ಳುವುದು ಹಾಗೂ ಪ್ರತಿ ಅಪರಾಧ ವಿಶ್ಲೇಷಣಾ ಸಭೆಗಳಲ್ಲಿ ಈ ಈ ಕ್ರಮಗಳು ಪಾಲನೆಯಾಗುತ್ತಿರುವುದನ್ನು ಪರಿಶೀಲಿಸಿಕೊಳ್ಳುವುದು.

WhatsApp Image 2025 07 25 at 1.16.48 PM 1
WhatsApp Image 2025 07 25 at 1.16.48 PM
ಹೊಸ ನಿಯಮದ ಉದ್ದೇಶ ಮತ್ತು ಪ್ರಭಾವ

ಈ ಹೊಸ ಆದೇಶದ ಮೂಲಕ ಪೊಲೀಸ್ ಕ್ರಮಗಳಲ್ಲಿ ಹೆಚ್ಚಿನ ಜವಾಬ್ದಾರಿ ಮತ್ತು ಪಾರದರ್ಶಕತೆ ಖಚಿತವಾಗುತ್ತದೆ. IPCನ ಕೆಲವು ಸೆಕ್ಷನ್ಗಳನ್ನು ಅನಾವಶ್ಯಕವಾಗಿ ಅಥವಾ ದುರುದ್ದೇಶಪೂರಿತವಾಗಿ ಬಳಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ನ್ಯಾಯವ್ಯವಸ್ಥೆಗೆ ಹೆಚ್ಚಿನ ವಿಶ್ವಾಸ ಮೂಡಲಿದೆ.

ಈ ಹೊಸ ನಿಯಮವು ಪೊಲೀಸ್ ಕಾರ್ಯಪದ್ಧತಿಯನ್ನು ಹೆಚ್ಚು ಸುಸಂಘಟಿತಗೊಳಿಸುತ್ತದೆ ಮತ್ತು ನಾಗರಿಕರ ಹಕ್ಕುಗಳನ್ನು ರಕ್ಷಿಸುತ್ತದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!