ಈಗ ಎಲ್ಲಿ ನೋಡಿದರಲ್ಲಿ ಎಲೆಕ್ಟ್ರಿಕ್ ವಾಹನಗಳು ಕಾಣಸಿಗುತ್ತವೆ. ಹಾಗೆಯೇ ಇತ್ತೀಚೆಗೆ ಎಲೆಕ್ಟ್ರಿಕ್ ವಾಹಗಳ( Electronic vehicles) ಹವಾ ತುಂಬಾ ಇದೆ. ಅವುಗಳಿಗೆ ಭಾರೀ ಡಿಮ್ಯಾಂಡ್ ಕೂಡ ಇದೆ. ಈ ಹಿಂದೆ ಎಲೆಕ್ಟ್ರಿಕ್ ವಾಹನಗಳ ಮೇಲೆ ಜನರಿಗೆ ಅಷ್ಟೊಂದು ಪರಿಚಯ ಇರಲಿಲ್ಲ. ಹಾಗೆಯೇ ಅವುಗಳ ಬಗ್ಗೆ ಗೊತ್ತಿರಲಿಲ್ಲ ಆದರೆ, ಈಗ ತಂತ್ರಜ್ಞಾನದ ( Technology ) ಬೆಳವಣಿಗೆಯೊಂದಿಗೆ ಎಲೆಕ್ಟ್ರಿಕ್ ವಾಹನಗಳು ಬಹಳ ಬೇಡಿಕೆಯಲ್ಲಿವೆ. ಮತ್ತು ಹೈ ರೇಂಜ್ ನಲ್ಲಿ ಇವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈಗ ದೇಶದ ಅತಿದೊಡ್ಡ ಕಂಪೆನಿಯಾದ ಎಸ್‍ಯುವಿ ಮಹೀಂದ್ರಾ (Mahindra) ಆಟೋಮೋಟಿವ್, ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಲು ರೆಡಿ ಆಗುತ್ತಿದೆ. ಸದ್ಯಕ್ಕೆ ಈಗ ಹೊಸ ಎಲೆಕ್ಟ್ರಿಕ್ ಗಾಡಿ ಬಿಡುಗಡೆ ಮಾಡುತ್ತಿದೆ ಅದರ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ.
ಮಹೀಂದ್ರಾ XUV.e8 :
ಮಹೀಂದ್ರಾ XUV.e8 ಬಿಡುಗಡೆ ಮಾಡಲು ರೆಡಿ ಆಗಿದೆ. ಈ ಒಂದು ಹೊಸ ಗಾಡಿಯು ಈಗಾಗಲೇ ಜನಪ್ರಿಯವಾಗಿರುವ XUV700 ಎಸ್‍ಯುವಿಯ ಎಲೆಕ್ಟ್ರಿಫೈಡ್ ನ ಮಾದರಿಯನ್ನು ಹೋಲುತ್ತದೆ. ಮತ್ತು ಅವುಗಳ ಬಗ್ಗೆ ಹೊಸ ಹೊಸ ಬದಲಾವಣೆ ಕೂಡ ನಡೆದಿದೆ. ಆ ಮಾಡೆಲ್ ನ ಗಾಡಿಯ ವಿವರ ಹೀಗಿದೆ.
ಮಹೇಂದ್ರ ಕಂಪೆನಿ ಬಿಡುಗಡೆ ಮಾಡಿದ XUV.e8 ಎಸ್‍ಯುವಿಯ ಸ್ಪೈ ಫೋಟೋಗಳು ಈಗಾಗಲೇ ವೈರಲ್ ಆಗಿವೆ. ಈಗ ಕೇವಲ ಆ ಗಾಡಿಯ ಮುಂದಿನ ಭಾಗ ಮತ್ತು ಹಿಂದಿನ ಭಾಗದ ಫೋಟೋ ಗಳು ಅಷ್ಟೇ ಕಾಣಿಸಿಕೊಂಡಿವೆ. ಈ ಒಂದು ಗಾಡಿಯ ಮುಂಭಾಗದಲ್ಲಿ LED DRL ಗಳನ್ನು ಇದ್ದು, ಮುಂಭಾಗದ ಸ್ಪೈ ಶಾಟ್ ಎಂಬ ಹೊಸ ಫೀಚರ್ ಅನ್ನು ಹೊಂದಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ವಿನ್ಯಾಸ ಮತ್ತು ಫೀಚರ್:
ಹಾಗೆಯೇ ಗಾಡಿಯು ವಿಭಿನ್ನವಾಗಿ ಕಂಡರೂ ಹೊಸ ಹೆಡ್‌ಲೈಟ್ ಹೌಸಿಂಗ್ ಅನ್ನು ಹೊಂದಿದೆ. ಮತ್ತು ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಹೊಂದಿರುತ್ತದೆ. ಇನ್ನು ಈ ಎಸ್‍ಯುವಿಯ ಗಾಡಿಯಲ್ಲಿ ಕೂಲಿಂಗ್ ಸಿಸ್ಟಮ್ ನ ಅಗತ್ಯವಿಲ್ಲ. ಇನ್ನು ಈ ಎಸ್‍ಯುವಿಯಲ್ಲಿ ಸೈಡ್ ಪ್ರೊಫೈಲ್‌ನಲ್ಲಿನ ಏಕೈಕ ವ್ಯತ್ಯಾಸವೆಂದರೆ 18-ಇಂಚಿನ ಅಲಾಯ್ ವ್ಹೀಲ್ ಗಳ ಹೊಸ ಸೆಟ್ ಇದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಹಾಗೆಯೇ XUV.e8 ಎಸ್‍ಯುವಿಯ ಡೋರುಗಳು, ಫೆಂಡರ್‌ಗಳು ಮತ್ತು ಒಟ್ಟಾರೆ ಸಿಲೂಯೆಟ್ XUV700 ICE ರೀತಿಯಲ್ಲಿಯೇ ಕಾಣುತ್ತದೆ. ಅದರ ಹಿಂಬದಿಯಲ್ಲೂ ಇದೇ ರೀತಿ ಇರುತ್ತದೆ.
ಇನ್ನು ಇದರ ಒಳಭಾಗದಲ್ಲಿ ನೋಡುವುದಾದರೆ, XUV.e8 ಎಸ್‍ಯುವಿಯ ಡಿಜಿಟಲ್ ಇನ್ಸ್ಟ್ರುಮೆಂಟ್ ಗೇಜ್ ಕ್ಲಸ್ಟರ್ ಇರುತ್ತದೆ. ಮಧ್ಯ ಭಾಗದಲ್ಲಿ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇಯನ್ನು ಹೊಂದಿದೆ. ಇನ್ನು ಪ್ರಯಾಣಿಕರ ಮುಂದೆ ಹೆಚ್ಚುವರಿ ಡಿಸ್ ಪ್ಲೇ ಇರುತ್ತದೆ. ಈ ಒಂದು ಬದಲಾವಣೆಯನ್ನು ಹೊಸ Mercedes-Benz EQS ಸೆಡಾನ್ ಮತ್ತು ಹೊಸ E-ಕ್ಲಾಸ್‌ನಲ್ಲಿ ಇದೇ ರೀತಿಯ ಸೆಟಪ್ ಅನ್ನು ಕಾಣಬಹುದು.
ಇನ್ನು ಈ ಗಾಡಿಯ ಸುರಕ್ಷತೆಯ ದೃಷ್ಟಿಯಿಂದ ನೋಡುವುದಾದರೆ, ಗ್ಲೋಬಲ್ NCAP ಯಿಂದ 5 ಸ್ಟಾರ್ ಸೇಫ್ಟಿ ರೇಟಿಂಗ್ ಕೂಡ ಇದೆ. ಈ ಕಾರು, 7 ಏರ್‌ಬ್ಯಾಗ್ಸ್, ABS ಆಂಟಿಲಾಕ್ ಬೇಕಿಂಗ್ ಸಿಸ್ಟಮ್, ESP ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ( ISOFIX )ಆಂಕರ್ಸ್, ( TPMS )ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಸೇರಿದಂತೆ ಹಲವು ಸುರಕ್ಷತೆಯ ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಕಾರಿನ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ


Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






