ಬೆಂಗಳೂರಿನಲ್ಲಿ ಒಂದು ಬಾಡಿಗೆ ಮನೆ ಸಿಗುವುದು ಅಂದರೆ, ಅದು ಯುದ್ಧ ಗೆದ್ದಷ್ಟೇ ಕಷ್ಟಕರ. ಮನೆ ಸಿಕ್ಕರೂ ಗಗನಕ್ಕೇರಿದ ಬಾಡಿಗೆ, ‘6-10 ತಿಂಗಳ ಅಡ್ವಾನ್ಸ್ ಕೊಡಿ’ ಎಂಬ ಮಾಲೀಕರ ಷರತ್ತುಗಳು, “ಇದು ಬೇಡ, ಹಾಗೆ ಇರಬೇಡಿ” ಎಂಬ ವಿಚಿತ್ರ ರೂಲ್ಸ್‌ಗಳು ಬಾಡಿಗೆದಾರರಿಗೆ ನುಂಗಲಾರದ ತುತ್ತಾಗಿದ್ದವು. ಆದರೆ, ಇನ್ನು ಮುಂದೆ ಆ ಕಷ್ಟಕ್ಕೆ ಬ್ರೇಕ್ ಬೀಳಲಿದೆ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಬಾಡಿಗೆದಾರರ ಪರವಾಗಿ ಮಹತ್ವದ ಬದಲಾವಣೆಯಾಗಿದ್ದು, ಬಹು ನಿರೀಕ್ಷಿತ ಹೊಸ ಮನೆ ಬಾಡಿಗೆ ನಿಯಮಗಳು-2025 ಸದ್ಯದಲ್ಲೇ ಜಾರಿಯಾಗಲಿದೆ. ಈ ನಿಯಮಗಳು ಬೆಂಗಳೂರಿನಂತಹ ಮಹಾನಗರಗಳಲ್ಲಿ ಕೋಟ್ಯಂತರ ಬಾಡಿಗೆದಾರರಿಗೆ ಸಿಹಿಸುದ್ದಿ ತರಲಿವೆ. ಮುಖ್ಯವಾಗಿ, ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಪಾರದರ್ಶಕತೆ ತರಲು ಹಾಗೂ ಹಣಕಾಸಿನ ಶೋಷಣೆಯನ್ನು ತಡೆಯಲು ಸರ್ಕಾರ ಮುಂದಾಗಿದೆ.
ಸೆಕ್ಯೂರಿಟಿ ಡೆಪಾಸಿಟ್ ಕ್ರಾಂತಿ: ಕೇವಲ 2 ತಿಂಗಳ ಬಾಡಿಗೆ!
ಇದು ಬಹುಶಃ ಬಾಡಿಗೆದಾರರು ಕೇಳಲು ಬಯಸಿದ್ದ ಅತಿ ದೊಡ್ಡ ಬದಲಾವಣೆ. ಹೊಸ ನಿಯಮದ ಪ್ರಕಾರ, ಮನೆ ಮಾಲೀಕರು ಬಾಡಿಗೆ ಮನೆಗಳಿಗೆ ಗರಿಷ್ಠ 2 ತಿಂಗಳ ಬಾಡಿಗೆಯನ್ನು ಮಾತ್ರ ಸೆಕ್ಯೂರಿಟಿ ಡೆಪಾಸಿಟ್ (ಮುಂಗಡ ಹಣ) ಆಗಿ ಕೇಳಬಹುದು.
ಇದುವರೆಗೆ ಬೆಂಗಳೂರಿನಲ್ಲಿ 6 ತಿಂಗಳಿಂದ ಹಿಡಿದು 10 ತಿಂಗಳವರೆಗೂ ಬಾಡಿಗೆ ಹಣವನ್ನು ಮುಂಗಡವಾಗಿ ಪಾವತಿಸಬೇಕಿತ್ತು. ಈ ಪದ್ಧತಿಯನ್ನು ಹೊಸ ನಿಯಮದಲ್ಲಿ ಸ್ಪಷ್ಟವಾಗಿ ಕಾನೂನುಬಾಹಿರ ಎಂದು ಘೋಷಿಸಲಾಗಿದೆ. ಇದರಿಂದಾಗಿ, ಒಂದು ಲಕ್ಷ ರೂಪಾಯಿ ಬಾಡಿಗೆ ಇದ್ದರೂ ಇನ್ಮುಂದೆ ಕೇವಲ ಎರಡು ಲಕ್ಷ ಪಾವತಿಸಿದರೆ ಸಾಕು. ಈ ನಿಯಮದಿಂದ ಮಧ್ಯಮ ವರ್ಗದ ಮತ್ತು ಹೊಸದಾಗಿ ನಗರಕ್ಕೆ ಬಂದಿರುವ ಉದ್ಯೋಗಿಗಳ ಮೇಲಿನ ಆರ್ಥಿಕ ಒತ್ತಡ ತಕ್ಷಣಕ್ಕೆ ಕಡಿಮೆಯಾಗಲಿದೆ.
ಕಡ್ಡಾಯ ನೋಂದಣಿ ಮತ್ತು ದಂಡ: ಮಾಲೀಕರ ಹುಸಿ ರೂಲ್ಸ್‌ಗಳಿಗೆ ಬ್ರೇಕ್
ಪಾರದರ್ಶಕತೆ ತರಲು ನಿಯಮಗಳು ಮತ್ತಷ್ಟು ಕಠಿಣವಾಗಿವೆ.
- ಒಪ್ಪಂದ ನೋಂದಣಿ ಕಡ್ಡಾಯ: ಎಲ್ಲಾ ಬಾಡಿಗೆ ಒಪ್ಪಂದಗಳನ್ನು ಒಪ್ಪಂದವಾದ ದಿನಾಂಕದಿಂದ 2 ತಿಂಗಳೊಳಗೆ ಆನ್‌ಲೈನ್ ಅಥವಾ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು.
- ದಂಡದ ಎಚ್ಚರಿಕೆ: ಈ ನಿಯಮ ಪಾಲಿಸದಿದ್ದರೆ ಮಾಲೀಕರು ₹5,000 ದಂಡ ಪಾವತಿಸಬೇಕಾಗುತ್ತದೆ. ಇದು ಕರಾರು ಪತ್ರವಿಲ್ಲದೆ ಅಥವಾ ಕೇವಲ ಸ್ಟ್ಯಾಂಪ್ ಪೇಪರ್ ಮೇಲೆ ಬಾಡಿಗೆಗೆ ನೀಡುವ ಅನಧಿಕೃತ ಪದ್ಧತಿಗೆ ಅಂತ್ಯ ಹಾಡಲಿದೆ.
ಬಾಡಿಗೆ ಹೆಚ್ಚಳಕ್ಕೆ ಲಗಾಮು: ವರ್ಷಕ್ಕೆ ಒಂದೇ ಬಾರಿ
ಇನ್ಮುಂದೆ ಮನಸ್ಸಿಗೆ ಬಂದಾಗ ಬಾಡಿಗೆ ಹೆಚ್ಚಿಸಲು ಮಾಲೀಕರಿಗೆ ಸಾಧ್ಯವಿಲ್ಲ. ಹೊಸ ನಿಯಮದ ಪ್ರಕಾರ, ಮಾಲೀಕರು ವರ್ಷಕ್ಕೆ ಒಂದು ಬಾರಿ ಮಾತ್ರ ಬಾಡಿಗೆ ಹೆಚ್ಚಳ ಮಾಡಲು ಅವಕಾಶವಿದೆ. ಅಷ್ಟೇ ಅಲ್ಲ, ಬಾಡಿಗೆ ಹೆಚ್ಚಿಸುವ ಮೂರು ತಿಂಗಳ ಮುಂಚಿತವಾಗಿಯೇ ಬಾಡಿಗೆದಾರರಿಗೆ ನೋಟಿಸ್ ನೀಡಬೇಕು.
ಡಿಜಿಟಲ್ ಪಾವತಿ ಮತ್ತು ತೆರಿಗೆ ನಿಯಮಗಳು
- ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆಗಾಗಿ ಹೊಸ ನಿಯಮಗಳು ಡಿಜಿಟಲ್ ಪಾವತಿಯನ್ನು ಉತ್ತೇಜಿಸುತ್ತವೆ.
- ತಿಂಗಳಿಗೆ ₹5,000ಕ್ಕಿಂತ ಹೆಚ್ಚಿದ್ದರೆ, ಬಾಡಿಗೆಯನ್ನು ಕಡ್ಡಾಯವಾಗಿ UPI, ಬ್ಯಾಂಕ್ ವರ್ಗಾವಣೆ ಇತ್ಯಾದಿ ಡಿಜಿಟಲ್ ರೂಪದಲ್ಲಿ ಪಾವತಿಸಬೇಕು.
- ತಿಂಗಳಿಗೆ ₹50,000ಕ್ಕಿಂತ ಹೆಚ್ಚಿನ ದುಬಾರಿ ಬಾಡಿಗೆ ಮನೆಗಳಿಗೆ ಟಿಡಿಎಸ್ (TDS) ಕಡಿತವಾಗಲಿದ್ದು, ಈ ಬಾಡಿಗೆ ವ್ಯವಹಾರಗಳು ಸಹ ತೆರಿಗೆ ನಿಯಮಗಳ ಅಡಿಗೆ ಬರಲಿವೆ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ತುಮಕೂರಿನ ಸರ್ಕಾರಿ ನರ್ಸಿಂಗ್ ಕಾಲೇಜಿನಿಂದ B.Sc (Nursing) ಪದವಿ ಪಡೆದಿರುವ ಇವರು, ಸಾರ್ವಜನಿಕ ಜಾಗೃತಿ ಮತ್ತು ಮಾಹಿತಿ ನೀಡುವ ಆಸಕ್ತಿಯಿಂದಾಗಿ ಡಿಜಿಟಲ್ ಪತ್ರಿಕೋದ್ಯಮ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ. ಡಿಜಿಟಲ್ ಮಾಧ್ಯಮ ರಂಗದಲ್ಲಿ 3 ವರ್ಷಗಳ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ನೇಮಕಾತಿಗಳು ಮತ್ತು ಶೈಕ್ಷಣಿಕ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ನಿರುದ್ಯೋಗಿ ಯುವಕ-ಯುವತಿಯರಿಗೆ ಯಾವುದೇ ಗೊಂದಲವಿಲ್ಲದೆ, ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (Verified) ನಿಖರ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದೇ ಇವರ ಬರವಣಿಗೆಯ ಶೈಲಿಯಾಗಿದೆ.


WhatsApp Group





Leave a Reply