ಲಕ್ಷಾಂತರ ಜನರ ಬದುಕಿಗೆ ನಾಡಿ ಆಗಿರುವ ಭಾರತದ ಐಟಿ ಸಿಟಿ ಬೆಂಗಳೂರು ನಗರದಲ್ಲಿ ಪ್ರತಿದಿನ ಸಾವಿರಾರು ಪ್ರಯಾಣಿಕರು ರೈಲು ಮೂಲಕ ಸಂಚಾರ ಮಾಡುತ್ತಾರೆ. ಆದರೆ ರೈಲಿನಿಂದ ಇಳಿದು ಮನೆಗೆ ಹೋಗುವ ವೇಳೆ ಆಟೋ, ಕ್ಯಾಬ್ ಸಿಗದೆ ಪ್ರಯಾಣಿಕರು ಪರದಾಡುತ್ತಾರೆ. ಕೆಲವರು ಸ್ಮಾರ್ಟ್‌ಫೋನ್ ಹೊಂದಿರದ ಕಾರಣ ಆ್ಯಪ್ ಮೂಲಕ ವಾಹನ ಬುಕ್ ಮಾಡಿಕೊಳ್ಳಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಾರೆ. ಮತ್ತೊಂದೆಡೆ ಚಾಲಕರು ಒನ್ ಟು ಡಬಲ್ ಹಣ ಕೇಳುವುದು, ಕರೆದ ಜಾಗಕ್ಕೆ ಬರದೆ ಇರುವುದು ಈ ಎಲ್ಲ ಸಮಸ್ಯೆಗಳಿಗೆ ಇದೀಗ ಪರಿಹಾರ ಸಿಕ್ಕಿದೆ. ಹಾಗಿದ್ದರೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.ತಿಳಿದುಕೊಳ್ಳೋಣ ಬನ್ನಿ.
ಏಸಿ ಕಿಯೋಸ್ಕ್‌ಗಳಲ್ಲಿ ಆಟೋ–ಕ್ಯಾಬ್ ಬುಕ್ಕಿಂಗ್ ವ್ಯವಸ್ಥೆ!:
ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಈಗ ನಗರದಲ್ಲಿನ ಪ್ರಮುಖ ಆರು ರೈಲ್ವೆ ಸ್ಟೇಷನ್‌ಗಳಲ್ಲಿ ಖಾಸಗಿ ಅಗ್ರಿಗೇಟರ್ ಕಂಪನಿಗಳ ಏಸಿ ಬುಕ್ಕಿಂಗ್ ಕಿಯೋಸ್ಕ್‌ಗಳು ತೆರೆಯಲಾಗುತ್ತಿವೆ. ರೈಲಿನಿಂದ ಇಳಿದ ತಕ್ಷಣ ಹೊರಗಡೆ ಬಿಸಿಲಲ್ಲಿ ನಿಂತು ಕಾಯಬೇಕಿಲ್ಲ, ಮೊಬೈಲ್ ಇರಬೇಕಿಲ್ಲ ಕಿಯೋಸ್ಕ್ ರೂಮ್‌ಗೆ ಹೋಗಿ ಕುಳಿತುಕೊಂಡರೆ ಸಿಬ್ಬಂದಿಗಳು ಬುಕಿಂಗ್ ಮಾಡಿ ಕೊಡುತ್ತಾರೆ. ಪ್ರಯಾಣಿಕರು ತಮ್ಮ ಗಮ್ಯಸ್ಥಳ ಹೇಳಿದರೆ ಸಾಕು ಕ್ಯಾಬ್ / ಆಟೋ ತಕ್ಷಣ ದೊರೆಯಲಿದೆ.
ಚಾಲಕರ ಒನ್–ಟು–ಡಬಲ್ ಆಟಕ್ಕೆ ಅಂತ್ಯ!:
ಕಿಯೋಸ್ಕ್ ವ್ಯವಸ್ಥೆಯಿಂದ ಹೆಚ್ಚು ಹಣ ಕೇಳುವ ಚಾಲಕರಿಗೆ ಬ್ರೇಕ್ ಬೀಳಲಿದೆ. ಸುಸಂಘಟಿತ, ನಿಯಂತ್ರಿತ ಬುಕ್ಕಿಂಗ್ ಸೌಲಭ್ಯ ಕೂಡ ದೊರೆಯಲಿದೆ.
ಎಲ್ಲೆಲ್ಲಿ ಕಿಯೋಸ್ಕ್‌ಗಳ ವ್ಯವಸ್ಥೆ ಇರಲಿದೆ?:
ಬೆಂಗಳೂರು ನಗರದಲ್ಲಿನ ಈ ರೈಲ್ವೆ ನಿಲ್ದಾಣಗಳಲ್ಲಿ ಮೊದಲ ಹಂತದಲ್ಲಿ ಕಿಯೋಸ್ಕ್‌ಗಳು ಪ್ರಾರಂಭವಾಗುತ್ತವೆ.
ಕೆಂಪೇಗೌಡ (ಮೆಜೆಸ್ಟಿಕ್) ಕೆ.ಎಸ್.ಆರ್. ರೈಲ್ವೆ ನಿಲ್ದಾಣ
ಬೈಯಪ್ಪನಹಳ್ಳಿ
ಯಶವಂತಪುರ
ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್
ಹೂಡಿ ರೈಲ್ವೆ ಸ್ಟೇಷನ್
ಕೆ.ಆರ್.ಪುರ
ವೈಟ್‌ಫೀಲ್ಡ್ ರೈಲ್ವೆ ಸ್ಟೇಷನ್
ಪ್ರತೀ ಸ್ಟೇಷನ್‌ಗೆ ಎರಡು ಎಸಿ ರೂಮ್‌ಗಳ ಕಿಯೋಸ್ಕ್‌ಗಳನ್ನು ನಿರ್ಮಿಸಲಾಗುತ್ತಿದೆ.
ರೈಲ್ವೆಗೆ 53 ಲಕ್ಷ ರೂ. ಆದಾಯ:
ಪ್ರತಿ ವರ್ಷ ಈ ಖಾಸಗಿ ಕಿಯೋಸ್ಕ್‌ಗಳಿಂದ ರೈಲ್ವೆ ಇಲಾಖೆಗೆ 53 ಲಕ್ಷ ರೂಪಾಯಿ ಆದಾಯ ದೊರೆಯಲಿದೆ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಾಣೇಶ್ ಕೌಜಲಗಿ ಹೇಳಿದ್ದಾರೆ. ಪ್ರಯಾಣಿಕರು ಸಹ ಇದರಿಂದ ಸಾಕಷ್ಟು ಅನುಕೂಲವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊನೆಯದಾಗಿ, ರೈಲಿನಿಂದ ಇಳಿದು ಆಟೋ–ಕ್ಯಾಬ್ ಸಿಗದೆ ಹರಾಸಹ ಪಡುವವರಿಗೆ ಈ ಮುಖಾಂತರ ಗುಡ್ ನ್ಯೂಸ್ ಸಿಕ್ಕಿದೆ. ಸ್ಮಾರ್ಟ್‌ಫೋನ್ ಇಲ್ಲದವರಿಗೂ ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಕುಟುಂಬಗಳು ಎಲ್ಲರಿಗೂ ಇದು ದೊಡ್ಡ ರೀತಿಯಲ್ಲಿ ನೆರವಾಗುವ ನಿರೀಕ್ಷೆ ಇದೆ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ತುಮಕೂರಿನ ಸರ್ಕಾರಿ ನರ್ಸಿಂಗ್ ಕಾಲೇಜಿನಿಂದ B.Sc (Nursing) ಪದವಿ ಪಡೆದಿರುವ ಇವರು, ಸಾರ್ವಜನಿಕ ಜಾಗೃತಿ ಮತ್ತು ಮಾಹಿತಿ ನೀಡುವ ಆಸಕ್ತಿಯಿಂದಾಗಿ ಡಿಜಿಟಲ್ ಪತ್ರಿಕೋದ್ಯಮ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ. ಡಿಜಿಟಲ್ ಮಾಧ್ಯಮ ರಂಗದಲ್ಲಿ 3 ವರ್ಷಗಳ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ನೇಮಕಾತಿಗಳು ಮತ್ತು ಶೈಕ್ಷಣಿಕ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ನಿರುದ್ಯೋಗಿ ಯುವಕ-ಯುವತಿಯರಿಗೆ ಯಾವುದೇ ಗೊಂದಲವಿಲ್ಲದೆ, ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (Verified) ನಿಖರ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದೇ ಇವರ ಬರವಣಿಗೆಯ ಶೈಲಿಯಾಗಿದೆ.


WhatsApp Group





Leave a Reply