ಬೆಂಗಳೂರು: ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ಮೂಲಕ ನೇಮಕಾತಿ ಮಾಡಿಕೊಳ್ಳುವ ಪದ್ಧತಿಯನ್ನು ರದ್ದುಗೊಳಿಸಲು ಕರ್ನಾಟಕ ರಾಜ್ಯ ಸರ್ಕಾರ ಐತಿಹಾಸಿಕ ನಿರ್ಣಯ ಕೈಗೊಂಡಿದೆ. 2028ರ ವೇಳೆಗೆ ಈ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಒಂದು ಹೊಸ ಮಹತ್ವದ ಯೋಜನೆಯನ್ನು ರೂಪಿಸಲಾಗಿದೆ. ಹೊರಗುತ್ತಿಗೆ ಸಿಬ್ಬಂದಿಗೆ ಸಲ್ಲಬೇಕಾದ ವೇತನ, ಪ್ರಾವಿಡೆಂಟ್ ಫಂಡ್ (PF), ಇಎಸ್‌ಐ (ESI) ಮತ್ತು ಇತರ ಕಾನೂನುಬದ್ಧ ಸವಲತ್ತುಗಳ ಪಾವತಿಯಲ್ಲಿ ಖಾಸಗಿ ಏಜೆನ್ಸಿಗಳು ಮಾಡುತ್ತಿರುವ ವಿಳಂಬ ಮತ್ತು ಶೋಷಣೆಯ ದೂರುಗಳ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ……..
ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಇನ್ನೊಂದು ಪ್ರಮುಖ ಕಾರಣ. ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಮತ್ತು ಸರ್ಕಾರಿ ಸೇವೆಯಲ್ಲಿ ನೇರ ಭರ್ತಿಯ ಪ್ರಕ್ರಿಯೆಯನ್ನು ಬಲಪಡಿಸಲು ಸರ್ಕಾರ ಈ ಕ್ರಮಕ್ಕೆ ಇಳಿದಿದೆ.
2028ರ ವೇಳೆಗೆ ಸಂಪೂರ್ಣ ರದ್ದು:
ಈ ದಿಟ್ಟ ನಡೆಯು ಖಾಸಗಿ ಹೊರಗುತ್ತಿಗೆ ಸಂಸ್ಥೆಗಳೊಂದಿಗೆ ಸರ್ಕಾರ ಹೊಂದಿರುವ ಎಲ್ಲಾ ಪ್ರಕಾರದ ಒಪ್ಪಂದಗಳನ್ನು ಮಾರ್ಚ್ 31, 2028ರ ವೇಳೆಗೆ ಹಂತಹಂತವಾಗಿ ಕೊನೆಗೊಳ್ಳಲಿವೆ. ಈ ಗಡುವಿನೊಳಗೆ, ಈಗಿರುವ ಎಲ್ಲಾ ಹೊರಗುತ್ತಿಗೆ ಒಪ್ಪಂದಗಳನ್ನು ಪುನರಾವಲೋಕನಗೊಳಿಸಿ, ಹೊಸ ನೇಮಕಾತಿಗಳನ್ನು ನೇರವಾಗಿ ಭರ್ತಿ ಮಾಡಲು ಸರ್ಕಾರಿ ಮಹತ್ವದ ಹೊಸ ಯೋಜನೆಯನ್ನು ರೂಪಿಸಲಾಗುತ್ತಿದೆ.
ಪ್ರಸ್ತುತ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳು
ಹೊರಗುತ್ತಿಗೆ ಪದ್ಧತಿ ಸಂಪೂರ್ಣವಾಗಿ ರದ್ದಾಗುವವರೆಗೆ, ಪ್ರಸ್ತುತ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ಸಿಬ್ಬಂದಿಯ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸರ್ಕಾರ ಮತ್ತೊಂದು ಮುಖ್ಯ ನಿರ್ಣಯ ತೆಗೆದುಕೊಂಡಿದೆ. ಈ ಸಿಬ್ಬಂದಿಯ ನಿರ್ವಹಣೆ ಮತ್ತು ಅವರಿಗೆ ಸವಲತ್ತುಗಳ ನೀಡಿಕೆಯಲ್ಲಿ ರಾಜ್ಯಾದ್ಯಂತ ‘ಬೀದರ್ ಮಾದರಿ’ಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಮಾದರಿಯು ಸಿಬ್ಬಂದಿಯ ಶೋಷಣೆ ತಡೆಗಟ್ಟುವುದರ ಜೊತೆಗೆ, ಅವರಿಗೆ ನ್ಯಾಯಯುತ ವೇತನ ಮತ್ತು ಇತರ ಲಾಭಗಳನ್ನು ಸಕಾಲಿಕವಾಗಿ ಪಡೆಯಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಪ್ರಸ್ತಾವನೆ:
ರಾಜ್ಯ ಸರ್ಕಾರದ ಈ ಮಹತ್ವಾಕಾಂಕ್ಷಿ ನಿರ್ಣಯಕ್ಕೆ ಕಾನೂನುಬದ್ಧ ರೂಪ ಕೊಡುವ ಕ್ರಮವಾಗಿ, ಡಿಸೆಂಬರ್ 8ರಿಂದ ಆರಂಭವಾಗಲಿರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಈ ಪ್ರಸ್ತಾವನೆಯನ್ನು ಮಂಡಿಸಲು ತಯಾರಿ ನಡೆದಿದೆ. ಈ ಮಸೂದೆ ಶಾಸನ ರೂಪ ಪಡೆದರೆ, ಕರ್ನಾಟಕದ ಸರ್ಕಾರಿ ಉದ್ಯೋಗಗಳ ವ್ಯವಸ್ಥೆಯಲ್ಲಿ ಒಂದು ಮಹತ್ವಪೂರ್ಣ ಬದಲಾವಣೆಯ ಸೂಚನೆಯಾಗಿದೆ. ಇದು ಲಕ್ಷಾಂತರ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ನೇರ ಭರ್ತಿಯ ಮೂಲಕ ನ್ಯಾಯ ದೊರಕಿಸಿಕೊಡುವ ದಿಶೆಯಲ್ಲಿ ಒಂದು ದಿಟ್ಟ ಹೆಜ್ಜೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

ಈ ಮಾಹಿತಿಗಳನ್ನು ಓದಿ
- Railway Jobs: ಉದ್ಯೋಗಾಕಾಂಕ್ಷಿಗಳಿಗೆ ರೈಲ್ವೆಯಲ್ಲಿ 2,500ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಹತೆ ಮತ್ತು ಅರ್ಜಿ ವಿಧಾನ ಇಲ್ಲಿದೆ.
- Bank of India Recruitment 2025: ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ತಿಂಗಳಿಗೆ 1.2 ಲಕ್ಷದವರೆಗೆ ಸಂಬಳ!
- BIGNEWS : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಯಲ್ಲಿ ವಿವಿಧ ಹುದ್ದೆಗಳ ನೇರ ನೇಮಕಾತಿ ಅರ್ಜಿ ಆಹ್ವಾನ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.


WhatsApp Group




