WhatsApp Image 2025 11 22 at 1.04.01 PM

ರಾಜ್ಯದ `ಆಸ್ತಿ’ ಮಾಲೀಕರೇ `ಪೌತಿ’ ಖಾತೆ ಸೇರಿ ವಿವಿಧ ಖಾತೆ ಬದಲಾವಣೆಗೆ ತೆಗೆದುಕೊಳ್ಳುವ ಸಮಯ ಎಷ್ಟು? ಇಲ್ಲಿದೆ ಮಾಹಿತಿ

WhatsApp Group Telegram Group

ರಾಜ್ಯದ ಆಸ್ತಿ ಮಾಲೀಕರೇ ಗಮನಿಸಿ, ಪೌತಿ ಖಾತೆ ಸೇರಿದಂತೆ ವಿವಿಧ ಖಾತೆ ಬದಲಾವಣೆಗೆ ಬೇಕಾಗುವ ಸಮಯ ಎಷ್ಟು? ಈ ಕುರಿತಂತೆ ಸರ್ಕಾರದ ನಿಯಮದ ಪ್ರಕಾರ ಹೀಗಿವೆ ಮಾಹಿತಿ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ..

ಸಾರ್ವಜನಿಕರು ಆನ್ ಲೈನ್ ಮೂಲಕ, ನಾಡಕಛೇರಿಗಳಲ್ಲಿ ಹಾಗೂ ತಾಲ್ಲೂಕ ಭೂಮಿ ಕೇಂದ್ರಗಳಲ್ಲಿ ಪೌತಿ ವಾರಸಾ/ವಿಲ್/ಮೈನರ್ ಗಾರ್ಡಿಯನ್ ಖಾತೆ ಬದಲಾವಣೆಗಳಿಗಾಗಿ ಅರ್ಜಿ ಸಲಿ ಸುತ್ತಾಗೆ ಅರ್ಜಿ ಸಲ್ಲಿಸಿದ ನಂತರ ಭೂಮಿ ಆಪರೇಟರ್ ಲಾಗಿನ್ ನ ಹೊಸ ವಹಿವಾಟು ಸೇರ್ಪಡೆ ಆಯ್ಕೆಗೆ ಸ್ವೀಕೃತಗೊಳ್ಳುತ್ತವೆ. ನಂತರ ಭೂಮಿ ಆಪರೇಟರ್ ಲಾಗಿನ್ ನಲ್ಲಿ ವಹಿವಾಟು ಸಂಬಂಧ ಡೇಟಾ ನಮೂದು ಮಾಡಿ ಚೆಕಿ ಸ್ಟ್ ತಯಾರಿಸಲಾಗುತ್ತದೆ.
ವಹಿವಾಟು ಅನುಮೋದನೆಗೆ ಭೂಮಿ ಶಿರಸ್ತೇದಾರರ ಲಾಗಿನ್ ಗೆ ಸ್ವೀಕೃತವಾಗಿತ್ತವೆ.

ಸರ್ಕಾರಿ ಮಾಲೀಕತ್ವದ ಯಾವುದಾದರು ಸರ್ವೇ ನಂಬರ್ ಇದ್ದಲ್ಲಿ ವಹಿವಾಟು ಅನುಮೋದನೆಗೆ ತಹಶೀಲ್ದಾರ್ ಲಾಗಿನ್ ಗೆ ಸ್ವೀಕೃತವಾಗುತ್ತವೆ.

ತಹಶೀಲ್ದಾರ್/ ಶಿರಸ್ತೇದಾರ್ ರವರ ವಹಿವಾಟು ಅನುಮೋದನೆ ನಂತರ ಭೂಮಿ ಆಪರೇಟರ್ ಲಾಗಿನ್ ನೋಟಿಸ್ ಮುದ್ರಣಕ್ಕಾಗಿ ಸ್ವೀಕೃತವಾಗುತ್ತವೆ.

ನಂತರ ರಾಜಸ್ವ ನಿರಿಕ್ಷಕರ ಲಾಗಿನ್ ಗೆ ಕಡತ ಸ್ವೀಕೃತಿಗಾಗಿ ಕಳುಹಿಸಲಾಗುತ್ತದೆ. ನಂತರ 14 ದಿನಗಳ ನೋಟಿಸ್ ಅವಧಿ ಜಾರಿಯಲ್ಲಿರುತ್ತದೆ.

ನೋಟಿಸ್ ಅವಧಿ ಮುಕ್ತಾಯಗೊಂಡ ನಂತರ ಯಾವುದೇ ತಕರಾರು ಪ್ರಕರಣಗಳು ದಾಖಲಾಗದಿದ್ದಲ್ಲಿ . ಆಪರೇಟರ್ ಲಾಗಿನ್ಗೆ ಬೆಳೆ ನಮೂದು ಮಾಡಲು ಆದೇಶ ವಿವರ ಸೇರ್ಪಡೆ ಆಯ್ಕೆಗೆ ಸ್ವೀಕೃತವಾಗುತ್ತವೆ.

ಬೆಳೆ ನಮೂದು ಮಾಡಿದ ನಂತರ ಮ್ಯುಟೇಶನ್ ಗೆ ಆಯ್ಕೆಗೊಂಡ ವಹಿವಾಟುಗಳು ಅಂತಿಮ ಅನುಮೋದನೆಗಾಗಿ ರಾಜಸ್ವ ನಿರೀಕ್ಷಕರ ಲಾಗಿನ್ ಗೆ ವರ್ಗಾವಣೆಗೊಳ್ಳುತ್ತವೆ.

WhatsApp Image 2025 11 22 at 12.57.56 PM
WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories