Picsart 25 11 15 23 37 01 605 scaled

ಅಮೇರಿಕಾದಲ್ಲಿ ಕೋಟಿ ಸಂಬಳಕ್ಕೂ ಸಿಗುತ್ತಿಲ್ಲ ಮೆಕ್ಯಾನಿಕ್ & ಪ್ಲಂಬರ್ ಕೆಲಸಗಾರರು.!  

Categories:
WhatsApp Group Telegram Group

ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಮುನ್ನಡೆಯುತ್ತಿರುವ ಅಮೆರಿಕದಲ್ಲಿ, ಆಶ್ಚರ್ಯಕರವಾಗಿ ನುರಿತ ಕೈಕೆಲಸದ ಕಾರ್ಮಿಕರ ಕೊರತೆ ತೀವ್ರವಾಗಿ ಕಾಣಿಸುತ್ತಿದೆ. ವರ್ಷಕ್ಕೆ ಕೋಟಿ ರೂಪಾಯಿಗೂ ಹೆಚ್ಚು ಸಂಬಳ ನೀಡಲು ಸಿದ್ಧವಾಗಿದ್ದರೂ, ಮೆಕ್ಯಾನಿಕ್, ಪ್ಲಂಬರ್, ಎಲೆಕ್ಟ್ರಿಶಿಯನ್‌ಗಳಂತಹ ನುರಿತ ವೃತ್ತಿಪರರನ್ನು ಕಂಪನಿಗಳು ಹುಡುಕಲು ಹತರಾಗಿರುವ ಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇದು ಅಮೆರಿಕದ ಆರ್ಥಿಕತೆಯ ಒಂದು ಗಂಭೀರ ವೈಪರೀತ್ಯವನ್ನು ಸೂಚಿಸುತ್ತದೆ—ಐಟಿ ಮತ್ತು ಎಐ ಕ್ಷೇತ್ರಗಳತ್ತ ಹೆಚ್ಚು ಒಲವು, ಆದರೆ ಆರ್ಥಿಕತೆಯ ಬುನಾದಿಯಾಗಿ ಪರಿಗಣಿಸಲಾಗುವ ಕೈಕೆಲಸಗಳತ್ತ ಆಸಕ್ತಿ ಕುಸಿತ.

ಕೋಟಿ ಸಂಬಳ, ಆದರೆ ಕೆಲಸಗಾರರಿಲ್ಲ!

ಇತ್ತೀಚೆಗೆ ಫೋರ್ಡ್ ಕಂಪನಿಯ ಸಿಇಒ ಜಿಮ್ ಫಾರ್ಲೀ(Ford CEO Jim Farley) ಅವರು ಈ ಬಿಕ್ಕಟ್ಟಿನ ಗಂಭೀರತೆಯನ್ನು ಹೊರಗೆಳೆದರು. ಫೋರ್ಡ್ ವರ್ಷಕ್ಕೆ $120,000 (ಸುಮಾರು ₹1 ಕೋಟಿ) ವರೆಗೆ ಸಂಬಳ ನೀಡಲು ಸಿದ್ಧವಾಗಿದ್ದರೂ, ಕನಿಷ್ಠ 5,000 ಮೆಕ್ಯಾನಿಕ್ ಹುದ್ದೆಗಳನ್ನು(Mechanic positions) ತುಂಬಲು ಸಾಧ್ಯವಾಗುತ್ತಿಲ್ಲ.

ಇದು ಒಂದೇ ಕಂಪನಿಯ ಸಮಸ್ಯೆಯಲ್ಲ. ಅನೇಕ ಅಮೇರಿಕನ್ ನಗರಗಳಲ್ಲಿ ಪ್ಲಂಬರ್‌ಗಳು, ಎಲೆಕ್ಟ್ರಿಶಿಯನ್‌ಗಳು ಕೂಡ ಭಾರೀ ಸಂಬಳ ಗಳಿಸಿದರೂ ಕೆಲಸಕ್ಕೆ ನುರಿತ ಜನ ದೊರಕುತ್ತಿಲ್ಲ.
ಅಮೇರಿಕಾ ಈಗ ನೇರವಾಗಿ ಕೌಶಲ್ಯದ ಬಿಕ್ಕಟ್ಟನ್ನು ಎದುರಿಸುತ್ತಿದೆ.

ಯಾಕೆ ಈ ಕೊರತೆ?—‘ಬುದ್ದಿಜೀವಿಗಳ ಪೀಳಿಗೆ’ ವಿರುದ್ಧ ‘ಕೈಕೆಲಸಗಾರರ ದೌರ್ಬಲ್ಯ’

ಈ ಸ್ಥಿತಿಗೆ ಪ್ರಮುಖ ಕಾರಣಗಳು:

ಹೈ-ಎಂಡ್ ವಿದ್ಯಾಭ್ಯಾಸದ ಮೇಲಿನ ಹೆಚ್ಚಿದ ಒತ್ತು:

ಅಮೇರಿಕನ್ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ IT, AI, ಚಿಪ್ ಡಿಸೈನ್ ಹಾಗೂ ಎಂಜಿನಿಯರಿಂಗ್ ಕ್ಷೇತ್ರಗಳತ್ತ ಸೆಳೆಯಲ್ಪಟ್ಟಿದ್ದಾರೆ.

ವೃತ್ತಿಪರ/ಟ್ರೆಡ್ ಶಿಕ್ಷಣದ ಕಡೆಗಣನೆ:

ಮೆಕ್ಯಾನಿಕ್, ಪ್ಲಂಬರ್, ಶಿಪ್ ರಿಪೇರ್, ಯಂತ್ರೋಪಕರಣ ಸರ್ವಿಸ್(Machine service) ಹೀಗೆ ಪ್ರಾಯೋಗಿಕ ಕೈಕೆಲಸ ಕೌಶಲ್ಯಗಳು ಕಲಿಸುವ ತರಬೇತಿಗಳಿಗೆ ವಿದ್ಯಾರ್ಥಿಗಳ ಆಸಕ್ತಿ ಕಡಿಮೆಯಾಗಿದೆ.

ಜಿಮ್ ಫಾರ್ಲೀ ಅವರ ಪ್ರಕಾರ, ಫೋರ್ಡ್ ಸೂಪರ್ ಡ್ಯೂಟಿ ಟ್ರಕ್‌ನ ಡೀಸೆಲ್ ಎಂಜಿನ್ ತೆಗೆದು ರಿಪೇರಿಮಾಡಲು ಐದು ವರ್ಷಗಳ ಪರಿಣಿತಿ ಬೇಕಾಗುತ್ತದೆ. ಆದರೆ ಇಂತಹ ಕೌಶಲ್ಯವನ್ನು ಹೊಂದಿರುವ ಯುವಕರು ಇದೀಗ ವಿರಳ.

ಕೌಶಲ್ಯದ ಕ್ರಾಂತಿ ಬೇಕು:

ಯಾವುದೇ ದೇಶದ ಅಭಿವೃದ್ದಿ ಕೇವಲ ಸಾಫ್ಟ್‌ವೇರ್‌ ಮೇಲೆ ಅವಲಂಬಿಸಿರಲು ಸಾಧ್ಯವಿಲ್ಲ. ರಸ್ತೆ ನಿರ್ಮಾಣ, ಕಟ್ಟಡ ನಿರ್ವಹಣೆ, ಯಂತ್ರಗಳ ರಿಪೇರಿ, ಟ್ರಕ್ ಚಾಲನೆ ಮುಂತಾದ ಮೂಲಭೂತ ಕ್ಷೇತ್ರಗಳು ಆರ್ಥಿಕತೆಯ ಬುನಾದಿ.

ಆದ್ದರಿಂದ ಅಮೇರಿಕೆಗೆ ಈಗ ಅಗತ್ಯ:

ವೃತ್ತಿಪರ ತರಬೇತಿಗಳಿಗೆ ಹೆಚ್ಚಿನ ಒತ್ತು

ಕೈಕೆಲಸ ಕೌಶಲ್ಯಗಳನ್ನು ಕಲಿಸುವ ಶಾಲೆಗಳ ಬಲಪಡಿಕೆ

ನುರಿತ ಕಾರ್ಮಿಕರನ್ನು ತಯಾರಿಸುವ ಹೊಸ ನೀತಿಗಳು

ಕೋಟಿ ಸಂಬಳ ನೀಡಿದರೂ ಕೆಲಸಗಾರ ಸಿಗದಿರುವುದು ಶಿಕ್ಷಣ ವ್ಯವಸ್ಥೆಯೊಳಗಿನ ಮೂಲಭೂತ ಸಮಸ್ಯೆಗಳು ಬಯಲಾಗಿರುವುದನ್ನು ತೋರಿಸುತ್ತದೆ.

ಮುಂದೆ ಏನು?

ಈ ಬಿಕ್ಕಟ್ಟನ್ನು ತಗ್ಗಿಸಲು ಅಮೇರಿಕಾ ಮುಂದೆ ಇವುಗಳತ್ತ ಮುಖ ಮಾಡಬಹುದು:

ವಲಸೆ ನೀತಿಗಳನ್ನು(Immigration policies) ಸಡಿಲಗೊಳಿಸುವುದು, ಇದರಿಂದ ನುರಿತ ವಿದೇಶಿ ಕಾರ್ಮಿಕರನ್ನು ಆಕರ್ಷಿಸುವುದು

ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದು

ಕೈಕೆಲಸ ವೃತ್ತಿಗಳನ್ನು ಗೌರವ ಮತ್ತು ಉತ್ತಮ ಅವಕಾಶಗಳನ್ನು ನೀಡುವ ಕ್ಷೇತ್ರಗಳಾಗಿ ಪರಿವರ್ತಿಸುವುದು

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯ

WhatsApp Group Join Now
Telegram Group Join Now

Popular Categories