RBI new 5 rules

Bank Loan – ಬ್ಯಾಂಕ್ ನಲ್ಲಿ ಸಾಲ ಪಡೆಯುವವರಿಗೆ ಆರ್ ಬಿ ಐ ನಿಂದ ಹೊಸ ರೂಲ್ಸ್ ಜಾರಿ

WhatsApp Group Telegram Group

ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಸ ಐದು ನಿಯಮಗಳನ್ನು ತಂದಿದೆ. ಇದು ಸಿಬಿಲ್ ಸ್ಕೊರ್(CIBIL score) ಗಾಗಿ ಈ 5 ಹೊಸ ನಿಯಮಗಳನ್ನು ( Rules ) ನೀಡಿದೆ ಎಂದು ಹೇಳಲಾಗಿದೆ. ಯಾಕೆ ಈ ಐದು ಹೊಸ ನಿಯಮಗಳನ್ನು ತರಲಾಗಿದೆ ಮತ್ತು ಅವು ಯಾವುವು ಎಂದು ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

RBI ನ 5 ಹೊಸ ನಿಯಮಗಳು :

ಈಗಾಗಲೇ ಬ್ಯಾಂಕ್ ಗಳಲ್ಲಿ ಹಲವಾರು ತೊಂದರೆ ಗಳು ಕಾಣಿಸಿಕೊಳ್ಳುತ್ತಿದ್ದು ಅನೇಕ ದೂರುಗಳು ಕೇಳಿ ಬರುತ್ತಿವೆ. ಮತ್ತು ಕ್ರೆಡಿಟ್ ಸ್ಕೋರ್ ( Credit Score ) ಬಗ್ಗೆನೂ ಹಲವಾರು ದೂರು ಗಳು ಬಂದಿವೆ. ನಂತರ ಕೇಂದ್ರ ಬ್ಯಾಂಕ್ ನಿಯಮಗಳನ್ನು ಬಿಗಿಗೊಳಿಸಿದೆ. ಅಷ್ಟೇ ಅಲ್ಲದೆ ಇನ್ನಿತರ ಹೊಸ ನಿಯಮಗಳು 26 ಏಪ್ರಿಲ್ 2024 ರಿಂದ ಜಾರಿಗೆ ಬರಲಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.

ಸಾರ್ವಜನಿಕರು ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗಲೆಲ್ಲಾ ಬ್ಯಾಂಕ್‌ಗಳ ವತಿಯಿಂದ ಅವರ ಸಿಬಿಲ್ ಸ್ಕೋರ್ ಚೆಕ್ ಮಾಡಲಾಗುತ್ತದೆ. ಹಾಗೆಯೇ ಇದೀಗ ಯಾವುದೇ ತೊಂದರೆಗಳು ಬಾರದಂತೆ ರಿಸರ್ವ್ ಬ್ಯಾಂಕ್ ಈಗಾಗಲೇ 5 ನಿಯಮಗಳನ್ನು ತಂದಿದೆ. ಅವುಗಳು ಯಾವುವು ಎಂದು ನೋಡೋಣ ಬನ್ನಿ.

ಗ್ರಾಹಕರು ಸಲ್ಲಿಸಿದ ಸಿಬಿಲ್ ಚೆಕ್ ನ ಬಗ್ಗೆ ಮಾಹಿತಿ ನೀಡಲಾಗುವುದು :

ಬ್ಯಾಂಕ್ ಗ್ರಾಹಕನ ಕ್ರೆಡಿಟ್ ನ ಮಾಹಿತಿ ಪರಿಶೀಲಿಸಿದಾಗ, ಆ ಗ್ರಾಹಕರಿಗೆ ಮೆಸೇಜ್ ಮೂಲಕ ಮಾಹಿತಿಯನ್ನು ಕಳುಹಿಸುವುದು ಅವಶ್ಯಕ ಎಂದು ಕೇಂದ್ರ ಬ್ಯಾಂಕ್ ಎಲ್ಲಾ ಕ್ರೆಡಿಟ್ ಕಂಪನಿಗಳಿಗೆ ತಿಳಿಸಿದೆ.

ಇದನ್ನೂ ಓದಿ – ಬ್ಯಾಂಕ್ ನಲ್ಲಿ ಲೋನ್ ಮಾಡುವ ತುಂಬಾ ಜನರಿಗೆ ಸೀಕ್ರೆಟ್ ಮಾಹಿತಿ ಗೊತ್ತಿಲ್ಲ..! ತಪ್ಪದೇ ತಿಳಿದುಕೊಳ್ಳಿ

ವಿನಂತಿಯನ್ನು ತಿರಸ್ಕರಿಸಲು ಕಾರಣವನ್ನು ನೀಡುವುದು ಅವಶ್ಯಕ :

ಯಾವುದೇ ಬ್ಯಾಂಕ್ ಗ್ರಾಹಕರಿಂದ ಪಡೆದ ವಿನಂತಿಯನ್ನು ತಿರಸ್ಕರಿದ್ದೆ ಆಗಿದಲ್ಲಿ . ಅದರ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಗ್ರಾಹಕರಿಗೆ ನೀಡುವುದು ಉತ್ತಮ.

ವರ್ಷಕ್ಕೊಮ್ಮೆ ಗ್ರಾಹಕರಿಗೆ ಸಂಪೂರ್ಣ ಕ್ರೆಡಿಟ್ ವರದಿಯನ್ನು ಉಚಿತವಾಗಿ ನೀಡುವುದು :

ಕ್ರೆಡಿಟ್ ಕಂಪನಿಗಳು ವರ್ಷಕ್ಕೊಮ್ಮೆ ತಮ್ಮ ಗ್ರಾಹಕರಿಗೆ ಉಚಿತ ಪೂರ್ಣ ಕ್ರೆಡಿಟ್ ಸ್ಕೋರ್ ಅನ್ನು ಒದಗಿಸಬೇಕು. ಇದಕ್ಕಾಗಿ, ಕ್ರೆಡಿಟ್ ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ಲಿಂಕ್ ಅನ್ನು ನೀಡಲಗುತ್ತದೆ. ಇದರಿಂದ ಗ್ರಾಹಕರು ತಮ್ಮ ಉಚಿತ ಪೂರ್ಣ ಕ್ರೆಡಿಟ್ ವರದಿಯನ್ನು ಸುಲಭವಾಗಿ ಪರಿಶೀಲಿಸಿ ಸಿಬಿಲ್ ಸ್ಕೊರ್ ಅನ್ನು ಚೆಕ್ ಮಾಡಬಹುದು.

ಗ್ರಾಹಕರಿಗೆ ಡೀಫಾಲ್ಟ್ ಅನ್ನು ವರದಿ ಮಾಡುವ ಮೊದಲು ತಿಳಿಸುವುದು :

ಗ್ರಾಹಕರು ಡೀಫಾಲ್ಟ್ ಮಾಡಲು ಹೋದರೆ ಡೀಫಾಲ್ಟ್ ಅನ್ನು ವರದಿ ಮಾಡುವ ಮೊದಲು ಗ್ರಾಹಕರಿಗೆ ತಿಳಿಸುವುದು ಅಗತ್ಯ. ಯಾಕೆಂದರೆ ಸಿಬಿಲ್ ಸ್ಕೊರ್ ಬಗ್ಗೆ ಮಾಹಿತಿ ತಿಳಿಯಲು ಸುಲಭ ವಾಗುತ್ತದೆ.

ದೂರನ್ನು 30 ದಿನಗಳಲ್ಲಿ ಪರಿಹರಿಸಬೇಕು, ಇಲ್ಲದಿದ್ದರೆ ದಿನಕ್ಕೆ 100 ರೂ.ದಂಡ

ಕ್ರೆಡಿಟ್ ಕಂಪನಿಗಳು ಗ್ರಾಹಕರ ದೂರನ್ನು 30 ದಿನಗಳಲ್ಲಿ ಪರಿಹರಿಸದಿದ್ದರೆ, ಅದು ಪ್ರತಿದಿನ 100 ರೂಪಾಯಿ ದಂಡವನ್ನು ಪಾವತಿಸಬೇಕಾಗಲಿದೆ. ಅಂದರೆ, ದೂರನ್ನು ಎಷ್ಟು ತಡವಾಗಿ ಪರಿಹರಿಸಲಾಗುತ್ತದೆ, ಅಷ್ಟು ಹೆಚ್ಚು ದಂಡವನ್ನು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ – ಕರ್ನಾಟಕ ರಾಜ್ಯಕ್ಕೆ 50 ವರ್ಷಗಳ ಸಂಭ್ರಮ: ಕನ್ನಡ ರಾಜ್ಯೋತ್ಸವದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ!

ಈ ಐದು ಹೊಸ ನಿಯಮಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಿಬಿಲ್ ಸ್ಕೊರ್ ಚೆಕ್ ಮಾಡಲು ಹೊಸದಾಗಿ ಪರಿಚಯಿಸಿದೆ.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

WhatsApp Group Join Now
Telegram Group Join Now

Popular Categories