ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ಇ-ಆಸ್ತಿ ನೋಂದಣಿ ಕಡ್ಡಾಯ. ಸರ್ಕಾರದ ಆದೇಶದಂತೆ ನವೆಂಬರ್ 11ರಿಂದ ಡಿಸೆಂಬರ್ 3ರವರೆಗೆ ವಾರ್ಡ್‌ವಾರು ಇ-ಖಾತಾ ಮೇಳ ಆಯೋಜಿಸಲಾಗಿದೆ. ಆಸ್ತಿ ಮಾಲೀಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಕೋರಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇ-ಆಸ್ತಿ ಪಡೆಯುವ 5 ಸುಲಭ ಮಾರ್ಗಗಳು
- ಕರ್ನಾಟಕ ಒನ್ / ಶಿವಮೊಗ್ಗ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಕೆ
- ಪಾಲಿಕೆಯ 3 ವಲಯ ಕಚೇರಿಗಳಲ್ಲಿ ನೇರ ಸಲ್ಲಿಕೆ
- ಪಾಲಿಕೆ ಸಿಬ್ಬಂದಿ ಮನೆ-ಮನೆ ಭೇಟಿ ಸಮಯದಲ್ಲಿ ದಾಖಲೆಗಳೊಂದಿಗೆ
- ವಾರ್ಡ್‌ವಾರು ಇ-ಖಾತಾ ಮೇಳದಲ್ಲಿ (ಕೆಳಗಿನ ವೇಳಾಪಟ್ಟಿ)
- ಆನ್‌ಲೈನ್: https://eaasthi.karnataka.gov.in
ವಾರ್ಡ್‌ವಾರು ಇ-ಖಾತಾ ಮೇಳ ವೇಳಾಪಟ್ಟಿ
- ವಾರ್ಡ್ 35 – ಗಾಡಿಕೊಪ್ಪ: ನ.11 – ಅಗಮುಡಿ ಸಮಾಜ ಸೇವಾ ಸಂಘ, ಆಲ್ಕೋಳ ವೃತ್ತ
- ವಾರ್ಡ್ 34 – ವಿನೋಬನಗರ: ನ.13 – ಆಟೋ ಕಾಂಪ್ಲೆಕ್ಸ್, ಪ್ಲಾಟ್ ನಂ 61, ಶ್ರೀ ಮಲ್ಲಿಕಾರ್ಜುನ ಆಗ್ರೋ
- ವಾರ್ಡ್ 12 – ಗುಡ್ಡೇಕಲ್: ನ.13 – ಯೋಗಭವನ, 4ನೇ ತಿರುವು, ಸಿದ್ದೇಶ್ವರ ನಗರ
- ವಾರ್ಡ್ 01 – ಸಹ್ಯಾದ್ರಿ ನಗರ: ನ.15 – ತಮಿಳ್ ತಾಯಿ ಸಮುದಾಯ ಭವನ, ಜೆ.ಹೆಚ್.ಪಟೇಲ್ ಲೇಔಟ್
- ವಾರ್ಡ್ 08 – ಶಾಂತಿನಗರ: ನ.19 – ಗಣಪತಿ ದೇವಸ್ಥಾನ ಮುಂಭಾಗ, ಕೃಷಿನಗರ
- ವಾರ್ಡ್ 31 – ಹೊಸಮನೆ: ನ.19 – ಸಾರ್ವಜನಿಕ ಗ್ರಂಥಾಲಯ, ಶರಾವತಿ ನಗರ
- ವಾರ್ಡ್ 16 – ಊರುಗಡೂರು: ನ.24 – ಅಶ್ವಥ್ ಕಲಾ ವೇದಿಕೆ, ಪಾರ್ಕ್ ಆವರಣ, ಬೈಪಾಸ್ ರಸ್ತೆ
- ವಾರ್ಡ್ 26 – ಗೋಪಾಳ: ನ.26 – ದ್ರೌಪದಮ್ಮ ದೇವಸ್ಥಾನ ಸಭಾಭವನ
- ವಾರ್ಡ್ 27 – ಮಿಳಘಟ್ಟ: ಡಿ.3 – ಭಾರತೀಯ ಸಭಾ ಭವನ, ಆರ್‌ಎಂಎಲ್ ನಗರ
ಅರ್ಜಿ ಸಲ್ಲಿಕೆಗೆ ಅಗತ್ಯ ದಾಖಲೆಗಳು
- ಮಾಲೀಕತ್ವ ಸಾಬೀತು (ಖಾತಾ, ರಿಜಿಸ್ಟರ್ ಪ್ರತಿ)
- ಮಾಲೀಕರ ಭಾವಚಿತ್ರ
- ಗುರುತಿನ ಚೀಟಿ (ವೋಟರ್ ID / ಪ್ಯಾನ್ / ರೇಷನ್ / DL / ಪಾಸ್‌ಪೋರ್ಟ್)
- ಕಟ್ಟಡ/ನಿವೇಶನ ಭಾವಚಿತ್ರ
- ಕಟ್ಟಡ ಪರವಾನಗಿ ಪ್ರತಿ (ಇದ್ದಲ್ಲಿ)
- ವಿದ್ಯುತ್ ಬಿಲ್
- ಇತ್ತೀಚಿನ ಕಂದಾಯ ಪಾವತಿ ರಶೀದಿ
ಇ-ಆಸ್ತಿ ಪ್ರಯೋಜನಗಳು
- ಆಸ್ತಿ ವಹಿವಾಟು ಸುಗಮ
- ಸರ್ಕಾರಿ ಯೋಜನೆಗಳಿಗೆ ಸುಲಭ ಪ್ರವೇಶ
- ಕಂದಾಯ ಪಾವತಿ, ತೆರಿಗೆ ಸೌಲಭ್ಯ
- ಕಾನೂನು ಭದ್ರತೆ
ಡಿ.3 ಗಡುವು – ಇ-ಆಸ್ತಿ ನೋಂದಣಿ ಮಾಡಿಸಿ, ತೊಡಕು ತಪ್ಪಿಸಿ!
ಶಿವಮೊಗ್ಗ ಪಾಲಿಕೆ ವ್ಯಾಪ್ತಿಯ ಎಲ್ಲಾ ಆಸ್ತಿ ಮಾಲೀಕರು ಇ-ಆಸ್ತಿ ನೋಂದಣಿ ಕಡ್ಡಾಯ. ನ.11ರಿಂದ ಡಿ.3ರವರೆಗೆ ವಾರ್ಡ್‌ವಾರು ಮೇಳ, ಮನೆ ಭೇಟಿ, ಆನ್‌ಲೈನ್ ಸೌಲಭ್ಯ. ದಾಖಲೆಗಳೊಂದಿಗೆ ತಕ್ಷಣ ನೋಂದಾಯಿಸಿ – ಭವಿಷ್ಯದ ತೊಡಕುಗಳನ್ನು ತಪ್ಪಿಸಿ!

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ತುಮಕೂರಿನ ಸರ್ಕಾರಿ ನರ್ಸಿಂಗ್ ಕಾಲೇಜಿನಿಂದ B.Sc (Nursing) ಪದವಿ ಪಡೆದಿರುವ ಇವರು, ಸಾರ್ವಜನಿಕ ಜಾಗೃತಿ ಮತ್ತು ಮಾಹಿತಿ ನೀಡುವ ಆಸಕ್ತಿಯಿಂದಾಗಿ ಡಿಜಿಟಲ್ ಪತ್ರಿಕೋದ್ಯಮ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ. ಡಿಜಿಟಲ್ ಮಾಧ್ಯಮ ರಂಗದಲ್ಲಿ 3 ವರ್ಷಗಳ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ನೇಮಕಾತಿಗಳು ಮತ್ತು ಶೈಕ್ಷಣಿಕ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ನಿರುದ್ಯೋಗಿ ಯುವಕ-ಯುವತಿಯರಿಗೆ ಯಾವುದೇ ಗೊಂದಲವಿಲ್ಲದೆ, ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (Verified) ನಿಖರ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದೇ ಇವರ ಬರವಣಿಗೆಯ ಶೈಲಿಯಾಗಿದೆ.


WhatsApp Group




Leave a Reply