Picsart 25 11 06 00 52 01 056 scaled

Epf Withdraw: ಕಚೇರಿಗೆ ಹೋಗುವ ಅಗತ್ಯವೇ ಇಲ್ಲ! PF Withdrawal ಈಗ 100% ಆನ್‌ಲೈನ್

Categories:
WhatsApp Group Telegram Group

ಇಂದಿನ ಡಿಜಿಟಲ್ ಯುಗದಲ್ಲಿ, ಸರ್ಕಾರ ಮತ್ತು EPFO (Employees’ Provident Fund Organisation) ಸೇವೆಗಳು ಕ್ರಮೇಣ ಸಂಪೂರ್ಣ ಆನ್‌ಲೈನ್ ಆಗುತ್ತಿವೆ. ಮೊದಲು PF ಹಣವನ್ನು ಹಿಂಪಡೆಯಲು ಕಚೇರಿಗಳಿಗೆ ಓಡಾಡಬೇಕು, ಫಾರ್ಮ್‌ಗಳು ತುಂಬಬೇಕು, ಕಂಪನಿಯ ಸಿಗ್ನೇಚರ್ ಪಡೆಯಬೇಕು ಇವೆಲ್ಲಾ ಸಮಯ ವ್ಯರ್ಥ ಮತ್ತು ತೊಂದರೆಯ ಪ್ರಕ್ರಿಯೆಯಾಗಿತ್ತು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಕೇವಲ ನಿಮ್ಮ ಮೊಬೈಲ್ ಫೋನ್‌ನಿಂದಲೇ PF ಹಣವನ್ನು ಹಿಂಪಡೆಯಲು, ಟ್ರ್ಯಾಕ್ ಮಾಡಲು, ಮತ್ತು ಖಾತೆ ಪರಿಶೀಲಿಸಲು ಅವಕಾಶ ದೊರೆಯುತ್ತಿದೆ. ವಿಶೇಷವಾಗಿ UMANG ಆಪ್ ಹಾಗೂ EPFO Unified Portal ಮೂಲಕ, PF ಕ್ಲೇಮ್ ಪ್ರಕ್ರಿಯೆ 100% ಡಿಜಿಟಲ್ ಆಗಿದೆ.

ಉದ್ಯೋಗ ಬದಲಿಸಿದಾಗ, ತುರ್ತಿನ ಹಣಕಾಸಿನ ಅವಶ್ಯಕತೆಯಾದಾಗ, ಮನೆ ಖರೀದಿ, ವೈದ್ಯಕೀಯ ಚಿಕಿತ್ಸೆ ಅಥವಾ ಶಿಕ್ಷಣದಂತಹ ಅತಿ ಮುಖ್ಯ ಸಂದರ್ಭಗಳಲ್ಲಿ  PF ಹಣ ತಕ್ಷಣ ನೆರವಾಗುವ ಮೊತ್ತ. ಈ ಕಾರಣಕ್ಕೆ PF Withdrawal ಪ್ರಕ್ರಿಯೆಯನ್ನು ಸರಿಯಾಗಿ ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕ. ಹಾಗಿದ್ದರೆ UMANG ಆಪ್ ಹಾಗೂ EPFO ಅಧಿಕೃತ ವೆಬ್‌ಸೈಟ್ ಮೂಲಕ PF ಹಣವನ್ನು ಹೇಗೆ ಹಿಂಪಡೆಯುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ

UMANG ಆಪ್ ಮೂಲಕ PF Withdrawal ಮಾಡುವ ವಿಧಾನ:

UMANG ಆಪ್ ಡೌನ್‌ಲೋಡ್ ಮಾಡಿ,
Google Play Store ಅಥವಾ Apple App Store ನಲ್ಲಿ UMANG App ಅನ್ನು ಇನ್ಸ್ಟಾಲ್ ಮಾಡಿ.
ನಂತರ ಆಪ್ ತೆರೆದು ನಿಮ್ಮ ಮೊಬೈಲ್ ನಂಬರ್ ನಮೂದಿಸಿ.
ಬಂದ OTP ನಮೂದಿಸಿ ಲಾಗಿನ್ ಆಗಿ.
ಮೇಲಿರುವ ಹುಡುಕಾಟ ಬಾರಿನಲ್ಲಿ EPFO ಟೈಪ್ ಮಾಡಿ.
Employees Provident Fund Organisation ಆಯ್ಕೆ ಮಾಡಿ.
Employee Centric Services ತೆರೆಯಿರಿ
Raise Claim / PF Withdrawal ಆಯ್ಕೆ
ಇಲ್ಲಿ ನಿಮ್ಮ PF money withdrawal ಪ್ರಕ್ರಿಯೆ ಆರಂಭವಾಗುತ್ತದೆ.
ನಂತರ ನಿಮ್ಮ UAN ನಮೂದಿಸಿ
UAN ನಮೂದಿಸಿ
ಮೊಬೈಲ್‌ಗೆ OTP ಬರುತ್ತದೆ ದೃಢೀಕರಿಸಿ.
Withdrawal Type ಆಯ್ಕೆಮಾಡಿ (Final Settlement  ಸಂಪೂರ್ಣ PF ಅಥವಾ Partial Withdrawal ಮನೆ, ವಿವಾಹ, ವೈದ್ಯಕೀಯ, ಶಿಕ್ಷಣ ಮುಂತಾದ ಕಾರಣಗಳಿಗೆ)
ಬ್ಯಾಂಕ್ & KYC ಪರಿಶೀಲನೆ ಅತ್ಯಗತ್ಯ ಆದ್ದರಿಂದ Aadhaar, PAN, ಬ್ಯಾಂಕ್ ಅಕೌಂಟ್ ಎಲ್ಲವೂ ಲಿಂಕ್ ಆಗಿದೆಯೇ ಎಂದು ನೋಡಿ.
ಅಗತ್ಯವಿದ್ದರೆ, ಪಾಸ್‌ಬುಕ್ ಫೋಟೋ, ರದ್ದಾದ ಚೆಕ್ ಅಪ್‌ಲೋಡ್ ಮಾಡಿ.
Submit ಒತ್ತಿದ ನಂತರ ನಿಮ್ಮ Claim Reference Number ದೊರೆಯುತ್ತದೆ.
ನಂತರ Claim Status ಪರಿಶೀಲನೆ ಮಾಡಬಹುದು.
UMANG ಆಪ್ ಅಥವಾ EPFO ಪೋರ್ಟಲ್‌ನಲ್ಲಿ ನಿಮ್ಮ PF ಕ್ಲೇಮ್ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.

EPFO ವೆಬ್‌ಸೈಟ್ ಮೂಲಕ PF Withdrawal ಮಾಡುವ ವಿಧಾನ ಹೀಗಿದೆ:

ಅಧಿಕೃತ ಸೈಟ್ ತೆರೆಯಿರಿ
https://www.epfindia.gov.in
ಅಥವಾ
https://unifiedportal-mem.epfindia.gov.in
ನಂತರ UAN ಮೂಲಕ ಲಾಗಿನ್ ಆಗಿ
KYC ಪರಿಶೀಲನೆ ಮಾಡಿ
Online Services Claim (Form-31, 19, 10C) ಆಯ್ಕೆಮಾಡಿ.
ಬ್ಯಾಂಕ್ ಖಾತೆ ವಿವರಗಳನ್ನು ಪರಿಶೀಲಿಸಿ
Withdrawal ಫಾರ್ಮ್ ಆಯ್ಕೆ
(Form 19: Final PF Settlement
Form 10C: Pension Withdrawal
Form 31: Partial Withdrawal)
ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
Aadhaar OTP ದೃಢೀಕರಣ
Submit ಮಾಡಿ
Claim Reference Number ಪಡೆಯುತ್ತೀರಿ.

ಹಣ ಜಮೆಯಾಗಲು ಎಷ್ಟು ಸಮಯ ಬೇಕು?:

ಸಾಮಾನ್ಯವಾಗಿ 7 ರಿಂದ 15 ದಿನಗಳೊಳಗೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories