Picsart 25 11 03 22 15 36 292 scaled

ಪಿಎಂ ಆವಾಸ್ ಯೋಜನೆ 2025: ಹೊಸ ಫಲಾನುಭವಿಗಳ ಪಟ್ಟಿ ಬಿಡುಗಡೆ – ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ?

WhatsApp Group Telegram Group

ಭಾರತದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಸುರಕ್ಷಿತ ಮನೆ ಹೊಂದಬೇಕು ಎಂಬ ಕನಸು ವರ್ಷಗಳಿಂದಲೂ ಹಲವು ಸರ್ಕಾರಗಳ ಆಶಯವಾಗಿತ್ತು. ಆದರೆ 2015ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆರಂಭಿಸಿದ ಪಿಎಂ ಆವಾಸ್ ಯೋಜನೆಯು (PM Awas Yojana) ಈ ಕನಸಿಗೆ  ವೇಗ ನೀಡಿದೆ. ಹೌಸಿಂಗ್ ಫರ್ ಆಲ್, ಅಂದರೆ ಎಲ್ಲರಿಗೂ ಸೂರು ಎಂಬ ಘೋಷಣೆ ಹೊಂದಿರುವ ಈ ಯೋಜನೆ, ದೇಶದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಡ ಹಾಗೂ ಹಿಂದುಳಿದ ವರ್ಗದ ಕುಟುಂಬಗಳಿಗೆ ಪಕ್ಕಾ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇಂದಿನ ಪರಿಸ್ಥಿತಿಯಲ್ಲಿ ಮನೆ ಎಂದರೆ ಕೇವಲ ನಾಲ್ಕು ಗೋಡೆಗಳಷ್ಟೇ ಅಲ್ಲ ವಿದ್ಯುತ್, ನೀರು, ಅಡುಗೆ ವ್ಯವಸ್ಥೆ, ಶೌಚಾಲಯ ಮುಂತಾದ ಮೂಲಭೂತ ಸೌಲಭ್ಯಗಳೊಂದಿಗೆ ಮಾನವೀಯ ಬದುಕಿಗೆ ಅಗತ್ಯವಿರುವ ಅವಿಭಾಜ್ಯ ಅಂಶ. ಪಿಎಂ ಆವಾಸ್ ಯೋಜನೆ ಈ ಎಲ್ಲ ಅಂಶಗಳನ್ನು ಒಳಗೊಂಡಂತೆ ಲಕ್ಷಾಂತರ ಕುಟುಂಬಗಳಿಗೆ ಸುರಕ್ಷಿತ, ಸೌಲಭ್ಯಯುತ ಗೃಹವನ್ನು ನೀಡುವ ಕಾರ್ಯವನ್ನು ಮುಂದುವರೆಸುತ್ತಿದೆ.
ಯೋಜನೆಯ ಆರಂಭದಿಂದಲೂ ದೇಶದಾದ್ಯಂತ 118.64 ಲಕ್ಷ ಮನೆಗಳಿಗೆ ಮಂಜೂರಾತಿ ನೀಡಲಾಗಿದ್ದು, ಅದರಲ್ಲಿ 84.7 ಲಕ್ಷ ಮನೆಗಳು ಈಗಾಗಲೇ ಪೂರ್ಣಗೊಂಡಿವೆ. ಇದರಿಂದ ಮನೆ ಇಲ್ಲದ ಕುಟುಂಬಗಳಿಗೆ ಹೊಸ ಆಶಾಕಿರಣ ಮೂಡಿದೆ.

ಯೋಜನೆಯ ಪ್ರಮುಖ ವಿಭಾಗಗಳು ಹೀಗಿವೆ:

ಪಿಎಂ ಆವಾಸ್ ಯೋಜನೆ ಮುಖ್ಯವಾಗಿ ಎರಡು ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತದೆ,

  1. PMAY-U (ನಗರ) – ಪ್ರಧಾನ ಮಂತ್ರಿ ಆವಾಸ್ ಯೋಜನೆ :
    ನಗರ ಪ್ರದೇಶಗಳಲ್ಲಿ ಬಡ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಸಹಾಯ ಮಾಡಲಾಗುತ್ತದೆ. ನಿರ್ಮಿಸಲಾಗುವ ಎಲ್ಲಾ ಮನೆಗಳಲ್ಲಿ ನೀರು ಸರಬರಾಜು, ಅಡುಗೆಮನೆ, ವಿದ್ಯುತ್, ಶೌಚಾಲಯ ಎಲ್ಲವೂ ಸೌಲಭ್ಯವಾಗಿ ನೀಡಲಾಗುತ್ತದೆ.
  2. PMAY-G (ಗ್ರಾಮೀಣ) – ಪ್ರಧಾನ ಮಂತ್ರಿ ಆವಾಸ್ ಯೋಜನೆ :
    ಗ್ರಾಮೀಣ ಪ್ರದೇಶದ ಬಡ ಕುಟುಂಬಗಳಿಗೆ ಪಕ್ಕಾ ಮನೆ ನಿರ್ಮಿಸಿ ಕೊಡುವುದು.
    ಸಹಾಯಧನ ವಿವರ (Subsidy Details) ಹೀಗಿದೆ,
    ಸಾಮಾನ್ಯ ರಾಜ್ಯಗಳಲ್ಲಿ 60:40 ಅನುಪಾತ
    ಈಶಾನ್ಯ ರಾಜ್ಯಗಳು, ಹಿಮಾಚಲ, ಉತ್ತರಾಖಂಡ, ಜಮ್ಮು–ಕಾಶ್ಮೀರಗಳಿಗೆ 90:10

ಯಾವ ವರ್ಗಗಳಿಗೆ ಆದ್ಯತೆ ನೀಡಲಾಗುತ್ತದೆ?:

ಹಿರಿಯ ನಾಗರಿಕರು
ದಿವ್ಯಾಂಗರು
ಪರಿಶಿಷ್ಟ ಜಾತಿ (SC)
ಪರಿಶಿಷ್ಟ ಪಂಗಡ (ST)
OBCಗಳು
ಒಂಟಿ ಮಹಿಳೆಯರು
ಅಲ್ಪಸಂಖ್ಯಾತರು
ಇತರ ದುರ್ಬಲ ವರ್ಗಗಳು

ಯೋಜನೆಯಲ್ಲಿ ಯಾವೆಲ್ಲ ಸೌಲಭ್ಯಗಳು ಸಿಗುತ್ತವೆ:

ಗ್ರಾಮೀಣ ಪ್ರದೇಶ (PMAY-G),
ಕನಿಷ್ಠ 25 ಚದರ ಮೀಟರ್ ವಿಸ್ತೀರ್ಣದ ಮನೆ.
ಗರಿಷ್ಠ ₹1.3 ಲಕ್ಷ ವರೆಗಿನ ಹಣಕಾಸು ನೆರವು.
ಶೌಚಾಲಯಕ್ಕಾಗಿ ₹12,000 (Swachh Bharat Mission Rural).

ನಗರ ಪ್ರದೇಶ (PMAY-U),
30 ರಿಂದ 200 ಚದರ ಮೀಟರ್ ಕಾರ್ಪೆಟ್ ಪ್ರದೇಶದ ಮನೆ (ವರ್ಗಕ್ಕೆ ಏನು ಸೂಕ್ತವೋ ಅದನ್ನು ಅನುಸರಿಸಿ).
₹1.5 ಲಕ್ಷ ವರೆಗಿನ ಕೇಂದ್ರ ಸಹಾಯ.
ಗೃಹ ಸಾಲದ ಮೇಲೆ ₹2.67 ಲಕ್ಷ ವರೆಗಿನ ಬಡ್ಡಿ ಸಹಾಯಧನ (CLSS).

ಪಿಎಂ ಆವಾಸ್ ಯೋಜನೆ 2025, ಹೊಸ ಪಟ್ಟಿ ಬಿಡುಗಡೆ!:

2025ರ ಹೊಸ ಫಲಾನುಭವಿಗಳ ಪಟ್ಟಿ ಈಗ ಬಿಡುಗಡೆಯಾಗಿದೆ.
ಯೋಜನೆಗೆ ನೀವು ಈಗಾಗಲೇ ಅರ್ಜಿ ಸಲ್ಲಿಸಿದ್ದರೆ, ನಿಮ್ಮ ಹೆಸರು ಸೇರ್ಪಡೆಯಾಗಿದೆಯೇ ಎಂದು ನೀವೆ ಸ್ವತಃ ಪರಿಶೀಲಿಸಬಹುದು. ಚೆಕ್ ಮಾಡುವ ವಿಧಾನ ಹೀಗಿದೆ,
ನೀವು PMAY-HFA(Urban) https://share.google/pgcCIwOIP8FUpEKzN ಅಧಿಕೃತ ಲಿಂಕ್ ಕ್ಲಿಕ್ ಮಾಡಬೇಕು.
ಅದರಲ್ಲಿ ಕೇಳುವ ಮಾಹಿತಿಗಳನ್ನು ನಮೂದಿಸಿದ ಬಳಿಕ ನಿಮ್ಮ ಹೆಸರು ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂದು ತಕ್ಷಣವೇ ತಿಳಿದುಕೊಳ್ಳಬಹುದು.

ಒಟ್ಟಾರೆಯಾಗಿ, ಪಿಎಂ ಆವಾಸ್ ಯೋಜನೆ ಕೇವಲ ಗೃಹ ಯೋಜನೆ ಮಾತ್ರವಲ್ಲ, ಲಕ್ಷಾಂತರ ಬಡ ಕುಟುಂಬಗಳ ಜೀವನಮಟ್ಟವನ್ನು ಸುಧಾರಿಸುತ್ತಿದೆ. 2025ರ ಹೊಸ ಪಟ್ಟಿಯು ಬಿಡುಗಡೆಯಾಗಿರುವುದರಿಂದ, ಅರ್ಹರಾದವರು ತಕ್ಷಣವೇ ತಮ್ಮ ಹೆಸರು ಪರಿಶೀಲಿಸಿ ಯೋಜನೆಯ ಪ್ರಯೋಜನ ಪಡೆಯಬಹುದು.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Popular Categories