cancelled list gruhalakshmi

ಗೃಹಲಕ್ಷ್ಮಿ ಹಣ ಇನ್ನೂ ಖಾತೆಗೆ ಬಂದಿಲ್ವಾ ?? ಅನರ್ಹರ ಪಟ್ಟಿ ಬಿಡುಗಡೆ ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ

WhatsApp Group Telegram Group

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಅನೇಕ ಮಹಿಳೆಯರ ಖಾತೆಗೆ ಹಣ ಜಮೆಯಾಗಿದ್ದರೂ, ಕೆಲವರಿಗೆ ಇನ್ನೂ ಹಣ ಬಂದಿಲ್ಲ. ನಿಮಗೂ ಈವರೆಗೂ ಗೃಹಲಕ್ಷ್ಮಿ ಯೋಜನೆಯ ₹2000 ಹಣ ಬಾರದೆ ಇದ್ದಲ್ಲಿ, ನಿಮ್ಮ ಅರ್ಜಿ ತಿರಸ್ಕೃತಗೊಂಡಿದೆಯೇ? ಎಂದು ಪರಿಶೀಲಿಸಿಕೊಳ್ಳುವುದು ಅಗತ್ಯ. ತಿರಸ್ಕೃತ ಪಟ್ಟಿ (ಅನರ್ಹರ ಪಟ್ಟಿ) ಮತ್ತು ನಿಮ್ಮ ಹೆಸರನ್ನು ಚೆಕ್ ಮಾಡುವ ನೇರ ಲಿಂಕ್ ಬಗ್ಗೆ ಮಾಹಿತಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಯಾರಿಗೆ ಹಣ ಲಭ್ಯವಿಲ್ಲ?

ಎಲ್ಲಾ ಮಹಿಳೆಯರಿಗೂ ಹಣ ಲಭಿಸಲಿದೆ ಎನ್ನುವ ಸಂತೋಷದ ವಾತಾವರಣದಲ್ಲಿಯೇ, ಸರ್ಕಾರವು ಕೆಲವು ನಿರ್ದಿಷ್ಟ ನಿಯಮಗಳನ್ನು ವಿಧಿಸಿದೆ. BPL ಕುಟುಂಬದ ಮುಖ್ಯಸ್ಥ ಮಹಿಳೆಗೆ ಮಾತ್ರ ₹2,000 ನಗದು ಸಹಾಯಧನ ನೀಡಲಾಗುವುದು. ಹೀಗಾಗಿ, ಕೆಳಗಿನ ವರ್ಗಗಳಿಗೆ ಈ ಸಹಾಯಧನ ಲಭ್ಯವಿಲ್ಲ:

  • 5 ಎಕರೆಗಿಂತ ಹೆಚ್ಚು ಬಿತ್ತನೆ ಭೂಮಿ ಹೊಂದಿರುವವರು.
  • ನಾಲ್ಕು ಚಕ್ರಗಳ ವಾಹನ (ಫೋರ್-ವೀಲರ್) ಹೊಂದಿರುವ ಕುಟುಂಬಗಳು.
  • ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರನ್ನು ಒಳಗೊಂಡಂತೆ ಸರ್ಕಾರಿ ಉದ್ಯೋಗಗಳಲ್ಲಿ ಸೇವೆ ಸಲ್ಲಿಸುವವರು.
  • ಸರ್ಕಾರಿ ಪಿಂಚಣಿ ಪಡೆಯುತ್ತಿರುವವರು.
  • ಆದಾಯ ತೆರಿಗೆ (ಇನ್ಕಮ್ ಟ್ಯಾಕ್ಸ್) ಪಾವತಿದಾರರ ಕುಟುಂಬಗಳು.
  • ಜಿಎಸ್ಟಿ ರಿಟರ್ನ್ ದಾಖಲಿಸುವ ಮಹಿಳೆಯರು.
  • ವೃತ್ತಿ ತೆರಿಗೆ (ಪ್ರೊಫೆಷನಲ್ ಟ್ಯಾಕ್ಸ್) ಪಾವತಿದಾರರು.

ಹೀಗೆ ನಿಗದಿ ಪಡಿಸಲಾದ ಅರ್ಹತಾ ನಿಯಮಗಳಿಂದಾಗಿ, ಹಲವರು ಯೋಜನೆಯ ಲಾಭದಿಂದ ವಂಚಿತರಾಗಿದ್ದಾರೆ. ಆದರೆ, ಒಮ್ಮೆ ಸಹಾಯಧನದ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ, ಯಾರಿಗೆ ಹಣ ಲಭಿಸಿದೆ ಮತ್ತು ಯಾರಿಗೆ ಲಭಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಅನರ್ಹರ ಪಟ್ಟಿ ಚೆಕ್ ಮಾಡುವುದು ಹೇಗೆ? Gruhalakshmi Cancelled List

ಹಂತ 1: ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ಜಾಲತಾಣಕ್ಕೆ ತೆರಳಬೇಕು ಅದಕ್ಕಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ :

https://ahara.karnataka.gov.in/Home/EServices

ಹಂತ 2: ನಂತರ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ.

ನಂತರ e-Ration Card ಎಂಬ ಆಯ್ಕೆಯಲ್ಲಿ Show cancelled/Suspended  ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ

rrrrr

ಹಂತ 3: ನಂತರ ನಿಮಗೆ ಲಿಸ್ಟ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಜಿಲ್ಲೆ, ತಿಂಗಳು  ಹಾಗೂ ತಾಲೂಕನ್ನು ಆಯ್ಕೆ ಮಾಡಿಕೊಳ್ಳಿ

rrrrr2

ಹಂತ 4: ನಂತರ ನೀವು ಅನರ್ಹರ ಪಟ್ಟಿಯನ್ನು ನೋಡಬಹುದು, ಅದರಲ್ಲಿ ರದ್ದು ಆಗಿರುವುದಕ್ಕೆ ಕೆಲವೊಮ್ಮೆ ಕಾರಣವನ್ನು ಕೂಡ ನೀಡಲಾಗಿರುತ್ತದೆ.

cancelled list
WhatsApp Image 2025 09 05 at 10.22.29 AM 21

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories